Breaking News

ಸುದ್ದಿ

ಮತದಾನದ ಆಧಾರದಲ್ಲಿ ಇದು ದೇಶದಲ್ಲೇ ಅತಿ ಚಿಕ್ಕ ಸಂಸದೀಯ ಕ್ಷೇತ್ರ

ನವದೆಹಲಿ: ಲಕ್ಷದ್ವೀಪ ಲೋಕಸಭಾ ಕ್ಷೇತ್ರವು ಒಂದು ವಿಶಿಷ್ಟವಾದ ಸಂಸದೀಯ ಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಲಾಗಿದೆ. ಏಪ್ರಿಲ್ 11 ರಂದು ಮೊದಲ ಹಂತದಲ್ಲಿ ಇಲ್ಲಿ ಮತದಾನ ನಡೆಯಲಿದೆ. 2014 ರ ಪ್ರಕಾರ, ಮತದಾರರ ಸಂಖ್ಯೆಯ ಆಧಾರದ ಮೇಲೆ ಇದು ದೇಶದಲ್ಲಿ ಅತಿ ಚಿಕ್ಕ ಸಂಸದೀಯ ಕ್ಷೇತ್ರವಾಗಿದೆ.1967 ರಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಚುನಾವಣೆ ನಡೆಸಲಾಯಿತು. ಇದಕ್ಕೆ ಮುಂಚೆ, ಇಲ್ಲಿ ಪ್ರತಿನಿಧಿಯು ಅಧ್ಯಕ್ಷರಿಂದ ಆಯ್ಕೆಯಾಗುತ್ತಿದ್ದರು. 1957 ರಿಂದ 1967 …

Read More »

ಧಾರವಾಡ ಆಯ್ತು, ಈಗ ಬೆಂಗಳೂರು ಸರದಿ, ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರ ಸಾವು! ಎಪಿಎಂಸಿ ವತಿಯಿಂದ ಪಾರ್ಕಿಂಗ್ ಗಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡ, ದುರಂತಕ್ಕೆ ಕಳಪೆ ಕಾಮಗಾರಿ ಕಾರಣ

ಬೆಂಗಳೂರು: ಧಾರವಾಡ ಕಟ್ಟಡ ಕುಸಿತ ಪ್ರಕರಣ ಇನ್ನೂ ಹಸಿರಾಗಿರುವಂತೆಯೇ ಇತ್ತ ಬೆಂಗಳೂರಿನಲ್ಲೂ ಅಂತಹುದೇ ಮತ್ತೊಂದು ದುರ್ಘಟನೆ ಸಂಭವಿಸಿದೆ.ಬೆಂಗಳೂರಿನ ಆರ್ ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಇಂದು ಮುಂಜಾನೆ 4.30ರ ಸುಮಾರಿಗೆ ಕಟ್ಟಡದ ಸೆಟ್ರಿಂಗ್ ಕುಸಿದ ಪರಿಣಾಮ ಅಲ್ಲಿದ್ದ ಹಲವು ಕಟ್ಟಡ ಕಾರ್ಮಿಕರು ಅವಶೇಷಗಳಡಿಯಲ್ಲಿ ಕುಸಿದಿದ್ದರು. ಈ ಪೈಕಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಮೃತರನ್ನು ರಾಕೇಶ್ ಹಾಗೂ ರಾಹುಲ್ ಎಂದು ಗುರುತಿಸಲಾಗಿದೆ.ರಾಕೇಶ್ ಹಾಗೂ …

Read More »

ಇಂದು ಪ್ರಿಯಾಂಕಾ ಗಾಂಧಿ ರೋಡ್ ಶೋ

ಘಜಿಯಾಬಾದ್: ಎಪ್ರಿಲ್ 11ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದೆ. ಉತ್ತರ ಪ್ರದೇಶದ ಎಂಟು ಲೋಕಸಭಾ ಕ್ಷೇತ್ರಗಳಿಗೆ ಅಂದು ಮತದಾನ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳ ಜಯಕ್ಕಾಗಿ ಪಣತೊಟ್ಟಿದ್ದಾರೆ. ಉತ್ತರ ಪ್ರದೇಶದ ಘಜಿಯಾಬಾದ್ ಕ್ಷೇತ್ರದಿಂದ ಡಾಲಿ ಶರ್ಮಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಏಪ್ರಿಲ್ 5 ರಂದು ಶುಕ್ರವಾರ ಪ್ರಿಯಾಂಕಾ ಗಾಂಧಿ ರೋಡ್ ಶೋ ನಡೆಸಿ ಅವರ ಪರ ಮತ ಯಾಚಿಸಲಿದ್ದಾರೆ.ಮಾಹಿತಿ ಪ್ರಕಾರ ಘಂತಾಘರ್ ಪ್ರದೇಶದಲ್ಲಿರುವ …

Read More »

2019: ಏಪ್ರಿಲ್ 7ಕ್ಕೆ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಾಧ್ಯತೆ

ನವದೆಹಲಿ: ಲೋಕಸಭಾ ಚುನಾವಣೆಗೆ ಒಂದು ವಾರವಷ್ಟೇ ಇರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ತನ್ನ ಪ್ರಣಾಳಿಕೆಯನ್ನು ಏಪ್ರಿಲ್ 7ರಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ.ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಪ್ರಣಾಲೈಕ್ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.ಕೇಂದ್ರ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಪ್ರಣಾಳಿಕೆ ಸಮಿತಿಯಲ್ಲಿ ಕೇಂದ್ರ ಸಚಿವರಾದ …

Read More »

ಯೋಗಿ ಆದಿತ್ಯನಾಥ್​ಗೆ ಚುನಾವಣಾ ಆಯೋಗದಿಂದ ನೋಟಿಸ್​..!

ಲಕ್ನೋ: ಭಾರತೀಯ ಸೇನೆಯನ್ನು ‘ಮೋದಿ ಕೀ ಸೇನಾ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೆ ಚುನಾವಣಾ ಆಯೋಗ ವಿವರಣೆ ಕೇಳಿ ನೋಟಿಸ್ ನೀಡಿದೆ.ಕಳೆದ ಸೋಮವಾರ ಘಾಜಿಯಾಬಾದ್​ನಲ್ಲಿ ನಡೆದ ಸಾರ್ವಜನಿಕ ಱಲಿಯಲ್ಲಿ ಸಿಎಂ ಯೋಗಿ, ಕಾಂಗ್ರೆಸ್​ ಸರ್ಕಾರ ಉಗ್ರರಿಗೆ ಬಿರಿಯಾನಿ ಸರ್ವ್​ ಮಾಡ್ತಿದ್ರೆ, ಪ್ರಧಾನಿ ‘ಮೋದಿ ಜಿ ತನ್ನ ಸೇನೆ’ಗೆ ಬುಲೆಟ್​ ಮತ್ತು ಬಾಂಬ್​ ಸರ್ವ್​ ಮಾಡ್ತಾರೆ ಅಂತ ಹೇಳಿಕೆ ನೀಡಿದ್ರು. ಆದಿತ್ಯನಾಥ್​ ಭಾರತೀಯ ಸೇನೆಯನ್ನ …

Read More »

56 ಇಂಚಿನ ಎದೆ ಎಂದು ಹೇಳುವ ಮೋದಿ, ಸುಳ್ಳು ಹೇಳುವುದರಲ್ಲಿ ನಿರತರಾಗಿದ್ದಾರೆ-ಮಮತಾ ಬ್ಯಾನರ್ಜೀ

ನವದೆಹಲಿ: ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ “ಪ್ರಧಾನಿ ಮೋದಿ ಸುಳ್ಳು ಹೇಳಬಾರದು. 56 ಇಂಚಿನ ಎದೆ ಎಂದು ಹೇಳುವ ಅವರು ಬರಿ ಸುಳ್ಳು ಹೇಳುವುದರಲ್ಲೇ ನಿರತರಾಗಿದ್ದಾರೆ” ಎಂದು ಆರೋಪಿಸಿದ್ದಾರೆ.ಬುಧುವಾರದಂದು ಪಶ್ಚಿಮ ಬಂಗಾಳದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ಮಮತಾ ವಿರುದ್ಧ ವಾಗ್ದಾಳಿ ನಡೆಸಿದರು.ಈಗ ಇದಕ್ಕೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜೀ”ಸುಳ್ಳು ಹೇಳುವುದಕ್ಕೆ ನಾನೇನು ಮೋದಿಯಲ್ಲ, ತಮ್ಮ ಆಡಳಿತ ಅವಧಿಯಲ್ಲಿ ರೈತರ …

Read More »

ಎಸ್​ಪಿ ವರ್ಗಾವಣೆ; ಚುನಾವಣಾ ಆಯೋಗ ಆದೇಶ..

ಹಾಸನ ಪೊಲೀಸ್ ಅಧೀಕ್ಷಕ(ಎಸ್​ಪಿ) ಎ.ಎನ್. ಪ್ರಕಾಶ್ ಗೌಡ ಅವರನ್ನು ವರ್ಗಾವಣೆ ಮಾಡಿ ಚುನಾವಣಾ ಆಯೋಗ ಗುರುವಾರ ಆದೇಶ ಹೊರಡಿಸಿದೆ. ಪ್ರಕಾಶ್ ಗೌಡ ಸ್ಥಾನಕ್ಕೆ ನೂತನವಾಗಿ ಚೇತನ್ ಸಿಂಗ್ ರಾಥೋರ್ ಅವರನ್ನು ನೇಮಕ ಮಾಡಿದೆ.ಕರ್ನಾಟಕ ರಾಜ್ಯ ಚುನಾವಣಾಧಿಕಾರಿಗಳ ಶಿಫಾರಸಿನ ಮೇರೆಗೆ ಭಾರತೀಯ ಚುನಾವಣಾ ಆಯೋಗವು ವರ್ಗಾವಣೆಯನ್ನು ಅನುಮೋದಿಸಿತು.ಕಳೆದ ವಾರ, ಚುನಾವಣಾ ಆಯೋಗವು ಹಾಸನ ಉಪ ಕಮೀಷನರ್ ಅಕ್ರಮ್ ಪಾಶಾವನ್ನು ವರ್ಗಾಯಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನು ಆ ಜಾಗಕ್ಕೆ ಪೋಸ್ಟ್ ಮಾಡಿತ್ತು.ಅದಕ್ಕೂ …

Read More »

ಟಿಕ್ ಟಾಕ್' ನಿಷೇಧಿಸಿ ಎಂದು ಮದ್ರಾಸ್ ಹೈಕೋರ್ಟ್ ಕೇಂದ್ರಕ್ಕೆ ತಾಕೀತು

ನವದೆಹಲಿ: ಜನಪ್ರಿಯ ಚೀನೀ ವೀಡಿಯೊ ಅಪ್ಲಿಕೇಶನ್ ಟಿಕ್ ಟಾಕ್ ನ್ನು ನಿಷೇಧಿಸಲು ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.ಈ ವೀಡಿಯೊ ಅಪ್ಲಿಕೇಶನ್ ಅಶ್ಲೀಲತೆಯನ್ನು ಉತ್ತೇಜಿಸುತ್ತಿರುವ ಹಿನ್ನಲೆಯಲ್ಲಿ ಇದನ್ನು ನಿಷೇಧಿಸಬೇಕೆಂದು ಅದು ಕೇಳಿಕೊಂಡಿದೆ ಎಂದು ಹೇಳಿದೆ.ಈ ಆಪ್ ಮೂಲಕ ರಚಿಸಿದ ವಿಡಿಯೋಗಳನ್ನು ಮಾಧ್ಯಮಗಳು ಪ್ರಸಾರ ಮಾಡುವುದನ್ನು ಕೂಡ ನಿಲ್ಲಿಸಬೇಕೆಂದು ಕೋರ್ಟ್ ಹೇಳಿದೆ.ಭಾರತದಲ್ಲಿ ಸುಮಾರು 54 ಮಿಲಿಯನ್ ಜನರು ಟಿಕ್ ಟಾಕ್ ಅಪ್ಲಿಕೇಶನ್ ಬಳಸುತ್ತಿದ್ದಾರೆ.ಈ ಆಪ್ ಬಳಕೆದಾರರಿಗೆ ವಿಶೇಷ ಎಫೆಕ್ಟ್ ಗಳೊಂದಿಗೆ …

Read More »

ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ

ವಯನಾಡ್: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಂಬರುವ ಲೋಕಸಭೆ ಚುನಾವಣೆಗೆ ಕೇರಳದ ವಯನಾಡ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.ಅಮೇಥಿ ಕ್ಷೇತ್ರದ ಜೊತೆಗೆ ವಯನಾಡ್ ನಲ್ಲಿಯೂ ಸ್ಪರ್ಧಿಸುತ್ತಿರುವ ರಾಹುಲ್ ಇಂದು ಜಿಲ್ಲಾಧಿಕಾರಿ ಜಿ.ಆರ್.ಅಜಯಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು.ನಾಮಪತ್ರ ಸಲ್ಲಿಸುವ ವೇಳೆ ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರಾದ ಕೆ.ಸಿ.ವೇಣುಗೋಪಾಲ್ ಮತ್ತು ಮುಕುಲ್ ವಾಸ್ನಿಕ್ ಕೂಡ ಸಾಥ್ ನೀಡಿದ್ದಾರೆ.ಇದಕ್ಕೂ ಮೊದಲು ರಾಹುಲ್ ಗಾಂಧಿ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು …

Read More »

ಆರ್‌ಬಿಐನಿಂದ ರೆಪೋ ದರ ಇಳಿಕೆ..

ದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ನಿರೀಕ್ಷೆಯಂತೆ ಸತತ ಎರಡನೇ ಬಾರಿಗೆ ರೆಪೋ ದರವನ್ನು ಶೇ.0.25ರಷ್ಟು ಕಡಿಮೆ ಮಾಡಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಇಂದು ನಡೆದ ಆರು ಸದಸ್ಯರ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.ಆರ್‌ಬಿಐ ಆರ್ಥಿಕ ಪರಾಮರ್ಶೆಗೆ ಸಂಬಂಧಿಸಿದ ಸಭೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯನ್ನು ಬಲಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ರೆಪೋ ದರವನ್ನು ಶೇ.0.25ರಷ್ಟು ಕಡಿಮೆ ಮಾಡಲಾಗಿದೆ. ಆರ್‌ಬಿಐನ ಈ ನಿರ್ಧಾರದಿಂದಾಗಿ ಗೃಹ ಹಾಗೂ …

Read More »