Shaikh BIG TV NEWS, Hubballi
September 8, 2018
ದೇಶ-ವಿದೇಶ, ಸುದ್ದಿ
ಚೆನ್ನೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಇತ್ತೀಚೆಗಷ್ಟೇ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದು ತಮ್ಮದೇ ಪಾರ್ಟಿ ಘೋಷಣೆ ಮಾಡುತ್ತಾರೆ ಅಂತ ಹೇಳಲಾಗಿತ್ತು. ಆದರೆ ಇದೀಗ ತಲೈವಾ ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಜೊತೆ ಸರಣಿ ಸಭೆ ನಡೆಸಿರುವುದು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಮಾಸ್ಟರ್ ಪ್ಲಾನ್ ಹೆಣೆಯುತ್ತಿದ್ದಾರೆ. ಆದರೆ ಉತ್ತರಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿದರೆ ಬೇರೆ …
Read More »
Shaikh BIG TV NEWS, Hubballi
September 8, 2018
ದೇಶ-ವಿದೇಶ, ಸುದ್ದಿ
ನರೇಂದ್ರ ಮೋದಿ-ಮನ್ ಮೋಹನ್ ಸಿಂಗ್ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವೈಫಲ್ಯಗಳ ಕುರಿತು ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ಕಪ್ಪುಹಣ, ನೋಟ್ ಬ್ಯಾನ್ ಹಾಗೂ ದೇಶದ ಯುವ ಜನತೆಗೆ ಉದ್ಯೋಗ ಸೃಷ್ಟಿಸುವಲ್ಲಿ ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮನ್ಮೋಹನ್ ಸಿಂಗ್ ಟೀಕಿಸಿದರು. ನವದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮನ್ಮೋಹನ್ ಸಿಂಗ್ ಅವರು, ದೇಶದಲ್ಲಿ ಏಕಾಏಕಿಯಾಗಿ ಜಿಎಸ್ ಟಿ ಜಾರಿಗೊಳಿಸಿದ್ದರಿಂದ ಅನೇಕ ಉದ್ಯಮಿಗಳು ದಿವಾಳಿಯಾಗಿರುವ …
Read More »
Shaikh BIG TV NEWS, Hubballi
September 8, 2018
ಕರ್ನಾಟಕ, ಸುದ್ದಿ
ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್ ಮಾಡಿದೆ ಎನ್ನಲಾಗಿದೆ. ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಅವರನ್ನು ಕಣಕ್ಕಿಳಿಸಲು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿರುವ ಬಿಜೆಪಿ, ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿರುವ ಮಂಡ್ಯದಲ್ಲಿ ಪ್ರಬಲ ಪೈಪೋಟಿ ನೀಡಲು ಬಿಜೆಪಿ ಚಿಂತನೆ ನಡೆಸಿದ್ದು, ಪೂರ್ವಸಿದ್ಧತೆ ನಡೆಸಿದೆ ಎನ್ನಲಾಗಿದೆ. ಈ ಹಿಂದೆ ಯದುವೀರ್ ಅವರನ್ನು ಕರ್ನಾಟಕ ವಿಧಾನಸಭೆ ಚುನಾವಣೆ …
Read More »
Shaikh BIG TV NEWS, Hubballi
September 8, 2018
ಕರ್ನಾಟಕ, ಸುದ್ದಿ
ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು: ಗಂಡ ಮತ್ತು ಮಗ ಬಿರಿಯಾನಿ ತಿಂದರು ಎಂಬ ಕಾರಣಕ್ಕೆ ಗರ್ಭಿಣಿಯೊಬ್ಬರು ಮನೆಯನ್ನೇ ಬಿಟ್ಟು ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ 8 ವರ್ಷಗಳಿಂದ ಬೆಂಗಳೂರಿನ ಕಮ್ಮನಗೊಂಡನಹಳ್ಳಿಯಲ್ಲಿ ವಾಸವಿರುವ ಮದ್ಯಪ್ರದೇಶ ಮೂಲದ ರಾಜು ಸರ್ಕಾರ್-ಅನಿತಾ ಸರ್ಕಾರ್ ದಂಪತಿ ನಡುವೆ ಬಿರಿಯಾನಿ ವಿಚಾರವಾಗಿ ಜಗಳವಾಗಿದೆ ಎನ್ನಲಾಗಿದ್ದು, ಆ ಕ್ಷುಲ್ಲಕ ಕಾರಣಕ್ಕಾಗಿ ಆಕೆ ಮನೆ ಬಿಟ್ಟು ತವರಿಗೆ ಹೋಗಿದ್ದು, ಇನ್ನೆಂದೂ ಹಿಂತಿರುಗುವುದಿಲ್ಲ ಎಂದು ಹೇಳಿರುವುದಾಗಿ ಪತಿ ರಾಜು ಪೊಲೀಸರಿಗೆ …
Read More »
Shaikh BIG TV NEWS, Hubballi
September 8, 2018
ದೇಶ-ವಿದೇಶ, ಸುದ್ದಿ
ನೂತನ ಕಾನೂನಿನ ಪ್ರಕಾರ ಹುಡುಗಿಯು ಸಂಬಂಧಿಕರೊಂದಿಗೆ ಬಂದರೆ, ಅವರ ಸಮಯ ಮಿತಿಯನ್ನು ನಿರ್ಲಕ್ಷಿಸಬಹುದು ಎನ್ನಲಾಗಿದೆ. ಜಕಾರ್ತಾ: ಇಂಡೋನೇಷ್ಯಾ ಆಶೆಯ ಪ್ರಾಂತ್ಯದಲ್ಲಿ ಷರಿಯಾ ಕಾನೂನು ನಡೆಯುತ್ತದೆ. ಸಂಪ್ರದಾಯವಾದಿ ಸಾಮಾಜಿಕ ವ್ಯವಸ್ಥೆಯೊಂದಿಗೆ ಈ ಪ್ರಾಂತ್ಯದ ಒಂದು ಪ್ರಭುತ್ವವು ಅವಿವಾಹಿತ ಜೋಡಿಗಳನ್ನು ಟೇಬಲ್ ಹಂಚಿಕೊಳ್ಳುವುದನ್ನು ನಿಷೇಧಿಸಿದೆ. ಸುದ್ದಿ ಸಂಸ್ಥೆಯ ‘ಎಫೆ’ ವರದಿಯ ಪ್ರಕಾರ, ಮಾನವ ಹಕ್ಕುಗಳ ಕಾರ್ಯಕರ್ತರು ಬೈರುನ್ ಆಡಳಿತದ ಹೊಸ ಕಾನೂನು ಸಲಿಂಗಕಾಮಿಗಳ ಸೃಷ್ಟಿಗೆ ನಿಷೇಧಿಸಿದೆ. ಇದಲ್ಲದೆ, ರಾತ್ರಿ 9 ಗಂಟೆ ನಂತರ …
Read More »
Shaikh BIG TV NEWS, Hubballi
September 7, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಮನೆಗಳ್ಳನನ್ನು ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹೆಗ್ಗೇರಿ ಮಾರುತಿ ನಗರ ನಿವಾಸಿ ದಾದಾಪೀರ ಹುಸೇನಸಾಬ್ ಸವಣೂರು (32) ಬಂಧಿತ ಆರೋಪಿ. ಬಂಧಿತನಿಂದ 6.75 ಲಕ್ಷ ಮೌಲ್ಯದ 225 ಗ್ರಾಂ ಬೆಲೆಬಾಳುವ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಈತ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಅಪರಾಧಿಯಾಗಿದ್ದು ಪೊಲೀಸರಿಂದ ತಲೆಮರೆಸಿಕೊಂಡು ಕಳ್ಳತನ ಕೃತ್ಯ ಮಾಡುತ್ತ ತಪ್ಪಿಸಿಕೊಂಡು ತಿರುಗುತ್ತಿದ್ದ. …
Read More »
Shaikh BIG TV NEWS, Hubballi
September 7, 2018
ದೇಶ-ವಿದೇಶ, ಸುದ್ದಿ
ಉತ್ತರ ಪ್ರದೇಶದ ಘಾಜಿಯಾಯಾಬಾದ್ ಕಾಕ್ರಾ ಎಂಬ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ರಾತ್ರಿ ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ತೋರಿಸಿ ಕುಟುಂಬಸ್ಥರನ್ನು ಒತ್ತೆಯಾಳುಗಳಾಗಿರಿಸಿಕೊಂಡಿದ್ದಾರೆ. ಬಳಿಕ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದು, ಪೊಲೀಸ್ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಘಾಜಿಯಾಬಾದ್ ಡಿವೈಎಸ್ ಪಿ …
Read More »
Shaikh BIG TV NEWS, Hubballi
September 7, 2018
ಕರ್ನಾಟಕ, ಸುದ್ದಿ
ಬೆಂಗಳೂರು:ಬೀದಿನಾಯಿಗಳ ಹಾವಳಿ ನಗರದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದೆ. ನಿನ್ನೆ ರಾಜಾಜಿನಗರದ 6ನೇ ಬ್ಲಾಕ್ ನ ಗುಬ್ಬಣ್ಣ ಲೇಔಟ್ ನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ವ್ಯಕ್ತಿಗಳಿಗೆ ಬೀದಿನಾಯಿ ಕಚ್ಚಿ ಗಾಯಗೊಳಿಸಿದೆ. ಗುಬ್ಬಣ್ಣ ಲೇ ಔಟ್ ನ ಸೈಂಟ್ ಮರಿಯಾ ಶಾಲೆಯ ಯುಕೆಜಿ ಬಾಲಕಿ ಮತ್ತು 9ನೇ ತರಗತಿ ಬಾಲಕ ನಿನ್ನೆ ಬೆಳಗ್ಗೆ ಶಾಲೆಗೆ ಹೋಗುತ್ತಿದ್ದಾಗ ಬೀದಿನಾಯಿ ಕಚ್ಚಿದೆ. 5 ವರ್ಷದ ಬಾಲಕಿ ಸಾಯಿಸಿರಿಯ ಬೆನ್ನಹಿಂದೆ ಮತ್ತು ಕಾಲಿಗೆ ನಾಯಿ ಕಚ್ಚಿತು. ಆಸ್ಪತ್ರೆಗೆ …
Read More »
Shaikh BIG TV NEWS, Hubballi
September 7, 2018
ಕರ್ನಾಟಕ, ಸುದ್ದಿ
ಬೆಳಗಾವಿ: ಜಾರಕಿಹೊಳಿ ಸಹೋದರರು ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದ್ದ ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಹೆಬ್ಬಾಳ್ಕರ್ ಬಣ ಅವಿರೋಧವಾಗಿ ಆಯ್ಕೆಯಾಗಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಣದ ಅಧ್ಯಕ್ಷರಾಗಿ ಮಹಾದೇವ್ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಬಾಬು ಸಾಹೇಬ್ ಜಮಾದಾರ್ ಆಯ್ಕೆಯಾಗಿದ್ದಾರೆ. ಬೆಳಗಾವಿ ಪಿಎಲ್ಡಿ ಬ್ಯಾಂಕ್ಗೆ ಇಂದು ಚುನಾವಣೆ ನಿಗದಿಯಾಗಿತ್ತು. ಅದರಂತೆ ಬೆಳಗ್ಗೆ 10 ರಿಂದ 11 ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಅಧ್ಯಕ್ಷ …
Read More »
Shaikh BIG TV NEWS, Hubballi
September 7, 2018
ಕರ್ನಾಟಕ, ಸುದ್ದಿ
ಬೆಂಗಳೂರು: “ಚೈನಾ ದೇಶದೊಂದಿಗೆ ಸಕಾರಾತ್ಮಕ ಸ್ಪರ್ಧೆ” ಎಂಬ ಕಾರ್ಯಕ್ರಮವನ್ನು ಅನುಷ್ಠಾನಗಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಆಯಾಯ ಪ್ರದೇಶದ ಸಂಪನ್ಮೂಲ ಮತ್ತು ವೃತ್ತಿಕೌಶಲ್ಯಗಳನ್ನು ಆಧರಿಸಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುವುದುರಾಜ್ಯದ ಕಲಬುರಗಿ, ಚಿತ್ರದುರ್ಗ, ಹಾಸನ, ಕೊಪ್ಪಳ, ಮೈಸೂರು, ಒಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್ ಮತ್ತು ತುಮಕೂರು ಜಿಲ್ಲೆಗಳಲ್ಲಿ ನಾನಾ ಉದ್ಯಮಗಳ ಸ್ಥಾಪನೆಗೆ ಅನುಕೂಲವಾಗುವಂತೆ 9 ಕ್ಲಸ್ಟರ್ ಮಾದರಿಗಳನ್ನು ರಚಿಸಲು ಒಪ್ಪಿಗೆ ನೀಡಲಾಯಿತು. …
Read More »