Breaking News

21 ವರ್ಷಗಳ ನಂತರ ನಡೆಯಲಿರುವ ಗ್ರಾಮದೇವತೆ ಜಾತ್ರಾ ಮಹೋತ್ಸವ

ಹುಬ್ಬಳ್ಳಿ:21 ವರ್ಷಗಳ ನಂತರ ನಡೆಯಲಿರುವ ಹುಬ್ಬಳ್ಳಿಯ ಬೆಂಗೇರಿಯ ಶ್ರೀ ಗ್ರಾಮದೇವತೆ ಜಾತ್ರಾ ಮಹೋತ್ಸವವು ಸುಕ್ಷೇತ್ರ ಮಣಕವಾಡದ ಮೃತ್ಯುಂಜಯ ಮಹಾಸ್ವಾಮಿಗಳ ಸಾನಿದ್ಯದಲ್ಲಿ ನಡೆಯುತ್ತಿದ್ದು ಮಾ.೨೯ ರಂದು ರಥೋತ್ಸವ ಜರಗುವುದು ಎಂದು ಜಾತ್ರಾ ಮಹೋತ್ಸವದ ಅಧ್ಯಕ್ಷ ಹೂವಪ್ಪ ದಾಯಗೋಡಿ ಹೇಳಿದರು.

ನಗರದಲ್ಲಿ ಸುದ್ದಿಗೋ಼ಷ್ಠಿಯಲ್ಲಿ ಮಾತನಾಡಿದ ಅವರು.ಏಪ್ರಿಲ್‌ 2 ರಂದು ಶ್ರೀ ದ್ಯಾಮಮ್ಮ ದೇವಿ ಹಾಗೂ ದುರ್ಗಮ್ಮ ದೇವಿಯ ದೇವಸ್ಥಾನದಲ್ಲಿ ನೂತನ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ. ಮಾರ್ಚ್ 29 ಮಂಗಳವಾರ , ಬೆಳಗ್ಗೆ 9.00 ಗಂಟೆಗೆ ರಥೋತ್ಸವ ” ಎಪ್ರಿಲ್ 2 ಶನಿವಾರ ಬೆಳಗಿನ 6.00 ಗಂಟೆಗೆ ಯುಗಾದಿಯ ಶುಭದಿನದಂದು ಶ್ರೀ ದ್ಯಾಮಮ್ಮ ದೇವಿ ಹಾಗೂ ದುರ್ಗಮ್ಮ ದೇವಿಯ ದೇವಸ್ಥಾನದಲ್ಲಿ ನೂತನ ಮೂರ್ತಿಗಳ ಪ್ರತಿಷ್ಠಾಪನೆ ನೆರವೇರುವುದು.

ನಂತರ ನವಗ್ರಹಾದಿ ಹೋಮಗಳು , ಯಜ್ಞ ಯಾಗಾದಿ , ಶ್ರೀ ದೇವತೆಯರ ಪ್ರತಿಷ್ಠಾಪನೆ ಪೂರ್ಣಾಹುತಿ ಅಲಂಕಾರ ಪೂಜೆ , ಉಡಿ ತುಂಬುವ ಕಾರ್ಯಕ್ರಮ , ಮಹಾಪ್ರಸಾದ ಮುಂತಾದ ದೇವತಾ ಕಾರ್ಯಕ್ರಮಗಳು ಜರಗುವವು .

9 ದಿನಗಳವರೆಗೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕಲ ಭಕ್ತಾದಿಗಳು ತನು , ಮನ , ಧನ ದೊಂದಿಗೆ ಭಕ್ತಿಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಗ್ರಾಮದೇವತಾ ಟ್ರಸ್ಟ್ ಕಮಿಟಿ , ಬೆಂಗೇರಿ ಹಾಗೂ ಹುಬ್ಬಳ್ಳಿ ಶ್ರೀ ಗ್ರಾಮದೇವತಾ ಜಾತ್ರಾ ಉತ್ಸವ ಸಮಿತಿ ಮನವಿ‌ ಮಾಡಿದ್ದಾರೆ.ಈ ಸಂದರ್ಭದಲ್ಲಿ ಬೀರಪ್ಪ ಖಂಡೇಕಾರ ,ಹನುಮಂತಪ್ಪ ಹೊಳಿ ,ರಮೇಶ ಮಾದೇಪ್ಪನವರ, ರಾಜು ಕಾಳೆ, ಮಾರುತಿ ಬಿಳಗಿ ಉಪಸ್ಥಿತರಿದ್ದರು.

Share News

About admin

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *