ಹಾಸನ: ಕೆಎಸ್ಆರ್ಟಿಸಿ ಬಸ್ ಮತ್ತು ಓಮಿನಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅರಸೀಕೆರೆ ತಾಲೂಕಿನ ಲಕ್ಷೀದೇವರಹಳ್ಳಿಯಲ್ಲಿ ನಿನ್ನೆ ತಡರಾತ್ರಿ 1:30ರ ವೇಳೆಗೆ ಈ ಘಟನೆ ನಡೆದಿದೆ. ಮುಜೀಬಾ(53) ಪುತ್ರ ಮಹಮದ್ ಸಾಧಿಖ್(22) ಹಾಗೂ ಮಗಳು ಮುಸ್ಕಾನ್(19) ಮೃತ ದುರ್ದೈವಿಗಳು. ಗಾಯಾಳುಗಳನ್ನ ಶಿವಮೊಗ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತುಮಕೂರು ಜಿಲ್ಲೆ ಮಧುಗಿರಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದಾಗ ದುರಂತ …
Read More »ವಿಮಾನ ದುರಂತ ಹಿನ್ನೆಲೆ, ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಹಾರಾಟ ಭಾರತದಲ್ಲಿ ಸ್ಥಗಿತ
ನವದೆಹಲಿ: ಇಥಿಯೋಪಿಯನ್ ಏರ್ಲೈನ್ಸ್ ದುರಂತದ ಬೆನ್ನಲ್ಲೇ ಭಾರತದಲ್ಲಿ, ಬೋಯಿಂಗ್ 737 ಮ್ಯಾಕ್ಸ್ 8 ವಿಮಾನಗಳ ಹಾರಾಟವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ಸ್ಥಗಿತಗೊಳಿಸಿದೆ.ವಿಮಾನ ದುರಂತದಲ್ಲಿ ನಾಲ್ಕು ಭಾರತೀಯರು ಸೇರಿದಂತೆ 157 ಮಂದಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಹಾರಾಟ ನಿಲ್ಲಿಸಲು ನಿರ್ಧರಿಸಲಾಗಿದೆ.ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ವಿಶ್ವದಾದ್ಯಂತ ವಿಮಾನಯಾನ ತಯಾರಕರ ಜತೆ ನಿಕಟ ಸಂಪರ್ಕದಲ್ಲಿದ್ದು, ಅಗತ್ಯ ಮಾರ್ಪಾಡುಗಳು ಹಾಗೂ ಸುರಕ್ಷತಾ …
Read More »ಯೂಟ್ಯೂಬ್ ನೋಡಿ ಸ್ವತಃ ಹೆರಿಗೆಗೆ ಮುಂದಾದ ಮಹಿಳೆ, ಮಗು-ತಾಯಿ ಇಬ್ಬರೂ ಸಾವು..
ಲಖನೌ: ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದ ಅವಿವಾಹಿತ ಮಹಿಳೆಯೊಬ್ಬರು ಯೂಟ್ಯೂಬ್ ನೋಡಿಕೊಂಡು ತಮ್ಮ ಹೆರಿಗೆ ತಾವೇ ಮಾಡಿಕೊಳ್ಳಲು ಯತ್ನಿಸಿ ತಮ್ಮ ಮಗುವಿನೊಂದಿಗೇ ಸಾವಿಗೀಡಾದ ಘೋರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಈ ಘಟನೆ ನಡೆದಿದ್ದು, ಯೂ ಟ್ಯೂಬ್ ನಲ್ಲಿ ಮಗು ಪ್ರಸವದ ವೀಡಿಯೊವನ್ನು ವೀಕ್ಷಿಸುತ್ತಾ ಸ್ವತಃ ಹೆರಿಗೆಗೆ ಯತ್ನಿಸಿದ 26ರ ಹರೆಯದ ಅವಿವಾಹಿತ ಮಹಿಳೆ ಮೃತಪಟ್ಟಿದ್ದಾರೆ. ಬಾಡಿಗೆ ಮನೆಯಲ್ಲಿ ಈ ಪ್ರಯತ್ನಕ್ಕೆ ಕೈ ಹಾಕಿದ ಮಹಿಳೆ ಹಾಗೂ …
Read More »ಕಾಂಗ್ರೆಸ್ನ ಯಾವ ನಾಯಕರೂ ಸಮಲತಾ ಜೊತೆ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ
ಮಂಡ್ಯ: ಸುಮಲತಾ ಅಂಬರೀಶ್ಗೆ ಕಾಂಗ್ರೆಸ್ನಿಂದ ಟಿಕೆಟ್ ನೀಡಲು ಸಾಧ್ಯವಿಲ್ಲ ಅಂತ ನಾನು ಮೊದಲೇ ಹೇಳಿದ್ದೇನೆ. ಯಾವ ಕಾಂಗ್ರೆಸ್ ನಾಯಕರೂ ಸುಮಲತಾ ಹಿಂದೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ದೆಹಲಿಯಲ್ಲಿ ಮಾತನಾಡಿದ ಅವರು, ಸಚಿವ ಡಿ.ಕೆ.ಶಿವಕುಮಾರ್ ಮಂಡ್ಯ ಜಿಲ್ಲಾ ನಾಯಕರ ಸಭೆ ಕರೆದಿರುವುದು ನನಗೆ ಗೊತ್ತಿಲ್ಲ. ಜೆಡಿಎಸ್ಗೆ ಹಂಚಿಕೆಯಾಗುವ ಕ್ಷೇತ್ರದಲ್ಲಿ ಇಂತವರನ್ನೇ ಅಭ್ಯರ್ಥಿ ಹಾಕಿ ಅಂತಾ ನಾವು ಹೇಳಲು ಸಾಧ್ಯವಿಲ್ಲ. ಹಾಗೆಯೇ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಜೆಡಿಎಸ್ ನವರು ನಮಗೆ …
Read More »ಸಿಇಟಿ ಪರೀಕ್ಷೆ ಮುಂದೂಡಿಕೆ
ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಗಳನ್ನ ಮುಂದೂಡಿಕೆ ಮಾಡಲಾಗಿದೆ. ಏಪ್ರಿಲ್ 23, 24 ರಂದು ನಡೆಯಬೇಕಿದ್ದ ಸಿಇಟಿ ಪರೀಕ್ಷೆಯನ್ನ ಏಪ್ರಿಲ್ 29, 30ಕ್ಕೆ ಮುಂದೂಡಲಾಗಿದೆ. ಏಪ್ರಿಲ್ 23ಕ್ಕೆ ಮತದಾನ ಇರೋದ್ರಿಂದ ಪರೀಕ್ಷೆಗಳನ್ನ ಮುಂದೂಡಲಾಗಿದೆ ಅಂತಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.#CET #Exam #Karnataka #Postponed #Election
Read More »ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಜೊತೆ ಯಾವುದೇ ಮೈತ್ರಿ ಇಲ್ಲ- ರಾಹುಲ್ ಗಾಂಧಿ
ನವದೆಹಲಿ: ದೆಹಲಿಯಲ್ಲಿ ಕಾಂಗ್ರೆಸ್ ಹಾಗೂ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಮೈತ್ರಿ ವಿಚಾರಗಳ ಕುರಿತಾಗಿ ಹರಡಿದ್ದ ಎಲ್ಲ ಊಹಾಪೋಹಗಳಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಂತಿಮ ತೆರೆ ಎಳೆದಿದ್ದಾರೆ. ದೆಹಲಿಯ ಎಲ್ಲ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ,ಆದ್ದರಿಂದ ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲವೆಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.ಕಳೆದ ವಾರ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ್ದ ಶೀಲಾ ದಿಕ್ಶಿತ ಇದುವರೆಗೆ ಯಾವುದೇ ಮೈತ್ರಿ ಇಲ್ಲವೆಂದು …
Read More »ಲೋಕಸಭಾ ಚುನಾವಣೆಗಾಗಿ ಪಂಜಾಬ್'ನಲ್ಲಿ 6 ಪಕ್ಷಗಳ ಮೈತ್ರಿ.
ಚಂಡೀಗಢ: ಪಂಜಾಬ್ ನಲ್ಲಿ ಕಾಂಗ್ರೆಸ್, ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿ ಘಟಬಂಧನ್ ಮತ್ತು ಆಮ್ ಆದ್ಮಿ ಪಕ್ಷದ ವಿರುದ್ಧ ಹೋರಾಡಲು ತೃತೀಯ ರಂಗ ಸಜ್ಜಾಗಿದ್ದು ಆರು ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಬಹುಜನ ಸಮಾಜ ಪಕ್ಷ, ಲೋಕ ಇನ್ಸಾಫ್ ಪಕ್ಷ, ಸಿಪಿಐಎಂ, ನಾವ್ ಪಂಜಾಬ್ ಪಕ್ಷ, ಪಂಜಾಬ್ ಏಕ್ತ ಪಕ್ಷ ಮತ್ತು ಆರ್ಎಂಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ.ಮೈತ್ರಿ ಪಕ್ಷಗಳು ಇಂದು 13 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿವೆ. ಪಟಿಯಾಲ ಕ್ಷೇತ್ರದಿಂದ …
Read More »ಮಹಿಳೆಯ ಬ್ಯಾಗ್ ಕದ್ದು, 25 ಮೀಟರ್ ದೂರ ಎಳೆದೊಯ್ದ ದುಷ್ಕರ್ಮಿಗಳು..
ನವದೆಹಲಿ: ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯ ವ್ಯಾನಿಟಿ ಬ್ಯಾಗ್ ಕದ್ದು ಎಸ್ಕೇಪ್ ಆದ ಘಟನೆ ದೆಹಲಿಯ ಜನಕ್ಪುರಿ ಪ್ರದೇಶದಲ್ಲಿ ನಡೆದಿದೆ. ಶುಕ್ರವಾರ 4 ಗಂಟೆ ಸುಮಾರಿಗೆ ಪೊಲೀಸ್ ಬೂತ್ ಮುಂದೆಯೇ ಈ ಘಟನೆ ನಡೆದಿದೆ. ರಸ್ತೆ ಪಕ್ಕ ಮಹಿಳೆಯನ್ನ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಇಬ್ಬರು ದರೋಡೆಕೋರರು ಆಕೆಯ ಬ್ಯಾಗ್ ಎಗರಿಸಲು ಯತ್ನಿಸಿದ್ದಾರೆ. ಬ್ಯಾಗ್ ಕಸಿದುಕೊಳ್ಳುತ್ತಿದ್ದಂತೆ ಮಹಿಳೆ ಅದನ್ನ ಬಿಗಿಯಾಗಿ ಹಿಡಿದುಕೊಂಡು ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದ್ರೆ ಇದನ್ನು ಲೆಕ್ಕಿಸದೆ …
Read More »ಕೇವಲ 7 ದಿನಗಳಲ್ಲಿ ಹಂದಿ ಜ್ವರದಿಂದಾಗಿ 75 ಮಂದಿ ಸಾವು..
ನವದೆಹಲಿ: ಕಳೆದ ವಾರ ದೇಶದಲ್ಲಿ ಹಂದಿ ಜ್ವರದಿಂದ 75 ಮಂದಿ ಸಾವನ್ನಪ್ಪಿದ್ದು, ಈ ವರ್ಷ ಒಟ್ಟು 605 ಮಂದಿ ಸಾವನ್ನಪ್ಪಿದ್ದಾರೆ ಎಂದು ಸೋಮವಾರ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಿಂದ ಮಾಹಿತಿ ಲಭಿಸಿದೆ. ಭಾನುವಾರ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, 19,380 ಜನರು ಈ ವೈರಸ್ ಗೆ ತುತ್ತಾಗಿರುವುದು ಖಚಿತಗೊಂಡಿದೆ.ರಾಜಸ್ಥಾನದಲ್ಲಿ 4 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು:ರಾಜಸ್ಥಾನದಲ್ಲಿ 4,551 ಹಂದಿ ಜ್ವರ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಈ ವೈರಸ್ನಿಂದ 162 ಜನರು …
Read More »ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಎರಡು ಹಂತದ ಮತದಾನ, ಎಲ್ಲಿ ಯಾವಾಗ.?
ಬೆಂಗಳೂರು: 2019 ರ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ಕೇಂದ್ರ ಚುನಾವಣಾ ಆಯೋಗ, ಏಳು ಹಂತಗಳಲ್ಲಿ ಚುನಾವಣೆ ನಡೆಸಲು ಮುಂದಾಗಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರಾ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಬಹುನಿರೀಕ್ಷಿತ ಚುನಾವಣೆಯ ಫಲಿತಾಂಶ ಮೇ 23ರಂದು ಹೊರ ಬೀಳಲಿದೆ.ರಾಜ್ಯದ 28 ಲೋಕಸಭಾ ಸ್ಥಾನಗಳ ಚುನಾವಣೆಗೆ ಎರಡನೇ ಹಂತದಲ್ಲಿ (ರಾಜ್ಯದಲ್ಲಿ ಮೊದಲ ಹಂತ) ಏಪ್ರಿಲ್ 18ರಂದು ದಕ್ಷಿಣ ಕರ್ನಾಟಕ ಭಾಗದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





