BigTv News
June 2, 2025
Breaking News, Crime
ಟ್ರಾಫಿಕ್ನಲ್ಲಿ ಸ್ಕೂಟಿಗೆ ಹಿಂಬದಿಯಿಂದ ಆಟೋ ಟಚ್ ಆಗುತ್ತಿದ್ದಂತೆ ಚಾಲಕ ಮತ್ತು ಮಹಿಳೆ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಇಬ್ಬರ ನಡುವೆ ಜಗಳ ಅತಿರೇಕಕ್ಕೆ ತಿರುಗಿದ್ದು ಮಾತಿಗೆ ಮಾತು ಬೆಳೆದು ಆಟೋ ಚಾಲಕನಿಗೆ ಮಹಿಳೆ ಚಪ್ಪಲಿಯಿಂದ ಹೊಡೆದಿದ್ದಾಳೆ.ಮಹಿಳೆ ವಿರುದ್ಧ FIR ದಾಖಲಾಗಿದೆ. ಈಗ ಮಹಿಳೆಯನ್ನ ಪೊಲೀಸರು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದಾರೆ.
Read More »
BigTv News
June 2, 2025
Breaking News, Crime
ಮದ್ಯ ಸೇವನೆ ಚಟದಿಂದ ಕೋಟ ಪರಿವರ್ತನಾ ಪುನರ್ ವಸತಿ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಕೋಟೇಶ್ವರದ ಕುಮಾರ(48) ಎಂಬವರು ಮಾನಸಿಕ ಖಿನ್ನತೆಗೆ ಒಳಗಾಗಿ ರಾತ್ರಿ ಆಸ್ಪತ್ರೆಯ ವಾರ್ಡ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
June 2, 2025
Breaking News, Crime
ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಕುರ್ಕಾಲು ಗ್ರಾಮದ ಶಂಕರಪುರ ಅಶ್ವತ್ಥಕಟ್ಟೆಯ ಬಳಿ ಮಟ್ಕಾ ಹಣ ಸಂಗ್ರಹಿಸುತ್ತಿದ್ದ ವಿಟಲ ದೇವಾಡಿಗನನ್ನು ಪೊಲೀಸರು ಮೇ 31ರಂದು ಬಂಧಿಸಿ ಆತನ ವಶದಲ್ಲಿದ್ದ ಚೀಟಿ ಮತ್ತು ನಗದು 1,200 ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ.
Read More »
BigTv News
June 2, 2025
Breaking News, Crime
ಬಿಎಂಟಿಸಿ ಚಾಲಕನೊಬ್ಬ ಎದುರು ನಿಂತ ಯುವತಿ ಮೇಲೆ ಬಸ್ ಹತ್ತಿಸಿಕೊಂಡು ಹೋಗಲು ಮುಂದಾದ ಘಟನೆ ಬೆಳಕಿಗೆ ಬಂದಿದ್ದು, ದುರ್ವರ್ತನೆ ತೋರಿದ ಚಾಲಕನನ್ನು ಅಮಾನತು ಮಾಡಲಾಗಿದೆ. ಚಂದ್ರಾ ಲೇಔಟ್ ಡಿಪೋ ನಂಬರ್ 17 ಡಿಪೋಗೆ ಸೇರಿದ ಬಸ್ (ಕೆಎ 57 ಎಫ್2046) ಚಾಲಕ ಪ್ರಶಾಂತ್ ಅಮಾನತುಗೊಂಡಿದ್ದಾರೆ.
Read More »
BigTv News
June 2, 2025
Breaking News, Crime
ಟ್ಯಾಂಕರ್ ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ದುರಸ್ತಿ ಮಾಡುತ್ತಿದ್ದ ಕಾರ್ಮಿಕರಿಗೆ ಢಿಕ್ಕಿ ಹೊಡೆದು ಉರುಳಿಬಿದ್ದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಕಿತ್ತೂರು ತಾಲೂಕಿನ ಇಟಗಿ ಕ್ರಾಸ್ ನಲ್ಲಿ ನಡೆದಿದೆ.ಕಲಬುರಗಿ ಜಿಲ್ಲಯ ಚಿಂಚೋಳಿ ತಾಲೂಕಿನ ಶಿರೋಳಿ ಗ್ರಾಮದ ರಾಮಚಂದ್ರ ಜಾಧವ್ (45), ಅವರ ಪುತ್ರ ಮಹೇಶ್ (18) ಹಾಗೂ ರಾಮಣ್ಣ (38) ಎಂಬವರು ಮೃತಪಟ್ಟವರು. ಲಕ್ಷ್ಮೀಬಾಯಿ, ಅನುಶ್ರೀ, ಭೀಮಾಬಾಯಿ ಎಂಬವರು ಗಾಯಗೊಂಡಿದ್ದಾರೆ. ಟ್ಯಾಂಕರ್ …
Read More »
BigTv News
June 2, 2025
Breaking News
ಕಳೆದ 13 ವರ್ಷಗಳಿಂದ ಬಷೀರ್ ಅವರು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಮೊದಲು ಹೌಸ್ ಡ್ರೈವರ್ ವೀಸಾದ ಮೇಲೆ ಸೌದಿಗೆ ಆಗಮಿಸಿದ್ದರು ಎನ್ನಲಾಗಿದೆ.ಬಷೀರ್, ತನ್ನ ನಿವಾಸದ ಬಳಿ ತನ್ನ ಟ್ಯಾಕ್ಸಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಬಿಶಾದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ರಸ್ತೆಯಲ್ಲಿ ರವಿವಾರ ಮಧ್ಯರಾತ್ರಿಯ ಸುಮಾರಿಗೆ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿಕೋರರು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.ಗುಂಡಿನ ದಾಳಿ ಕೇಳಿ ಸುತ್ತಮುತ್ತಲಿನ ಪ್ರದೇಶದ …
Read More »
BigTv News
June 1, 2025
Breaking News, Crime
ಶಿಡ್ಲಘಟ್ಟ ನಗರದ ರೈಲ್ವೆ ನಿಲ್ದಾಣದ ಬಳಿ ಮೇ 31, 2025ರಂದು ನಡೆದ ಒಂದು ಕರುಳು ಹಿಂಡುವ ಘಟನೆಯಲ್ಲಿ, 30 ವರ್ಷದ ಮಾನಸಿಕ ಅಸ್ವಸ್ಥಳಾದ ತುಂಬು ಗರ್ಭಿಣಿ ರೇಣುಕಾ ಬೀದಿಯಲ್ಲಿ ಶವವಾಗಿ ಕಂಡುಬಂದಿದ್ದಾಳೆ. ಜಂಗಮಕೋಟೆ ಮೂಲದ ಈ ಮಹಿಳೆ, ದಿಕ್ಕು ದೆಸೆಯಿಲ್ಲದೆ ಬೀದಿಗಳಲ್ಲಿ ಅಲೆದಾಡುತ್ತಿದ್ದವಳು.ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿಎಸ್‌ಐ ವೇಣುಗೋಪಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕರ್ತವ್ಯದ ಜೊತೆಗೆ, ಅವರು ರೇಣುಕಾಳ ಶವವನ್ನು ಸಂಸ್ಕಾರಕ್ಕೆ …
Read More »
BigTv News
June 1, 2025
Breaking News
238 ಸಕ್ರಿಯ ಪ್ರಕರಣಗಳು ಇವೆ. ರಾಜ್ಯದಲ್ಲಿ ಇಂದು ಕೋವಿಡ್ ಸೋಂಕಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 60 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಇಂದು 53 ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ಸಕ್ರೀಯ ಪ್ರಕರಣಗಳ ಸಂಖ್ಯೆ 238ಕ್ಕೆ ತಲುಪಿದೆ. ಹೋಂ ಐಸೋಲೇಷನ್ ನಲ್ಲಿ 225 ಸೋಂಕಿತರಿದ್ದರೇ, 6 ಮಂದಿ ಖಾಸಗಿ, 6 ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದೆ.ಕೊರೋನಾ ಸೋಂಕಿಗೆ ಒಳಗಾಗಿದ್ದಂತ ಬೆಂಗಳೂರಿನ 63 ವರ್ಷದ ವ್ಯಕ್ತಿಯೊಬ್ಬರು …
Read More »
BigTv News
June 1, 2025
Breaking News
ಶನಿವಾರ ಸದಾಶಿವನಗರದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಮಣಿವಣ್ಣನ್ ಅವರಿಗೆ ಡಿಸಿಎಂ ಶುಭ ಹಾರೈಸಿದರು. ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ. ಮಣಿವಣ್ಣನ್‌ಗೆ ಬಿಡಿಎ ಆಯುಕ್ತ ಹುದ್ದೆಯನ್ನು ಸಮಪ್ರಭಾರ ಜವಾಬ್ದಾರಿವಹಿಸಿ ಸರ್ಕಾರ ಆದೇಶಿಸಿದ್ದು, ಇದರಂತೆ ಬಿಡಿಎ ಆಯುಕ್ತರಾಗಿ ಅವರು ಶನಿವಾರ ಅಧಿಕಾರ ಸ್ವೀಕಾರ ಮಾಡಿದರು.
Read More »
BigTv News
June 1, 2025
Breaking News, Crime
ಶಿಕಾರಿಪುರ ಪಟ್ಟಣದ ಮಹಿಳೆಯೊಬ್ಬರು ಜ. 24ರಂದು ಮನೆಯ ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳುವಾಗಿರುವ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ಕೈಗೊಳ್ಳಲಾಗಿತ್ತು.ಕಳವು ಮಾಲು ಪತ್ತೆಗೆ ಶಿಕಾರಿಪುರ ಠಾಣೆ ಇನ್‌ಸ್ಪೆಕ್ಟರ್ ಸಂತೋಷ್ ಎಂ. ಪಾಟೀಲ್ ನೇತೃತ್ವದಲ್ಲಿ ಪಿಎಸ್‌ಐ ಪಿ.ಎಸ್. ಶರತ್ ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಖಚಿತ ಸುಳಿವಿನ ಮೇರೆಗೆ ಆರೋಪಿಯನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
Read More »