Breaking News

Breaking News

CM’ ವಿರುದ್ಧ ಕೊಲೆ ಆರೋಪ : ಮಹೇಶ್ ತಿಮರೋಡಿ ವಿರುದ್ಧ `FIR’ ದಾಖಲು.!

ಧರ್ಮಸ್ಥಳದ ಸೌಜನ್ಯ ಪರ ಹೋರಾಟದಲ್ಲಿ ಗುರುತಿಸಿಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿ ಸಿಎಂ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ್ದರು.ಇಂದು ಸದನದಲ್ಲಿ ತಿಮ್ಮರೋಡಿ ಹೇಳಿಕೆ ಬಗ್ಗೆ ಚರ್ಚೆ ನಡೆಸಿದ್ದು, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ದೂರು ದಾಖಲಿಸುವಂತೆ ಪೊಲೀಸರಿಗೆ ಅದೇಶಿಸಿದ್ದಾರೆ.ವಿರುದ್ಧ ಕೊಲೆ ಆರೋಪ ಮಾಡಿದ್ದ ಮಹೇಶ್ ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆದೇಶಿಸಿದ್ದಾರೆ.

Read More »

ಯೋಧನನ್ನು ಕಂಬಕ್ಕೆ ಕಟ್ಟಿ ಥಳಿಸಿದ ನಾಲ್ವರು ‘ಟೋಲ್ ಪ್ಲಾಜಾ’ ಸಿಬ್ಬಂದಿಗಳು ಅರೆಸ್ಟ್.!

ಶ್ರೀನಗರದಲ್ಲಿ ಕರ್ತವ್ಯಕ್ಕೆ ಮರಳಲು ತನ್ನ ಸೋದರಸಂಬಂಧಿಯೊಂದಿಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಕಪಿಲ್ ಕವಾಡ್ ಎಂಬ ಯೋಧನ ಮೇಲೆ ಹಲ್ಲೆ ನಡೆಸಲಾಗಿದೆ.ಸೈನಿಕ ಮತ್ತು ಟೋಲ್ ಕಾರ್ಮಿಕರ ನಡುವೆ ವಿವಾದ ಉಂಟಾಗಿ, ಅವರು ಯೋಧನ ಮೇಲೆ ಹಲ್ಲೆ ಮಾಡಲು ಮುಂದಾದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ, ಆದರೆ ಇತರ ತಂಡಗಳು ಘಟನೆಗೆ ಕಾರಣರಾದ ಹೆಚ್ಚಿನ ವ್ಯಕ್ತಿಗಳನ್ನು ಬಂಧಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

Read More »

ಮಂಗಳೂರು| ಕಟ್ಟಡ ನಿರ್ಮಾಣ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ!

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ಕಾರ್ಮಿಕರ ಫೆಡರೇಷನ್‌ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಯೋಜಿಸಿದ್ದ ಪ್ರತಿಭಟನೆ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಮೂಲಕ ಆರಂಭವಾಯಿತು‌.ಕೆಂಪು ಕಲ್ಲು ಮತ್ತು ಮರಳಿನ ಅಭಾವ ನೀಗಿಸಲು ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿ ಕಟ್ಟಡ ನಿರ್ಮಾಣ ಕಾರ್ಮಿಕರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಮುಖಂಡರು ವಾಗ್ದಾಳಿ ಮಾಡಿದರು.ಯು.ಶೇಖರ್, ಬಿ.ಎಂ ಭಟ್, ದಯಾನಂದ ಕೋಟ್ಯಾನ್, ಯೋಗೀಶ್ ಜಪ್ಪಿನಮೊಗರು ಮತ್ತಿತರರು ಪಾಲ್ಗೊಂಡಿದ್ದರು.

Read More »

ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್ ಬದಲಾಯಿಸಿ- ಬಿ.ವೈ. ವಿಜಯೇಂದ್ರ ಒತ್ತಾಯ

ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟನ್ನೂ ಕೂಡಲೇ ಬದಲಾಯಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಸಾವಿರಾರು ಕ್ಯುಸೆಕ್ ನೀರು ಹರಿದು ವ್ಯರ್ಥವಾಗಿದೆ. ಅದಕ್ಕೆ ಶಾಶ್ವತ ಪರಿಹಾರ ನೀಡಿದೆ ವಿಳಂಬ ಮಾಡಿದ್ದರಿಂದ ನೀರಿನ ಒತ್ತಡ ಇತರ ಗೇಟ್‌ಗಳ ಮೇಲೆ ಬಿದ್ದಿದೆ. ಇದರ ಪರಿಣಾಮವಾಗಿ ಎಲ್ಲ 33 ಕ್ರಸ್ಟ್ ಗೇಟನ್ನೂ ತಕ್ಷಣ ಬದಲಿಸಬೇಕಾದ ಪರಿಸ್ಥಿತಿ ಒದಗಿಬಂದಿದೆ ಎಂದರು. ಕೊಪ್ಪಳ, ರಾಯಚೂರು, ಬಳ್ಳಾರಿ ಮೊದಲಾದ ಜಿಲ್ಲೆಗಳ ರೈತರು ಪ್ರತಿವರ್ಷ 2 …

Read More »

ಭಾರತಕ್ಕೆ Su-57 ಸ್ಟೆಲ್ತ್, S-500 ನೀಡಲು ಮುಂದಾದ ರಷ್ಯಾ, ಪುಟಿನ್ ಈ ನಿರ್ಧಾರದಿಂದ ಪಾಕಿಸ್ತಾನಕ್ಕೆ ನಡುಕ!

ರಷ್ಯಾ ಭಾರತಕ್ಕೆ ಸುಖೋಯ್ Su-57 ಸ್ಟೆಲ್ತ್ ಯುದ್ಧ ವಿಮಾನಗಳು, Su-35 ಜೆಟ್‌ಗಳು, R-37 ಆಕಾಶದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳು ಮತ್ತು S-500 ಪ್ರೊಮೀತಿಯಸ್ ವಾಯು ರಕ್ಷಣಾ ವ್ಯವಸ್ಥೆಗಳನ್ನು ಒದಗಿಸಲು ಮುಂದಾಗಿದೆ. ರಷ್ಯಾದ ಮಾಧ್ಯಮ ಸ್ಪುಟ್ನಿಕ್‌ಗೆ ಮಾತನಾಡಿದ ರಕ್ಷಣಾ ತಜ್ಞ ಇಗೊರ್ ಕೊರೊಟ್ಚೆಂಕೊ, Su-57 ಮತ್ತು S-500 ವ್ಯವಸ್ಥೆಗಳು ಭಾರತೀಯ ಸೇನೆಗೆ ಕ್ರಾಂತಿಕಾರಿ ಬದಲಾವಣೆ ತರಬಹುದು ಎಂದು ಹೇಳಿದ್ದಾರೆ. ಭಾರತವು S-400ನ ಹೆಚ್ಚಿನ ರೆಜಿಮೆಂಟ್‌ಗಳ ಖರೀದಿಯನ್ನು ಪರಿಗಣಿಸುತ್ತಿದೆ ಎಂದು ವರದಿಗಳು ತಿಳಿಸಿವೆ.ರಷ್ಯಾದ …

Read More »

ವಿಮಾನದ ಎಂಜಿನ್’ ಸ್ಪೋಟ : ತಪ್ಪಿದ ಭಾರೀ ದುರಂತ!

ಗ್ರೀಸ್ನಿಂದ ಜರ್ಮನಿಗೆ ಹಾರುತ್ತಿದ್ದ ವಿಮಾನ ಅಪಘಾತಕ್ಕೀಡಾಗಿದೆ. 1500 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಮಾನದಲ್ಲಿ 273 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.ಬಲ ಎಂಜಿನ್ನಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಈ ಅಪಘಾತ ಸಂಭವಿಸಿದೆ. ಇದರಿಂದ ಹಠಾತ್ ಬೆಂಕಿ ಮತ್ತು ದೊಡ್ಡ ಶಬ್ದ ಉಂಟಾಯಿತು. ಇದು ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿತು.ವಿಮಾನವನ್ನು ಕೇವಲ ಒಂದು ಎಂಜಿನ್ನೊಂದಿಗೆ 8,000 ಅಡಿ ಎತ್ತರದಲ್ಲಿ ಬ್ರಿಂಡಿಸಿಗೆ ಸುರಕ್ಷಿತವಾಗಿ ತಿರುಗಿಸಲಾಯಿತು. ಈ ನಿರ್ಧಾರ ತೆಗೆದುಕೊಂಡ ಪೈಲಟ್ಗಳನ್ನು ಎಲ್ಲರೂ …

Read More »

ಡ್ರಮ್’ ನಲ್ಲಿ ಪತಿಯ ಕೊಳೆತ ಶವ ಪತ್ತೆ, ಮಕ್ಕಳೊಂದಿಗೆ ಪತ್ನಿ ನಾಪತ್ತೆ.!

ಉತ್ತರ ಪ್ರದೇಶದ ಮೀರತ್ನಂತೆ, ರಾಜಸ್ಥಾನದಲ್ಲಿ ನೀಲಿ ಡ್ರಮ್ನಲ್ಲಿ ಯುವಕನನ್ನು ಕೊಂದು ಹೂಳಿದ ಪ್ರಕರಣ ಬೆಳಕಿಗೆ ಬಂದಿದೆ. ನೀಲಿ ಡ್ರಮ್ಗೆ ಉಪ್ಪು ಸೇರಿಸಲಾಗಿದೆ. ಅಂದಿನಿಂದ, ಇಡೀ ಕುಟುಂಬ ತಲೆಮರೆಸಿಕೊಂಡಿದೆ.ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು. ರಾಜಸ್ಥಾನದ ಖೈರ್ತಾಲ್ ತಿಜಾರಾ ಜಿಲ್ಲೆಯ ಕಿಶನ್ಗಢಬಾಸ್ನ ಆದರ್ಶ ಕಾಲೋನಿಯಲ್ಲಿ ನೀಲಿ ಡ್ರಮ್ನಲ್ಲಿ ಮೃತ ದೇಹ ಪತ್ತೆಯಾದ ನಂತರ ಆತಂಕ ಮನೆಮಾಡಿದೆ. ಮನೆಯ ಛಾವಣಿಯ ಮೇಲೆ ಇರಿಸಲಾಗಿದ್ದ ನೀಲಿ ಡ್ರಮ್ನಿಂದ ಬಲವಾದ ವಾಸನೆ ಬಂದಾಗ ಸ್ಥಳೀಯ ಜನರು ಪೊಲೀಸರಿಗೆ …

Read More »

ಮಾರನಹಳ್ಳಿಯಿಂದ ಶಿರಾಡಿ ಗಡಿ ಚೌಡೇಶ್ವರಿ ದೇವಸ್ಥಾನ ನಡುವೆ ಗುಡ್ಡಕುಸೀತ!

ಮಾರನಹಳ್ಳಿಯಿಂದ ಶಿರಾಡಿ ಗಡಿ ಚೌಡೇಶ್ವರಿ ದೇವಸ್ಥಾನ ನಡುವೆ ಗುಡ್ಡಕುಸಿತದಿಂದ ಮಣ್ಣು ಹಾಗೂ ಮರಗಳು ರಸ್ತೆಯ ಬಿದ್ದಿದ್ದವು. ಹತ್ತಾರು ಲೋಡ್‌ನಷ್ಟು ಮಣ್ಣು ಬಿದ್ದಿದ್ದರಿಂದ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಉಪ ವಿಭಾಗಾಧಿಕಾರಿ ಎಚ್‌.ಡಿ. ರಾಜೇಶ್‌, ವಲಯ ಅರಣ್ಯ ಅಧಿಕಾರಿ ಎಚ್‌.ಆರ್. ಹೇಮಂತ್‌ಕುಮಾರ್, ಪೊಲೀಸ್ ಇನ್‌ಸ್ಪೆಕ್ಟರ್ ನಿರಂಜನ್‌, ಪಿಎಸ್‌ಐ ಪ್ರಸನ್ನಕುಮಾರ್, ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ ಅನೀಸ್‌, ಸೇರಿದಂತೆ ಕಂದಾಯ, ಪೊಲೀಸ್, ಅರಣ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಶನಿವಾರ …

Read More »

ಶಿರಾಡಿ ಘಾಟ್‌: ಮರ ಬಿದ್ದು ರಾತ್ರಿಯಿಡೀ ಪ್ರಯಾಣಿಕರಿಗೆ ಸಂಕಷ್ಟ!

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್‌ನಲ್ಲಿ ಬೃಹತ್ ಗಾತ್ರದ ಮರ ಬಿದ್ದು ರಾತ್ರಿಯಿಡಿ ವಾಹನ ಪ್ರಯಾಣಿಕರು ಪರದಾಡುವಂತಾಯಿತು. ನಿರಂತರ ಮಳೆಯಿಂದ ಹೆದ್ದಾರಿಯಲ್ಲಿ ಭೂಕುಸಿತವಾಗಿದ್ದು, ರಾತ್ರಿ ವೇಳೆ ಕೆಲ ಗಂಟೆಗಳವರೆಗೆ ವಾಹನ ಸಂಚಾರ ಸ್ಥಗಿತವಾಗಿತ್ತು.

Read More »

ಪಾಕಿಸ್ತಾನ ಜಲಸ್ಮಶಾನ: 350ಕ್ಕೂ ಅಧಿಕ ಬಲಿ, ಪ್ರಕೃತಿಯ ರೌದ್ರಕ್ಕೆ ನೆರೆ ರಾಷ್ಟ್ರ ತತ್ತರ!

ಪಾಕಿಸ್ತಾನ ಮತ್ತೆ ಮಹಾಪ್ರವಾಹದ ಕಾಟಕ್ಕೆ ತತ್ತರಿಸಿದೆ. ಮಳೆಯ ಉಗ್ರ ತಾಂಡವದಿಂದ 350ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, ಸಾವಿರಾರು ಜನರ ಬದುಕು ದುಸ್ತರವಾಗಿದೆ. ಖೈಬರ್ ಪಖ್ತುಂಖ್ವಾ ಸೇರಿದಂತೆ ಹಲವು ಭಾಗಗಳು ಸ್ಮಶಾನ ಸ್ಥಿತಿಗೆ ತಲುಪಿದ್ದು, ಅಳು-ಆಕ್ರಂದನದ ನಡುವೆ ಜನರು ಉಸಿರು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ.ಪ್ರಕೃತಿಯ ಮುನಿಸಿಗೆ ಮಾನವೀಯ ಕಾರಣಗಳೇ ಹಿನ್ನೆಲೆ ಎನ್ನಲಾಗುತ್ತಿದ್ದು, ಇದೇ ವೇಳೆ ಭಾರತದ ಉತ್ತರ ಭಾಗದಲ್ಲಿಯೂ ಮೇಘಸ್ಫೋಟ ಮತ್ತು ಪ್ರವಾಹದ ಕಾಟ ಹೆಚ್ಚಾಗಿದೆ.

Read More »