Breaking News

ಮನೆಗಳ್ಳನಿಗೀಗ ಪೊಲೀಸ್ ಆತಿಥ್ಯ

ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಬೀಗ ಮುರಿದು ಕಳ್ಳತನ‌ ಮಾಡುತ್ತಿದ್ದ ಕುಖ್ಯಾತ ಮನೆಗಳ್ಳನನ್ನು ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೆಗ್ಗೇರಿ ಮಾರುತಿ ‌ನಗರ ನಿವಾಸಿ ದಾದಾಪೀರ ಹುಸೇನಸಾಬ್ ಸವಣೂರು (32) ಬಂಧಿತ ಆರೋಪಿ. ಬಂಧಿತನಿಂದ 6.75 ಲಕ್ಷ ಮೌಲ್ಯದ 225 ಗ್ರಾಂ ಬೆಲೆಬಾಳುವ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಈತ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಅಪರಾಧಿಯಾಗಿದ್ದು ಪೊಲೀಸರಿಂದ ತಲೆಮರೆಸಿಕೊಂಡು ‌ಕಳ್ಳತನ‌ ಕೃತ್ಯ ಮಾಡುತ್ತ ತಪ್ಪಿಸಿಕೊಂಡು ತಿರುಗುತ್ತಿದ್ದ.  ಒಟ್ಟು ಐದು ಕಳ್ಳತನ ಪ್ರಕರಣ ಹಾಗೂ ಒಂದು ಜಬರೀ ಕಳ್ಳತನ ಪ್ರಕರಣ ಪತ್ತೆಯಾಗಿದೆ. ಈತನ ತಮ್ಮ ಅಸ್ಲಂ ಕೂಡ ಈತನ ಜೊತೆ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದು ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಈತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Share News

About Shaikh BIG TV NEWS, Hubballi

Check Also

ಡಿಜಿ ಆದೇಶಕ್ಕೆ ಹೊಸ ಕಮಿಷನರ್‌ ಬೆಲೆ ತಂದರಾ..? ಟ್ರಾಫಿಕ್ ಪೊಲೀಸರ ದರ್ಬಾರ್‌ಗೆ ಭೂಷಣ್‌ ಬೊರಸೆ ಬ್ರೇಕ್..!

ಡಿಜಿ ಆದೇಶಕ್ಕೆ ಗೌರವ ತಂದ ಹೊಸ ಕಮಿಷನರ್‌..! ಟ್ರಾಫಿಕ್ ವ್ಯವಸ್ಥೆಗೆ ಹೊಸ ರೂಪ — ಹುಬ್ಬಳ್ಳಿ ನೂತನ ಪೊಲೀಸ್ ಕಮಿಷನರ್‌ …

Leave a Reply

Your email address will not be published. Required fields are marked *