Breaking News

ಆಟೊ, ವಾಲ್ವ್‌, ತಾಳಿ ಕಳ್ಳತನ; ನಾಲ್ವರು ಸೆರೆ

ಕೋಲಾರ: ಆಟೊ, ಕಬ್ಬಿಣದ ವಾಲ್ವ್‌, ಚಿನ್ನದ ತಾಳಿಯ ಕಳ್ಳತನದಲ್ಲಿ ತೊಡಗಿದ್ದ ಆರೋಪದ ಮೇಲೆ ನಾಲ್ವರನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೆಜಿಎಫ್‌ ತಾಲ್ಲೂಕಿನ ಪಾರಾಂಡಹಳ್ಳಿಯ ನಾಗರಾಜ್‌ (50), ಕೋಲಾರದ ಟಮಕದ ಶಿವ (37), ತಾಲ್ಲೂಕಿನ ಶಿಳ್ಳಂಗೆರೆಯ ಜ್ಞಾನದೇವ (36) ಹಾಗೂ ಕೆಜಿಎಫ್‌ ತಾಲ್ಲೂಕಿನ ಬೇತಮಂಗಲದ ವರುಣ್‌ (22) ಬಂಧಿತರು.ವಿವಿಧ ದೇಗುಲಗಳಲ್ಲಿ ಕಳ್ಳತನ ಮಾಡಿದ ಆರೋಪ ನಾಗರಾಜ್‌ ಮೇಲಿದೆ. ಆತನಿಂದ ₹ 1.27 ಲಕ್ಷ ಮೌಲ್ಯದ ಬಂಗಾರದ ತಾಳಿ, ₹ 2.85 ಲಕ್ಷದ ಆಟೊಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ಮೂವರ ಮೇಲೆ ಕೋಲಾರ ಹೊರವಲಯದ ಗಾಜಲದಿನ್ನೆಯಲ್ಲಿ ಯರಗೋಳ್‌ ಯೋಜನೆಗೆ ಸಂಬಂಧಿಸಿದ ಕಬ್ಬಿಣದ ವಾಲ್ವ್‌ಗಳನ್ನು (ಸುಮಾರು ₹ 25 ಲಕ್ಷ ಮೌಲ್ಯ) ಕಳ್ಳತನ ಮಾಡಿದ ಆರೋಪವಿದೆ. ಸಿಬ್ಬಂದಿಯನ್ನು ಎಸ್‌ಪಿ ನಿಖಿಲ್‌ ಶ್ಲಾಘಿಸಿದ್ದಾರೆ.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *