Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಲೈಂಗಿಕ ಕಿರುಕುಳ ಬಹಿರಂಗಪಡಿಸಿದ್ದ ಅಪ್ರಾಪ್ತೆಗೆ ಬೆಂಕಿ ಹಚ್ಚಿ ಕೊಂದ್ರು!

ವಿಜಯಪುರ: ಲೈಂಗಿಕ ಕಿರುಕುಳ ವಿಚಾರವನ್ನು ಬಹಿರಂಗಪಡಿಸಿದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಬೆಂಕಿ ಹಚ್ಚಿ ಕೊಂದಿರುವ ಭೀಕರ ಘಟನೆ ವಿಜಯಪುರದಲ್ಲಿ ನಡೆದಿದೆ.ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ನಡೆದ ಪ್ರಕರಣದಲ್ಲಿ ಪ್ರಾಜಕ್ತಾ ಬಲಭೀಮ ನರಳೆ(14) ಎನ್ನುವ ಬಾಲಕಿ ಬೆಂಕಿಯಿಂದ ಸುಟ್ಟು ದುರಂತ ಸಾವಿಗೀಡಾಗಿದ್ದಾಳೆ.ಘಟನೆ ವಿವರಶಂಕರ್ ಹಿಪ್ಪರಕರ ಹಾಗೂ ಮೋಹನ್ ಎಡವೆ ಎಂಬ ಇಬ್ಬರು ವ್ಯಕ್ತಿಗಳು ಪ್ರಾಜಕ್ತಾ ಅವಳಿಗೆ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದರೆನ್ನಲಾಗಿದೆ.ಆದರೆ ಆಕೆ ಇದಕ್ಕೆ ನಿರಾಕರಿಸಿದ್ದಲ್ಲದೆ ತನಗೆ ಈ ಇಬ್ಬರೂ ಲೈಂಗಿಕ ಕಿರುಕುಳ ನಿಡುತ್ತಿರುವುದಾಗಿ ಪೋಷಕರಿಗೆ ದೂರಿದ್ದಾಳೆ.ಆದರೆ ತಾವು ಕಿರುಕುಳ ನೀಡಿದ್ದ ವಿಚಾರವನ್ನು ಎಲ್ಲಿಯೂ ಬಾಯಿ ಬಿಡಬಾರದೆಂದು ಶಂಕರ್ ಹಾಗೂ ಮೋಹನ್ ಬಾಲಕಿಗೆ ಬೆದರಿಕೆ ಹಾಕಿದ್ದರು. ಆದರೆ ಇದಕ್ಕೆ ಬಗ್ಗದೆ ಬಾಲಕಿ ಈ ಸಂಬಂಧ ಪೋಷಕರಿಗೆ ದೂರು ಹೇಳಿದ್ದಾಳೆ ಎಂದು ತಿಳಿದಾಕ್ಷಣ ಆಕ್ರೋಶ ಭರಿತರಾದ ಅವರುಗಳು ಈ ಹೀನ ಕೃತ್ಯ ಎಸಗಿದ್ದಾರೆ.ಶುಕ್ರವಾರ ಬಾಲಕಿ ಪ್ರಾಜಕ್ತಾ ಮನೆಯವರಿಗೆ ಈ ವಿಚಾರ ತಿಳಿಸಿದ್ದು ಮರುದಿನ ಎಂದರೆ ಶನಿವಾರ ಆಕೆಯನ್ನು ಶಾಲೆಗೆ ಕಳಿಸದೆ ಪೋಷಕರು ಮನೆಯಲ್ಲೇ ಇರಿಸಿಕೊಂಡಿದ್ದರು.ಇನ್ನೂ ವಿಶೇಷವೆಂದರೆ ಶಂಕರ್ ಹಾಗೂ ಮೋಹನ್ ವಿವಾಹಿತರಾಗಿದ್ದರು. ಇದಾಗಿಯೂ ಅವರು ಪ್ರಾಜಕ್ತಾ ಹಿಂದೆ ಬಿದ್ದಿದ್ದರು.ಶನಿವಾರ ಶಾಲೆಗೆ ಬರದ ಪ್ರಾಜಕ್ತಾ ಮನೆಯಲ್ಲಿ ವಿಚಾರ ತಿಳಿಸಿದ್ದಾಳೆ ಎನ್ನುವುದು ಈ ಇಬ್ಬರಿಗೂ ತಿಳಿದಿದೆ. ಭಾನುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆಗೆ ಮನೆಗೆ ನುಗ್ಗಿದ ಕ್ರೂರಿಗಳು ಪ್ರಾಜಕ್ತಾ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದು ಹಾಕಿದ್ದಾರೆ.ಪ್ರಸ್ತುತ ಘಟನೆ ಬಗ್ಗೆ ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಾದ ಶಂಕರ್, ಮೋಹನ್ ರನ್ನು ಬಂಧಿಸಲಾಗಿದೆ.

Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *