Breaking News

ಬೆಳಗಾವಿ : ಟ್ಯಾಂಕರ್ ಢಿಕ್ಕಿ, ಮೂವರು ಕಾರ್ಮಿಕರು ಮೃತ್ಯು!

ಟ್ಯಾಂಕರ್ ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ದುರಸ್ತಿ ಮಾಡುತ್ತಿದ್ದ ಕಾರ್ಮಿಕರಿಗೆ ಢಿಕ್ಕಿ ಹೊಡೆದು ಉರುಳಿಬಿದ್ದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಕಿತ್ತೂರು ತಾಲೂಕಿನ ಇಟಗಿ ಕ್ರಾಸ್ ನಲ್ಲಿ ನಡೆದಿದೆ.ಕಲಬುರಗಿ ಜಿಲ್ಲಯ ಚಿಂಚೋಳಿ ತಾಲೂಕಿನ ಶಿರೋಳಿ ಗ್ರಾಮದ ರಾಮಚಂದ್ರ ಜಾಧವ್ (45), ಅವರ ಪುತ್ರ ಮಹೇಶ್ (18) ಹಾಗೂ ರಾಮಣ್ಣ (38) ಎಂಬವರು ಮೃತಪಟ್ಟವರು. ಲಕ್ಷ್ಮೀಬಾಯಿ, ಅನುಶ್ರೀ, ಭೀಮಾಬಾಯಿ ಎಂಬವರು ಗಾಯಗೊಂಡಿದ್ದಾರೆ. ಟ್ಯಾಂಕರ್ ನಲ್ಲಿ ಸಿಲುಕಿದ್ದ ಚಾಲಕ ದಿನೇಶ್ ಎಂಬವರನ್ನು ಪೊಲೀಸರು ಹೊರತೆಗೆದಿದ್ದಾರೆ. ಗಾಯಾಳುಗಳನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *