ತಮ್ಮದು ಜ್ಯಾತೀತ ಪಕ್ಷ, ದಲಿತಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷದ ಮುಖಂಡರಿಂದಲೇ ದಲಿತನ ಮೇಲೆ ದೌರ್ಜನ್ಯ ನಡೆದಿದೆ. ಅದೂ ಡಿಸಿಎಂ ಜಿ.ಪರಮೇಶ್ವರ್ ಸ್ವಕ್ಷೇತ್ರ ಕೊರಟಗೆರೆಯಲ್ಲಿ. ಹೌದು, ದೇವಸ್ಥಾನ ಪ್ರವೇಶ ಮಾಡಿದಕ್ಕೆ ದಲಿತನೋರ್ವನಿಗೆ ದಂಡ ವಿಧಿಸಿ ಊರಿನಿಂದ ಭಹಿಷಾರ ಹಾಕಿರೋ ಅಮಾನುಷ ಘಟನೆ ನಡೆದಿದೆ. ಅಷ್ಟೇ ಅಲ್ಲ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ನೇತೃದಲ್ಲಿ ನಡೆದ ಪಂಚಾಯ್ತಿಯಲ್ಲಿ ಬಹಿಷ್ಕಾರ ಹಾಕುತ್ತಿರುವ ವೀಡಿಯೋ ವೈರಲ್ ಆಗಿ ಸಂಚಲನ ಸೃಷ್ಟಿಸಿದೆ.ಹೌದು, ದಲಿತನೋರ್ವ ದೇವಸ್ಥಾನ ಪ್ರವೇಶಿಸಿದ ಅನ್ನೋ ಕಾರಣಕ್ಕೆ ಆತನನ್ನ ಊರಿನಿಂದಲೇ ಬಹಿಷ್ಕಾರ ಹಾಕಿರೋ ಆರೋಪವೊಂದು ಪರಮೇಶ್ವರ್ ಸ್ವಕ್ಷೇತ್ರ ಕೊರಟಗೆರೆ ತಾಲ್ಲೂಕಿನ ಮಲ್ಲೆಕಾವು ಗ್ರಾಮದಲ್ಲಿ ಕೇಳಿ ಬಂದಿದೆ.ದೇವಸ್ಥಾನ ಪ್ರವೇಶಿಸಿದ ದಲಿತ ವ್ಯಕ್ತಿ ಜಗದೀಶ್ ನ ವಿರುದ್ದ ಊರಿನ ಮುಖಂಡರು ಪಂಚಾಯ್ತಿ ಸೇರಿಸಿ 25 ಸಾವಿರ ರೂ ದಂಡ ವಸೂಲಿ ಮಾಡಿದ್ದಾರೆ. ಅಲ್ಲದೆ ಆತನಿಂದಲೇ ದೇವಾಲಯದ ಶುಚಿ ಕಾರ್ಯ ಹಾಗೂ ಬಣ್ಣ ಬಳಿಯುವ ಕೆಲಸವನ್ನು ಮಾಡಿಸುವಂತೆ ಆದೇಶಿದ್ದಾರೆ. ಮಲ್ಲೇಕಾವು ಗ್ರಾಮದ ದೊಡ್ಡಮ್ಮ ದೇವಿಯ ದೇವಾಲಯದಲ್ಲಿ ಮೇ.20 ರಂದು ಜಾತ್ರೆ ನಡೆದಿದೆ..ಜಾತ್ರೆಯ ಒಂದು ವಾರದ ಬಳಿಕ ದೇವಾಲಯದಲ್ಲಿ ಮರುಪೂಜೆ ಏರ್ಪಡಿಸಿದ್ದು, ಅಂದು ದಲಿತ ಸಮುದಾಯಕ್ಕೆ ಸೇರಿದ ಜಗದೀಶ್ ಕುಟುಂಬ ಸಮೇತ ದೇವಾಲಯಕ್ಕೆ ಪ್ರವೇಶಿದ್ದಾರೆ. ಮೊದಲಿನಿಂದಲೂ ಆ ದೇವಾಲಯಕ್ಕೆ ದಲಿತರ ಪ್ರವೇಶ ನಿಷೇಧ ಇದ್ದು, ಜಗದೀಶ್ ಹೋದಾಗ ಅಪವಿತ್ರ ಆಗಿದೆ ಅಂತಾ ಊರಿನ ಮುಖಂಡರು ಆತನನ್ನ ಪಂಚಾಯ್ತಿ ಸೇರಿಸಿ ದಂಡದ ಜೊತೆಗೆ ಭಹಿಷ್ಕಾರದ ಶಿಕ್ಷೆ ವಿಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





