Breaking News

ಮೈಸೂರ್ ಸಿಲ್ಕ್ ಸೀರೆ ಖರೀದಿಸಲು ಆಧಾರ್ ಕಡ್ದಾಯ

ಸ್ವಾತಂತ್ರ್ಯ ದಿನಾಚರಣೆ ಮತ್ತು ವರಮಹಾಲಕ್ಷ್ಮಿ ಹಬ್ಬಕ್ಕೆ ಆಫರ್ ನಲ್ಲಿ ಸಿಗಲಿದೆ ಮೈಸೂರ್ ಸಿಲ್ಕ್ ಸೀರೆ.
ಬೆಂಗಳೂರು: ಮೈಸೂರ್ ಸಿಲ್ಕ್ ಸೀರೆ ಎಂದರೆ ಮಹಿಳೆಯರಿಗೆ ಎಲ್ಲಿಲ್ಲದ ಮೋಹ. ಆದರೆ ಗಗನಕ್ಕೇರಿರುವ ಈಗಿನ ದರದಲ್ಲಿ ಮೈಸೂರ್ ಸಿಲ್ಕ್ ಸೀರೆ ಕೊಳ್ಳಲು ಸಾಧ್ಯವೇ… ಎನ್ನುವ ಮಂದಿಯೇ ಹೆಚ್ಚು. ಮೈಸೂರ್ ಸಿಲ್ಕ್ ಸೀರೆ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಮಹಿಳೆಯರಿಗಾಗಿ ವಿಶೇಷ ಸೆಲ್ ಅನ್ನು ಆಯೋಜಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ವರಮಹಾಲಕ್ಷ್ಮಿ ಹಬ್ಬಕ್ಕೆ ಮೈಸೂರ್ ಸಿಲ್ಕ್ ಸೀರೆ ಆಫರ್ ನಲ್ಲಿ ದೊರೆಯಲ್ಲಿದ್ದು, ಆಫರ್ ನಲ್ಲಿ ಸೀರೆ ಖರೀದಿಸುವಾಗ ಗ್ರಾಹಕರು ಕಡ್ಡಾಯವಾಗಿ ಆಧಾರ್ ಕಾರ್ಡ್ ತೋರಿಸಬೇಕು.
ವಿಶೇಷ ಸೂಚನೆ: ಈ ಸ್ಕೀಮ್ ದುರಪಯೋಗ ಆಗಬಾರದೆಂದು ಆಧಾರ್ ಕಡ್ಡಾಯ ಮಾಡಲಾಗಿದೆ. ಒಂದು ಬಾರಿ ಆಫರ್ ನಲ್ಲಿ ಖರೀದಿಸಿದವರು ಮತ್ತೆ ಮುಂದಿನ ಐದು ವರ್ಷಗಳಲ್ಲಿ ಆಫರ್ ನಲ್ಲಿ ಸೀರೆ ಖರೀದಿಸಲು ಸಾಧ್ಯವಿಲ್ಲ. 
ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಹಾಗೂ ಮೈಸೂರು ಸಿಲ್ಕ್ ಸೀರೆ ಖರೀದಿಸಬೇಕೆಂಬ ಆಸೆ ಹೊಂದಿರುವವರ ಬಯಕೆ ಪೂರೈಸಲು  ಈ ಸೇಲ್ ಆಯೋಜಿಸಲಾಗಿದ್ದು, ಈ ವಿಶೇಷ ಸೇಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 7,000 ಬೆಲೆಯ ಸೀರೆಯನ್ನು 4,000 ರೂ.ಗೆ  ಮತ್ತು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ 15,000 ರೂ. ಬೆಲೆಯ ಸೀರೆಯನ್ನು 4,500 ರೂ. ಗೆ ಮಾರಾಟ ಮಾಡಲಾಗುವುದು ಎಂದು ರೇಷ್ಮೆ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.
ಬೆಂಗಳೂರಿನ ಎರಡು ಶೋ ರೂಂ, ಮೈಸೂರು, ಚನ್ನಪಟ್ಟಣ ಮತ್ತು ದಾವಣಗೆರೆಯಲ್ಲಿ ಆಫರ್ ನಲ್ಲಿ ಮೈಸೂರ್ ಸಿಲ್ಕ್ ಸೀರೆ ಖರೀದಿಸಬಹುದಾಗಿದೆ.
Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *