Breaking News

Breaking News

ಸುಳ್ಳು ಕೊಲೆ ಕೇಸ್ ಹಾಕಿ ಅಮಾಯಕನನ್ನು ಜೈಲಿಗೆ ಕಳುಹಿಸಿ ಕೆಲಸ ಕಳೆದುಕೊಂಡ ಪೊಲೀಸರು!

ಕೊಲೆ ಕೇಸ್​ ಹಾಕಿ ಅಮಾಯಕನನ್ನು ಜೈಲಿಗೆ ಕಳುಹಿಸಿದ ಆರೋಪದ ಮೇಲೆ ಇನ್ಸ್​ಪೆಕ್ಟರ್ ಮತ್ತು ಇಬ್ಬರು ಸಬ್​ ಇನ್ಸ್​ಪೆಕ್ಟರ್​ಗಳನ್ನು ಅಮಾನತು ಮಾಡಲಾಗಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್​ ಠಾಣೆ ಇನ್ಸ್‌ಪೆಕ್ಟರ್ ಬಿ.ಜಿ ಪ್ರಕಾಶ್, ಇಲವಾಲ ಸಬ್​​ ಇನ್ಸ್​​ಪೆಕ್ಟರ್​​ ಮಹೇಶ್‌ ಕುಮಾರ್ ಹಾಗೂ ಜಯಪುರ ಪೊಲೀಸ್​ ಠಾಣೆಯ ಸಬ್ ಇನ್ಸ್​ಪೆಕ್ಟರ್​ ಪ್ರಕಾಶ್ ಎತ್ತಿನಮನೆಯವರನ್ನು ಅಮಾನತು ಮಾಡಲಾಗಿದೆ.

Read More »

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಗೆ ಮಹಾಪೌರರಾಗಿ ಆಯ್ಕೆ ಯಾದ ಜ್ಯೋತಿ ಪಾಟೀಲ…

ಹುಬ್ಬಳ್ಳಿ ಜೂ.30: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಗೆ ಮಹಾಪೌರರಾಗಿ 19ನೇ ವಾರ್ಡ್ ಸದಸ್ಯರಾದ ಜ್ಯೋತಿ ಪಾಟೀಲ ಅವರು ಅತಿ ಹೆಚ್ಚು (47) ಮತಗಳನ್ನು ಪಡೆದು ಆಯ್ಕೆಯಾದರು. ಪಾಲಿಕೆಯ 49ನೇ ವಾರ್ಡ್ ಸದಸ್ಯೆಯರಾದ ಸಂತೋಷ ಚವ್ಹಾಣ ಅವರು ಅತಿ ಹೆಚ್ಚು (47) ಮತಗಳನ್ನು ಪಡೆದು ಉಪ ಮಹಾಪೌರರಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾ ಅಧ್ಯಕ್ಷಾಧಿಕಾರಿಯಾಗಿದ್ದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಎಸ್.ಬಿ.ಶೆಟ್ಟೆಣ್ಣವರ ಅವರು ಪ್ರಕಟಿಸಿದರು.ಮಹಾಪೌರ ಸ್ಥಾನಕ್ಕೆ ಮಹಾನಗರ ಪಾಲಿಕೆಯ …

Read More »

ಹುಬ್ಬಳ್ಳಿ: ವಿಮಾನ ನಿಲ್ದಾಣಕ್ಕೆ ಬಾಂಬ್ ಕರೆ; ಪೊಲೀಸ್ ಕಮಿಷನರ್ ರಿಯಾಕ್ಷನ್..

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣ ಸೇರಿದಂತೆ ರಾಜ್ಯದ ಹಲವಾರು ಏರ್‌ಪೋರ್ಟ್‌ಗಳಿಗೆ ಹುಸಿ ಬಾಂಬ್ ಕರೆ ಬಂದಿದೆ. ಒಂದು ಮೇಲ್ ಮೂಲಕ ಬೆದರಿಕೆ ಬಂದಿದೆ ಅದನ್ನು ನಾವು ಪರಿಶೀಲನೆ ಮಾಡುತ್ತಿದ್ದೇವೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಟ್ಟು ನಿಟ್ಟಿನ ಭದ್ರತಾ ಸಿಬ್ಬಂದಿಯನ್ನು ಹೆಚ್ವಿಸಿದೆ. ಆ ಮೇಲೆ ಟ್ರ್ಯಾಕ್ ಮಾಡಲಾಗುತ್ತಿದೆಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹೇಳದರು.

Read More »

ರಾಸಾಯನಿಕ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: 6 ಮಂದಿ ಸಾವು, 20 ಜನರಿಗೆ ಗಾಯ!

ಕೈಗಾರಿಕಾ ಉದ್ಯಾನವನದಲ್ಲಿರುವ ಸಿಗಾಚಿ ಕೆಮಿಕಲ್ಸ್ ಕಾರ್ಖಾನೆಯಲ್ಲಿ ಸೋಮವಾರ ಬೆಳಿಗ್ಗೆ ಆರು ಗಂಟೆಯ ವೇಳೆಗೆ ರಿಯಾಕ್ಟರ್ ಸ್ಫೋಟಗೊಂಡಿದೆ ಪರಿಣಾಮ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ, ರಿಯಾಕ್ಟರ್ ಸ್ಫೋಟದ ರಭಸಕ್ಕೆ ಕಾರ್ಮಿಕರು ಸುಮಾರು ನೂರು ಮೀಟರ್ ದೂರ ಎಸೆಯಲ್ಪಟ್ಟಿದ್ದು ದೇಹದ ಭಾಗಗಳು ಛಿದ್ರಗೊಂಡಿದೆ ಎಂದು ಹೇಳಲಾಗಿದೆ.

Read More »

ಪತ್ನಿ ಜೊತೆ ಲವ್ವಿಡವ್ವಿ, ಕೊಡಲಿಯಿಂದ ಕೊಚ್ಚಿ ಕೊಲೆ!

ಇಬ್ಬರೂ ಅಕ್ಕ-ಪಕ್ಕದ ಮನೆಯಲ್ಲಿ ವಾಸವಾಗಿದ್ದರು. ಇಬ್ಬರೂ ಸ್ನೇಹಿತರಾಗಿದ್ದರು, ಒಂದೇ ತಟ್ಟೆಯಲ್ಲಿ ಊಟ ಮಾಡಿ ಬೆಳೆದವರು. ಏಳು ವರ್ಷಗಳ ಹಿಂದೆ ಆರೋಪಿ ಹನುಮಂತಪ್ಪನ ಮದುವೆಯಾಗಿತ್ತು. ಮದುವೆಯಾದ ಕೆಲ ದಿನಗಳ ಕಾಲ ದಂಪತಿ ಚೆನ್ನಾಗಿಯೇ ಇದ್ದರು. ಆದರೆ, ಒಂದು ದಿನ ಆರೋಪಿ ಹನುಮಂತಪ್ಪ ಕುರಿ ಮೇಯಿಸಲು ಹೋದಾಗ ತನ್ನ ಹೆಂಡತಿ ನಾಗರಾಜ್ ಜೊತೆ ಇದ್ದಿದ್ದನ್ನು ಕಂಡಿದ್ದಾನೆ.ಹನುಮಂತಪ್ಪ ಎಂಬವನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದನು. ಕೊಲೆ ಮಾಡಿದ ನಂತರ ಹನುಮಂತಪ್ಪ ಕೇಕೆ ಹಾಕುತ್ತಾ ಬಂದು …

Read More »

ಚಾಕಲೇಟ್ ಖರೀದಿಸಲು ಹಣ ಕೇಳಿದ್ದಕ್ಕೆ ಪುತ್ರಿಯನ್ನು ಹತ್ಯೆಗೈದ ತಂದೆ!

ತನ್ನ ತಂದೆಯೊಂದಿಗಿದ್ದ ಅರುಷಿ, ತನಗೆ ಚಾಕಲೇಟ್ ಬೇಕೆಂದು ಆತನನ್ನು ಕೇಳಿದ್ದಾಳೆ. ಇದರಿಂದ ಕುಪಿತಗೊಂಡ ಆತ, ಆಕೆಯ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಪೊಲೀಸರಿಗೆ ದೂರು ನೀಡಿರುವ ಆರೋಪಿ ಬಾಲಾಜಿ ರಾಥೋಡ್ ನ ಪತ್ನಿ, ನನ್ನ ಪತಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ದೂರನ್ನು ಆಧರಿಸಿ, ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ …

Read More »

ಕಾರಿನಲ್ಲಿ ಕೊಲೆ: ಸೈಜುಗಲ್ಲು ಕಟ್ಟಿ ಶವ ಬಾವಿಗೆ ಹಾಕಿದ ಆರೋಪಿಗಳು!!

ಫ್ಲೈಟ್ ಟಿಕೆಟ್, ವೀಸಾ ಪ್ರಾಬ್ಲಂ ಅಂತ ಹೇಳಿ, ಚಿಂತಾಮಣಿಯ ಲಾಡ್ಜ್​ನಲ್ಲಿ ಕಾಲ ಕಳೆದಿದ್ದಾರೆ. ಮರು ದಿನ ಸೀದಾ ಏರ್​ಪೋರ್ಟ್​ಗೆ ಹೋಗೋಣ ಅಂತ ಹೊರಟವರು ಮಧ್ಯ ದಾರಿಯಲ್ಲಿ ಚಿಂತಾಮಣಿ ತಾಲೂಕಿನ ಕೆಂಪದೇನಹಳ್ಳಿ ಬಳಿ ಥಾರ್ ಕಾರಿನಲ್ಲಿ ಮುಂಬದಿ ಕೂತಿದ್ದವನ ಕುತ್ತಿಗೆಯನ್ನ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ಮೊದಲೇ ನೋಡಿದ್ದ ಕೆಂಪದೇನಹಳ್ಳಿ ಬಳಿಯ ಬಾವಿಯಲ್ಲಿ ರಾಮಾಂಜಿ ಮೃತದೇಹಕ್ಕೆ ದೊಡ್ಡ ದೊಡ್ಡ ಸೈಜುಗಲ್ಲುಗಳನ್ನ ಕಟ್ಟಿ ಶವ ಮೇಲೆ ಬರಬಾರದು ಅಂತ ಬಾವಿಗೆ ಬಿಸಾಡಿದ್ದಾರೆ. …

Read More »

ಬೆಳಗಾವಿ: ಗೋ ರಕ್ಷಕರ ಮರಕ್ಕೆ ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ!!

ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ ಮಾಡಲು ಮುಂದಾದ ಶ್ರೀರಾಮ ಸೇನೆ ಕಾರ್ಯಕರ್ತರನ್ನು ಯುವಕರ ಗುಂಪೊಂದು ಮರಕ್ಕೆ ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಂಗಳಿಯಲ್ಲಿ ನಡೆದಿದೆ.ಯುವಕನೊಬ್ಬ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ಈಗ ವೈರಲ್ ಆಗಿದೆ.

Read More »

ಚಿಕ್ಕಬಳ್ಳಾಪುರ: ಲಂಡನ್​​ನಲ್ಲಿ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿ ಹತ್ಯೆ!

ಇತ್ತೀಚೆಗೆ ಚಿಂತಾಮಣಿ ತಾಲೂಕಿನ ಕೆಂಪದೇನಹಳ್ಳಿ ತೋಟದ ಬಾವಿಯಲ್ಲಿ ಶವ ಒಂದು ಪತ್ತೆ ಆಗಿತ್ತು. ಈ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಸುಧಾಕರ್, ಮನೋಜ್ ಮತ್ತು ಮಂಜುನಾಥ್​ರನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಜಿ ರಾಮಪುರ ಗ್ರಾಮದ ರಾಮಾಂಜಿ (30) ಕೊಲೆಯಾದ ವ್ಯಕ್ತಿ.ಲಂಡನ್​ನಲ್ಲಿ ಕೆಲಸ ಕೊಡುತ್ತೇನೆ, ಲಕ್ಷ ಲಕ್ಷ ಸಂಬಳ ಸಿಗುತ್ತೆ ಅಂತ ಹೇಳಿ ನಂಬಿಸಿ ಬಳಿಕ ಆತನ ಬಳಿಯೇ ಲಕ್ಷಾಂತರ ರೂ ಪಡೆದು ವಂಚಿಸಿದ್ದಾರೆ. ಕೊನೆಗೆ ಕೊಟ್ಟ ಹಣ …

Read More »

ರಾತ್ರಿ ಮಲಗಿದ್ದ ತಾಯಿ-ಮಗನಿಗೆ ಕಚ್ಚಿದ ಹಾವು!

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹೇರುಂಡಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಾತ್ರಿ ಮಲಗಿದ್ದ ತಾಯಿ ಮತ್ತು ಮಗನಿಗೆ ಹಾವು ಕಚ್ಚಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.ಮೃತರು – ಸುಬ್ಬಮ್ಮ (35) ಮತ್ತು ಅವರ ಪುತ್ರ ಬಸವರಾಜ್ (10 ವರ್ಷ) ಎಂದು ಗುರುತಿಸಲಾಗಿದೆ.

Read More »