Breaking News

ಸಾವಜಿ ಹೊಟೆಲ್ ಸಂಘದಿಂದ ಸಾವಜಿ ಫುಡಿ ಆ್ಯಪ್ ಮತ್ತು ಲೋಗೋ ಬಿಡುಗಡೆ.

ಹುಬ್ಬಳ್ಳಿ: ವಿಭಿನ್ನ ಹಾಗೂ ವಿಶಿಷ್ಟ ರುಚಿಯ ಮೂಲಕ ಮಾಂಸಹಾರ ಪ್ರೀಯರ ಮನಗೆದ್ದ ಸಾವಜಿ ಖಾನಾವಳಿ ಊಟ ಇನ್ನು ಮುಂದೆ ಆನ್​ಲೈನ್ ಡಿಲೆವರಿಗೆ ಸಿದ್ಧವಾಗಿದ್ದು, ಅದಕ್ಕಾಗಿ ‘ಸಾವಜಿ ಫುಡಿ’ ಆ್ಯಪ್ ನ್ನು ಇಂದು ಎಸ್.ಎಸ್.ಕರ ಸಾವಜಿ ಹೊಟೆಲ್ ಮಾಲೀಕರ ಸಂಘ (ರಿ) ಬಿಡುಗಡೆ ಮಾಡಿತು

ನಗರದ ಪತ್ರಿಕಾ ಭವನದಲ್ಲಿ ಆ್ಯಪ್ ಮತ್ತು ಲೋಗೋ ಬಿಡುಗಡೆಗೊಳಿಸಿ ಸಂಘದ ಅಧ್ಯಕ್ಷ ರಾಮಚಂದ್ರ ಹಬೀಬ ಮಾತನಾಡಿ, ಹಲವಾರು ವರ್ಷಗಳಿಂದ ನಮ್ಮ ಮನೆಯಲ್ಲಿ ಮಾಡುವಂತಹ ಊಟವನ್ನು ಇದೀಗ ಹೊಟೇಲ್ ಮೂಲಕ ಎಲ್ಲ ನಾಗರಿಕರಿಗೆ ತಲುಪುವಂತೆ ಮಾಡುವ ಗುರಿಯೊಂದಿಗೆ ಆನ್‌ಲೈನ್ ಜೊಮೋಟೋ, ಸುಗ್ಗಿ ಮಾದರಿಯಲ್ಲಿ ಮನೆ ಮನೆಗೂ ಸಾವಜಿ ಊಟ ತಲುಪಿಸಲು ಸಾವಜಿ ಪುಡಿ ಆ್ಯಪ್ ಸಿದ್ಧಪಡಿಸಲಾಗಿದೆ ಎಂದರು. ಒಂದೇ ತರಹದ ಊಟ ಹಾಗೂ ರುಚಿ ಕಾಪಾಡಲು ಎಲ್ಲ ಸದಸ್ಯರಿಗೆ ಸಂಘ ಒಂದು ಬ್ರ್ಯಾಂಡ್ ಮಾಡಿಕೊಳ್ಳುತಿದ್ದು,

ಸಹಸ್ರಾರ್ಜುನ ಪ್ರತಿಮೆಯ ಲೋಗೋವನ್ನು ಬೇರೆ ಯಾವುದೇ ಹೋಟೆಲ್ ನವರು ಉಪಯೋಗಿಸಬಾರದು. ಒಂದು ವೇಳೆ ಉಪಯೋಗಿಸಿದಲ್ಲಿ ಸಂಘದ ವತಿಯಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಮ್ಮ ಸಂಘದಿಂದ ಈಗಾಗಲೇ ಗದಗ-ಬೆಟಗೇರಿಯಲ್ಲಿ ಆರಂಭಿಸಿದ್ದು, ಕೆಲ ದಿನಗಳಲ್ಲಿ ಬಾಗಲಕೋಟಿ ಸಹಿತ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶಾಖೆಗಳನ್ನು ಪ್ರಾರಂಭಿಸುತ್ತಿದ್ದೇವೆ ಎಂದು‌ ತಿಳಿಸಿದರು. .

Share News

About admin

Check Also

ಸಿವಿಲ್ ವ್ಯಾಜ್ಯದಲ್ಲಿ ಖಾಕಿ ದರ್ಬಾರ್‌ಗೆ ಹೈಕೋರ್ಟ್ ಬ್ರೇಕ್..! ಅಧಿಕಾರ ಮೀರಿದರೆ ಪೊಲೀಸರಿಗೇ ಶಿಸ್ತು ಕ್ರಮದ ಬಿಸಿ..!!

ಆಸ್ತಿ ವ್ಯಾಜ್ಯದಲ್ಲಿ ಪೊಲೀಸರ ಆಟಕ್ಕೆ ಕಡಿವಾಣ..! ಸುತ್ತೋಲೆ ಉಲ್ಲಂಘಿಸಿದರೆ ಅಧಿಕಾರಿಗಳೇ ನೇರ ಹೊಣೆ — ಇಲಾಖೆಯ ಖಡಕ್ ವಾರ್ನಿಂಗ್..! ಸಿವಿಲ್ …

Leave a Reply

Your email address will not be published. Required fields are marked *