BigTv News
June 21, 2025
Breaking News
ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಧನುಷ್ ಎಂಬ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದ್ದು, ನಂತರ ಅವರು ಸಂಬಂಧ ಹೊಂದಿದ್ದ ಗೆಳತಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಧನುಷ್, ಕೊಯಮತ್ತೂರಿನ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಅವರು ಸಂಬಂಧ ಹೊಂದಿದ್ದ ಮಹಿಳೆ ಮುಸ್ಲಿಂ ಸಮುದಾಯದವರು. ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿಲ್ಲ. ಕುಟುಂಬವು ಯಾರ ವಿರುದ್ಧವೂ ನೇರ ಆರೋಪ ಮಾಡಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ.
Read More »
BigTv News
June 21, 2025
Breaking News
ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಆರಂಭದಲ್ಲಿಯೇ ಉತ್ತಮವಾಗಿ ಮಳೆಯಾಗಿದ್ದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಭರ್ತಿಯತ್ತ ತಲುಪುತ್ತಿದೆ. ಇದೀಗ ಕರ್ನಾಟಕದ ಜೀವನಾಡಿ ಕೃಷ್ಣರಾಜ ಸಾಗರ ಜಲಾಶಯ (ಕೆಆರ್‌ಎಸ್) ಕೂಡ ಬಹುತೇಕ ತುಂಬಿದ್ದು, ಡ್ಯಾಂ ಕೆಳಗಿನ ಕಾವೇರಿ ನದಿ ಪಾತ್ರದ ಜನರಿಗೆ ಪ್ರವಾಹ ಆತಂಕ ಎದುರಾಗಿದೆ.ಸದ್ಯ 40 ಸಾವಿರ ಕ್ಯೂಸೆಕ್ ಒಳ ಹರಿವಿದ್ದು, ಒಂದು ವೇಳೆ ಒಳ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾದರೆ ಯಾವುದೇ ಕ್ಷಣದಲ್ಲಿ ಬೇಕಾದರೂ ಹೆಚ್ಚುವರಿ ನೀರು …
Read More »
BigTv News
June 21, 2025
Breaking News
ನಾಗರಿಕರಿಗೆ ಸಾರ್ವಜನಿಕ ಸುರಕ್ಷಾ ಕಾಯ್ದೆಯ ಕುರಿತು ಅರಿವು ಮೂಡಿಸುವುದರ ಜೊತೆಗೆ ಜನರ ಸಹಭಾಗಿತ್ವದೊಂದಿಗೆ ಜಿಲ್ಲೆಯಾದ್ಯಂತ 7,227 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡುವಲ್ಲಿ ಯಶಸ್ವಿಯಾಗಿದೆ.ಚಾಮರಾಜನಗರ ಠಾಣೆ ವ್ಯಾಪ್ತಿಯಲ್ಲಿ 50, ಸಂತೇಮರಹಳ್ಳಿಯಲ್ಲಿ 4, ಕೊಳ್ಳೇಗಾಲ ನಗರದಲ್ಲಿ 06, ಚೆಕ್‌ಪೋಸ್ಟ್‌ಗಳಲ್ಲಿ 9 ಸೇರಿದಂತೆ 64 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಇವುಗಳಲ್ಲಿ ಸ್ವಯಂಚಾಲಿತವಾಗಿ ನಂಬರ್‌ಪ್ಲೇಟ್ ಗುರುತಿಸುವ ಸಾಮರ್ಥ್ಯವಿರುವ 6 ಕ್ಯಾಮೆರಾಗಳಿವೆ.ಸಾರ್ವಜನಿಕ ಸುರಕ್ಷಾ ಕಾಯ್ದೆಯ ಬಗ್ಗೆ ವ್ಯಾಪಾರಿಗಳು ಉದ್ಯಮಿಗಳು ಶಿಕ್ಷಣ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರಿಗೆ ಅರಿವು …
Read More »
BigTv News
June 21, 2025
Breaking News
ಗ್ರಾಮದ ರೂಪಾ ಎಂಬ ವಿದ್ಯಾರ್ಥಿನಿಗೆ ಬಸ್ ಗುದ್ದಿದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯಾರ್ಥಿನಿ 20 ಮೀಟರ್ ದೂರಕ್ಕೆ ಹಾರಿ ಬಿದ್ದಿದ್ದಾಳೆ. ಗ್ರಾಮಸ್ಥರು ಕೂಗಿಕೊಂಡು ತಕ್ಷಣ ಬಸ್ ಚಾಲಕ ಪರಾರಿಯಾಗಿದ್ದಾನೆ. ಆಕೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಚಾಲಕನನ್ನು ಬಂಧಿಸಬೇಕು. ಅಲ್ಲದೆ, ಗ್ರಾಮದ ಮುಖ್ಯ ರಸ್ತೆಯಲ್ಲಿ ರಸ್ತೆ ಉಬ್ಬು ನಿರ್ಮಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಪಿಎಸ್‌ಐ ಕರಿಬಸಪ್ಪ ಸ್ಥಳಕ್ಕೆ ಭೇಟಿ …
Read More »
BigTv News
June 20, 2025
Breaking News
ಮಂಗಳೂರಿನ ಜಪ್ಪಿಮೊಗರು ಬಳಿ ಕಾರು ಅಪಘಾತದಲ್ಲಿ ಕಾಂಗ್ರೆಸ್ ಮುಖಂಡ ಸೇರಿ ಇಬ್ಬರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತದ ಕಾರಣ ಪತ್ತೆಯಾಗಿದೆ.ಮದ್ಯಪಾನ ಮಾಡಿ ಅತಿವೇಗವಾಗಿ ಕಾರು ಓಡಿಸಿದ್ದೇ ಅಪಘಾತಕ್ಕೆ ಕರಣ ಎಂದು ತಿಳಿದುಬಂದಿದೆ. ಮಧ್ಯರಾತ್ರಿವರೆಗೆ ಎಣ್ಣೆ ಪಾರ್ಟಿ ಮಾಡಿದ್ದ ಐವರು ಬಳಿಕ ಕಾರಿನಲ್ಲಿ ತಲಪಾಡಿಯಿಂದ ಮಂಗಳೂರಿಗೆ ಬಂದಿದ್ದರು. ಪೊಲೀಸರ ಪ್ರಕಾರ ಕಾರು ಗಂಟೆಗೆ 192 ಕಿ.ಮೀ ವೇಗದಲ್ಲಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ವಿಭಜಕಕ್ಕೆ ಡಿಕ್ಕಿ ಹೊಡೆದು ದುರಂತ …
Read More »
BigTv News
June 20, 2025
Breaking News
ನಾಗಪ್ಪ ತನ್ನ ಪತ್ನಿಯೊಂದಿಗೆ ಮಾನ್ವಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಿಂಬದಿ ಬರುತ್ತಿದ್ದ ಲಾರಿಯು ಬೈಕ್‌ಗೆ ಢಿಕ್ಕಿ ಹೊಡೆದಿದೆ.ಘಟನೆಯಲ್ಲಿ ನಾಗಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಪತ್ನಿ ದೇವಮ್ಮಗೆ ಗಂಭೀರವಾದ ಗಾಯಗಳಾಗಿದೆ. ಅವರನ್ನು ಚಿಕಿತ್ಸೆಗಾಗಿ ಮಾನ್ವಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
June 20, 2025
Breaking News
ಸಂಪಾಜೆಯಿಂದ ಅರಮನೆ ಎಂಬಲ್ಲಿಯ ತೋಟಕ್ಕೆ ಪಿಕಪ್ ನಲ್ಲಿ ಕೆಲಸದವನ್ನು ಮತ್ತು ಸಿಮೆಂಟ್ ಲೋಡ್ ಕೊಂಡೊಯ್ಯುವ ವೇಳೆ ಪೆಟ್ರೋಲ್ ಪಂಪ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ರಸ್ತೆಯ ಪಕ್ಕದ ಚರಂಡಿಗೆ ಬಿದ್ದ ಘಟನೆ ಸಂಪಾಜೆ ಗೇಟ್ ಸಮೀಪದ ಪೆಟ್ರೋಲ್ ಪಂಪ್ ಬಳಿ ಜೂ.20ರ ಶುಕ್ರವಾರ ನಡೆದಿರುವ ಬಗ್ಗೆ ವರದಿಯಾಗಿದೆ.
Read More »
BigTv News
June 20, 2025
Breaking News
ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಭಾರಿ ಅನಾಹುತ ತಪ್ಪಿದೆ. ಹೌದು ಎಸ್ ಎಸ್ ಟ್ರಾವೆಲ್ಸ್ ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿ ಚಾಲಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಹತ್ತಿರ ನಡೆದಿದೆ.ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ
Read More »
BigTv News
June 20, 2025
Breaking News
ಕಾರು ಅಪಘಾತದಲ್ಲಿ ವೈದ್ಯ ದಂಪತಿಯ ಪುತ್ರಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಬಳಿ ನಡೆದಿದೆ.ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾ ನಿವಾಸಿ ಡಾ.ಸನಾ (22) ಮೃತ ವೈದ್ಯೆ. ಮೃತ ಸನಾ, ಡಾ.ಶಕಿಲ್ ಹಾಗೂ ಡಾ. ತಾಹೇರಾ ದಂಪತಿಯ ಪುತ್ರಿ.ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
Read More »
BigTv News
June 20, 2025
Breaking News
ಹೂತಿಟ್ಟ ಮಹಿಳೆಯ ಶವ ಪತ್ತೆಯಾಗಿದ್ದು, ಭೂಮಿಯಿಂದ ಮುಂಗೈ ಮೇಲೆ ಬಂದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರದಲ್ಲಿ ನಡೆದಿದೆ.ಕೊಲೆಯೋ ಅಥವಾ ವಾಮಾಚಾರದ ಪ್ರಯೋಗವೋ ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಎಸ್ಪಿ ಡಾ.ಕವಿತಾ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »