Breaking News

ಜಿ ಪರಮೇಶ್ವರ ಹೇಳಿಕೆಗೆ ಕಿಡಿಕಾರಿದ ಜೋಶಿ

ಹುಬ್ಬಳ್ಳಿ: ನಾಗಮಂಗಲದಲ್ಲಿ ಶ್ರೀಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಹೋಮ್ ಮಿನಿಸ್ಟರ್
ಜಿ ಪರಮೇಶ್ವರ ಅವರ ಈ ಗಲಾಟೆ ಸಣ್ಣ ಮಟ್ಟದ್ದು ಎಂಬ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.

ನೆಲಮಂಗಲದಲ್ಲಿ ಸಾಕಷ್ಟು ಅಂಗಡಿಗಳು ಬೆಂಕಿಗೆ ಆಹುತಿಯಾಗಿದೆ. ತಲ್ವಾರ್ ಹಾಗೂ ಮಾರಕಾಸ್ತ್ರಗಳು ಓಡಾಡಿವೆ. ಹಲವು ಜನರಿಗೆ ಗಾಯವಾಗಿದೆ. ಇಷ್ಟೆಲ್ಲ ಆದ್ರೂ ಹೋಮ್ ಮಿನಿಸ್ಟರ್ ಇದೊಂದು ಸಣ್ಣ ಗಲಾಟೆ ಎಂದು ಹೇಳ್ತಾರೇ! ಎಂದು ಜೋಶಿ ಖಂಡಿಸಿದರು.

ಹೋಮ್ ಮಿನಿಸ್ಟರ್ ಜಿ.ಪರಮೇಶ್ವರ ಪ್ರಕಾರ ನಾಗಮಂಗಲ ಗಲಾಟೆಯಲ್ಲಿ ಒಂದು ವೇಳೆ 10-15 ಜನ ಸಾವನ್ನಪ್ಪಿದರೆ ಮಾತ್ರ ಅದೊಂದು ದೊಡ್ಡ ಗಲಾಟೆ ಅನ್ನೋ ಮನಸ್ಥಿತಿಗೆ ಬಂದಿರೋದು ದುರಂತ ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *