Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ವಿಮಾನ​​​ ದುರಂತ ಹಿನ್ನೆಲೆ, ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಹಾರಾಟ ಭಾರತದಲ್ಲಿ ಸ್ಥಗಿತ

ನವದೆಹಲಿ: ಇಥಿಯೋಪಿಯನ್​​ ಏರ್‌ಲೈನ್ಸ್‌ ದುರಂತದ ಬೆನ್ನಲ್ಲೇ ಭಾರತದಲ್ಲಿ, ಬೋಯಿಂಗ್ 737 ಮ್ಯಾಕ್ಸ್ 8 ವಿಮಾನಗಳ ಹಾರಾಟವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ಸ್ಥಗಿತಗೊಳಿಸಿದೆ.ವಿಮಾನ ದುರಂತದಲ್ಲಿ ನಾಲ್ಕು ಭಾರತೀಯರು ಸೇರಿದಂತೆ 157 ಮಂದಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಹಾರಾಟ ನಿಲ್ಲಿಸಲು ನಿರ್ಧರಿಸಲಾಗಿದೆ.ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ವಿಶ್ವದಾದ್ಯಂತ ವಿಮಾನಯಾನ ತಯಾರಕರ ಜತೆ ನಿಕಟ ಸಂಪರ್ಕದಲ್ಲಿದ್ದು, ಅಗತ್ಯ ಮಾರ್ಪಾಡುಗಳು ಹಾಗೂ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವವರೆಗೆ ಈ ವಿಮಾನಗಳ ಹಾರಾಟ ಸ್ಥಗಿತಗೊಂಡಿರುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. 5 ತಿಂಗಳಲ್ಲೇ ಎರಡನೇ ಬಾರಿಗೆ ಬೋಯಿಂಗ್ 737 ವಿಮಾನ ಪತನಗೊಂಡಿರುವ ಕಾರಣ ಸದ್ಯ ಫ್ರಾನ್ಸ್, ಜರ್ಮನಿ, ಸಿಂಗಾಪುರ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳು ಈ ವಿಮಾನವನ್ನು ನಿಷೇಧಿಸಿವೆ.ಭಾರತದಲ್ಲಿ ಸ್ಪೈಸ್​ ಜೆಟ್​ ಏರ್​ಲೈನ್ಸ್​​ನಲ್ಲಿ ಮಾಡೆಲ್​​ 8 ಆವೃತ್ತಿಯ 13 ಬೋಯಿಂಗ್ 737 ಮ್ಯಾಕ್ಸ್​ ವಿಮಾನಗಳಿವೆ. ಹಾಗೇ ಜೆಟ್ ​​ಏರ್​ವೇಸ್​​ನಲ್ಲಿ ಇಂತಹ 5 ವಿಮಾನಗಳಿವೆ.

Share News

About Shaikh BIG TV NEWS, Hubballi

Check Also

Featured Video Play Icon

ಹುಬ್ಬಳ್ಳಿ : ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ: ತಹಶೀಲ್ದಾರ ಕಲಗೌಡ ಪಾಟೀಲ..!

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಂತಕ ರಿತೇಶಕುಮಾರ್ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ …

Leave a Reply

Your email address will not be published. Required fields are marked *