Breaking News

Breaking News

ಹುಬ್ಬಳ್ಳಿ ಧಾರವಾಡದಲ್ಲಿ ಧಾರಾಕಾರ ಮಳೆಗೆ ಶಾಲೆ, ಕಾಲೇಜುಗಳಿಗೆ ರಜೆ…

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಡಿಯಾಗಿದೆ. ಹುಬ್ಬಳ್ಳಿ-ಧಾರವಾಡದ ಪ್ರಮುಖ ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದು, ಕೆರೆಯಂತಾಗಿದೆ.ರೆಡ್ ಅಲರ್ಟ್ ಘೋಷಣೆ ಹಾಗೂ ಜಿಲ್ಲೆಯ ಬಹುತೇಕ ಕಡೆ ನಿನ್ನೆ ಸಂಜೆಯಿಂದಲೇ ನಿರಂತರ ಮತ್ತು ವ್ಯಾಪಕ ಮಳೆ ಆಗುತ್ತಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ಧಾರವಾಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜುಗಳಿಗೆ ಇಂದು ರಜೆ ಘೋಷಿಸಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶಿಸಿದ್ದಾರೆ.

Read More »

ಹುಬ್ಬಳ್ಳಿ ಧಾರಾಕಾರ ಮಳೆ- ಚರಂಡಿ ನೀರಿನಲ್ಲಿ ಕೊಚ್ಚಿ ಹೋದ ರೈತ!

ಧಾರವಾಡದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಇದೇ ಸಂದರ್ಭ ಹುಬ್ಬಳ್ಳಿಯಲ್ಲಿ ಅವಘಡವೊಂದು ಸಂಭವಿಸಿದೆ. ಮಳೆ ನೀರಿನಲ್ಲಿ ರೈತರೊಬ್ಬರು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.ಹುಬ್ಬಳ್ಳಿಯಲ್ಲಿ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಹುಬ್ಬಳ್ಳಿಯ ಬೆಳಗಲಿ ರಸ್ತೆಯಲ್ಲಿನ ಚರಂಡಿಯಲ್ಲಿ ಹುಸೇನ್ ಕಳಸ ಎಂಬುವವರು ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.

Read More »

ಹುಬ್ಬಳ್ಳಿ-ಧಾರವಾಡದಲ್ಲಿ ವ್ಯಾಪಕ ಮಳೆ, ಕೊಚ್ಚಿ ಹೋದ ವ್ಯಕ್ತಿ!

ಧಾರವಾಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯು ಜಿಲ್ಲೆಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ.ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಗೆ ಕಳೆದ ರಾತ್ರಿ ಒಬ್ಬರು ಚರಂಡಿ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

Read More »

ಅಂತರ್ಜಾತಿ ವಿವಾಹ, ವರ್ಷದ ಬಳಿಕ ಜಾತಿ ಕಾರಣಕ್ಕೆ ಯುವತಿಗೆ ಕೈ ಕೊಟ್ಟು ಪರಾರಿ!!

ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಪೋಸ್ಟ್ ಮಾಡುತ್ತಿದ್ದ ತಾಲ್ಲೂಕಿನ ಬನ್ನಿಕುಪ್ಪೆಯ ಎಸ್‌ಸಿ ಸಮುದಾಯದ ರಕ್ಷಿತಾ ಮತ್ತು ರೀಲ್ಸ್‌ಗಳನ್ನು ಮೆಚ್ಚಿ ಸಂದೇಶ ಕಳಿಸುತ್ತಿದ್ದ ಬಿಳಗುಂಬದ ಒಕ್ಕಲಿಗ ಸಮುದಾಯದ ಪ್ರತಾಪ್ ನಡುವಣ ಸ್ನೇಹ ಪ್ರೀತಿಗೆ ತಿರುಗಿತ್ತು. ಅಂತರ್ಜಾತಿ ಕಾರಣಕ್ಕೆ ಮದುವೆಗೆ ಇಬ್ಬರ ಮನೆಯವರೂ ವಿರೋಧಿಸಿದ್ದರು. ವಿರೋಧ ಲೆಕ್ಕಿಸದೆ ವರ್ಷದ ಹಿಂದೆ ಇಬ್ಬರೂ ತಿರುಪತಿಯಲ್ಲಿ ಮದುವೆಯಾಗಿದ್ದರು.ವರ್ಷದ ಬಳಿಕ ಜಾತಿ ಕಾರಣಕ್ಕೆ ಯುವತಿಗೆ ಕೈ ಕೊಟ್ಟು ತಲೆ ಮರೆಸಿಕೊಂಡಿದ್ದಾನೆ.ಅತ್ತ ಪತಿ ಮನೆಯವರು ಸೇರಿಸದೆ ಇತ್ತ ತವರು ಮನೆಯಲ್ಲೂ ಆಶ್ರಯ …

Read More »

ಬೆಳಗಾವಿ: ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ!

ನೋಟ್​ನಲ್ಲಿ ಮೂವರ ಹೆಸರನ್ನು ಬರೆದಿಟ್ಟು ಯಾರೂ ಇಲ್ಲದ ವೇಳೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಐಗಳಿ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಗುರುರಾಜ್ (28) ಎಂದು ತಿಳಿದುಬಂದಿದೆ.

Read More »

ದಿಬ್ಬಣದ ವಾಹನ ಅಪಘಾತ, ವಧು ಸೇರಿ ಐವರು ಸಾವು, ವರ ಗಂಭೀರ!!

ಮದುವೆ ದಿಬ್ಬಣ ಸಾಗಿಸುತ್ತಿದ್ದ ವಾಹನವು ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ವಧು ಸೇರಿದಂತೆ ಐವರು ದಾರುಣವಾಗಿ ಸಾವನ್ನಪ್ಪಿ, ವರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.ಮೃತರಲ್ಲಿ ಒಬ್ಬರ ಗುರುತನ್ನು ದೃಢಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಗಂಭೀರವಾಗಿ ಗಾಯಗೊಂಡ ಎಂಟು ಪ್ರಯಾಣಿಕರಲ್ಲಿ ಉದಯಪುರಾವತಿಯ ವರ ವಿಕ್ರಮ್ ಮೀನಾ (25) ಸೇರಿದ್ದಾರೆ.ಮದುವೆ ದಿಬ್ಬಣ ಹೊತ್ತೊಯ್ಯುತ್ತಿದ್ದ ವಾಹನವು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಒಳಗೆ ಇದ್ದವರನ್ನು ಹರಸಾಹಸ ಪಟ್ಟು ಹೊರತೆಗೆಯಲಾಗಿದೆ.ಉದಯಪುರಾವತಿ ಪಟ್ಟಣಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು …

Read More »

ಲಿಂಗಸಗೂರು: ಒಂದೇ ದಿನ ಮೂವರು ಬಾಲಕಿಯರು ನಾಪತ್ತೆ!!

ಮನೆಯಿಂದ ಹೊರ ಹೋಗಿ ಬರುವುದಾಗಿ ಹೇಳಿ ಹೊರಟ ಮೂವರು ಬಾಲಕಿರು ಮರಳಿ ಮನೆಗೆ ಬಂದಿಲ್ಲ. ಆತಂಕಗೊಂಡ ಪೋಷಕರು ಲಿಂಗಸಗೂರಿನ ಸುತ್ತಮುತ್ತಲು ಹುಡುಕಾಟ ನಡೆಸಿದ್ದಾರೆ. ಆದರೆ ಬಾಲಕಿಯರ ಸುಳಿವಿಲ್ಲ.ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದಾರೆ. ಇಬ್ಬರು ಬಾಲಕಿಯರು 9ನೇ ತರಗತಿ ಓಡುತ್ತಿದ್ದರೆ, ಓರ್ವ ಬಾಲಕಿ 10 ನೇತರಗಿ ಓದುತ್ತಿದ್ದಾಳೆ. ನಾಪತ್ತೆಯಾಗಿರುವ ಬಾಲಕಿಯರಿಗಾಗಿ ಲಿಂಗಸಗೂರು ಪೊಲೀಸರು ಹುಡುಕಾಟ ನಡೆಸಿದ್ದಾರೆ.

Read More »

ಕೋಲಾರ : ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ ಅರ್ಜುನ್ ಗೌಡ!

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆಯಲ್ಲಿ ತಿಂಗಳ ಮಾಮೂಲಿ ಹಣ ಪಡೆಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಲೋಕಾಯುಕ್ತ ವಿಭಾಗ ಭರ್ಜರಿ ದಾಳಿ ನಡೆಸಿದ್ದು, ಠಾಣೆಯ ಸಿಬ್ಬಂದಿ ಹಾಗೂ ಪಿಎಸ್‌ಐ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ .ಸೋಮವಾರ ನಡೆದ ದಾಳಿಯ ವೇಳೆ ಬಾರ್ ಮಾಲೀಕ ಪ್ರಶಾಂತ್ ಎಂಬವರಿಂದ ₹10,000 ಲಂಚ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಪೇದೆ ಸುರೇಶ್ ತಕ್ಷಣವೇ ಬಲೆಗೆ ಬಿದ್ದಿದ್ದಾರೆ.

Read More »

ಹಾಸನ :ಹಾರ್ಟ್​ ಅಟ್ಯಾಕ್‌ನಿಂದ ಯುವಕ ನಿಶಾಂತ್ ಸಾವು!

ಹೊಳೆನರಸೀಪುರ ಪಟ್ಟಣದ ನಿವಾಸಿಗಳಾದ ಚನ್ನಕೇಶವ ಮತ್ತು ಜ್ಯೋತಿ ದಂಪತಿಯ ಪುತ್ರ ನಿಶಾಂತ್ (19) ಬೆಂಗಳೂರಿನ ಜೆಪಿ ನಗರದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಡಿಪ್ಲೋಮಾ ವ್ಯಾಸಂಗವನ್ನು ಮುಗಿಸಿದ್ದ ನಿಶಾಂತ್, ಕೈಗಾರಿಕಾ ತರಬೇತಿಗಾಗಿ 15 ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿ ಪಿಜಿಯಲ್ಲಿ ವಾಸವಾಗಿದ್ದರು. ಜೂನ್ 11ರಂದು ಬೆಳಗ್ಗೆ ತನ್ನ ಕೋಣೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ.ಬೆಳಗ್ಗೆ 10 ಗಂಟೆಯಾದರೂ ನಿಶಾಂತ್ ಕೋಣೆಯ ಬಾಗಿಲನ್ನು ತೆರೆಯದ ಕಾರಣ, ಸ್ನೇಹಿತರು ಮತ್ತು …

Read More »

ಸಿಮೆಂಟ್ ಮಿಕ್ಸರ್ ಲಾರಿ ಹರಿದು ಮಹಿಳೆ ಸ್ಥಳದಲ್ಲೇ ಸಾವು..!

ಸಿಮೆಂಟ್ ಮಿಕ್ಸರ್ ಲಾರಿ ಹರಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಲಹಂಕ ಕೋಗಿಲು ಕ್ರಾಸ್ ನಲ್ಲಿ ನಡೆದಿದೆ. ರತ್ನ (54) ಸಾವನ್ನಪ್ಪಿದ್ದ ಮಹಿಳೆ.ಇದರಿಂದ ಮಹಿಳೆ ಮೃತಪಟ್ಟಿದ್ದಾರೆ. ಇನ್ನೂ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Read More »