Breaking News

ಹುಬ್ಬಳ್ಳಿ

ವಿಭಿನ್ನ ಧನ್ಯವಾದ ತಿಳಿಸಿದ ಖಾಕಿಪಡೆ

ಹುಬ್ಬಳ್ಳಿ: ನೀವುಗಳು ನಮ್ಮ ಇಲಾಖೆಯ ಮೇಲಿಟ್ಟಿರುವ ಪ್ರೀತಿ ವಿಶ್ವಾಸದಿಂದಲೂ, ಇಲಾಖೆಯ ಕಾರ್ಯವೈಖರಿಯನ್ನು ತಮ್ಮ ಮೀಡಿಯಾದ ಮುಖಾಂತರ ಸಾರ್ವಜನಿಕರಿಗೆ ತಲುಪಿಸಿದ್ದದರ ಮುಖೇನ ಜನರಲ್ಲಿ ಹೊಸ ಭಾವವನ್ನು ಬಿತ್ತಿದುದರ ಪರಿಣಾಮ ಹುಬ್ಬಳ್ಳಿ – ಧಾರವಾಢ ನಗರಗಳ ವ್ಯಾಪ್ತಿಯಲ್ಲಿ ಶ್ರೀ ಗಣೇಶೋತ್ಸವವೂ, ಈದ್ ಮಿಲಾದ್ ಹಬ್ಬದ ಉತ್ಸವವೂ ಯಾವುದೇ ಸಮಸ್ಯೆಗಳಿಲ್ಲದೆ ನಿರಾತಂಕವಾಗಿ ಸಂಪನ್ನಗೊಂಡಿದೆ. ಆದ್ದರಿಂದ ತಮಗೆಲ್ಲರಿಗೂ ನನ್ನ ವೈಯ್ಯಕ್ತಿಕವಾಗಿ ವಂದನೆಗಳನ್ನು ಸಲ್ಲಿಸಲಿಷ್ಟಪಡುತ್ತೇನೆ. ಕವಿ ಅಡಿಗರು ತಮ್ಮ ಕವನದಲ್ಲಿ ಕಟ್ಟುವೆವು ನಾವು ಹೊಸನಾಡೊಂದನು, ರಸದ ಬೀಡೊಂದನು. …

Read More »

ಜನರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ನೀರ್ಮಾಣ, ಯಾವುದೇ ಉದ್ದೇಶವಿಲ್ಲ: ಪ್ರಸಾದ್ ಅಬ್ಬಯ್ಯ

ಹುಬ್ಬಳ್ಳಿ: ಮಂಟೂರು ರಸ್ತೆಯಲ್ಲಿ ಸ್ಮಶಾನದಲ್ಲಿ ನಿರ್ಮಿಸ್ತಿರುವ ಇಂದಿರಾ ಕ್ಯಾಂಟೀನ್ ವಿವಾದಕ್ಕೆ ಕಾರಣವಾಗಿದೆ. ಜನರ ಅನುಕೂಲಕ್ಕಾಗಿ ಈ ಕ್ಯಾಂಟೀನ್ ನಿರ್ಮಿಸಿದೆ. ಯಾವುದೇ ಉದ್ದೇಶವಿಲ್ಲವೆಂದು ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ರಾಜಕೀಯ ಪ್ರೇರಿತವಾದ ವಿರೋಧ. ಅಲ್ಲಿನ ಜನ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಇದರಿಂದ ರಾಜಕೀಯ ಲಾಭ ಪಡೆಯಲು ಕೆಲವರು ವಿರೋಧ ಮಾಡುತ್ತಿದ್ದಾರೆ. ಒಂದು ವೇಳೆ ಅಲ್ಲಿನ ಜನ ವಿರೋಧ ವ್ಯಕ್ತಪಡಿಸಿದ್ರೆ ಇಂದಿರಾ ಕ್ಯಾಂಟಿನ್ ಸ್ಥಳಾಂತರ …

Read More »

ಹುಬ್ಬಳ್ಳಿಯಲ್ಲಿ ಈದ್ ಮಿಲಾದ್ ಹಬ್ಬದ ಅದ್ದೂರಿಯಾಗಿ ಆಚರಣೆ

ಹುಬ್ಬಳ್ಳಿ: ನಗರದ ದುರ್ಗದಬೈಲ್ ದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತವಾಗಿ ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಆಚರಣೆ ಮಾಡಲಾಯಿತು. ಮೆರವಣಿಗೆಗೆ ಅಂಜುಮನ್‌ ಸಂಸ್ಥೆಯ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ವಿದ್ಯುಕ್ತವಾಗಿ ಚಾಲನೆ ನೀಡಿದರು. ಇನ್ನೂ ಹುಬ್ಬಳ್ಳಿಯ ಹೃದಯ ಭಾಗದಲ್ಲಿರು ದುರ್ಗದ ಬೈಲ್ ನಲ್ಲಿ ಮುಸ್ಲಿಂ ಬಾಂಧವರು ಮೆರವಣಿಗೆ ಮೂಲಕ ಹುಬ್ಬಳ್ಳಿಯ ವಿವಿಧ ಬೀದಿಗಳಲ್ಲಿ ಸಂಚರಿಸುವ ಮೂಲಕ ಆಚರಣೆ ಮಾಡಿದರು. ಇದೇ ವೇಳೆ ಹುಬ್ಬಳ್ಳಿಯ ಆಟೋ ಚಾಲಕರ ಹಾಗೂ ಮಾಲೀಕರ ಸಂಘದಿಂದ …

Read More »

ಸರ್ಕಾರದ ವಿರುದ್ಧ ಕಿಡಿಕಾರಿದ ಶಾಸಕ ಮಹೇಶ ಟೆಂಗಿನಕಾಯಿ

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ತುಷ್ಟಿಕರಣ ಮಿತಿಮೀರಿದೆ. ಸರ್ಕಾರದ ತುಷ್ಟಿಕರಣ ನೀತಿಯಿಂದಾಗಿ ರಾಜ್ಯದಲ್ಲಿ ಹೆಚ್ಚು ಗಲಭೆ ಗಲಾಟೆಗಳು ನಡೆಯುತ್ತಿವೆ ಎಂದು ಹುಬ್ಬಳ್ಳಿಯಲ್ಲಿ ಸರ್ಕಾರದ ವಿರುದ್ಧ ಶಾಸಕ ಮಹೇಶ ಟೆಂಗಿನಕಾಯಿ ಕಿಡಿ ಕಾರಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ತುಷ್ಟಿಕರಣದ ನೀತಿಯಿಂದ ಸರ್ಕಾರವೇ ಸಮಸ್ಯೆಗಳನ್ನು ತಂದೊಡ್ಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ಸಂದರ್ಭದಲ್ಲಿ ಗಲಭೆಗಳು ನಡೆಯುತ್ತವೆ ಎಂದರು. ಮಂಗಳೂರಿನಲ್ಲಿ ಮುಸ್ಲಿಂ ಸಮುದಾಯದಿಂದ ಈದ್ ಮಿಲಾದ್ ಮೆರವಣಿಗೆ ವಿಷಯಕ್ಕೆ ಸವಾಲ್ …

Read More »

ಜಿ ಪರಮೇಶ್ವರ ಹೇಳಿಕೆಗೆ ಕಿಡಿಕಾರಿದ ಜೋಶಿ

ಹುಬ್ಬಳ್ಳಿ: ನಾಗಮಂಗಲದಲ್ಲಿ ಶ್ರೀಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಹೋಮ್ ಮಿನಿಸ್ಟರ್ ಜಿ ಪರಮೇಶ್ವರ ಅವರ ಈ ಗಲಾಟೆ ಸಣ್ಣ ಮಟ್ಟದ್ದು ಎಂಬ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು. ನೆಲಮಂಗಲದಲ್ಲಿ ಸಾಕಷ್ಟು ಅಂಗಡಿಗಳು ಬೆಂಕಿಗೆ ಆಹುತಿಯಾಗಿದೆ. ತಲ್ವಾರ್ ಹಾಗೂ ಮಾರಕಾಸ್ತ್ರಗಳು ಓಡಾಡಿವೆ. ಹಲವು ಜನರಿಗೆ ಗಾಯವಾಗಿದೆ. ಇಷ್ಟೆಲ್ಲ ಆದ್ರೂ ಹೋಮ್ ಮಿನಿಸ್ಟರ್ ಇದೊಂದು ಸಣ್ಣ ಗಲಾಟೆ ಎಂದು ಹೇಳ್ತಾರೇ! ಎಂದು ಜೋಶಿ ಖಂಡಿಸಿದರು. …

Read More »

ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣನ ಸರ್ಕಲ್ ನಲ್ಲಿ ಸಹಿ ಅಭಿಯಾನ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ವಖ್ ಬೋರ್ಡ್ ನ 40 ತಿದ್ದುಪಡಿ ಮಸೂದೆಗೆ ಬೆಂಬಲಿಸಿ ಹುಬ್ಬಳ್ಳಿಯಲ್ಲಿಂದು ಶ್ರೀರಾಮ ಸೇನಾ ವತಿಯಿಂದ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣನ ಸರ್ಕಲ್ ನಲ್ಲಿ ಸಹಿ ಅಭಿಯಾನ ಮಾಡಲಾಯಿತು. ಶ್ರೀರಾಮಸೇನಾ ಕಾರ್ಯಕರ್ತರು ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸಹಿ ಸಂಗ್ರಹಿಸುವ ಮೂಲಕ ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದ್ದು, ಕೇಂದ್ರ ಸರ್ಕಾರದ ನಡೆಯನ್ನು ಸ್ವಾಗತಿಸುವ ಮೂಲಕ ಅಭಿಯಾನ ನಡೆಸಿದರು. ಇನ್ನೂ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ಹಾಗೂ ಚೆನ್ನಮ್ಮ ವೃತ್ತದ ಬಳಿಯಲ್ಲಿ ನೂರಾರು …

Read More »

ಪ್ರೈಓವರ್ ಕಾಮಗಾರಿ ವಿರುದ್ಧ ಪ್ರತಿಭಟನೆ

ಹುಬ್ಬಳ್ಳಿ: ಎಎಸ್‌ಐ ತೀವ್ರವಾಗಿ ಗಾಯಗೊಂಡಿದ್ದು, ಈ ನಿಟ್ಟಿನಲ್ಲಿ ಸಮತಾ ಸೇನೆಯ ವತಿಯಿಂದ ಪ್ರೈಓವರ್ ಕಾಮಗಾರಿ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹಳೇಯ ಕೋರ್ಟ ವೃತ್ತ ಹುಬ್ಬಳ್ಳಿಯ ಬಳಿ ನಿನ್ನೆ ನಡೆದ ಫೈಒವರ್‌ ಕಾಮಗಾರಿ ಅವಘಡ ಖಂಡಿಸಿ ಮತ್ತು ಎಎಸ್‌ಐ ಅವರಿಗೆ ಸೂಕ್ತ ಚಿಕಿತ್ಸೆ ಮತ್ತು ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಉಪನಗರ ಠಾಣೆ ಎಎಸ್‌ಐ ಅವರು ಗಾಯಗೊಂಡು ಕೋಮಾ ಸ್ಥಿತಿ ತಲುಪಿದ್ದು ಸೂಕ್ತ ಸುರಕ್ಷಾ ಕ್ರಮವಿಲ್ಲದೆ ಸಾರ್ವಜನಿಕರ ಪ್ರಾಣದೊಂದಿಗೆ …

Read More »

ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಗಲಾಟೆ ವಿಷಯಕ್ಕೆ ಮುತಾಲಿಕ್ ಪ್ರತಿಕ್ರಿಯೆ

ಧಾರವಾಡ : ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಧಾರವಾಡದಲ್ಲಿ ಮಾತನಾಡಿರುವ ಅವರು, ನಾಗಮಂಗಲದಲ್ಲಿ ನಡೆದ ಘಟನೆ ಅತ್ಯಂತ ಅಪರಾಧವಾದದ್ದು. ರಾತ್ರಿ ಮಸೀದಿ ಎದುರು ಗಣೇಶ ಬಂದಾಗ ಕಲ್ಲು ತೂರಾಟ ಹಾಗೂ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಇದರಿಂದ ಗಣಪತಿಗೆ ಧಕ್ಕೆಯಾಗಿದೆ. ಮುಸ್ಲಿಂ ಸಮಾಜ ಇದನ್ನು ವಿಚಾರ ಮಾಡಬೇಕು. ಮುಸ್ಲಿಂರು ಅಲ್ಲಾಹುನ್ನು ಪೂಜೆ ಮಾಡುತ್ತಾರೆ. ನಾವು ಯಾವತ್ತೂ …

Read More »

ಅಪಘಾತ ವಿಮೆ ಜಾರಿಗೆ ತಂದಿರುವ ಸರ್ಕಾರದ ಕ್ರಮ ಸ್ವಾಗತಾರ್ಹ: ಕುಪೇಂದ್ರ ಆಯನೂರು

ಹುಬ್ಬಳ್ಳಿ:ಅಸಂಘಟಿತ ಕಾರ್ಮಿಕರಿಗೆ ಅಂಬೇಡ್ಕರ್ ಸಹಾಯಹಸ್ತ ಯೋಜನೆಯಡಿ ಅಪಘಾತ ವಿಮೆ ಜಾರಿಗೆ ತಂದಿರುವ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದು ರಾಜ್ಯ ಅಸಂಘಟಿತ ಕಾರ್ಮಿಕ ಸಂಘದ ರಾಜ್ಯ ಗೌರವಾಧ್ಯಕ್ಷ ಕುಪೇಂದ್ರ ಆಯನೂರು ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಸಂಘವು ಹೋರಾಟ ಮಾಡುತ್ತಲೇ ಬಂದಿದೆ. ಕಾರ್ಮಿಕ ಸಚಿವ ಸಂತೋಷ ಲಾಡ್ ನಮ್ಮ ಹೋರಾಟಕ್ಕೆ ಸ್ಪಂದಿಸಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದರು.

Read More »

ಸಂತೋಷ ಲಾಡ್ ಜನತಾ ದರ್ಶನಕ್ಕೆ ವಿದ್ಯುಕ್ತವಾಗಿ ಚಾಲನೆ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಜನತಾ ದರ್ಶನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡುವ ಮೂಲಕ ಜನರ ಅಹವಾಲು ಸ್ವೀಕಾರ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಭವನದಲ್ಲಿಂದು ಧಾರವಾಡ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್ ಆಯುಕ್ತ, ಪಾಲಿಕೆ ಆಯುಕ್ತರು, ಮೇಯ‌ರ್, ಉಪ ಮೇಯರ್ ಭಾಗಿಯಾಗಿದ್ದು, ಜಿಲ್ಲಾ ಹಾಗೂ ತಾಲೂಕು ಮಟ್ಟದ …

Read More »