Breaking News

ಭಾರತಕ್ಕೆ Su-57 ಸ್ಟೆಲ್ತ್, S-500 ನೀಡಲು ಮುಂದಾದ ರಷ್ಯಾ, ಪುಟಿನ್ ಈ ನಿರ್ಧಾರದಿಂದ ಪಾಕಿಸ್ತಾನಕ್ಕೆ ನಡುಕ!

ರಷ್ಯಾ ಭಾರತಕ್ಕೆ ಸುಖೋಯ್ Su-57 ಸ್ಟೆಲ್ತ್ ಯುದ್ಧ ವಿಮಾನಗಳು, Su-35 ಜೆಟ್‌ಗಳು, R-37 ಆಕಾಶದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳು ಮತ್ತು S-500 ಪ್ರೊಮೀತಿಯಸ್ ವಾಯು ರಕ್ಷಣಾ ವ್ಯವಸ್ಥೆಗಳನ್ನು ಒದಗಿಸಲು ಮುಂದಾಗಿದೆ. ರಷ್ಯಾದ ಮಾಧ್ಯಮ ಸ್ಪುಟ್ನಿಕ್‌ಗೆ ಮಾತನಾಡಿದ ರಕ್ಷಣಾ ತಜ್ಞ ಇಗೊರ್ ಕೊರೊಟ್ಚೆಂಕೊ, Su-57 ಮತ್ತು S-500 ವ್ಯವಸ್ಥೆಗಳು ಭಾರತೀಯ ಸೇನೆಗೆ ಕ್ರಾಂತಿಕಾರಿ ಬದಲಾವಣೆ ತರಬಹುದು ಎಂದು ಹೇಳಿದ್ದಾರೆ. ಭಾರತವು S-400ನ ಹೆಚ್ಚಿನ ರೆಜಿಮೆಂಟ್‌ಗಳ ಖರೀದಿಯನ್ನು ಪರಿಗಣಿಸುತ್ತಿದೆ ಎಂದು ವರದಿಗಳು ತಿಳಿಸಿವೆ.ರಷ್ಯಾದ PAK FA ಕಾರ್ಯಕ್ರಮದಡಿ ಅಭಿವೃದ್ಧಿಪಡಿಸಲಾದ ಈ ವಿಮಾನವು ಸ್ಟೆಲ್ತ್ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾದ ರಷ್ಯಾದ ಮೊದಲ ಯುದ್ಧ ವಿಮಾನವಾಗಿದೆ.

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *