Breaking News

Breaking News

ಕೆರೆಗೆ ಬಿದ್ದಿದ್ದ ಜಿಂಕೆ, ಗ್ರಾಮಸ್ಥರಿಂದ ರಕ್ಷಣೆ…

ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ಮರ್ಕಲ್ ಗ್ರಾಮದಲ್ಲಿ ಕೆರೆಗೆ ಬಿದ್ದು ಮೇಲೆ ಏಳಲಾಗದೆ ಸಮಸ್ಯೆ ಎದುರಿಸುತ್ತಿದ್ದ ಜಿಂಕೆ ಮರಿಯನ್ನು ಗ್ರಾಮಸ್ಥರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.ಗ್ರಾಮದ ಪ್ರಶಾಂತ್, ಜೈಪಾಲ್, ಶಶಿ, ಸವಿನ್ ಹಾಗೂ ಹಾಲಪ್ಪ ಎಂಬುವರು ಕೆರೆಗೆ ಇಳಿದು ಜಿಂಕೆಗೆ ಹಗ್ಗ ಕಟ್ಟಿ ನಾಯಿಗಳನ್ನು ಓಡಿಸಿ ಜಿಂಕೆಯನ್ನು ಮೇಲೆ ಎಳೆದು ರಕ್ಷಿಸಿದರು.ಜಿಂಕೆಗೆ ಆಹಾರ ನೀಡಿ ಸಂತೈಸಿ, ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಜಿಂಕೆಯನ್ನು ಕಾಡಿಗೆ ಬಿಡುವಂತೆ ಅರಣ್ಯ ಅಧಿಕಾರಿಗಳಿಗೆ …

Read More »

ಉಡುಪಿ: ಜಿಲ್ಲಾಸ್ಪತ್ರೆಯಿಂದ ನಾಪತ್ತೆಯಾಗಿದ್ದ ಒಳರೋಗಿ ಸಾವು!!

ಹೊಟ್ಟೆ ನೋವು, ಉಸಿರಾಟ ಸಮಸ್ಯೆ ಮತ್ತು ಕಾಲು ಊತಕ್ಕಾಗಿ ಮೇ 29ರಂದು ಉಡುಪಿ ಸರಕಾರಿ ಜಿಲ್ಲಾಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದರು. ನಂತರ ಅವರು ಜೂ.2ರಂದು ಆಸ್ಪತ್ರೆಯಿಂದ ನಾಪತ್ತೆ ಯಾಗಿದ್ದರು.ಅಂಬಲಪಾಡಿಯಲ್ಲಿ ತೀವ್ರ ಅಸ್ವಸ್ಥಗೊಂಡು ಬಿದ್ದಿದ್ದ ಪೊಮ್ಮು ಅವರನ್ನು ಸಮಾಜ ಸೇವಕ ನಿತ್ಯಾನಂತ ಒಳಕಾಡು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದು ತಿಳಿದುಬಂದಿದೆ.

Read More »

ಕಾರು, ಬಸ್ ನಡುವೆ ಡಿಕ್ಕಿ ಕಾರು ಚಾಲಕ ದುರ್ಮರಣ!!

ಮಹದೇಶ್ವರ ಬೆಟ್ಟದಿಂದ ಬೆಂಗಳೂರಿನತ್ತ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.ತಮಿಳುನಾಡು ಮೂಲದ ಕಾರಿನ ಚಾಲಕ ವಿಜ್ಞೇಷ್ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ. ಹಾಗೂ ಬಸ್ ಚಾಲಕ ರಮೇಶ್ ಹಾಗೂ ಪ್ರಯಾಣಿಕ ಪಾಳ್ಯ ಗ್ರಾಮದ ಜಯರಾಮ್ ಎಂಬಾತ ಗಾಯಗೊಂಡು‌ ಕೊಳ್ಳೇಗಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕೊಳ್ಳೆಗಾಲ ಗ್ರಾಮಾಂತರ ಠಾಣೆಯ ಪೊಲೀಸರು ಮೃತ ದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More »

ಕಂಟೈನರ್ ಲಾರಿಗೆ ಬೈಕ್‌ ಡಿಕ್ಕಿಯಾಗಿ 3 ಸಾವು!

ರಸ್ತೆಗೆ ತಿರುವು ಪಡೆಯುತ್ತಿದ್ದಾಗ ಕಂಟೈನರ್‌ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.ನಿದ್ದೆ ಮಂಪರಿನಲ್ಲಿ ಬೈಕ್ ಓಡಿಸಿಕೊಂಡು ಬಂದಿದ್ದರಿಂದ ಲಾರಿ ಕಾಣದೆ ಡಿಕ್ಕಿ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸಂಪೂರ್ಣವಾಗಿ ಛಿದ್ರ ಛಿದ್ರವಾಗಿದೆ. ಸುದ್ದಿ ತಿಳಿದ ಕೂಡಲೇ ಎಎಸ್ಪಿ ಗೋಪಾಲ್, ಡಿವೈಎಸ್‌ಪಿ ಚಂದ್ರಶೇಖರ್, ಕ್ಯಾತ್ಸಂದ್ರ ಠಾಣೆಯ ಸಿಪಿಐ ರಾಮ್‌ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈ ಗೊಂಡಿದ್ದಾರೆ.

Read More »

ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾದ ಮಹಿಳೆ ರಕ್ತಸ್ರಾವದಿಂದ ಸಾವು!

ಎರಡನೇ ಹೆರಿಗೆಗಾಗಿ ಜೂ. 2ರಂದು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಜೂ. 3ರಂದು ಸಂಜೆ 6.45ಕ್ಕೆ ಹೆಣ್ಣು ಮಗು ವಿಗೆ ಜನ್ಮ ನೀಡಿದ್ದ ಅವರಿಗೆ ರಾತ್ರಿ 9ಕ್ಕೆ ತೀವ್ರ ರಕ್ತಸ್ರಾವ ಆರಂಭವಾಗಿತ್ತು. ವೈದ್ಯರ ಸೂಚನೆಯಂತೆ ಮಂಗಳೂರಿನ ಲೇಡಿ ಗೋಶನ್‌ಗೆ ರಾತ್ರಿ 11.30ಕ್ಕೆ ಕರೆತಂದು ದಾಖಲಿಸಿದರೂ ಪ್ರಾಣಬಿಟ್ಟಿದ್ದಾರೆ.ಜಿಲ್ಲಾ ಪೊಲೀಸ್‌ ಅಧಿಕಾರಿಗಳ ಗಮನಕ್ಕೆ ತಂದರು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ಮಗುವಿನ ಭವಿಷ್ಯಕ್ಕಾಗಿ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು …

Read More »

ಮೈಸೂರು: ಟ್ರ್ಯಾಕ್ಟರ್ ಮುಗುಚಿ ಬಿದ್ದು ವ್ಯಕ್ತಿ ಸಾವು!!

ಟ್ರ್ಯಾಕ್ಟರ್ ನಿಂದ ವಿದ್ಯುತ್ ಕಂಬಗಳನ್ನು ಎತ್ತಿಕೊಂಡು ತಲಕಾಡಿಗೆ ಬರುತ್ತಿದ್ದ ವೇಳೆ ಟ್ರಾಕ್ಟರ್ ಮುಗುಚಿ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ವ್ಯಕ್ತಿಯ ಮೇಲೆ ಬಿದ್ದು ಸಾವನಪ್ಪಿದ್ದಾನೆ.ಸ್ಥಳಕ್ಕೆ ತಲಕಾಡು ಪೊಲೀಸರು ಭೇಟಿ, ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.ಮಹದೇವಪುರದ ನಿವಾಸಿ ಲೋಕೇಶ್(27) ಮೃತ ವ್ಯಕ್ತಿ.

Read More »

ಕಳ್ಳನಿಂದ ಪತ್ನಿಯನ್ನು ರಕ್ಷಿಸಲು ಹೋಗಿ ಕೈ ಕಳೆದುಕೊಂಡ ವೈದ್ಯ!!

ಚಲಿಸುತ್ತಿರುವ ರೈಲಿನಲ್ಲಿ ಪತ್ನಿಯ ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಳ್ಳಲು ಬಂದ ದರೋಡೆಕೋರನಿಂದ ತನ್ನ ಪತ್ನಿಯನ್ನು ರಕ್ಷಿಸುವ ಭರದಲ್ಲಿ ಪತಿಯೊರ್ವ ತನ್ನ ಒಂದು ಕೈಯನ್ನೇ ಕಳೆದುಕೊಂಡಿರುವ ಆಘಾತಕಾರಿ ಘಟನೆ ಮುಂಬೈಯಲ್ಲಿ ನಡೆದಿದೆ.ಓರ್ವ ಕಳ್ಳ ಇವರ ಬಳಿ ಬಂದು ದೀಪಾಲಿ ಅವರ ಕೈಯಲ್ಲಿದ್ದ ಬ್ಯಾಗ್ ಎಳೆಯಲು ಯತ್ನಿಸಿದ್ದಾನೆ ಆದರೆ ದೀಪಾಲಿ ಮಾತ್ರ ತನ್ನ ಕೈಯಲ್ಲಿದ್ದ ಬ್ಯಾಗ್ ಬಿಡಲಿಲ್ಲ ಈ ವೇಳೆ ಇಬ್ಬರ ನಡುವೆ ಹೊಯ್ ಕೈ ನಡೆದು ಕಳ್ಳ ಮಹಿಳೆಯನ್ನು ಬ್ಯಾಗ್ ಸಮೇತ ಬೋಗಿಯ …

Read More »

ಪತ್ನಿ, ಮಾವನಿಗೆ ಆಳಿಯನಿಂದ ಮಾರಣಾಂತಿಕ ಹಲ್ಲೆ!!

ವರದಕ್ಷಿಣೆ ತರದಿದ್ದಕ್ಕೆ ಹೆಂಡತಿ ಹಾಗೂ ಮಾವನಿಗೆ ನಡು ಬೀದಿಯಲ್ಲೇ ಅಳಿಯ ಮತ್ತು ಆತನ ಕುಟುಂಬಸ್ಥರು ಹಲ್ಲೆ ನಡೆಸಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಹಲ್ಲೆಗೊಳಗಾದವರನ್ನು ಶ್ರೇಯಾ, ಅವರ ತಂದೆ ವಿರೂಪಾಕ್ಷ ಮುಸ್ಕೆ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ, ಗಾಯಾಳುಗಳನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

Read More »

ಮನನೊಂದ ತಾಯಿ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಸಾವು!

ಕೌಟುಂಬಿಕ ಕಲಹದಿಂದ ಮನನೊಂದ ತಾಯಿ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಸಾವಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳ ಗ್ರಾಮದಲ್ಲಿ ನಡೆದಿದೆ. ಬಾಧಗಾನಹಳ್ಳಿ ಗ್ರಾಮದ ಲಾವಣ್ಯ (30) ನಿಹಾರಿಕಾ (10) ನೇಹಾ (6) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.ಮೃತದೇಹಗಳನ್ನು ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಮೃತ ಲಾವಣ್ಯ ನಿನ್ನೆ ಪತಿ ಜಯಣ್ಣನ ಜೊತೆ ಜಗಳವಾಡಿದ್ದು, ಚೆನ್ನಾಗಿ ದುಡಿ, ಏರ್‌ಪೋರ್ಟ್‌ಗೆ ಡ್ರೈವರ್‌ ಕೆಲಸಕ್ಕೆ ಹೋಗು ಎಂದು ಒತ್ತಾಯಿಸಿದ್ದರು ಎನ್ನಲಾಗಿದೆ.

Read More »

ವೇಗವಾಗಿ ಬಂದ ಬೈಕ್​ ಗೋಡೆಗೆ ಡಿಕ್ಕಿ, ವಿದ್ಯಾರ್ಥಿ ಸ್ಥಳದಲ್ಲೇ ಸಾವು!!

ಬುಧವಾರ ಸಂಜೆ ಆಶ್ರಿತ್ ತನ್ನ ಸ್ನೇಹಿತನೊಂದಿಗೆ 150CC ಬೈಕ್ ಅನ್ನು ಅತಿ ವೇಗದಲ್ಲಿ ಓಡಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ 21 ವರ್ಷದ MBBS ವಿದ್ಯಾರ್ಥಿ ಮೃತಪಟ್ಟ ಘಟನೆ ವಿಯೆಟ್ನಾಂನಲ್ಲಿ ನಡೆದಿದೆ.ಮೃತ ವಿದ್ಯಾರ್ಥಿಯನ್ನು ಅರ್ಷಿದ್ ಆಶ್ರಿತ್ (21) ಎಂದು ಗುರುತಿಸಲಾಗಿದ್ದು, ಎಂಬಿಬಿಎಸ್ ಮೂರನೇ ವರ್ಷದಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದೆ.

Read More »