Breaking News

ಮಂಡ್ಯ ಲೋಕಾಯುಕ್ತ ದಾಳಿ: ಹಾಸ್ಟೆಲ್ ವಾರ್ಡನ್ ಮನೆಯಲ್ಲೇ ಮಿನಿಬಾರ್, ಕೈ ಇಟ್ಟಲ್ಲೆಲ್ಲಾ ಕಾಸು, ಕದ್ದ ಮಾಲು!

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಿವೃತ್ತ ಬಿಸಿಎಂ ಹಾಸ್ಟೆಲ್ ಸೂಪರಿಡೆಂಟ್ ಶಿವರಾಜು ಅವರ ಮನೆ ಹಾಗೂ ಫಾರಂ ಹೌಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೇರಬೇಕಿದ್ದ ಬಟ್ಟೆ, ಸೀರೆ, ಕೈಗಡಿಯಾರ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ. ಮನೆಯಲ್ಲೇ ನೂರಾರು ಮದ್ಯದ ಬಾಟಲಿಗಳು ಹಾಗೂ ಚಿನ್ನಾಭರಣ ಸೇರಿದಂತೆ ಅಕ್ರಮ ಆಸ್ತಿ ಪತ್ತೆಯಾಗಿದೆ. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡಬೇಕಿದ್ದ ಸವಲತ್ತುಗಳನ್ನು ಮನೆಗೆ ಸಾಗಿಸಿ ದಾಸ್ತಾನು ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಲೋಕಾಯುಕ್ತ ಇನ್‌ಸ್ಪೆಕ್ಟರ್ ಬ್ಯಾಟರಾಯಗೌಡ ನೇತೃತ್ವದಲ್ಲಿ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲೆಗಳು, ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಪಿಎಸ್‌ಐ ಜೊತೆ ಮಾತಿನ ಚಕಮಕಿ ಪ್ರಕರಣ: ಐಶ್ವರ್ಯಗೌಡರಿಂದ ಬೇಷರತ್ ಕ್ಷಮೆಯಾಚನೆ

ಮಂಡ್ಯ ಜಿಲ್ಲೆಯ ಪಾಂಡವಪುರದ ಉಕ್ಕಡ ಮಾರಮ್ಮ ದೇವಸ್ಥಾನದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐ ಸವಿತಾ ಪಾಟೀಲ್ ಅವರೊಂದಿಗೆ ನಡೆದ ಮಾತಿನ ಚಕಮಕಿಗೆ …

Leave a Reply

Your email address will not be published. Required fields are marked *