Breaking News

ಕರ್ನಾಟಕ

ಬಿಜೆಪಿ, ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳಿಗೆ ಜನತೆಯೇ ತಕ್ಕ ಪಾಠಕಲಿಸಬೇಕು : ಕುಮಾರಸ್ವಾಮಿ

ಚನ್ನಪಟ್ಟಣ: ಬಿಜೆಪಿ, ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜನತೆಯೇ ತಕ್ಕ ಪಾಠಕಲಿಸಬೇಕು. ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಮತಸೆಳೆಯಲು ಮುಂದಾಗಿವೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು. ತಾಲೂಕಿನ ಕದರಮಂಗಲ ಗ್ರಾಮದ ಕಂಬದ ನರಸಿಂಹಸ್ವಾಮಿ ಬೆಟ್ಟದಲ್ಲಿ ನಡೆದ ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಸುದ್ದಿಗಾರರ ಜೊತೆ ಮಾತನಾಡಿ, ಭಗವದ್ಗೀತೆಯನ್ನು ಪಾಠಮಾಡಿದರೆ ಮಕ್ಕಳ ಹೊಟ್ಟೆತುಂಬುತ್ತದೆಯೇ, ಸರ್ಕಾರ ಇಂತಹ ವಿಚಾರಗಳನ್ನು ದೊಡ್ಡದು ಮಾಡುವುದನ್ನು ಬಿಟ್ಟಿ, ತಮ್ಮ ಮುಂದಿರುವ ಟನ್‌ಗಟ್ಟಲೆ …

Read More »

ತಂದೆಯ ಕಣ್ಣು ಮುಂದೆ ಪ್ರಾಣಿ ಬಿಟ್ಟ ಮಗ

ದೊಡ್ಡಬಳ್ಳಾಪುರ : ಕಾಲೇಜ್​ಗೆ ತೆರಳುತ್ತಿದ್ದ ತಂದೆ-ಮಗನ ಬೈಕ್​ಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಅಪ್ಪನ ಎದುರೇ ಮಗ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 207ರ ಚುಂಚೇಗೌಡನ ಹೊಸಹಳ್ಳಿ ಗೇಟ್ ಬಳಿ ಈ ರಸ್ತೆ ಅಪಘಾತ ನಡೆದಿದ್ದು, ಅಂಬಲಗೆರೆಯ ನಿವಾಸಿ ವರುಣ್ (18) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಂದೆ ಸಿದ್ದಲಿಂಗಪ್ಪ (54) ಗಾಯಗೊಂಡಿದ್ದಾರೆ. ಮೃತ ಯುವಕ ದೊಡ್ಡಬಳ್ಳಾಪುರ ನಗರದ ಶ್ರೀವಾಣಿ ಕಾಲೇಜ್​ನಲ್ಲಿ ವ್ಯಾಸಂಗ ಮಾಡುತ್ತಿದ್ದ. …

Read More »

ಕರುನಾಡೇ ಪುನೀತ ಹಾಡು ಸಖತ್ ವೈರೆಲ್ : ಭಾವುಕಾರದ ಅಭಿಮಾನಿಗಳು

ಪವರ್ ಸ್ಟಾರ್ ನಮ್ಮನ್ನು ಅಗಲಿ 4 ತಿಂಗಳು ಕಳೆದರು ಅವರ ಪ್ರೀತಿ ಎಲ್ಲರ ಹೃದಯದಲ್ಲಿ ಅಚ್ಚಳಿಯಾಗಿ ಉಳಿದಿದೆ. ಅಭಿಮಾನಿಗಳು ಅವರನ್ನು ನೆನೆದು ಕೊಳ್ಳದೆ ಇರುವ ದಿನಗಳೇ ಇಲ್ಲಾ ಅಂತಹ ಅಭಿಮಾನ ಸಾಗರವನ್ನು ಪುನೀತ ರಾಜ್ ಕುಮಾರ ಗಳಿಸಿಕೊಂಡಿದ್ದಾರೆ. ‘ ಕರುನಾಡೇ ಪುನೀತ ‘ ಹಾಡು ಇಂದು ಯೂಟ್ಯೂಬ್​ನಲ್ಲಿ ರಿಲೀಸ್ ಆಗಿದೆ . ಕರುನಾಡೇ ಪುನೀತ ಎಂಬ ಈ ಹಾಡಿಗೆ ಸಾಹಿತ್ಯ , ನಿರ್ದೇಶನ ಹಾಗೂ ನಿರ್ಮಾಪಣೆ ಹಾಲೇಶ್ ಮಾಳಿಗೇರ್ ಅವರು …

Read More »

ಈಗಲ್ಟನ್‌ ರೆಸಾರ್ಟ್‌ ಅಕ್ರಮವಾಗಿ ಸ್ಥಾಪಿಸಲಾಗಿದೆ ಆರೋಪಕ್ಕೆ ಉತ್ತರ ನೀಡಿದ ಕುಮಾರಸ್ವಾಮಿ

ವಿಧಾನಸಭೆ: ಈಗಲ್ಟನ್‌ ರೆಸಾರ್ಟ್‌ ಅಕ್ರಮವಾಗಿ ಸ್ಥಾಪಿಸಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ವಿಚಾರದಲ್ಲಿ ಸದನದಲ್ಲಿ ಮಾತನಾಡುವ ಸಂದರ್ಭದಲ್ಲಿ ಹೇಳಿದ ಅವರು, ನಾನು ಯಾರ ಪರವಾಗಿಯೂ ಇಲ್ಲ ವಾಸ್ತವದ ಪರವಾಗಿ ಮಾತನಾಡುತ್ತೇನೆ. ಯಾರಿಗೆ ಅನ್ಯಾಯವಾದಾಗ ಧ್ವನಿ ಎತ್ತುವ ಸ್ವಭಾವ ಬೆಳೆಸಿಕೊಂಡಿದ್ದೇನೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಇನ್ನು ಮುಂದೆ ತಾಜ್‌ ವೆಸ್ಟೆಂಡ್‌ನ‌ಲ್ಲಿ ವಾಸ ಮಾಡುವುದಿಲ್ಲ. …

Read More »

ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ: ಲೋಕಾಯುಕ್ತರಿಗೆ ಮನವಿ ಸಲ್ಲಿಕೆ

ಅಣ್ಣಿಗೇರಿ: ಬಸಾಪುರ ಗ್ರಾಮ ಸ್ಥಳಾಂತರ ಹಿನ್ನೆಲೆಯಲ್ಲಿ ನಡೆದ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಲೋಕಾಯುಕ್ತರಿಗೆ ದೂರು ನೀಡಿದ ವ್ಯಕ್ತಿಯ ಮೇಲೆ ನಡೆದ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಣ್ಣಿಗೇರಿ ತಾಲೂಕು ಘಟಕವು ತಾಲೂಕು ದಂಡಾಧಿಕಾರಿ ಮಂಜುನಾಥ ಅಮಾಸೆ ಅವರಿಗೆ ಮನವಿ ಸಲ್ಲಿಸಿದೆ. 2009-10ರಲ್ಲಿ ಬಾರಿ ಪ್ರವಾಹ ಬಂದು ಬಸಾಪುರ ಗ್ರಾಮ ಜಲಾವೃತಗೊಂಡಿತ್ತು. …

Read More »

ಸೇವಾನಿರತ ಯೋಧ ನಿಧನ

ನಿಪ್ಪಾಣಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಕುರ್ಲಿ ಗ್ರಾಮದ ನಿವಾಸಿ, ಸಿಐಪಿಎಫ್‍ನ ಯೋಧ ನವನಾಥ ದಿವಟೆ (30) ಉತ್ತರಪ್ರದೇಶದಲ್ಲಿ ಸೇವಾನಿರತನಿದ್ದಾಗ ಸಾವಿಗೀಡಾಗಿದ್ದಾರೆ.ಅವರಿಗೆ ಪತ್ನಿ, ತಾಯಿ, ತಂದೆ, ಪುತ್ರ, ಪುತ್ರಿ, ಸಹೋದರ ಮತ್ತು ಸಹೋದರಿ ಇದ್ದಾರೆ.ಪಾರ್ಥಿವ ಶರೀರವನ್ನು ಕುರ್ಲಿ ಗ್ರಾಮಕ್ಕೆ ಬುಧವಾರ ತರಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. 10 ವರ್ಷಗಳಿಂದ ಅವರು ಭಾರತೀಯ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದರು. ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಂದೋಬಸ್ತ್‌ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಸೋಮವಾರ ಬೆಳಿಗ್ಗೆ ಅಸ್ವಸ್ಥಗೊಂಡ …

Read More »

ಶಿಕ್ಷಕರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ : ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಖಾನಾಪುರ: ತಾಲ್ಲೂಕಿನ ರಾಜವಾಳಾ ಗೌಳಿವಾಡಾ ಶಾಲೆಯ ಶಿಕ್ಷಕರ ವಿರುದ್ಧ ಶನಿವಾರ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಗೌಳಿವಾಡಾ ಶಾಲೆಯ ಮುಂಭಾಗದಲ್ಲಿ ಶಾಲೆಯ ವಿದ್ಯಾರ್ಥಿಗಳು ನಿಂತು ಶನಿವಾರ ಮಧ್ಯಾಹ್ನ 12ರವರೆಗೆ ಶಾಲೆ ಇದ್ದರೂ ಶಿಕ್ಷಕರು ಬೇಗ ಕೊಠಡಿಗಳಿಗೆ ಬೀಗ ಜಡಿದು ತೆರಳಿದ್ದನ್ನು ಖಂಡಿಸಿದ ದೃಶ್ಯಗಳು ಹರಿದಾಡುತ್ತಿವೆ.1ರಿಂದ 5ನೇ ತರಗತಿಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಶಿಕ್ಷಕರು ನಿಯಮಿತವಾಗಿ ಶಾಲೆಗೆ ಬರುವುದಿಲ್ಲ, ಮಧ್ಯಾಹ್ನ ಬೇಗ ಮನೆಗೆ ತೆರಳುತ್ತಾರೆ, …

Read More »

ಹಿಜಾಬ್ ಸಮವಸ್ತ್ರ ತೆಗೆಯಲು ನಿರಾಕರಿಸಿದ ಶಿಕಾರಿಪುರ ವಿದ್ಯಾರ್ಥಿನಿಯರು

ಶಿಕಾರಿಪುರ: ಹಿಜಾಬ್ ತೆಗೆದು ತರಗತಿ ಒಳಗೆ ಪ್ರವೇಶ ಮಾಡುವುದಿಲ್ಲ ಎಂದು ಪಟ್ಟಣದ ಮೌಲಾನಾ ಆಜಾದ್ ಮಾದರಿ ಶಾಲೆ ವಿದ್ಯಾರ್ಥಿನಿಯರು ಪಟ್ಟು ಹಿಡಿದರು. ಮೌಲಾಜಾ ಆಜಾದ್ ಮಾದರಿ ಶಾಲೆಯಲ್ಲಿ ಬೆಳಿಗ್ಗೆ ಪ್ರಾರ್ಥನೆ ಮುಗಿದ ನಂತರ ಮುಖ್ಯೋಪಾಧ್ಯಾಯರಾದ ಮಮತಾಸಾಲಿ ಮಾತನಾಡಿ, ‘ಹೈಕೋರ್ಟ್ ಮಧ್ಯಂತರ ಆದೇಶದ ಅನುಸಾರ ಹಿಜಾಬ್ ತೆಗೆದು ಸಮವಸ್ತ್ರದಲ್ಲಿ ತರಗತಿ ಒಳಗೆ ಪ್ರವೇಶ ಮಾಡಬೇಕು’ ಎಂದು ಸೂಚಿಸಿದರು. ಆಗ ವಿದ್ಯಾರ್ಥಿನಿಯರು, ‘ಹಿಜಾಬ್ ತೆಗೆಯುವುದಿಲ್ಲ’ ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಹಿಜಾಬ್ …

Read More »

ಹಿರಿಯ ನಟಿ ಭಾರ್ಗವಿ ನಾರಾಯಣ್ ವಿಧಿವಶ

ಚಂದನವನದ ಹಿರಿಯ ನಟಿ ಭಾರ್ಗವಿ ನಾರಾಯಣ್ವಿ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ. ಭಾರ್ಗವಿ ನಾರಾಯಣ್ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ಚಲನಚಿತ್ರದ ನಟಿ ಮತ್ತು ಕರ್ನಾಟಕದ, ರಂಗಭೂಮಿಯ ಕಲಾವಿದೆ. ಭಾರ್ಗವಿ ನಾರಾಯಣ್ ಅವರ ಕೆಲವು ಪ್ರಸಿದ್ಧ ಚಿತ್ರಗಳು ನಟಿಸಿದ್ದಾರೆ. ಎರಡು ಕನಸು, ಪಲ್ಲವಿ ಅನುಪಲ್ಲವಿ, ಹಾಗೂ ಬಾ ನಲ್ಲೆ ಮಧುಚಂದ್ರಕ್ಕೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಭಾರ್ಗವಿ ನಾರಾಯಣ್ ಅವರು ಇಪ್ಪತ್ತು ಎರಡು ಚಿತ್ರಗಳು ಹಾಗೂ ದೂರದರ್ಶನ ಸರಣಿಯ ಮಂಥನಾ …

Read More »

ಹಿಜಾಬ್ ವಿವಾದ ಕುರಿತು ಮನನೊಂದು ಆತ್ಮಹತ್ಯೆಗೆ ಯತ್ನ

ಕೊಡಗು: ಹಿಜಾಬ್​-ಕೇಸರಿ ಸಂಘರ್ಷಕ್ಕೆ ಸಿಲುಕಿ ಮನನೊಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಜಿಲ್ಲೆಯ ಕುಶಾಲನಗರದಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿರುವ ಅಂಥೋಣಿ ಪ್ರಜ್ವಲ್​ (18) ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ.ಕೇಸರಿ ಶಾಲು ಧರಿಸಿದ್ದಕ್ಕೆ ಈತನ ಮೇಲೆ ಒಂದು ಕೋಮಿನ ವಿದ್ಯಾರ್ಥಿಗಳ ಗುಂಪು ದೌರ್ಜನ್ಯ ಆರೋಪ ಹೊರಿಸಿದ್ದಷ್ಟೇ ಅಲ್ಲದೆ ಹಲ್ಲೆಯನ್ನೂ ಮಾಡಿತ್ತು. ಇದರಿಂದ ನೊಂದು ಈತ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ.

Read More »