BigTv News
September 4, 2025
Breaking News
ಮಣಿಪಾಲ ಡಿಸಿ ಆಫೀಸ್ ರಸ್ತೆಯಲ್ಲಿರುವ ಅದಿತಿ ಪರ್ವ ಅಪಾರ್ಟ್ ಮೆಂಟ್ ನಲ್ಲಿ ವಾಷಿಂಗ್ ಮೆಶಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡ ಅವಘಡ ನಡೆದಿದೆ.ಸ್ಥಳಕ್ಕೆ ಅಗ್ನಿಶಾಮಕದಳದವರು ದೌಡಾಯಿಸಿದ್ದು, ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ, ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
Read More »
BigTv News
September 4, 2025
Breaking News
ದಾವಣಗೆರೆ ಜಿಲ್ಲೆಯ ಹದಡಿ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಬಾಲಕಿಯ ತಾಯಿಯೇ ಕಾಮುಕ ಪತಿಯ ವಿರುದ್ಧ ಮಗಳ ಮೇಲೆ ಅತ್ಯಾಚಾರ ಯತ್ನ ಮಾಡಿದ ಆರೋಪವನ್ನು ಹೊರಿಸಿ ಪೋಕ್ಸೊ ಕೇಸ್ ದಾಖಲಿಸಿದ್ದಾರೆ. ಜಿಲ್ಲೆಯ ಗ್ರಾಮವೊಂದರ 17 ವರ್ಷದ ಅಪ್ರಾಪ್ತ ಬಾಲಕಿ ತಾನ ಬ್ಯೂಟಿಷಿಯನ್ ಆಗಬೇಕೆಂಬ ಕನಸನ್ನು ಹೊತ್ತು ತರಬೇತಿಗೆ ಸೇರಿಕೊಂಡಿದ್ದಳು. ಆದರೆ ಇದು ತಂದೆ ಗಣೇಶನಿಗೆ ಕಿಂಚಿತ್ತೂ ಇಷ್ಟವಿರಲಿಲ್ಲ. ಆಕೆ ಮೇಲೆ ಆತನಿಗೆ ಸದಾ ಅನುಮಾನವೇ ತುಂಬಿತ್ತು. ಹೀಗೆ ಅನುಮಾನದ ಪಿಶಾಚಿಯಾಗಿದ್ದ ಆತ …
Read More »
BigTv News
September 4, 2025
Breaking News
ಕಾಲೇಜು ಬಳಿ ಕೋರಿಕೆ ನಿಲುಗಡೆ ಕೇಳಿದ್ದಕ್ಕೆ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರು ನಿಂದಿಸಿದ್ದನ್ನು ಖಂಡಿಸಿ, ನಗರದ ಮಾಗಡಿ ರಸ್ತೆಯ ರಾಯರದೊಡ್ಡಿಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಬುಧವಾರ ತರಗತಿ ಬಹಿಷ್ಕರಿಸಿ ಕಾಲೇಜು ಎದುರು ಪ್ರತಿಭಟನೆ ನಡೆಸಿದರು.
Read More »
BigTv News
September 4, 2025
Breaking News
ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪ್ರಾಥಮಿಕ ಶಾಲೆಯೊಂದರಲ್ಲಿ, ಮುಖ್ಯ ಶಿಕ್ಷಕಿಯೊಬ್ಬರು ತರಗತಿಯಲ್ಲೇ ಟೇಬಲ್ ಮೇಲೆ ಮಲಗಿ, ಮಕ್ಕಳಿಂದ ಕಾಲು ಒತ್ತಿಸಿಕೊಳ್ಳುತ್ತಿರುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಅಧಿಕಾರಿಗಳು ಈ ಕುರಿತು ತನಿಖೆ ಆರಂಭಿಸಿದ್ದಾರೆ.
Read More »
BigTv News
September 3, 2025
Breaking News
ಶಿಕ್ಷಕನಿಗೆ ಚಪ್ಪಲಿಯಿಂದ ಹೊಡೆದಿದ್ದ ಶಿಕ್ಷಕಿಯನ್ನು ಅಮಾನತು ಮಾಡಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಪ್ಪಲಿಯಿಂದ ಹೊಡೆಸಿಕೊಂಡಿದ್ದ ಶಿಕ್ಷಕನನ್ನು ಕೂಡ ಅಮಾನತು ಮಾಡಿ ಬಾಗಲಕೋಟೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮನ್ನಿಕೇರಿ ಆದೇಶ ಹೊರಡಿಸಿದ್ದಾರೆ.ತಿಂಗಳ ಹಿಂದೆ ಶಿಕ್ಷಕಿ ಅಮೀನಾ ಚಪ್ಪಲಿಯಿಂದ ಹೊಡೆದಿದ್ದರು. ಇಳಕಲ್ ಪೊಲೀಸ್ ಠಾಣೆಯಲ್ಲಿ ಶಿಕ್ಷಕ ಅಂದಾನಯ್ಯ ದೂರು ದಾಖಲಿಸಿದ್ದರು.
Read More »
BigTv News
September 3, 2025
Breaking News
ಐದನೇ ದಿನದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗ ಅವಾಚ್ಯವಾಗಿ ನಿಂದಿಸಿದ್ದನ್ನು ಪ್ರಶ್ನಿಸಿದವರ ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ನಗರದ ದುಬೈ ಕಾಲೊನಿ ನಿವಾಸಿಗಳಾದ ಶರಣಕುಮಾರ ರಟಕಲ್, ಮಲ್ಲಿಕಾರ್ಜುನ ರಟಕಲ್ ಹಲ್ಲೆಗೊಳಗಾಗಿ ಗಾಯಗೊಂಡವರು.ಚಾಕುವಿನಿಂದ ಬೆನ್ನು ಹಾಗೂ ಭುಜದ ಮೇಲೆ ಹೊಡೆದು ಗಾಯಗೊಳಿಸಿದರು. ಬಳಿಕ ಒಂದು ಕಲ್ಲು ಮತ್ತು ಒಂದು ಇಟ್ಟಿಗೆ ತೆಗೆದುಕೊಂಡು ನನ್ನ ಮಗನ ತಲೆ ಮೇಲೆ ಹೊಡೆದರು’ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಕುರಿತು ಮೂವರ ವಿರುದ್ಧ …
Read More »
BigTv News
September 3, 2025
Breaking News
ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಲಾರಿ ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ, ಇಬ್ಬರು ಚಾಲಕರ ಕಾಲುಗಳು ಕಟ್ ಆಗಿವೆ. ಚಿಕ್ಕೋಡಿ ತಾಲೂಕಿನ ಕಬ್ಬೂರು ಗ್ರಾಮದ ಬಳಿ ಈ ದುರ್ಘಟನೆ ನಡೆದಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರು ಗ್ರಾಮದ ಬಳಿ ಘಟನೆ ನಡೆದಿದೆ. ಆಕ್ಸಿಡೆಂಟ್ ಆಗಿರುವ ರಭಸಕ್ಕೆ ಬಸ್ ಚಾಲಕ ಹಾಗೂ ಲಾರಿ ಚಾಲಕರ ಎರಡೂ ಕಾಲುಗಳು ಕಟ್ ಆಗಿವೆ.ಘಟನೆಯಲ್ಲಿ ಹಲವರಿಗೆ ಸಣ್ಣ ಪುಟ್ಟ ಗಾಯವಾಗಿದೆ. …
Read More »
BigTv News
September 3, 2025
Breaking News
ಲಕ್ಷ್ಮಿ ನಿವಾಸ ಧಾರಾವಾಹಿ ನಿರ್ಮಾಣಕ್ಕೆಂದು ಸತ್ಯ, ನಿರ್ಮಲಾ ಅವರು 1 ಕೋಟಿ ರೂಪಾಯಿ ಪಡೆದಿದ್ದರು. ಸೃಜನ್ ಲೋಕೇಶ್ ಪ್ರೊಡಕ್ಷನ್‌ನಿಂದ ಸತ್ಯ ದಂಪತಿಗೆ ಹಣ ವರ್ಗಾವಣೆ ಆಗಿತ್ತು ಎನ್ನಲಾಗಿದೆ. ಧಾರಾವಾಹಿ ಮಾಡಲು ಸತ್ಯ- ನಿರ್ಮಲಾ ದಂಪತಿ ಹಣ ಪಡೆದಿದ್ದರಂತೆ.ಹಣ ನೀಡಿಲ್ಲ ಎಂದು ಸೃಜನ್ ಲೋಕೇಶ್ ಪರ ಅಗ್ನಿ ಯು ಸಾಗರ್ ದೂರು ನೀಡಿದ್ದಾರೆ. ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Read More »
BigTv News
September 3, 2025
Breaking News
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸೆಪ್ಟೆಂಬರ್ 1 ರಂದು ಮೆಟ್ರೋದ ಹಳದಿ ಮಾರ್ಗಕ್ಕಾಗಿ ಚೀನಾದಿಂದ ಎರಡು ರೈಲು ಬೋಗಿಗಳನ್ನು ವಿಮಾನ ಮೂಲಕ ಸಾಗಣೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.ನಾನು ಈಗಾಗಲೇ ಬಿಎಂಆರ್‌ಸಿಎಲ್ ಅಧಿಕಾರಿಗಳನ್ನು ಸಿಆರ್‌ಆರ್‌ಸಿ ಮೇಲೆ ಒತ್ತಡ ಹೇರುವಂತೆ ಕೇಳಿಕೊಂಡಿದ್ದೇನೆ, ವಿಳಂಬದ ವೆಚ್ಚವು ವಿಮಾನ ಸಾಗಣೆಯ ವೆಚ್ಚಕ್ಕಿಂತ ಹೆಚ್ಚಿನದಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದೇನೆ” ಎಂದು ಸೂರ್ಯ ತಿಳಿಸಿದ್ದಾರೆ.
Read More »
BigTv News
September 3, 2025
Breaking News
ಚಿನ್ನದ ಅಕ್ರಮ ಸಾಗಾಟ ಪ್ರಕರಣದಲ್ಲಿ ಬಂಧಿತೆಯಾದ ನಟಿ ರನ್ಯಾ ರಾವ್ ಮಮಾರ್ಚ್ 4ರಂದು ಡಿ.ಆರ್.ಐ. ತಂಡವು ಚಿನ್ನದ ಅಕ್ರಮ ಸಾಗಾಟ ಪ್ರಕರಣವನ್ನು ಪತ್ತೆಹಚ್ಚಿ, 127.3 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿತ್ತು. ಈ ವೇಳೆ ರನ್ಯಾ ರಾವ್ ಸೇರಿದಂತೆ ಹಲವು ಮಂದಿ ಬಂಧಿತರಾಗಿದ್ದರು. ತನಿಖೆಯ ವೇಳೆ ಆರೋಪಿಗಳು ಚಿನ್ನವನ್ನು ಕಳ್ಳಸಾಗಣೆ ಮಾಡಿರುವುದು ದೃಢಪಟ್ಟಿದೆ.ತ್ತೊಮ್ಮೆ ಡಿ.ಆರ್.ಐಶಾಕ್ ನೀಡಿದೆ. ಅಡ್‌ಜುಡಿಕೇಷನ್ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಡಿ.ಆರ್.ಐ. ಆರೋಪಿಗಳಿಗೆ ಷೋಕಾಸ್ ನೋಟಿಸ್‌ಗಳನ್ನು ನೀಡಿದೆ.
Read More »