Breaking News

ರಾಜಕೀಯ ಸುದ್ದಿ

ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕು – ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒತ್ತಾಯ

ಬೆಂಗಳೂರು : ಮಹಾರಾಷ್ಟ್ರದ ಎಂಇಎಸ್ ಸಂಘಟನೆಯನ್ನು ರದ್ದು ಮಾಡಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒತ್ತಾಯಿಸಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಂಡಳಿ ಅಧ್ಯಕ್ಷ ಜಯರಾಜ್, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ, ಬಸವಣ್ಣನ ಪ್ರತಿಮೆಗೆ ಅವಮಾನ ಮಾಡಿರುವ ಕಿಡಿಗೇಡಿಗಳ ಕೃತ್ಯ ಖಂಡನೀಯ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದು ಹೇಳಿದರು. ಇನ್ನೂ ನನ್ನ ಚಿಕ್ಕವಯಸ್ಸಿನಿಂದಲೂ ಎಂಇಎಸ್ ಪುಂಡಾಟಿಕೆಯನ್ನು ನೋಡುತ್ತಿದ್ದೇನೆ. ಇವರ ರಾಜ್ಯವಿರೋಧಿ ಧೋರಣೆಗಳನ್ನು …

Read More »

‘ಸಚಿವ ಭೈರತಿ ಬಸವರಾಜ್’ಗೆ ಬಿಗ್ ರಿಲೀಫ್: ‘ಹೈಕೋರ್ಟ್’ನಿಂದ ‘ಸಮನ್ಸ್’ಗೆ ತಡೆ

ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವಂತ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಕಾಂಗ್ರೆಸ್ ನಿಂದ ಭೂಹಗರಣದ ಆರೋಪ ಹೊತ್ತಿರುವಂತ ಸಚಿವ ಬೈರತಿ ಬಸವರಾಜ ರಾಜೀನಾಮೆ ಒತ್ತಾಯಿಸಲಾಗಿತ್ತು. ಇದರ ನಡುವೆಯೂ ಇಂದು ರಾಜ್ಯ ಹೈಕೋರ್ಟ್ ಪ್ರಕರಣ ಸಂಬಂಧ ಸಚಿವ ಬೈರತಿ ಬಸವರಾಜ್ ಗೆ ನೀಡಿರುವಂತ ಸಮನ್ಸ್ ಗೆ ತಡೆಯಾಜ್ಞೆ ನೀಡಿದೆ. ಈ ಮೂಲಕ ಭೈರತಿ ಬಸವರಾಜ್ ಗೆ ಬಿಗ್ ರಿಲೀಫ್ ನೀಡಿದೆ.

Read More »

ಕುಡುಕರ ಅಡ್ಡೆಯಾದ ಶತಮಾನದ ರೈಲ್ವೆ ಪೊಲೀಸ್ ಕ್ವಾಟರ್ಸ್

ಹುಬ್ಬಳ್ಳಿ : ರಾಜ್ಯ ರೈಲ್ವೆ ಪೊಲೀಸರು ವಾಸಿಸುವಂತಹ ಕ್ವಾಟರ್ಸ್ ಇದೀಗ ಕುಡುಕರ ಅಡ್ಡೆಯಾಗಿದೆ. ಇದರಿಂದ ಕ್ವಾಟರ್ಸ್​ನಲ್ಲಿ ವಾಸಿಸುವಂತಹ 300ಕ್ಕೂ ಅಧಿಕ ಪೊಲೀಸ್ ಕುಟುಂಬಗಳು ಬಾಡಿಗೆ ಮನೆಯಲ್ಲಿ ಕಾಲ ಕಳೆಯುವಂತಾಗಿದೆ. ಕುಡುಕರ ಅಡ್ಡೆಯಾದ ಶತಮಾನದ ರೈಲ್ವೆ ಪೊಲೀಸ್ ಕ್ವಾಟರ್ಸ್.. ಶೀಘ್ರ ಕ್ರಮಕ್ಕೆ ಸ್ಥಳೀಯರ ಆಗ್ರಹಗದಗ ರಸ್ತೆಯ ನೆಹರು ನಗರದ ಪೊಲೀಸ್ ಕ್ವಾಟರ್ಸ್​ನಲ್ಲಿ ಸುಮಾರು 300 ಕುಟುಂಬಗಳು ‌ನಿಶ್ಚಿಂತವಾಗಿ ವಾಸಿಸುತ್ತಿದ್ದವು. ಆದರೆ, ಕಟ್ಟಡ ಬೀಳ್ಳುವ ಸ್ಥಿತಿಯಲ್ಲಿದ್ದರಿಂದ ಎಲ್ಲರೂ ಕ್ವಾಟರ್ಸ್ ಬಿಟ್ಟು ಬಾಡಿಗೆ ಮನೆಯಲ್ಲಿ …

