ಹುಬ್ಬಳ್ಳಿ: ರೈಲ್ವೆ ಸಂಬಂಧಿತ ಕಾಮಗಾರಿ ನಡೆಯಲಿರುವ ಕಾರಣ ಹಲವು ರೈಲುಗಳ ಸಂಚಾರ ಮತ್ತು ಫೆ. 1 ಹಾಗೂ 2ರಂದು ಹುಬ್ಬಳ್ಳಿ-ದಾದರ್ ನಿತ್ಯ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿಯಿಂದ, 2 ಹಾಗೂ 3ರಂದು ದಾದರ್‌ನಿಂದ ರದ್ದುಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಳಂಬ: ಮಾ. 27ರಿಂದ 31ರ ವರೆಗೆ ಮತ್ತು ಫೆ. 2ರಂದು ಕೊಲ್ಹಾಪುರ-ತಿರುಪತಿ ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲಿನ ಸಂಚಾರದಲ್ಲಿ 30 ನಿಮಿಷ ವಿಳಂಬಾಗಲಿದೆ. 27ರಿಂದ ಫೆ. 2ರ ತನಕ ಹುಬ್ಬಳ್ಳಿ-ದಾದರ್ ಎಕ್ಸ್‌ಪ್ರೆಸ್ ರೈಲು 15 ನಿಮಿಷ, ವಾಸ್ಕೋಡಗಾಮ-ಹಜರತ್ ನಿಜಾಮುದ್ದೀನ್ ಗೋವಾ ನಿತ್ಯ ಸಂಚರಿಸುವ ರೈಲು 20 ನಿಮಿಷ, ಫೆ. 1ರಂದು ಹರಿಪ್ರಿಯಾ ಎಕ್ಸ್‌ಪ್ರೆಸ್ ಕೊಲ್ಹಾಪುರದಿಂದ ಸಂಚರಿಸುವಾಗ ಒಟ್ಟು 90 ನಿಮಿಷ ತಡವಾಗಿ ಗುರಿ ತಲುಪಲಿದೆ.
ಮಾ. 31ರಂದು ಹಜರತ್ ನಿಜಾಮುದ್ದೀನ್-ಮೈಸೂರು ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್ ರೈಲು ಹಜರತ್‌ನಿಂದ ಹೊರಡುವಾಗ ಪುಣೆ, ಸೊಲ್ಲಾಪುರ, ಹೂಟಗಿ, ಗದಗ ಮತ್ತು ಹುಬ್ಬಳ್ಳಿ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಸತಾರ, ಕರಾಡ, ಸಾಂಗ್ಲಿ, ಮೀರಜ್, ಬೆಳಗಾವಿ ಮತ್ತು ಧಾರವಾಡ ನಿಲ್ದಾಣಗಳಲ್ಲಿ ನಿಲುಗಡೆ ರದ್ದುಪಡಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

