Breaking News

ಸುದ್ದಿ

72ನೇ ಸ್ವಾತಂತ್ರ್ಯ ದಿನ: ಕೆಂಪು ಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ ಭಾಷಣ

ಇದು ಪ್ರಧಾನಿ ಮೋದಿ ಮಾಡುತ್ತಿರುವ ಐದನೇ ಸ್ವಾತಂತ್ರ್ಯ ದಿನದ ಭಾಷಣ. ನವದೆಹಲಿ: ದೇಶದ 72ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಭಾಷಣ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಮಾಡುತ್ತಿರುವ ಐದನೇ ಸ್ವಾತಂತ್ರ್ಯ ದಿನದ ಭಾಷಣ ಇದಾಗಿದೆ. ಕಳೆದ ನಾಲ್ಕು ವರ್ಷಗಳಿಂದಲೂ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಒಂದಿಲ್ಲೊಂದು ಯೋಜನೆಗಳ ಘೋಷಣೆ ಮೂಲಕ ಭಾಷಣ ಅಂತ್ಯಗೊಳಿಸಿದ್ದಾರೆ. ಈ ಬಾರಿಯೂ ಆಯುಷ್ಮಾನ್ ಭಾರತ, ಸುಕನ್ಯಾ …

Read More »

ಮಹದಾಯಿ ತೀರ್ಪು ಕೊಂಚ ನಿರಾಳ ನೀಡಿದೆ- ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು:  ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯಾಲಯ ನೀಡಿರುವ ತೀರ್ಪು ರಾಜ್ಯದ ಜನರಿಗೆ ಕೊಂಚ ನಿರಾಳತೆ‌ ನೀಡಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ 36.4 ಟಿಎಂಸಿ ನೀರನ್ನು ಕೇಳಿತ್ತು.‌ ಆದರೆ, ನ್ಯಾಯಾಧಿಕರಣ 13.5 ಟಿಎಂಸಿ ನೀರು ಹಂಚಿಕೆ ಮಾಡಿ, ತೀರ್ಪು ನೀಡಿದೆ.‌ ಇಷ್ಟು ವರ್ಷದ ಹೋರಾಟಕ್ಕೆ ಈ ತೀರ್ಪು ಸ್ವಲ್ಪ ಮಟ್ಟಿಗೆ ನಿರಾಳತೆ ನೀಡಿದೆ. ಆದರೆ ಇನ್ನು …

Read More »

ಲೋಕಸಭೆ ಚುನಾವಣೆ ಜೊತೆಗೆ ವಿಧಾನಸಭಾ ಚುನಾವಣೆ ಸಾಧ್ಯವಿಲ್ಲ: ಚುನಾವಣಾ ಆಯೋಗ…

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯ ಜೊತೆಗೆ 11 ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ನಡೆಸುವಂತೆ ಬಿಜೆಪಿ ಮಾಡಿದ್ದ ಮನವಿಯನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ.  ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೇ 11 ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಆಯೋಗಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಓಂ ಪ್ರಕಾಶ್ ರಾವತ್, ಈಗಿನ ಪರಿಸ್ಥಿತಿಯಲ್ಲಿ ಲೋಕಸಭೆಯ ಜೊತೆಗೆ …

Read More »

ತಿಂಗಳಾಂತ್ಯದಲ್ಲಿ ವಿದೇಶ ಪ್ರವಾಸ ಕೈಗೊಳ್ಳಲಿರುವ ಸಿಎಂ‌‌ ಕುಮಾರಸ್ವಾಮಿ

ಕುಮಾರಸ್ವಾಮಿ ಅವರ ಜೊತೆ ಜೆಡಿಎಸ್ ಪಕ್ಷದ ಕೆಲವು ಸಚಿವರು ಕೂಡ ಅಮೇರಿಕಾ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ ಬೆಂಗಳೂರು: ಮುಖ್ಯಮಂತ್ರಿ ಆದಮೇಲೆ‌ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಎಚ್.ಡಿ.  ಕುಮಾರಸ್ವಾಮಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಸಿಎಂ‌ ಕುಮಾರಸ್ವಾಮಿ ತಿಂಗಳಾಂತ್ಯದಲ್ಲಿ  ಒಂದು ವಾರ ಅಮೇರಿಕಾ ಪ್ರವಾಸಕ್ಕೆ ತೆರಳಲಿದ್ದು ಅದಕ್ಕಾಗಿ ಮುಖ್ಯಮಂತ್ರಿ ಕಚೇರಿಯಲ್ಲಿ ಈಗಾಗಲೇ ತಯಾರಿ ಶುರುವಾಗಿವೆ. ಅಮೇರಿಕಾದ ಡಲ್ಲಾಸ್ ನಲ್ಲಿ ನಡೆಯಲಿರುವ ಪ್ರತಿಷ್ಠಿತ ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಗಸ್ಟ್ 29 ರಂದು …

Read More »

ಮೈಸೂರ್ ಸಿಲ್ಕ್ ಸೀರೆ ಖರೀದಿಸಲು ಆಧಾರ್ ಕಡ್ದಾಯ

ಸ್ವಾತಂತ್ರ್ಯ ದಿನಾಚರಣೆ ಮತ್ತು ವರಮಹಾಲಕ್ಷ್ಮಿ ಹಬ್ಬಕ್ಕೆ ಆಫರ್ ನಲ್ಲಿ ಸಿಗಲಿದೆ ಮೈಸೂರ್ ಸಿಲ್ಕ್ ಸೀರೆ. ಬೆಂಗಳೂರು: ಮೈಸೂರ್ ಸಿಲ್ಕ್ ಸೀರೆ ಎಂದರೆ ಮಹಿಳೆಯರಿಗೆ ಎಲ್ಲಿಲ್ಲದ ಮೋಹ. ಆದರೆ ಗಗನಕ್ಕೇರಿರುವ ಈಗಿನ ದರದಲ್ಲಿ ಮೈಸೂರ್ ಸಿಲ್ಕ್ ಸೀರೆ ಕೊಳ್ಳಲು ಸಾಧ್ಯವೇ… ಎನ್ನುವ ಮಂದಿಯೇ ಹೆಚ್ಚು. ಮೈಸೂರ್ ಸಿಲ್ಕ್ ಸೀರೆ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಮಹಿಳೆಯರಿಗಾಗಿ ವಿಶೇಷ ಸೆಲ್ ಅನ್ನು ಆಯೋಜಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ವರಮಹಾಲಕ್ಷ್ಮಿ ಹಬ್ಬಕ್ಕೆ ಮೈಸೂರ್ ಸಿಲ್ಕ್ …

Read More »

ಹಾವಿಗೆ‌ ಹಾಲೆರದರೇನು ಫಲ.. ಸ್ವಾಮೀಜಿಯಿಂದ ಹಸಿದ ಹೊಟ್ಟೆಗೆ ಹಾಲುಣಿಸುವ ಪುಣ್ಯದ ಕೆಲಸ

ಹಾವಿಗೆ ಹಾಲೆರೆದ್ರೇ ಕಚ್ಚೋದನ್ನ ಬಿಟ್ಟೀತೇ.. ಖಂಡಿತಾ ಇಲ್ಲ. ಆದ್ರೇ, ನಾಗರಪಂಚಮಿ ಬಂದ್ರೇ ಸಾಕು ಹುತ್ತಕ್ಕೆ, ಕಲ್ಲು ನಾಗರಕ್ಕೆ ಲೀಟರ್ ಗಟ್ಟಲೇ ಹಾಲೆರೆಯೋದನ್ನ ಇನ್ನೂ ಬಿಟ್ಟಿಲ್ಲ. ಆಚರಣೆ ತಪ್ಪಲ್ಲ. ಆದ್ರೇ, ಅದರ ಹೆರಸಿನಲ್ಲಿ ಮೌಢ್ಯ, ದುಂದು ವೆಚ್ಚ ಬೇಡ ಅಂತಿದಾರೆ ಇಲ್ಲೊಬ್ಬ ಸ್ವಾಮೀಜಿ. ನಾಗರಪಂಚಮಿಯನ್ನೇ ಮಕ್ಕಳ ಹಬ್ಬ, ಬಸವಣ್ಣನ ಹಬ್ಬ ಅಂತ ಆಚರಿಸಲು ಶ್ರೀಗಳು ಜಾಗೃತಿ ಮೂಡಿಸ್ತಿದಾರೆ. ಹಾಲುಣಿಸುತ್ತಿರುವ ಮನಸ್ಸು ಪರಿಶುದ್ಧ. ಹಸಿದ ಹೊಟ್ಟೆಗಳೂ ಮುಗ್ಧ.. ಇದರಲ್ಲೇ ಕಾಣ್ತಿದೆ ದೈವತ್ವ. ಇದೇ …

Read More »

ವರುಣನ ರೌದ್ರ ನರ್ತನಕ್ಕೆ 7 ರಾಜ್ಯಗಳಲ್ಲಿ 774 ಮಂದಿ ಸಾವು.?

ನವದೆಹಲಿ: ಈ ಮಾನ್ಸೂನ್ ಅವಧಿಯಲ್ಲಿ ಏಳು ರಾಜ್ಯಗಳಲ್ಲಿ ಪ್ರವಾಹ ಸಂಬಂಧಿ ಘಟನೆಗಳಲ್ಲಿ 774 ಜನರು ಮೃತಪಟ್ಟಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಗೃಹ ಸಚಿವಾಲಯದ ರಾಷ್ಟ್ರೀಯ ತುರ್ತು ಪ್ರತಿಕ್ರಿಯೆ ಕೇಂದ್ರ (NERC) ಪ್ರಕಾರ, ಪ್ರವಾಹ ಮತ್ತು ಮಳೆ ಕಾರಣದಿಂದ ಕೇರಳದಲ್ಲಿ 187, ಉತ್ತರ ಪ್ರದೇಶದ 171, ಪಶ್ಚಿಮ ಬಂಗಾಳದಲ್ಲಿ 170 ಮತ್ತು ಮಹಾರಾಷ್ಟ್ರದಲ್ಲಿ 139 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಗುಜರಾತ್ನಲ್ಲಿ 52 ಜನರು, ಅಸ್ಸಾಂನಲ್ಲಿ 45 ಮತ್ತು ನಾಗಾಲ್ಯಾಂಡ್ನಲ್ಲಿ ಎಂಟು …

Read More »

ಪೊಲೀಸ್ ಠಾಣೆ, ಕೋರ್ಟ್ ಆವರಣದ ಗಂಧದ‌ ಮರಗಳ ಕಳ್ಳತನ

ದಾವಣಗೆರೆ ಬ್ರೇಕಿಂಗ್: ಪೋಲಿಸ್ ಠಾಣೆಗೆ ಭದ್ರತೆ ಇಲ್ವಾ..? ಪೊಲೀಸ್ ಠಾಣೆ ಹಾಗೂ ಕೋರ್ಟ್ ಆವರಣದಲ್ಲಿರುವ ಗಂಧದ ಮರ ಕಳವು. ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿದ್ದ ಗಂಧದ ಮರ. ಕೋರ್ಟ್ ಪಕ್ಕದಲ್ಲಿ ಒಂದು ಠಾಣೆಯ ಹಿಂಭಾಗದಲ್ಲಿದ್ದ ಎರಡು ಗಂಧದ ಮರ ಕಳವು. ಎರಡು ವರ್ಷಗಳ ಹಿಂದೆ ಚನ್ನಗಿರಿ ಪೋಲಿಸ್ ಠಾಣೆಯಲ್ಲಿ ಒಂದು ಗಂಧದ ಮರ ಕಳುವಾಗಿತ್ತು. ಅನುಮಾನಕ್ಕೆ ಕಾರಣವಾದ ಕೋರ್ಟ್ ಹಾಗೂ ಠಾಣೆಯ ಆವರಣದಲ್ಲಿ ಕಳ್ಳತನ. ಸರ್ಕಾರಿ …

Read More »

ಜನಧ್ವನಿ ಸಮಾವೇಶ’, ಇಂದು ರಾಜ್ಯಕ್ಕೆ ರಾಹುಲ್ ಗಾಂಧಿ ಭೇಟಿ

ಬೀದರ್: ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ದತೆ ನಡೆಸಿರುವ ಕಾಂಗ್ರೆಸ್ ಪಕ್ಷಕ್ಕೆ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಇಂದು ಬೀದರ್ ನ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿರುವ ‘ಜನಧ್ವನಿ ಸಮಾವೇಶ’ದಲ್ಲಿ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ನೇರವಾಗಿ ಬೀದರ್ ಏರ್‌ಬೇಸ್‌ಗೆ ಬೆಳಿಗ್ಗೆ 11:00 ಗಂಟೆಗೆ ಆಗಮಿಸಲಿರುವ ರಾಹುಲ್‌ ಗಾಂಧಿ, ಅಲ್ಲಿಂದ ನೇರವಾಗಿ ನಗರದ ನೆಹರು ಕ್ರೀಡಾಂಗಣಕ್ಕೆ ತೆರಳಲಿದ್ದಾರೆ. ಭದ್ರತೆಗೆ ಎಸ್‌ಪಿಜಿ ಸೇರಿ 1200 ಸ್ಥಳೀಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. …

Read More »

ಕರಾವಳಿ, ಕೊಡಗು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

ಸಂಗ್ರಹ ಚಿತ್ರ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರಿನ ಶಾಲಾ-ಕಾಲೇಜುಗಳಿಗೆ ರಜೆ. ಮಂಗಳೂರು: ರಾಜ್ಯದ ಮಲೆನಾಡು, ಕರಾವಳಿ, ಕೊಡಗಿನಲ್ಲಿ ಮತ್ತೆ ಮುಂಗಾರು ಅಬ್ಬರಿಸುತ್ತಿದ್ದು, ಇನ್ನೂ ಎರಡು-ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರಿನ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭದ್ರಾ ಜಲಾಶಯದಿಂದ 16 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. …

Read More »