Read More »

ಹು-ಧಾ ಮಹಾನಗರ ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾದ ನೂತನ ಉಪಾಧ್ಯಕ್ಷರಾಗಿ ರಾಜು ಜೊಸೇಫ್ ನೇಮಕ

ಹುಬ್ಬಳ್ಳಿ: ಹು-ಧಾ ಮಹಾನಗರ ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾದ ನೂತನ ಉಪಾಧ್ಯಕ್ಷರಾಗಿ ರಾಜು ಜೊಸೇಫ್ ಅವರನ್ನು ನೇಮಕ ಮಾಡಲಾಗಿದೆ.ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ನಾಸೀರ ತಂಬೂರಿ ಈ ನೇಮಕದ ಆದೇಶ ಹೊರಡಿಸಿದ್ದಾರೆ. ಜೊಸೇಫ್ ಅವರು ನೇಮಕದ ಆದೇಶ ಪತ್ರವನ್ನು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರಿಂದ ಸ್ವೀಕರಿಸಿದರು.

Read More »

ಧಾರವಾಡದಲ್ಲಿ ಮೊಟ್ಟೆ ಹಿಡಿದು ಪ್ರತಿಭಟನೆ: ಮೊಟ್ಟೆ ವಿರೋಧಿಗಳ ವಿರುದ್ಧ ಧಿಕ್ಕಾರ ಕೂಗಿ ದಲಿತ ಸಂಘಟನೆಗಳ ಆಕ್ರೋಶ .

ಧಾರವಾಡ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿತರಣೆ ಮಾಡುತ್ತಿರುವ ಮೊಟ್ಟೆ ನೀಡುವ ಯೋಜನೆಯನ್ನು ಮುಂದುವರೆಸಬೇಕು‌ ಎಂದು ಅಗ್ರಹಿಸಿ ಹಾಗೂ ಮೊಟ್ಟೆ ವಿರೋಧ ಮಾಡುತ್ತಿರುವುದನ್ನು ಖಂಡಿಸಿ, ಧಾರವಾಡದಲ್ಲಿ ವಿವಿಧ ದಲಿತ ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ‌ ಸಮತಾ ಸೇನೆ ಹಾಗೂ ವಿವಿಧ ದಲಿತ ಸಂಘಟನೆಯ ನೇತೃತ್ವದಲ್ಲಿ, ನಗರದ ನಗರದ ಜನರು ಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ, ಕಾರ್ಯಕರ್ತರು ಮೊಟ್ಟೆ ಹಿಡಿದು ವಿರೋಧಿಗಳ ವಿರುದ್ಧ ಧಿಕ್ಕಾರ …

Read More »

ಎ‌ಮ್ ಇ ಎಸ್ ಪುಂಡಾಟ- ರಾಜಕೀಯ ಬೆಳೆ ಬೇಯಿಸಲು ಮತ್ತು ಒಕ್ಕೂಟ ವ್ಯವಸ್ಥೆ ಹಾಳು ಮಾಡುತ್ತಿದ್ದಾರೆ- ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ಕೆಲವರು ಸಮಾಜದ ಹೆಸರು ಕೆಡಿಸುತ್ತಿದ್ದಾರೆ. ಎಲ್ಲರನ್ನೂ ಅಪರಾಧಿ, ಆರೋಪಿಗಳು ಎಂದು ನೋಡಬಾರದು. ಕೆಲವರು ಈ ರೀತಿಯ ವರ್ತನೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾ ಪುರುಷರ ಪ್ರತಿಮೆಗೆ ಕಪ್ಪು‌ಮಸಿ, ಪ್ರತಿಮೆ ಕೆಡವಿದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಅದನ್ನು ನಾನು ಖಂಡಿಸುತ್ತೇನೆ. ರಾಜಕೀಯ ಬೇಳೆ ಬೇಯಿಸಲು ಈ ರೀತಿ ಮಾಡುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆ ಹಾಳು ಮಾಡುತ್ತಿದ್ದಾರೆ ಎಂದರು. ಅವರು ನಮ್ಮ ಹೆಮ್ಮೆಯ ಮಹಾಪುರುಷರು. …

Read More »
Featured Video Play Icon

ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರ ಸಾವಿರಾರು ಗೋವುಗಳನ್ನ ರಕ್ಷಣೆ ಮಾಡಲಾಗಿದೆ-ಪ್ರಭು ಚವ್ಹಾಣ್

Read More »

ಬಿಜೆಪಿಯಿಂದ ಮಲ್ಲಿಕಾರ್ಜುನ ಹಾವೇರಿಯನ್ನು 6 ವರ್ಷ ಉಚ್ಛಾಟನೆ

ಹುಬ್ಬಳ್ಳಿ:ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಹಾವೇರಿಯವರನ್ನು ಬಿಜೆಪಿಯಿಂದ 6 ವರ್ಷ ಉಚ್ಛಾಟನೆ ಮಾಡಿ ಆದೇಶ ಹೊರಿಡಿಸಲಾಗಿದೆ. ಪಕ್ಷದ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಸೂಚನೆಯಂತೆ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಮಲ್ಲಿಕಾರ್ಜುನ ಹಾವೇರಿಯನ್ನ ಉಚ್ಛಾಟಿಸಿದ್ದಾರೆ. ಧಾರವಾಡ ದ್ವಿಸದಸ್ಯ ಸ್ಥಾನದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಹಾವೇರಿ ಸ್ಪರ್ಧಿಸಿದ್ದರು. ಪಕ್ಷದ ಶಿಸ್ತು ಉಲ್ಲಂಘಿಸಿದ್ದಕ್ಕೆ ಮಲ್ಲಿಕಾರ್ಜುನನನ್ನು ಬಿಜೆಪಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ. …

Read More »

ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಇಲ್ಲಿದೆ ಖುಷಿ ಸುದ್ದಿ

ದೆಹಲಿ: ರೈಲು ಪ್ರಯಾಣ ಆರಾಮದಾಯಕ ಪ್ರಯಾಣಗಳಲ್ಲಿ ಒಂದು. ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ಸೇವೆಗಳನ್ನು ಶುರು ಮಾಡ್ತಿರುತ್ತದೆ. ಈಗ ಮಹಿಳಾ ಪ್ರಯಾಣಿಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಮಹಿಳೆಯರು ರೈಲಿನಲ್ಲಿ ಸೀಟಿನ ಬಗ್ಗೆ ಚಿಂತಿಸಬೇಕಾಗಿಲ್ಲ. ಬಸ್ ಮತ್ತು ಮೆಟ್ರೋ ರೈಲುಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸೀಟುಗಳ ವ್ಯವಸ್ಥೆ ಇರುವಂತೆ ಭಾರತೀಯ ರೈಲ್ವೇ ಕೂಡ ಮಹಿಳೆಯರಿಗೆ ಸೀಟುಗಳನ್ನು ಮೀಸಲಿಡಲಿದೆ. ರೈಲುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ವಿಶೇಷ ಬರ್ತ್‌ಗಳನ್ನು ನೀಡಲು ರೈಲ್ವೆ ಇಲಾಖೆ ಮುಂದಾಗಿದೆ. …

Read More »

ಆರ್’ಎಸ್‌ಎಸ್ ಕೈಗೊಂಬೆಯಾದ ಬಳಿಕ ಗೂಳಿಹಟ್ಟಿ ಚಂದ್ರಶೇಖರ್ ನಿಂದ ಮತಾಂತರ ವಿಚಾರ ಪ್ರಸ್ತಾಪ; ಕಾಂಗ್ರೆಸ್

ಬೆಂಗಳೂರು: ಹಲವು ವರ್ಷಗಳ ಹಿಂದೆಯೇ ತಮ್ಮ ತಾಯಿ ಮತಾಂತರಗೊಂಡಿದ್ದರೂ ಈಗೇಕೆ ಗೂಳಿಹಟ್ಟಿ ಚಂದ್ರಶೇಖರ್ ಅವರು ಮತಾಂತರ ವಿಚಾರವನ್ನು ಪ್ರಸ್ತಾಪಿಸಿದರು ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಧ್ರುವನಾರಾಯಣ್ ಅವರು, ಗೂಳಿಹಟ್ಟಿ ಚಂದ್ರಶೇಖರ್ ಅವರ ತಾಯಿ ಹಲವು ವರ್ಷಗಳ ಹಿಂದೆಯೇ ಮತಾಂತರಗೊಂಡಿದ್ದರು. ಆದರೆ, ಈಗ ಆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಆರ್’ಎಸ್‌ಎಸ್ ಕೈಗೊಂಬೆಯಾದ ಬಳಿಕ ಗೂಳಿಹಟ್ಟಿ ಅವರು ಈ ವಿಚಾರವನ್ನು …

Read More »