Breaking News

ಸುದ್ದಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ದರೋಡೆ .

ನವದೆಹಲಿ: ದೆಹಲಿಗೆ ಸಮೀಪವಿರುವ ನೋಯ್ಡಾ ಸೆಕ್ಟರ್ 1 ರಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್’ಗಳನ್ನು ಗುರುವಾರ(ಸೆ.20) ತಡರಾತ್ರಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಶುಕ್ರವಾರ(ಸೆ.21) ಬೆಳಿಗ್ಗೆ 7 ಗಂಟೆಗೆ ಕಚೇರಿ ಸ್ವಚ್ಛಗೊಳಿಸಲು ಬಂದ ಬ್ಯಾಂಕ್ ಮಾಲಿ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಆದರೆ ಬಹಳ ಹೊತ್ತಾದರೂ ಯಾರೂ ಬಾಗಿಲು ತೆರೆಯದ ಕಾರಣ ಬ್ಯಾಂಕ್ ಮ್ಯಾನೇಜರ್ ಮತ್ತು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ತೆರದಿದ್ದಾರೆ. …

Read More »

ಕೇಂದ್ರ ಸರ್ಕಾರ ಸದ್ಯದಲ್ಲೇ ವಾಟ್ಸಪ್ ಬ್ಯಾನ್ ಮಾಡಲಿದೆ ಕಾರಣವೇನು ಗೊತ್ತೇ?

ನವದೆಹಲಿ: ಕೇಂದ್ರ ಸರ್ಕಾರ ಮತ್ತು ವಾಟ್ಸಪ್ ಕಂಪನಿ ಸಮರ ಮುಂದುವರೆದಿದ್ದು ಈಗ ಅದು ದೇಶದಿಂದಲೇ ಕಂಪನಿಯನ್ನು ಬ್ಯಾನ್ ಮಾಡುವ ಹಂತಕ್ಕೆ ತಲುಪಿದೆ ಎಂದು ಇಂಡಿಯಾ ಟೈಮ್ಸ್ ಡಾಟ್.ಕಾಮ್ ವರದಿ ಮಾಡಿದೆ. ಕೇಂದ್ರ ಸರ್ಕಾರದ ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಮಂತ್ರಾಲಯ ಮತ್ತೊಂದು ಪತ್ರವನ್ನು ಈ ವಿಚಾರವಾಗಿ ಬರೆಯಲು ಸಜ್ಜಾಗಿದ್ದು, ಆ ಮೂಲಕ ಜುಲೈ ತಿಂಗಳಿಂದ ಸರ್ಕಾರ ಕಂಪನಿಗೆ ಬರೆಯುತ್ತಿರುವ ಮೂರನೇ ಪಾತ್ರವಾಗಿದೆ ಎಂದು ತಿಳಿದುಬಂದಿದೆ.  ಫೇಕ್ ನ್ಯೂಸ್ ಗಳ ಹಾವಳಿಗೆ ತಡೆ …

Read More »

ಸರ್ಜಿಕಲ್‌ ಸ್ಟ್ರೈಕ್‌ ದಿನ ಆಚರಣೆ ಮಮತಾ ಬ್ಯಾನರ್ಜಿ ನಕಾರ..

ಕೋಲ್ಕತಾ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಆಡಳಿತ ನಡೆಸುತ್ತಿರುವ ತೃಣಮೂಲ ಕಾಂಗ್ರೆಸ್ ಪಕ್ಷವು ಮತ್ತೊಂದು ಬಿಕ್ಕಟ್ಟನ್ನು ಎದುರಿಸುತ್ತಿದೆ.  ಯುಜಿಸಿಯು ಸೆಪ್ಟೆಂಬರ್ 29ರಂದು ದೇಶಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ “ಸರ್ಜಿಕಲ್ ಸ್ಟ್ರೈಕ್ ಡೇ” ಆಚರಿಸಬೇಕೆಂದು ಗುರುವಾರ ಆದೇಶ ಹೊರಡಿಸಿತ್ತು. ಆದರೆ ಇದಕ್ಕೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ‘ರಾಜ್ಯದ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ …

Read More »

ಕೇರಳದ ನಂತರ ಈಗ ಈ ರಾಜ್ಯಗಳಲ್ಲಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ.ಪ್

ಮುಂದಿನ ಕೆಲವು ಗಂಟೆಗಳ ಕಾಲ ದಕ್ಷಿಣ ಒಡಿಶಾ ಕರಾವಳಿಯಲ್ಲಿ ಪ್ರತಿ ಗಂಟೆಗೆ 60-70 ಕಿಲೋಮೀಟರ್ಗಳಷ್ಟು ಬಿರುಗಾಳಿ ಬೀಸುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿದೆ. ಭುವನೇಶ್ವರ: ಶುಕ್ರವಾರ ಬೆಳಿಗ್ಗೆ ಒಡಿಶಾದ ಗೋಪಾಲ್ಪುರದ ಬಳಿ ಸಮುದ್ರ ತೀರದಲ್ಲಿ ಭಾರೀ ಚಂಡಮಾರುತದ ಎಚ್ಚರಿಕೆ ನೀಡಲಾಗಿದ್ದು, ಈ ಮಾರುತಗಳ ರಾಜ್ಯದ ಅನೇಕ ಭಾಗಗಳಲ್ಲಿ ಉಂಟಾಗಲಿದೆ ಎಂದು ಹೇಳಲಾಗಿದೆ. ಭುವನೇಶ್ವರದಲ್ಲಿರುವ ಹವಾಮಾನ ಕೇಂದ್ರದ ನಿರ್ದೇಶಕ ಎಚ್.ಆರ್. ಬಿಸ್ವಾಸ್, ವಾಯುವ್ಯ ಕೊಲ್ಲಿಯ ಮೇಲಿರುವ ಚಂಡಮಾರುತವು ಪಶ್ಚಿಮದ ವಾಯುವ್ಯ ದಿಕ್ಕಿನಲ್ಲಿ …

Read More »

TRAIN ನಲ್ಲಿ ಸಿಗುವ ಟೀ-ಕಾಫಿ ಇನ್ನು ದುಬಾರಿ, IRCTC ಎಷ್ಟು ಬೆಲೆ..

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ರೈಲಿನಲ್ಲಿ ಚಹಾ ಮತ್ತು ಕಾಫಿ ದರವನ್ನು ಹೆಚ್ಚಿಸಿದೆ. ರೈಲ್ವೇ ಮಂಡಳಿ ಹೊರಡಿಸಿದ ಸುತ್ತೋಲೆ ಪ್ರಕಾರ, ಈಗ ಚಹಾವನ್ನು ಕೆಟಲ್ನಲ್ಲಿ ಸರ್ವ್ ಮಾಡಲಾಗುವುದಿಲ್ಲ. ಎಲ್ಲಾ ವಲಯಗಳಿಗೆ ರೈಲ್ವೆ ಈ ಆದೇಶವನ್ನು ಜಾರಿಗೊಳಿಸಿದೆ. ಈಗ ಟಿ ಬ್ಯಾಗ್ನೊಂದಿಗೆ ಸಿಗುವ 150 ಎಂಎಲ್ ಟೀ ಬೆಲೆಯು 7 ರಿಂದ 10 ರೂಪಾಯಿಗೆ ಏರಿಕೆಯಾಗಿದೆ. ಸ್ಟ್ಯಾಂಡರ್ಡ್ ಕಾಫಿಯನ್ನು ಅದೇ ರೀತಿ ಪ್ರಮಾಣೀಕರಿಸಲಾಗಿದೆ. ಹೇಗಾದರೂ, ಸಿದ್ಧ ಚಹಾದ ಬೆಲೆಯು 5 ರೂಪಾಯಿ …

Read More »

ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಪ್ರಿನ್ಸಿಪಾಲ್ ಅತ್ಯಾಚಾರ

ನವದೆಹಲಿ: ಪಾಟ್ನಾದ ಫುಲ್ವಾರಿ ಶರೀಫ್ ಖಾಸಗಿ ಶಾಲೆಯ ಪ್ರಿನ್ಸಿಪಾಲ್ ಮತ್ತು ಕ್ಲರ್ಕ್  5 ನೇ ತರಗತಿಯ 5ನೇ ತರಗತಿ ವಿದ್ಯಾರ್ಥಿನಿಯನ್ನು ಒಂಬತ್ತು ತಿಂಗಳ ಕಾಲ ಶಾಲಾ ಆವರಣದಲ್ಲಿ ಅತ್ಯಾಚಾರ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ. ವಿದ್ಯಾರ್ಥಿನಿ ಶಾಲೆಯಿಂದ ಹಿಂದಿರುಗಿ ವಾಂತಿ ಮಾಡಲು ಪ್ರಾರಂಭಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.ಈ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಗರ್ಭಿಣಿ ಎಂದು ಹೇಳಲಾಗಿದೆ.  ಈ ಸಂಗತಿ ತಿಳಿದ ನಂತರ ವಿದ್ಯಾರ್ಥಿನಿಯನ್ನು ನಂತರ ಪ್ರಿನ್ಸಿಪಾಲ್ ಮತ್ತು ಗುಮಾಸ್ತರಿಂದ …

Read More »

ಭಾರತದಲ್ಲಿ ಕಳೆದ 10 ವರ್ಷದಲ್ಲಿ ಎಷ್ಟು ಜನ ಬಡತನದಿಂದ ಹೊರ ಬಂದಿದ್ದಾರೆ ಗೊತ್ತಾ?

2005-06 ರಿಂದ 2015-16ರ ನಡುವೆ ಒಂದು ದಶಕದಲ್ಲಿ 27 ದಶಲಕ್ಷ ಜನರು ಭಾರತದಲ್ಲಿ ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದು ವರದಿ ಹೇಳಿದೆ. ಇದು ಜಗತ್ತಿನಿಂದ ಬಡತನವನ್ನು ನಿರ್ಮೂಲನೆ ಮಾಡುವ ಭರವಸೆಯ ಸಂಕೇತವಾಗಿದೆ. ನವ ದೆಹಲಿ: ಅರ್ಥಿಕ ವರ್ಷ 2005-06 ರಿಂದ 2015-16 ರವರೆಗೆ ಒಂದು ದಶಕದಲ್ಲಿ 27 ಕೋಟಿ ಜನರು ಭಾರತದಲ್ಲಿ ಬಡತನ ರೇಖೆಯಿಂದ ಹೊರಬಂದಿದ್ದಾರೆ. ಇದು ಬಡತನದ ವಿರುದ್ಧ ಜಾಗತಿಕ ಹೋರಾಟವನ್ನು ಗೆಲ್ಲುವ ಭರವಸೆಯ ಸಂಕೇತವಾಗಿದೆ ಎಂಬ ಮಾಹಿತಿಯನ್ನು …

Read More »

ಪೆಟ್ರೋಲ್ ಬೆಲೆಯು ಪ್ರತಿ ಲೀಟರ್ಗೆ 10 ಪೈಸೆ ಹೆಚ್ಚಳ, ಡೀಸೆಲ್ ಬೆಲೆ ಸ್ಥಿರ

ಶುಕ್ರವಾರ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ 82.32 ರೂ. ಮತ್ತು ಮುಂಬೈನಲ್ಲಿ 89.69 ರೂ.   ನವದೆಹಲಿ: ಕಳೆದ ಒಂದು ತಿಂಗಲಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯತ್ತ ಮುಖ ಮಾಡಿದೆ. ಗುರುವಾರ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 10 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಲೀಟರ್ಗೆ 82.32 ರೂ. ತಲುಪಿದೆ. ಆದಾಗ್ಯೂ, ಡೀಸೆಲ್ ಬೆಲೆಗಳ ಮೇಲೆ ಜನರಿಗೆ ಸ್ವಲ್ಪ ಪರಿಹಾರ ಸಿಕ್ಕಿದೆ. ಶುಕ್ರವಾರ ಸತತ ಎರಡನೇ ದಿನಕ್ಕೆ ಡೀಸೆಲ್ …

Read More »

ವಿಧಾನ ಪರಿಷತ್ ಚುನಾವಣೆ ಮುಂದೂಡಿಕೆ..

ಕರ್ನಾಟಕ ಮತ್ತು ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಗಳನ್ನು ಮುಂದೂಡಿ ಚುನಾವಣಾ ಆಯೋಗ ಗುರುವಾರ ಆದೇಶ ಹೊರಡಿಸಿದೆ. ನವದೆಹಲಿ: ಕರ್ನಾಟಕ ಮತ್ತು ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಗಳನ್ನೂ ಅ.4ಕ್ಕೆ ಮುಂದೂಡಿ ಚುನಾವಣಾ ಆಯೋಗ ಗುರುವಾರ ಆದೇಶ ಹೊರಡಿಸಿದೆ.  ನಾಮಪತ್ರ ಸಲ್ಲಿಕೆಗೆ ಸೆ. 24 ಕೊನೆಯದಿನವಾಗಿದ್ದು, ನಾಮಪತ್ರ ಹಿಂಪಡೆಯಲು ಸೆ.27 ಕೊನೆಯದಿನವಾಗಿದೆ. ಚುನಾವಣಾ ಆಯೋಗವು ಈ ಮೊದ್ಲು ಪ್ರಕಟಿಸಿದ್ದ ವೇಳಾಪಟ್ಟಿಯಲ್ಲಿ ನಾಮಪತ್ರ ಸಲ್ಲಿಸಲು ಸೆ.22 ಕೊನೆಯದಿನ ಎಂದು ಘೋಷಿಸಿತ್ತು.  ಸೆ.22 ನಾಲ್ಕನೇ ಶನಿವಾರವಾಗಿದ್ದು, …

Read More »

ಲೈಂಗಿಕ ದೌರ್ಜನ್ಯ: ಸಂತ್ರಸ್ತರು ಆನ್​ಲೈನ್​ನಲ್ಲೇ ದೂರು

ನವದೆಹಲಿ: ಅತ್ಯಾಚಾರಕ್ಕೊಳಗಾದ ಯಾವುದೇ ಸಂತ್ರಸ್ತರು ಇನ್ನು ಮುಂದೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಒದ್ದಾಡುವ ಹಾಗೂ ದೂರು ದಾಖಲಿಸಲು ನೂರೆಂಟು ತಕರಾರುಗಳನ್ನು ಕೇಳುವ ಪ್ರಮೇಯವೆ ಬರಲ್ಲ . ಯಾಕಂದ್ರೆ ಸಂತ್ರಸ್ತರು ಇನ್ನು ಮಂದೆ ಮನೆಯಲ್ಲೇ ಕುಳಿತು ಆನ್​ಲೈನ್​ನಲ್ಲೇ ದೂರು ಸಲ್ಲಿಸಬಹುದಾಗಿದೆ. ದೂರುಗಳನ್ನು ಸ್ವೀಕರಿಸಲೆಂದೇ ಕೇಂದ್ರ ಗೃಹ ಇಲಾಖೆ ಹೊಸ ಪೋರ್ಟಲ್​ವೊಂದನ್ನ ಲೋಕಾರ್ಪಣೆಗೊಳಿಸಿದೆ. ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್ ಈ ಹೊಸ ಪೋರ್ಟಲ್ ಬಿಡುಗಡೆ ಮಾಡಿದ್ದು, ಇದರ ಮೂಲಕ …

Read More »