Breaking News

Breaking News

ನವಜಾತ ಹೆಣ್ಣು ಶಿಶುವನ್ನು ಎಸೆಯಲು ಯತ್ನ, ತಂದೆಯ ಬಂಧನ!

ಗಾಂಧಿನಗರ ಜಂಕ್ಷನ್‌ನಲ್ಲಿರುವ ಭಾರತ್ ಪೆಟ್ರೋಲ್ ಪಂಪ್ ಬಳಿ ಈ ಘಟನೆ ಸಂಭವಿಸಿದೆ. ಪೊಲೀಸ್ ಕಾನ್‌ಸ್ಟೆಬಲ್ ಸತೀಶ್ ಸಸಾನೆ ಅವರು ವ್ಯಕ್ತಿ ಯೊಬ್ಬ ಕೊಳಕು ಬಟ್ಟೆಯಲ್ಲಿ ಏನೋ ಸುತ್ತಿಕೊಂಡು ಹೊತ್ತುಕೊಂಡು ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ, ಆತನ ವರ್ತನೆ ಅನುಮಾನಾಸ್ಪದವಾಗಿತ್ತು.ವರದಿಯ ಪ್ರಕಾರ, ತನ್ನ ಚಿಕ್ಕಮ್ಮನೊಂದಿಗೆ ನಾಲ್ಕು ವರ್ಷಗಳ ಕಾಲ ಸಂಬಂಧ ಹೊಂದಿದ್ದ. ಆಕೆಯು ಮಗುವಿಗೆ ಜನ್ಮ ನೀಡಿದಳು. ಸಂಬಂಧ ಬಹಿರಂಗವಾದರೆ ಸಾಮಾಜಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಭಯದಿಂದ, ಆರೋಪಿಯು ತನ್ನ ಚಿಕ್ಕಮ್ಮನನ್ನು ದಾರಿ …

Read More »

ಮಡಿಕೇರಿ: ಮರ ಬಿದ್ದು ವ್ಯಕ್ತಿ ಸಾವು!

ಕೊಡಗು ಜಿಲ್ಲೆಯಲ್ಲಿ ಗಾಳಿಯ ವೇಗ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಎಲ್ಲೆಂದರಲ್ಲಿ ಮರಗಳು ಬುಡಮೇಲಾಗುತ್ತಿದ್ದು ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮರ ಬಿದ್ದು ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ.ಬೆಳಿಗ್ಗೆ ಎದ್ದು ಮನೆಯಿಂದ ಹೊರಬರುತ್ತಿದ್ದಂತೆ ಮರ ಅವರ ಮೇಲೆ ಬಿದ್ದಿದೆ.ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟರು.

Read More »

ಪಂಜಾಬ್: ಅಮೃತಸರದಲ್ಲಿ ಬಾಂಬ್ ಕೈಯಲ್ಲಿ ಸ್ಫೋಟಗೊಂಡು ವ್ಯಕ್ತಿ ಸಾವು.!

ಅಮೃತಸರ ಬೈಪಾಸ್‌ನಲ್ಲಿ ಬಾಂಬ್ ಇಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬ ಕೈಯಲ್ಲಿದ್ದ ಬಾಂಬ್ ಸ್ಫೋಟಗೊಂಡು ಸಾವನ್ನಪ್ಪಿದ್ದಾನೆ. ಆ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಕೆಲವು ಗಂಟೆಗಳ ನಂತರ ಅವರು ಸಾವನ್ನಪ್ಪಿದರು.ಪೊಲೀಸ್ ಅಧಿಕಾರಿಗಳು ಸ್ವಲ್ಪ ಸಮಯದ ನಂತರ ಸ್ಥಳಕ್ಕೆ ತಲುಪಿ ಪ್ರದೇಶವನ್ನು ಸುತ್ತುವರೆದರು. ಮುಖ್ಯ ರಸ್ತೆಯ ಪಕ್ಕದಲ್ಲಿರುವ ಪ್ರದೇಶದಿಂದ ಹೊಗೆ ಬರುತ್ತಿರುವುದನ್ನು ದೃಶ್ಯಗಳು ತೋರಿಸಿವೆ.

Read More »

ದಾವಣಗೆರೇ: ಸಿಡಿಲು ಬಡಿದು 80ಕ್ಕೂ ಹೆಚ್ಚು ಕುರಿಗಳು ಸಾವು.!

ದಾವಣಗೆರೆಯಹೊನ್ನಾಳಿತಾಲೂಕಿನಜೀನಿಹಳ್ಳಿಯಲ್ಲಿಮಹೇಶಪ್ಪಎನ್ನುವವರಿಗೆಸೇರಿದ 80ಕ್ಕೂಹೆಚ್ಚುಕುರಿಗಳು ಸಾವನ್ನಪ್ಪಿವೆ . ತಡರಾತ್ರಿ ಸುರಿದ ಭಾರಿ ಮಳೆ , ಸಿಡಿಲಿಗೆ ಕೊಟ್ಟಿಗೆಯಲ್ಲಿದ್ದ ಕುರಿಗಳು ಮೃತಪಟ್ಟಿವೆ.ತಡರಾತ್ರಿ ಸುರಿದ ಭಾರಿ ಮಳೆ, ಸಿಡಿಲಿಗೆ ಕೊಟ್ಟಿಗೆಯಲ್ಲಿದ್ದ ಕುರಿಗಳು ಮೃತಪಟ್ಟಿವೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಬಸ್ ಹಾಗೂ ಕಾರು ಅಪಘಾತ, ತಂದೆ-ಮಗಳ ಸ್ಥಿತಿ ಗಂಭೀರ

ಪುತ್ತೂರಿನಿಂದ ಮಂಗಳೂರಿನ ಕಡೆಗೆ ತೆರಳುತ್ತಿದ್ದ ಬಸ್, ಪುತ್ತೂರಿನಿಂದ ಕೆದಿಲ ಕಡೆಗೆ ಹೋಗುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ.ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.ಕಾರಿನಲ್ಲಿದ್ದ ತಂದೆ ಹಾಗೂ ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಗಾಯಾಳುಗಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Read More »

ದೊಡ್ಡಬಳ್ಳಾಪುರ :ರೈತ ಟ್ರಾನ್ಸ್‌ಫಾರ್ಮರ್‌ ನಲ್ಲಿಯೇ ಸಾವು!!

ಗ್ರಾಮದಲ್ಲಿ ವಿದ್ಯುತ್‌ ಸಂಪರ್ಕ ಕಡಿತವಾಗಿದ್ದ ವೇಳೆ ಸರಿಪಡಿಸಲು ಟ್ರಾನ್ಸ್‌ಫಾರ್ಮರ್‌ ಏರಿದ ರೈತ ವಿದ್ಯುತ್‌ ಆಘಾತದಿಂದ ಸಾವನ್ನಪ್ಪಿರುವ ಘಟನೆ ಸಕ್ಕರೆಗೊಲ್ಲಳ್ಳಿಯ ಗ್ರಾಪಂ ವ್ಯಾಪ್ತಿಯ ಕಂಗಳಾಪುರದಲ್ಲಿ ನಡೆದಿದೆ. ರಂಗಪ್ಪ (42) ಮೃತ ದುರ್ದೈವಿ.ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ದೊಡ್ಡಬಳ್ಳಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಹಾಸನ :ದಾರಿ ಕಾಣದೆ ಕಾರು ಪಲ್ಟಿಯಾಗಿ ಇಬ್ಬರು ಸಾವು!

ಹಾಸನ ತಾಲೂಕಿನ ಬಾಗೇ ಸಮೀಪ ಅರಸು ನಗರದಲ್ಲಿ ಮಳೆಯ ಕಾರಣ ಚಾಲಕನಿಗೆ ರಸ್ತೆ ಕಾಣದೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಾಯಗೊಂಡಿದ್ದಾರೆ.ಬೆಂಗಳೂರಿನ ದಾಸರಹಳ್ಳಿ ಮೂಲದ ಶರತ್, ಅಭಿಷೇಕ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಬೆಂಗಳೂರು ಮೂಲದ ಟ್ರಾವೆಲ್ಸ್ ಒಂದರ ಮೂಲಕ ಬಾಡಿಗೆ ಕಾರಿನಲ್ಲಿ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಭಾರಿ ಮಳೆಯ ಕಾರಣ ಚಾಲಕನಿಗೆ ರಸ್ತೆ ಕಾಣದೆ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಸ್ಥಳಕ್ಕೆ …

Read More »

ರಸ್ತೆ ಕಾಣದೇ ಕಾರು ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವು!

ಮಳೆಯಿಂದಾಗಿ ರಸ್ತೆ ಕಾಣದೇ ಕಾರು ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದ ಬಾಗೆ ಎಂಬಲ್ಲಿ ನಡೆದಿದೆ.ಮೃತರನ್ನು ಬೆಂಗಳೂರು ಮೂಲದ ಅಭಿಷೇಕ್ ಹಾಗೂ ಶರತ್ ಎಂದು ತಿಳಿಯಲಾಗಿದ್ದು, ಕಾರಿನಲ್ಲಿದ್ದ ಇನ್ನಿಬ್ಬರು ಯುವಕರಿಗೆ ಗಂಭೀರ ಗಾಯಗಳಾಗಿವೆ.

Read More »

ಬೆಳಗಾವಿ :ಲಂಚ ಪಡೆಯುತ್ತಿದ್ದ ವೈದ್ಯಾಧಿಕಾರಿ ಬಂಧನ!!

ಖಾಸಗಿ ವೈದ್ಯಕೀಯ ಮಹಾವಿದ್ಯಾಲಯದ ಪರವಾಗಿ ತಪಾಶೀಲನಾ ವರದಿ ನೀಡುವುದಕ್ಕಾಗಿ, ₹10 ಲಕ್ಷ ಲಂಚ ಪಡೆಯುತ್ತಿದ್ದ ವೈದ್ಯಾಧಿಕಾರಿಯೊಬ್ಬರನ್ನು ಸಿಬಿಐ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.ರಾಷ್ಟ್ರೀಯ ವೈದ್ಯಕೀಯ ಆಯೋಗದಲ್ಲಿ ಮೌಲ್ಯಮಾಪಕರಾಗಿರುವ, ಹಿರಿಯ ವೈದ್ಯಾಧಿಕಾರಿಯಿಂದ ಲಂಚದ ಹಣ ಕೂಡ ವಶಪಡಿಸಿಕೊಂಡಿದ್ದಾರೆ.ಆರೋಪಿ ವೈದ್ಯ ಹಾಗೂ ಖಾಸಗಿ ಸಂಸ್ಥೆಯ ಇಬ್ಬರು ಪ್ರತಿನಿಧಿಗಳು ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ‌ ಎಂದು ಸಿಬಿಐ ಪ್ರಕಟಣೆ ತಿಳಿಸಿದೆ.‌

Read More »

ಮದ್ಯದ ಅಮಲಿನಲ್ಲಿ ಹಣ್ಣಿನ ವ್ಯಾಪಾರಿಗೆ ಕಟ್ಟಿಗೆಯಿಂದ ಹೊಡೆದು ಕೊಲೆ!

ಅಬ್ದುಲ್ ರೆಹಮಾನ್ ಬಳಿ ತೆರಳಿದ್ದ ಹನುಮಂತ ಹಣ ನೀಡುವಂತೆ ಕೇಳಿದ್ದ. ತನ್ನ ಹಣ್ಣಿನ ಅಂಗಡಿ ಪಕ್ಕದಲ್ಲಿಯೇ ಮಲಗಿದ್ದ ಅಬ್ದುಲ್ ಅವರು ಇದರಿಂದ ಕೋಪಗೊಂಡು ಬೈಯ್ದಿದ್ದರು. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ವಿಕೋಪಕ್ಕೆ ತೆರಳಿದೆ. ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಬಳಿಕ ಅಲ್ಲಿಯೇ ಇದ್ದ ಕಟ್ಟಿಗೆ ತೆಗೆದುಕೊಂಡು ಅಬ್ದುಲ್ ರೆಹಮಾನ್ ಅವರಿಗೆ ಹನುಮಂತನು ಬಲವಾಗಿ ಹೊಡೆದಿದ್ದಾನೆ. ಬಳಿಕ ಅಬ್ದುಲ್ ರೆಹಮಾನ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ನಿವಾಸಿ …

Read More »