Breaking News

ಸುದ್ದಿ

ಪೆಟ್ರೋಲ್, ಡೀಸೆಲ್ ದರವನ್ನು 2 ರೂ. ಕಡಿಮೆಗೊಳಿಸಿದ ಸಿಎಂ ಕುಮಾರಸ್ವಾಮಿ..

ಕಲಬುರ್ಗಿ: ನಾಡಿನ ಜನತೆಗೆ ತೈಲ ಬೆಲೆ ಹೇರಿಕೆ ಕಡಿಮೆ ಮಾಡುವ ಉದ್ದೇಶದಿಂದ ಮೈತ್ರಿ ಸರ್ಕಾರದ ವತಿಯಿಂದ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆ ಕನಿಷ್ಠ 2.ರೂಪಾಯಿಗೆ ಇಳಿಸಲಾಗುವುದು ಎಂದು ಸಿಎಂ ಹೆಚ್​.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಕಲಬುರ್ಗಿಯ ಹೈದರಾಬಾದ್​ ವಿಮೋಚನಾ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಎಂ ಕುಮಾರಸ್ವಾಮಿ, ಧ್ವಜಾರೋಹಣ ನೆರವೇರಿಸಿ ಮಾತನಾಡಿದರು, ಆ ಸಮಯದಲ್ಲಿ ಜನ ಸಾಮಾನ್ಯರ ಬವಣೆಯನ್ನು ಅರಿತುಕೊಂಡು ಬೆಲೆ ಇಳಿಕೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ …

Read More »

ಅರಮನೆಯ ಅಂಬಾರಿ ನಮ್ಮ ವೈಯಕ್ತಿಕ ಆಸ್ತಿ: ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್..

ಮೈಸೂರು: ಅರಮನೆಯ ಅಂಬಾರಿ ನಮ್ಮ ವೈಯಕ್ತಿಕ ಆಸ್ತಿ. ಹಿಂದೆಯೂ ಅದು ನಮ್ಮ ಆಸ್ತಿಯೇ ಆಗಿತ್ತು. ಈಗಲೂ ನಮ್ಮದೆ, ಮುಂದೆಯೂ ಅದು ನಮ್ಮ ಆಸ್ತಿಯೇ ಆಗಿರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ರಾಜವಂಶಸ್ಥೆ ಡಾ.ಪ್ರಮೋದಾದೇವಿ ಒಡೆಯರ್‌ ಸ್ಪಷ್ಟನೆ ನೀಡಿದರು. ಈ ಬಗ್ಗೆ ಭಾನುವಾರ ಮೈಸೂರಿನಲ್ಲಿ ಮಾತನಾಡಿದ ಪ್ರಮೋದಾದೇವಿ ಒಡೆಯರ್‌, ಅಂಬಾರಿ ವಿಚಾರಕ್ಕೆ ವ್ಯಕ್ತಿಯೊಬ್ಬರು ಕೇಸ್ ಹಾಕಿಕೊಂಡಿದ್ದರು. ಅವರ ನಡವಳಿಕೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಅಗತ್ಯ ಇಲ್ಲ. ಹಿಂದೆಯೇ ನ್ಯಾಯಾಲಯ ಅಂಬಾರಿ …

Read More »

ಜೀವಕ್ಕಿಂತ ಎಣ್ಣೆಯೇ ಹೆಚ್ಚಾಯ್ತಾ? ಅಪಘಾತವಾದ್ರೂ ಮಾನವೀಯತೆ ಮರೆತ ಜನ..

ಬಾಗಲಕೋಟೆ: ಅಡುಗೆ ಎಣ್ಣೆ ಟ್ಯಾಂಕರ್​ ಹಾಗೂ ಕಂಟೇನರ್‌ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಟ್ಯಾಂಕರ್​ ಚಾಲಕ ಮೃತಪಟ್ಟಿರುವ ಘಟನೆ ಇಳಕಲ್-ಹುನಗುಂದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ಅಪಘಾತದಲ್ಲಿ ಚಾಲಕ ಮೃತಪಟ್ಟಿದ್ದರೂ, ಸಾರ್ವಜನಿಕರು ಮಾನವೀಯತೆ ಮೆರತು ನಡೆದುಕೊಂಡಿದ್ದಾರೆ. ಶವವನ್ನು ಹೊರತೆಗೆಯಲು ಜನರು ಪೊಲೀಸರಿಗೆ ಸಹಾಯ ಮಾಡುವ ಬದಲು ಟ್ಯಾಂಕರ್​ನಿಂದ ಸೋರುತ್ತಿದ್ದ ಎಣ್ಣೆ ತುಂಬಿಸಿಕೊಳ್ಳಲು ಪೈಪೋಟಿ ನಡೆಸಿದ್ರು. ಚಾಲಕನ ಮೃತದೇಹ ಹೊರ ತೆಗೆಯಲು ಪೊಲೀಸರು ಹರಸಾಹಸ ಪಡುವಂತಾಯಿತು. ಎಣ್ಣೆ ತುಂಬಿದ್ದ ಟ್ಯಾಂಕರ್​ …

Read More »

ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ಸಾಧ್ಯತೆ

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ದರ ಕಡಿಮೆ ಮಾಡಲು ಪೂರಕವಾಗುವಂತೆ ತೆರಿಗೆ ಇಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಈ ಕುರಿತು ಸೋಮವಾರ ಆದೇಶ ಹೊರಬೀಳುವ ಸಾಧ್ಯತೆ ಇದೆ. ಪೆಟ್ರೋಲ್, ಡೀಸೆಲ್ ದರವನ್ನು 2 ರಿಂದ 2.50 ರೂ. ನಷ್ಟು ಇಳಿಸಬಹುದು ಎಂದು ನಿರೀಕ್ಷಿಸಲಾಗಿದೆ. ದೇಶದಲ್ಲಿ ಗಗನಕ್ಕೇರುತ್ತಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಯುವ ಲಕ್ಷಣ ಕಾಣಿಸದೇ ಇರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೆಸ್‌ ಕಡಿಮೆ ಮಾಡಿ ಇವುಗಳ ದರವನ್ನು …

Read More »

ಆಪರೇಶನ್ ಕಮಲಕ್ಕೆ ಬೆಚ್ಚಿ ಬಿದ್ದಿದೆ ‘ಕೈ’ ಪಾಳಯ

ಬೆಂಗಳೂರು: ಬಿಜೆಪಿಯಿಂದ ನಡೆಯುತ್ತಿದೆ ಎನ್ನಲಾದ ಆಪರೇಷನ್ ಕಮಲ’ಕ್ಕೆ ‘ಕೈ’ ಪಾಳಯ ನಿಜಕ್ಕೂ ಬೆಚ್ಚಿ ಬಿದ್ದಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ನಲ್ಲಿ ತಲೆದೋರಿರುವ ಆಂತರಿಕ ಬಿಕ್ಕಟ್ಟು ಬಗೆಹರಿಸಲು ಕಾಂಗ್ರೆಸ್ ಹರಸಾಹಸ ಪಡುತ್ತಿದೆ. ಬಿಜೆಪಿ ಮುಖಂಡರು ತಮ್ಮನ್ನು ಸಂಪರ್ಕಿಸಿರುವ ಬಗೆ ಕಾಂಗ್ರೆಸ್ ಶಾಸಕರು ಮರೆಮಾಚುತ್ತಿದ್ದಾರೆ ಎನ್ನಲಾಗುತ್ತಿದ್ದು, ಯಾರೆಲ್ಲ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ ಅನ್ನೋ ಗೊಂದಲದಲ್ಲಿ ಕಾಂಗ್ರೆಸ್ ಮುಖಂಡರಿದ್ದು, ಬಿಜೆಪಿ ಸಂಪರ್ಕದಲ್ಲಿರೋ ಶಾಸಕರ ಬಗ್ಗೆ  ಕಾಂಗ್ರೆಸ್‌ಗೆ ನಿಖರ ಮಾಹಿತಿ ಸಿಗುತ್ತಿಲ್ಲ ಎನ್ನಲಾಗಿದೆ.  ಯಾವ ಶಾಸಕರು? ಎಷ್ಟು ಶಾಸಕರು? …

Read More »

ರಾಜಧಾನಿಯಲ್ಲಿ ಮತ್ತೆ ‘ಡ್ರಗ್ಸ್​​ ಮಾಫಿಯ’: ಅಕ್ರಮ ಗಾಂಜಾ ಮಾರಾಟ, ವಿದೇಶಿಗರ ಬಂಧನ

ಬೆಂಗಳೂರು(ಸೆಪ್ಟೆಂಬರ್​​.15): ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವಿದೇಶಿಗರನ್ನು ಕೊತ್ತನೂರು ಪೊಲೀಸರು ಬಂಧಿಸಿದ್ಧಾರೆ. ನೈಜೀರಿಯಾ ಹಾಗೂ ಉಗಾಂಡ ಮೂಲದ ಚುವಾನ್ಸೋ , ಡಾನ್ ಕೆ ಥಾಮಸ್ , ಲೂಥಾಯ ಪ್ಯಾಟ್ರಿಕ್ , ಸಬಾಸಿಯೋ ಬಂಧಿತ ಆರೋಪಿಗಳು ಎನ್ನಲಾಗಿದೆ. ಉಗಾಂಡ ಮೂಲದ ವಿದೇಶಿಗರು ಬೆಂಗಳೂರಿಗೆ ಬಂದು ನೆಲೆಸಿದ್ದರು. ಹಲವು ದಿನಗಳಿಂದ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು, ಮಾದಕ ವಸ್ತುಗಳ ಮಾರಟ ಮಾಡುತ್ತಿದ್ದರು. ಕೊತ್ತನೂರು ಪೊಲೀಸರ ಕಾರ್ಯಾಚರಣೆಯಲ್ಲಿ ಅಕ್ರಮ ಮಾದಕ ವಸ್ತುಗಳ …

Read More »

ಐಟಿ ಪ್ರಕರಣ:ಡಿಕೆಶಿಗೆ ಜಾಮೀನು ಮಂಜೂರು,

ಬೆಂಗಳೂರು: ತೆರಿಗೆಯನ್ನು ವಂಚನೆ ಮಾಡಲಾಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಒಟ್ಟು ನಾಲ್ಕು ಕೇಸ್ ಗಳನ್ನು ದಾಖಲಿಸಿತ್ತು. ಈಗ ಶನಿವಾರದಂದು ಈ ಪ್ರಕರಣದ ವಿಚಾರಣೆಗಾಗಿ ಆರ್ಥಿಕ ಅಪರಾಧಗಳ ಕೋರ್ಟ್ಗೆ ಹಾಜರಾಗಿದ್ದ ಅವರಿಗೆ ಮೂರು ಪ್ರಕರಣಗಳಲ್ಲಿ ಜಾಮೀನು ಸಿಕ್ಕಿದೆ. ಮೂರು ಪ್ರಕರಣಗಳಲ್ಲಿ ಡಿ.ಕೆ ಶಿವಕುಮಾರ್ ಜೊತೆ ಇದ್ದ ಉಳಿದವರಿಗೂ ಕೂಡ ಜಾಮೀನು ಸಿಕ್ಕಿದೆ ಎಂದು ತಿಳಿದು ಬಂದಿದೆ.ಅರ್ಜಿ ವಿಚಾರಣೆ ನಡೆಸಿದ ಆರ್ಥಿಕ ಅಪರಾಧ ಪ್ರಕರಣಗಳ ಕೋರ್ಟ್ ನಾಲ್ಕನೇ ಪ್ರಕರಣದಲ್ಲೂ ಡಿಕೆಶಿ ಜೊತೆಗೆ …

Read More »

ಫೇಸ್‌ಬುಕ್‌ ಹಿಂಬಾಲಕನಿಂದ 25ರ ಯುವತಿಯನ್ನು ಕುಡುಗೋಲಿನಿಂದ 38 ಬಾರಿ ಕೊಚ್ಚಿ ಭೀಕರ ಕೊಲೆ!

ಮಾಡ್ರನ್ ಲೈಫ್ ಸ್ಟೈಲ್ ಗೆ ಮಾರು ಹೋಗಿ ವಿಲಾಸಿ ಜೀವನ ನಡೆಯುತ್ತಿದ್ದ 25 ವರ್ಷದ ಸುಪ್ರೀಯಾ ಜೈನ್ ರನ್ನು ಕಮಲೇಶ್ ಸಾಹು ಎಂಬಾತ ಕುಡುಗೋಲಿನಿಂದ 38 ಬಾರಿ ಕೊಚ್ಚಿ ಕೊಲೆ ಮಾಡಿದ್ದಾನೆ.  ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕಮಲೇಶ್ ಸಾಹು ಸುಪ್ರಿಯಾ ಜೈನ್ ಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಇದಕ್ಕೆ ಸುಪ್ರಿಯಾ ತನಗೆ ಒಂದು ಕೆಲಸ ಸಿಕ್ಕ ಮೇಲೆ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ. ಇದನ್ನೇ ನಂಬಿಕೊಂಡಿದ್ದ ಸಾಹುಗೆ ನಂತರ ಆಕೆ ವಿಲಾಸಿ …

Read More »

ಪೆಟಾದಿಂದ ಕಂಬಳ ನಿಷೇದ ಕೋರಿ ಸುಪ್ರೀಂಗೆ ಮರು ಅರ್ಜಿ ಸಲ್ಲಿಕೆ..

ನವದೆಹಲಿ: ಕರಾವಳಿ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಆಡುವ ಕಂಬಳಕ್ಕೆ  ತಡೆ ನೀಡಬೇಕೆಂದು ಪ್ರಾಣಿ ದಯಾ ಸಂಘ ಸುಪ್ರೀಂಕೋರ್ಟ್‌ಗೆ ಮತ್ತೆ ಅರ್ಜಿಯನ್ನು ಸಲ್ಲಿಸಿದೆ.  ಈ ಹಿಂದೆ ಈ ಕ್ರೀಡೆಗೆ ಅನುಮತಿ ನಿಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರಾಣಿ ಹಿಂಸೆ (ಕರ್ನಾಟಕ ತಿದ್ದುಪಡಿ) ತಡೆ ಕಾಯ್ದೆ – 2017ಯನ್ನು ಜಾರಿಗೆ ತಂದಿತ್ತು.  ಈ ಹಿನ್ನಲೆಯಲ್ಲಿ ಈಗ ಪೇಟಾ ಕ್ರೀಡೆಯನ್ನು ನಿಷೇದಪಡಿಸಬೇಕೆಂದು ತಗಾದೆ ತಗೆದಿದೆ. ಇನ್ನು, ರಾಜ್ಯ ಸರ್ಕಾರದ ಪ್ರಾಣಿ ಹಿಂಸೆ (ಕರ್ನಾಟಕ ತಿದ್ದುಪಡಿ) …

Read More »

ಮುಂದುವರೆದ ಪೆಟ್ರೋಲ್ ಬೆಲೆ ಏರಿಕೆ,ಮುಂಬೈನಲ್ಲಿ ಲೀಟರ್ ಗೆ 90 ರೂ !

ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಇಂಧನಗಳ ಬೆಲೆ ಹೆಚ್ಚಳವು ಶನಿವಾರದಂದು ಮುಂದುವರೆದಿದೆ. ದೆಹಲಿಯಲ್ಲಿ ಪೆಟ್ರೋಲ್ ಲೀಟರ್ಗೆ 81.63 ರೂ. ಮತ್ತು ಡೀಸೆಲ್ ಪ್ರತಿ ಲೀಟರ್ಗೆ  73.54 ರೂ. ಪೆಟ್ರೋಲ್ ಲೀಟರ್ಗೆ 0.35 ಪೈಸೆ ಮತ್ತು ಡೀಸೆಲ್ ಪ್ರತಿ ಲೀಟರ್ಗೆ 0.24 ಪೈಸೆ ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 89.01 ರೂ.ಗಳಾಗಿದ್ದು, ಲೀಟರ್ಗೆ 0.34 ಪೈಸೆ. ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ ಲೀಟರ್ಗೆ 78.07  ರೂಗಳಾಗಿದೆ …

Read More »