Breaking News

Breaking News

500 ನೇ ಕೋಟಿ ಟಿಕೆಟ್ ಪಡೆದ ಮಹಿಳೆಗೆ ಶಾಲು ಹೊದಿಸಿ CM ಸಿದ್ದರಾಮಯ್ಯ ಸನ್ಮಾನ.!

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಶಕ್ತಿ ಯೋಜನೆಯು ದಿನಾಂಕ 11-06-2023 ರಿಂದ ಜಾರಿಗೆ ಬಂದಿದ್ದು, ಜುಲೈ 14 ನೇ 2025 ಕ್ಕೆ 500 ಕೋಟಿ ಮಹಿಳಾ ಪ್ರಯಾಣಿಕರ ಟ್ರಿಪ್ ಅನ್ನು ತಲುಪುವ ಮುಖಾಂತರ ದೇಶದಲ್ಲೇ ಹೊಸ ಮೈಲಿಗಲ್ಲನ್ನು ತಲುಪಲಿದೆ.ಯೋಜನೆಯಿಂದ ಸಾವಯವ ರೊಟ್ಟಿ, ,ಹೋಳಿಗೆ ತಯಾರಿಸಿ ಬೆಂಗಳೂರಿಗೆ ಮಾರಾಟ ಮಾಡಿ ಲಕ್ಷಾಂತರ ರೂ ವಹಿವಾಟು ನಡೆಸಲಾಗಿದ್ದು ,ಅವರಿಂದ ಸನ್ಮಾನ್ಯ ಮುಖ್ಯಮಂತ್ರಿ ರವರಿಗೆ ಮತ್ತು ಮಾನ್ಯ ಉಪಮುಖ್ಯ ಮಂತ್ರಿರವರಿಗೆ,ಮಾನ್ಯ ಸಾರಿಗೆ ಹಾಗೂ ಮುಜರಾಯಿಗೆ ರೊಟ್ಟಿ …

Read More »

ಬೆಂಗಳೂರು ಮತ್ತು ಚಿಕ್ಕಮಗಳೂರಿಗೆ ಆರೆಂಜ್ ಅಲರ್ಟ್ – ಬಿರುಗಾಳಿ, ಮಳೆಗೆ ಮುನ್ಸೂಚನೆ..

ಬೆಂಗಳೂರಿನಲ್ಲಿ ಬಿರುಸಿನ ಮಳೆಯಿಂದಾಗಿ ಚಾಮರಾಜಪೇಟೆ 5ನೇ ಮುಖ್ಯ ರಸ್ತೆಯಲ್ಲಿ ಬುಡ ಸಮೇತ ಧರೆಗುರುಳಿದ ಮರ ಸ್ಥಳೀಯರ ಆತಂಕಕ್ಕೆ ಕಾರಣವಾಯಿತು. ಅದೃಷ್ಟವಶಾತ್ ಈ ಘಟನೆ ವೇಳೆ ಯಾವುದೇ ಅಪಾಯ ಸಂಭವಿಸಿಲ್ಲ. ಮರ ರಸ್ತೆಗೆ ಬಿದ್ದು ಕೆಲಕಾಲ ರಸ್ತೆ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಮರ ರಸ್ತೆಯ ಬದಿಯಲ್ಲಿದ್ದ ತಳ್ಳುವ ಗಾಡಿಯ ಮೇಲೆ ಬಿದ್ದರೂ ಹೆಚ್ಚಿನ ಹಾನಿ ತಪ್ಪಿದೆ. ರಾತ್ರಿ 10.45ರ ಸುಮಾರಿಗೆ ಮರ ಧರೆಗುರುಳಿದಾಗ ರಸ್ತೆ ಮೇಲೆ ಯಾರೂ ಸಂಚರಿಸುತ್ತಿರಲಿಲ್ಲ ಎನ್ನುವುದು ಸಮಾಧಾನದ …

Read More »

ಶಿರಾಡಿಘಾಟ್‌ನಲ್ಲಿ ಜಲಪಾತಕ್ಕೆ ಬಿದ್ದ ಕಾರು, ಬೆಂಗಳೂರು ಮೂಲದ ಪ್ರವಾಸಿಗರು ಬಚಾವ್!

