ಫ್ಲೈಟ್ ಟಿಕೆಟ್, ವೀಸಾ ಪ್ರಾಬ್ಲಂ ಅಂತ ಹೇಳಿ, ಚಿಂತಾಮಣಿಯ ಲಾಡ್ಜ್ನಲ್ಲಿ ಕಾಲ ಕಳೆದಿದ್ದಾರೆ. ಮರು ದಿನ ಸೀದಾ ಏರ್ಪೋರ್ಟ್ಗೆ ಹೋಗೋಣ ಅಂತ ಹೊರಟವರು ಮಧ್ಯ ದಾರಿಯಲ್ಲಿ ಚಿಂತಾಮಣಿ ತಾಲೂಕಿನ ಕೆಂಪದೇನಹಳ್ಳಿ ಬಳಿ ಥಾರ್ ಕಾರಿನಲ್ಲಿ ಮುಂಬದಿ ಕೂತಿದ್ದವನ ಕುತ್ತಿಗೆಯನ್ನ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ಮೊದಲೇ ನೋಡಿದ್ದ ಕೆಂಪದೇನಹಳ್ಳಿ ಬಳಿಯ ಬಾವಿಯಲ್ಲಿ ರಾಮಾಂಜಿ ಮೃತದೇಹಕ್ಕೆ ದೊಡ್ಡ ದೊಡ್ಡ ಸೈಜುಗಲ್ಲುಗಳನ್ನ ಕಟ್ಟಿ ಶವ ಮೇಲೆ ಬರಬಾರದು ಅಂತ ಬಾವಿಗೆ ಬಿಸಾಡಿದ್ದಾರೆ. ಆದರೆ 5 ದಿನಕ್ಕೆ ರಾಮಾಂಜಿ ಮೃತದೇಹ ಬಾವಿಯಿಂದ ಮೇಲೆ ಬಂದು ತೇಲಾಡಿ ಪ್ರಕರಣ ಬಯಲಾಗಿತ್ತು.ಕೊಲೆ ಮಾಡಿದ ಆರೋಪಿಗಳನ್ನು ಇದೀಗ ಪೊಲೀಸರು ಜೈಲಿಗಟ್ಟಿದ್ದು, ಕಂಬಿ ಎಣಿಸುವಂತಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

