BigTv News
July 3, 2025
Breaking News
ಪುತ್ತೂರು ಬಿಜೆಪಿ ಮುಖಂಡನ ಪುತ್ರನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಂತ್ರಸ್ತೆ ಯುವತಿ ಮಗುವಿಗೆ ಜನ್ಮ ನೀಡಿದ್ದಾಳೆ. ಕೃಷ್ಣ ಜೆ ರಾವ್ ಎನ್ನುವಾತ ಮದುವೆಯಾಗುವುದಾಗಿ ಯುವತಿಗೆ ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.ಗರ್ಭಿಣಿಯಾದ ವಿಷಯ ತಿಳಿದ ನಂತರ, ಯುವತಿ ತನ್ನ ಹೆತ್ತವರಿಗೆ ತಿಳಿಸಿದಳು. ನಂತರ ಅವರು ಕೃಷ್ಣನ ಕುಟುಂಬವನ್ನು ಸಂಪರ್ಕಿಸಿದರು. ಆರಂಭದಲ್ಲಿ ಕುಟುಂಬದವರು ಮದುವೆಗೆ ಒಪ್ಪಿಕೊಂಡರೂ, ಕೃಷ್ಣ ಅಂತಿಮವಾಗಿ ನಿರಾಕರಿಸಿದ್ದಾನೆ.ಜೂನ್ 24ರ ರಾತ್ರಿ ದೂರು ದಾಖಲಾದ ನಂತರ, ಪುತ್ತೂರು ಪೊಲೀಸರು ಕೃಷ್ಣ …
Read More »
BigTv News
July 3, 2025
Breaking News
ಐಷಾರಾಮಿ ಫ್ಲಾಟ್ನಲ್ಲಿ ವಾಸಿಸುತ್ತಿರುವ ಯುವತಿ ಮನೆಗೆ ಕೊರಿಯರ್ ನೀಡಲು ಬಂದಿದ್ದ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆಕೆ ಮೊಬೈಲ್ನಲ್ಲಿ ಒಟಿಪಿ ನೋಡಲು ಒಳಗೆ ಹೋದಾಗ ವ್ಯಕ್ತಿ ಬಾಗಿಲು ಲಾಕ್ ಮಾಡಿ ಮನೆಯೊಳಗೆ ಪ್ರವೇಶಿಸಿ ಅತ್ಯಾಚಾರವೆಸಗಿದ್ದಾನೆ.ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಅತ್ಯಾಚಾರ, ಮಹಿಳೆಯ ಮೇಲೆ ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ.
Read More »
BigTv News
July 3, 2025
Breaking News
ಶಾಲೆಯೊಂದರ ಮಹಿಳಾ ಶಿಕ್ಷಕಿಯೊಬ್ಬರು 16 ವರ್ಷದ ವಿದ್ಯಾರ್ಥಿಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ವಿವಾಹಿತ ಇಂಗ್ಲಿಷ್ ಭಾಷಾ ಶಿಕ್ಷಕಿ ಅಪ್ರಾಪ್ತ ವಯಸ್ಕನನ್ನು ಐಷಾರಾಮಿ ಹೋಟೆಲ್ಗಳಿಗೆ ಕರೆದೊಯ್ದು ಅಲ್ಲಿ ಆತನ ಮೇಲೆ ದೌರ್ಜನ್ಯ ಎಸಗಿದ್ದಾರೆ.ಹುಡುಗ ಕೆಲವು ತಿಂಗಳ ಹಿಂದೆ ತನ್ನ 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಶಾಲೆಯನ್ನು ತೊರೆದನು, ಆದರೆ ಖಿನ್ನತೆಗೆ ಜಾರಿದನು ಎಂದು ಅಧಿಕಾರಿ ಹೇಳಿದರು. ಆರೋಪಿಗಳು …
Read More »
BigTv News
July 2, 2025
Breaking News
ಮಗುವಿನೊಂದಿಗೆ ಆಟವಾಡುತ್ತಿದ್ದಾಗಲೇ ತಂದೆಗೆ ಹೃದಯಾಘಾತವಾಗಿ ನಿಧನವಾಗಿರುವ ಘಟನೆ ತಾಲ್ಲೂಕಿನ ಯಕಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.ಮಾದಿಹಳ್ಳಿ ಗ್ರಾಮದ ರವಿಕುಮಾರ್ (30) ಮೃತಪಟ್ಟ ದುರ್ದೈವಿ.ನಿನ್ನೆ ಸಂಜೆ ಮಾದಿಹಳ್ಳಿ ಗ್ರಾಮದಿಂದ ಹೊರಟು ಪತ್ನಿಯ ತವರಾದ ತಾಲ್ಲೂಕಿನ ಯಕಶೆಟ್ಟಿಹಳ್ಳಿ ಗ್ರಾಮಕ್ಕೆ ತೆರಳಿ ಪತ್ನಿಯೊಂದಿಗೆ ಮಾತನಾಡಿ ನಂತರ 9 ತಿಂಗಳ ಮಗುವಿನೊಂದಿಗೆ ಆಟವಾಡುತ್ತಾ ಸಮಯ ಕಳೆಯುತ್ತಿದ್ದರು.
Read More »
BigTv News
July 2, 2025
Breaking News
ಕಡಬ ತಾಲೂಕಿನ ಕೋಡಿoಬಾಳ ಗ್ರಾಮದ ಮೂರಾಜೆ ಅಂಗನವಾಡಿ ಕೇಂದ್ರವೊಂದರಲ್ಲಿನ ಪುಟಾಣಿ ಮಕ್ಕಳು ಮಳೆಗಾಲದಲ್ಲಿ ಒದ್ದೆಯಾಗಿಕೊಂಡು ಶೌಚಾಲಯಕ್ಕೆ ಹೋಗುತ್ತಿದ್ದು, ಶೌಚಾಲಯಕ್ಕೆ ತೆರಳುವಲ್ಲಿ ಮೇಲ್ಛಾವಣಿ ಮತ್ತು ನೆಲಕ್ಕೆ ಕಾಂಕ್ರೀಟ್ ಹಾಕುವಂತೆ ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಪತ್ರದ ಮೂಲಕ ಮನವಿ ಮಾಡಲಾಯಿತು.ಕಡಬ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಡೆನ್ನಿಸ್ ಫೆರ್ನಾಂಡಿಸ್, ಅಂಗನವಾಡಿ ಶಿಕ್ಷಕಿ ವಿಮಲಾ ಮತ್ತು ಮುರಳಿ ಮೂರಾಜೆ ಜೊತೆಗಿದ್ದರು.
Read More »
BigTv News
July 2, 2025
Breaking News
ಇಶಿತಾ ದ್ವೇಷಕ್ಕೆ ಶ್ರದ್ಧಾ ಶ್ರೀಮಂತಿಕೆ, ಸೌಂದರ್ಯ ಮಾತ್ರ ಕಾರಣವಾಗಿರಲಿಲ್ಲ. ಇಶಿತಾ ಹಾಗೂ ಆಕೆ ಬಾಯ್ ಫ್ರೆಂಡ್ ಖಾಸಗಿ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ಶ್ರದ್ಧಾ ಕಾರಣ, ಈ ಘಟನೆಯಲ್ಲಿ ಶ್ರದ್ಧಾ ಕೈವಾಡವಿದೆ ಅಂತ ಇಶಿತಾ ನಂಬಿದ್ದಳು. ಅದೇ ಆಕೆ ಇಷ್ಟೊಂದು ಕಟು ನಿರ್ಧಾರ ತೆಗೆದುಕೊಳ್ಳಲು ಕಾರಣವಾಯ್ತು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನ್ನ ಬಾಲ್ಯ ಸ್ನೇಹಿತೆ ಮೇಲೆ ಆಸಿಡ್ (Acid) ಹಾಕಿದ ಇಶಿತಾಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಸಹಾಯ ಮಾಡಿದ್ದ ಅಂಶ್ ಹುಡುಕಾಟ …
Read More »
BigTv News
July 2, 2025
Breaking News
ಮಂಗಳೂರಿನಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಕಾರಿಗೆ ಹಾಗೂ ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆ ಹೋಗುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮೂವರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ . ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಮಾಳೂರು ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.
Read More »
BigTv News
July 2, 2025
Breaking News
30 ವರ್ಷದ ನೌಶಾದ್ ತ್ಯಾಗಿ ಎಂಬಾತ ರಾಹುಲ್ ತ್ಯಾಗಿ ಎಂಬ ಹೆಸರಿಟ್ಟುಕೊಂಡು ನಾನು ಪೊಲೀಸ್ ಅಂತ ನಕಲಿ ಪೊಲೀಸ್ ಡ್ರೆಸ್ ಧರಿಸಿ ಮಹಿಳೆಯರನ್ನು ಬಕ್ರಾ ಮಾಡುತ್ತಿದ್ದ. ‘ಅರ್ಧದಲ್ಲೇ ಶಾಲೆ ಬಿಟ್ಟಿದ್ದ ನೌಶಾದ್, ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದ. ವಿಧವೆಯರು ಮತ್ತು ಪತಿಯಿಂದ ಬೇರ್ಪಟ್ಟವರನ್ನೇ ಪರಿಚಯ ಮಾಡಿಕೊಂಡು, ಲೈಂಗಿಕ ಹಿಂಸೆ ನೀಡಿ ಎಸ್ಕೇಪ್ ಆಗುತ್ತಿದ್ದ’ ಎಂದು ಎಸ್‌ಎಸ್‌ಪಿ ಸಂಜಯ್ ಕುಮಾರ್ ವರ್ಮಾ ಹೇಳಿದ್ದಾರೆ.ಮಹಿಳೆಯೊಬ್ಬರು ಮುಜಫರ್ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಈ …
Read More »
BigTv News
July 2, 2025
Breaking News
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ನೂತನ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಅವರನ್ನು ಭೇಟಿ ಮಾಡಿ ಸನ್ಮಾನಿಸಲಾಯಿತು.ಜಿಲ್ಲಾಧಿಕಾರಿಗಳು ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರಿ ನೌಕರರ ಪಾತ್ರ ಮಹತ್ತರವಾಗಿದೆ. ಸರಕಾರ ಮತ್ತು ಸಾರ್ವಜನಿಕರ ನಡುವೆ ಕೊಂಡಿಯಾಗಿ ಸರಕಾರದ ಯಶಸ್ಸಿನಲ್ಲಿ ಕೈಜೋಡಿಸಬೇಕು. ಸಂಘವು ಉತ್ತಮ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಕರೆ ನೀಡಿದರು.
Read More »
BigTv News
July 2, 2025
Breaking News
ಹೆಜಮಾಡಿ ಟೋಲ್ ಪ್ಲಾಜಾದ ಬಳಿ ಪಾರ್ಕ್ ಮಾಡಲಾದ ಲಾರಿಯೊಂದರ ಹಿಂಬದಿಗೆ ಇನೋವಾ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡ ಘಟನೆ ಇಂದು ಬೆಳಗ್ಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಸಂಭವಿಸಿದೆ.ಗಾಯಾಳುಗಳಿಬ್ಬರನ್ನೂ ಮಂಗಳೂರಿನ ಎಜೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸಿದ್ದಾರೆ.ಕೋಡಿಕರೆ ನಿವಾಸಿ ಲೋಕೇಶ್ (43) ಇವರು ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸ್ಥಾಪಕದಕ್ಷ …
Read More »