ಸಕಲೇಶಪುರ ತಾಲ್ಲೂಕಿನ ಶಿರಾಡಿಘಾಟ್‌ನಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಜಲಪಾತಕ್ಕೆ ಉರುಳಿದ ಘಟನೆ ಸಂಭವಿಸಿದೆ. ಬೆಂಗಳೂರು ಮೂಲದ ಪ್ರವಾಸಿಗರು ಪ್ರಯಾಣಿಸುತ್ತಿದ್ದ ಕಾರು, ಜಲಪಾತದ ದರ್ಶನಕ್ಕಾಗಿ ನಿಲ್ಲಿಸಿದ್ದ ಸಂದರ್ಭದಲ್ಲೇ ಚಾಲಕನ ನಿಯಂತ್ರಣ ತಪ್ಪಿ ಕಾರು ಕಿಡಿಗೇಡಿಯಾಗಿ ಪಾಲ್ಸ್‌ಗೆ ಉರುಳಿತು. ಅದೃಷ್ಟವಶಾತ್ ಯಾವುದೇ ಭಾರಿ ಅನಾಹುತ ಸಂಭವಿಸದೇ, ಕಾರಿನಲ್ಲಿ ಇದ್ದ ಪ್ರಯಾಣಿಕರು ಅಪಾಯದಿಂದ ಪಾರಾದರು. ಚಾಲಕನಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ.ಘಟನೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

Read More »

ಬೆಂಗಳೂರು: ಕ್ಯಾಂಟರ್ ಚಕ್ರ ಹರಿದು ವಿದ್ಯಾರ್ಥಿನಿ ಸಾವು!

ಕ್ಯಾಂಟರ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಹಿಂಬದಿ ಸವಾರರೊಬ್ಬರು ಮೃತಪಟ್ಟಿರುವ ಘಟನೆ ಆಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರು. ಸವಾರನಿಗೆ ಸಣ್ಣ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಆಡುಗೋಡಿ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಾಲಕ ಹಾಗೂ ಕ್ಯಾಂಟರ್‌ ಅನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More »

ಅಭಿನಯ ಸರಸ್ವತಿ, ಬಹುಭಾಷಾ ಹಿರಿಯ ನಟಿ ಬಿ.ಸರೋಜಾದೇವಿ ಇನ್ನಿಲ್ಲ!

ಬೆಂಗಳೂರಿನ ಮಲ್ಲೇಶ್ವರಂ ನಿವಾಸದಲ್ಲಿ ಬಿ ಸರೋಜಾದೇವಿ ಸಾವನ್ನಪ್ಪಿದ್ದಾರೆ. ಸರೋಜಾದೇವಿಯವರು ವಯೋ ಸಹಜ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು ಅಭಿನಯ ಸರಸ್ವತಿಯಂದೆ ಸರೋಜಾದೇವಿ ಖ್ಯಾತಿ ಹೊಂದಿದ್ದರು. ಸುಮಾರು ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಐದು ಭಾಷೆಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಸರೋಜಾ ದೇವಿ ನಟಿಸಿದ್ದಾರೆ.ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ನಾಳೆ ಬೆಳಗ್ಗೆ 11 ಕ್ಕೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು …

Read More »

ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಯನ್ನು ಎಳೆದು ಕಪಾಳಮೋಕ್ಷ ಮಾಡಿದ ಐಎಎಸ್ ಅಧಿಕಾರಿ

ದೀನದಯಾಳ್ ದಂಗ್ರೌಲಿಯಾ ಮಹಾವಿದ್ಯಾಲಯದಲ್ಲಿ ನಡೆದ ಈ ಘಟನೆ ಇದು. ತುಂಬಿದ್ದ ತರಗತಿಯಲ್ಲಿ ವಿದ್ಯಾರ್ಥಿಯನ್ನು ಕುರ್ಚಿಯಿಂದ ಎಳೆದು ಹೊಡೆದಿದ್ದಾರೆ. ಬಿಎಸ್ಸಿಯ ಎರಡನೇ ವರ್ಷದ ಗಣಿತ ಪರೀಕ್ಷೆ ವೇಳೆ ತಪಾಸಣೆಗೆಂದು ಸಂಜೀವ್ ರಾಥೋಡ್ ಹೋಗಿದ್ದರು. ರೋಹಿತ್ ರಾಥೋಡ್ ಎಂದು ಗುರುತಿಸಲಾದ ವಿದ್ಯಾರ್ಥಿಯನ್ನು ಎಂಬ ವಿದ್ಯಾರ್ಥಿಯನ್ನು ಥಳಿಸಿ ಕಪಾಳಮೋಕ್ಷ ಮಾಡುತ್ತಾರೆ. ಅಧಿಕಾರಿ ಕ್ರಮವನ್ನು ಸಮರ್ಥಿಸಿಕೊಂಡರು, ಪರೀಕ್ಷಾ ಹಗರಣ ನಡೆಯುತ್ತಿದೆ ಎಂದು ಹೇಳಿದ್ದು, ಕಾಪಿ ಹೊಡೆಯುತ್ತಿದ್ದ ಹಾಗಾಗಿ ಹೊಡೆದಿದ್ದೇನೆ ಎಂದು ಹೇಳಿದ್ದಾರೆ.

Read More »

ತಾಯಿ ಬದುಕಿರುವಾಗಲೇ ಶವ ಪೆಟ್ಟಿಗೆ ತಂದು ಆಕೆಯನ್ನು ಕೂರಿಸಿ ಮೆರವಣಿಗೆ ಮಾಡಿದ ವ್ಯಕ್ತಿ!

ವ್ಯಕ್ತಿ ಶವಪಟ್ಟಿಗೆಯನ್ನು ಖರೀದಿಸಿದ ಬಳಿಕ 70 ವರ್ಷದ ತಾಯಿಯನ್ನು ಅದರಲ್ಲಿ ಕೂರಿಸಿ ಮನೆಯವರೆಗೆ ಮೆರವಣಿಗೆ ಮಾಡಿಸಿದ್ದಾರೆ.ಶವಪೆಟ್ಟಿಗೆಯನ್ನು ಶವವಾಹನದ ಮೇಲೆ ಇರಿಸಲಾಯಿತು. ಶವ ಪೆಟ್ಟಿಗೆಯ ಒಳಗೆ ಮಹಿಳೆ ಕುಳಿತಿದ್ದರು. ಬ್ಯಾಂಡ್ ನುಡಿಸಲಾಗುತ್ತಿತ್ತು. ಇದು ನೋಡಲು ನಿಜವಾದ ಶವ ಮೆರವಣಿಗೆಯಂತೆಯೇ ಇತ್ತು. ಇದು ಚೀನಾದ ಗ್ರಾಮೀಣ ಭಾಗದಲ್ಲಿ ಆಚರಿಸುವ ಸಾಂಪ್ರದಾಯಿಕ ಆಚರಣೆಯಾಗಿದೆ. ದಕ್ಷಿಣ ಚೀನಾದ ಹುನಾನ್ ಪ್ರಾಂತ್ಯದ ಚಾಂಗ್ಡೆಯ ಟಾವೊಯುವಾನ್ ಕೌಂಟಿಯ ಶುವಾಂಗ್ಕ್ಸಿಕೌ ಪಟ್ಟಣದ ವ್ಯಕ್ತಿಯೊಬ್ಬರು ಈ ರೀತಿ ಮಾಡಿದ್ದಾರೆ. ಈ ಆಚರಣೆ …

Read More »

ಪೊಲೀಸ್‌ ಮುಂದೆ ಬಂದಿರುವ ಹೆಣ ಹೂಳುತ್ತಿದ್ದ ವ್ಯಕ್ತಿ ಯಾರು? ಧರ್ಮಸ್ಥಳದಿಂದ ಆತ ತಪ್ಪಿಸಿಕೊಂಡಿದ್ದೇಗೆ?

ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ಧರ್ಮಸ್ಥಳದಲ್ಲಿ ನಡೆದಿದ್ದ ಅತ್ಯಾಚಾರ, ಕೊಲೆಯಾದ ಶವಗಳನ್ನು ತಾನು ಹೂತಿದ್ದಾಗಿ ಹೇಳಿಕೊಂಡಿದ್ದು, ಪಾಪಪ್ರಜ್ಞೆ ಕಾಡುತ್ತಿರುವ ಕಾರಣ ಅವುಗಳನ್ನು ಪೊಲೀಸರ ಮುಂದೆ ಹೊರತೆಗೆದು ತೋರಿಸಿ ಶರಣಾಗುತ್ತೇನೆ ಎಂದು ಪತ್ರ ಬರೆದಿದ್ದಾನೆ ಹಾಗೂ ಸ್ವತಃ ಎಫ್‌ಐಆರ್‌ ಅನ್ನೂ ಸಹ ದಾಖಲಿಸಿದ್ದಾನೆ.ಇನ್ನು ಸೌಜನ್ಯ ಪ್ರಕರಣದಲ್ಲಿ ಸತ್ಯ ಒಪ್ಪಿಕೊಳ್ಳಲು ಸಿದ್ಧನಾಗಿ ಬಳಿಕ ನಿಗೂಢವಾಗಿ ಸಾವನ್ನಪ್ಪಿದ ರವಿ ಪೂಜಾರಿ ಈ ಭೀಮನಿಗೆ ಆಪ್ತ ಸ್ನೇಹಿತ. ಸೌಜನ್ಯ ಕೊಲೆಯ ಬಳಿಕ ಮದ್ಯಪಾನಕ್ಕೆ …

Read More »

20 ಕಿ.ಮೀ ನಡೆದುಕೊಂಡು ಬಂದ 95 ವರ್ಷದ ವೃದ್ಧೆ ! ಇದೆಲ್ಲಾ ಒಂದು ಇಂಜೆಕ್ಷನ್’ಗಾಗಿ.

ಒಡಿಶಾದಾದ್ಯಂತ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಿದ ಚಾಲಕರ ಮುಷ್ಕರ ನಡೆಯಿತ್ತು, ಪ್ರಯಾಣಿಸಲು ವಾಹನಗಳ ಕೊರತೆಯಾಗಿತ್ತು. 95 ವರ್ಷ ವಯಸ್ಸಿನ ವೃದ್ಧೆಯೊಬ್ಬರು ನಾಯಿ ಕಚ್ಚಿದ್ದರಿಂದ ರೇಬೀಸ್ ಲಸಿಕೆ ಪಡೆಯಲು 20 ಕಿಲೋಮೀಟರ್ ನಡೆಯುವ ಮೂಲಕ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಂಡರು. ಘಟನೆಗೆ ಪ್ರತಿಕ್ರಿಯಿಸಿದ ಚಾಲಕರ ಸಂಘದ ಜಿಲ್ಲಾಧ್ಯಕ್ಷ ದುರ್ಗಾ ಚರಣ್ ಬಿಶಿ, ತಾವು ಮುಷ್ಕರದಲ್ಲಿದ್ದರೂ ಅಗತ್ಯ ಸೇವೆಗಳಿಗೆ ಅಡ್ಡಿಪಡಿಸಲಿಲ್ಲ ಎಂದು ಹೇಳಿದರು. ಸಂತ್ರಸ್ತೆಯ ಕುಟುಂಬವು ಈ ವಿಶೇಷ ಪರಿಸ್ಥಿತಿಯ ಬಗ್ಗೆ ಅವರಿಗೆ ತಿಳಿಸಿದ್ದರೆ, ಅವರು …

Read More »

ಹೃದಯಾಘಾತದಿಂದ ಬೆಳೆದು ನಿಂತ ಮಗ ಸಾವು – ಅಪ್ಪ ಮಾಡಿದ ಕೆಲಸ ಊರೇ ಮೆಚ್ಚುವಂಥದ್ದು!

ಹೃದಯಾಘಾತದಿಂದ ಮಗ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆತನ ಸ್ಮರಣಾರ್ಥವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಇಂಥಾ ದುರ್ಘಟನೆ ಮತ್ತೆ ಯಾರ ಬಾಳಲ್ಲೂ ನಡೆಯದಿರಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ತುಮಕೂರು ತಾಲೂಕಿನ ಹೆಬ್ಬಾಕ ಗ್ರಾಮದ ನೀಲಕಂಠಸ್ವಾಮಿ‌ ಎಂಬುವರು ಕಳೆದ ಎರಡು ವಾರಗಳ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ರು. ಆತನ ಪೋಷಕರು ಮಗನ ಅಕಾಲಿಕ ಸಾವಿನಿಂದ ತೀವ್ರ ನೊಂದಿದ್ದ‌ ಹೆತ್ತವರು‌ ನಮ್ಮ ಮಗನಿಗೆ ಬಂದ ಸ್ಥಿತಿ ಮತ್ಯಾರಿಗೂ ಬಾರದಿರಲಿ ಅಂತ ಗ್ರಾಮದ ಪ್ರತಿಯೊಬ್ಬರಿಗೂ …

Read More »