ಧಾರವಾಡ : ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಅವರು, ನಾಗಮಂಗಲದಲ್ಲಿ ನಡೆದ ಘಟನೆ ಅತ್ಯಂತ ಅಪರಾಧವಾದದ್ದು. ರಾತ್ರಿ ಮಸೀದಿ ಎದುರು ಗಣೇಶ ಬಂದಾಗ ಕಲ್ಲು ತೂರಾಟ ಹಾಗೂ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಇದರಿಂದ ಗಣಪತಿಗೆ ಧಕ್ಕೆಯಾಗಿದೆ. ಮುಸ್ಲಿಂ ಸಮಾಜ ಇದನ್ನು ವಿಚಾರ ಮಾಡಬೇಕು. ಮುಸ್ಲಿಂರು ಅಲ್ಲಾಹುನ್ನು ಪೂಜೆ ಮಾಡುತ್ತಾರೆ. ನಾವು ಯಾವತ್ತೂ ಗಲಾಟೆ ಮಾಡಿಲ್ಲ ಎಂದಿದ್ದಾರೆ.
ಮಸೀದಿ ಬಂದಾಗ ವಾದ್ಯ ಬಾರಿಸಬಾರದು ಎಂಬ ನಿಯಮ ಏನಾದರೂ ಇದೆಯಾ? ದೇವಾಲಯ, ಅಂಗಡಿ ಎಲ್ಲ ಕಡೆ ಮೆರವಣಿಗೆ ಇರುತ್ತದೆ. ಕಳೆದ ವರ್ಷ ಇದೇ ಮಸೀದಿ ಎದುರು ಗಲಾಟೆಯಾಗಿದೆ. ಚೆಲುವರಾಯಸ್ವಾಮಿ ಗಲಾಟೆ ಬಗ್ಗೆ ವಿಚಾರ ಮಾಡಬೇಕಿತ್ತು. ಮಸೀದಿಯಲ್ಲಿ ಪೆಟ್ರೋಲ್ ಬಾಂಬ್ ಹೇಗೆ ಬಂತು. ಇದಕ್ಕೆ ಕಾರಣ ಸಚಿವ ಚೆಲುವರಾಯಸ್ವಾಮಿ. ಈ ಬಗ್ಗೆ ಮೊದಲೇ ಸಭೆ ನಡೆಸಬೇಕಿತ್ತು. ಈ ಘಟನೆಗೆ ಕಾರಣ ಯಾರು? ಕಿಡಿಗೇಡಿ ಮುಸ್ಲಿಂರು ಅಲ್ಲಿದ್ದಾರೆ. ಅವರು ಇಡೀ ಸಮಾಜಕ್ಕೆ ಕಳಂಕ. ಅವರು ನಮ್ಮ ದೇವರ ಮೇಲೆ ಕಲ್ಲು ಎಸೆಯುತ್ತಾರಾ? ಮಂಡ್ಯ ಮುಸ್ಲಿಂರನ್ನು ಬ್ಯಾನ್ ಮಾಡಬೇಕು. ಇದಕ್ಕೆ ಹಿಂದೂ ಸಮಾಜ ಕ್ಷಮೆ ಕೊಡುವುದಿಲ್ಲ. ನಾವು ಗಣೇಶನಿಗೆ ಪೂಜೆ ಮಾಡಿ ಕೆಲಸ ಆರಂಭಿಸುತ್ತೇವೆ. ಆ ದೇವರ ಮೇಲೆ ಇವರು ಕಲ್ಲು ಎಸೆದಿದ್ದಾರೆ ಎಂದರು.
ರಾಜ್ಯದಲ್ಲಿರುವುದು ಹಿಂದೂ ವಿರೋಧಿ ಸರ್ಕಾರ. ಚೆಲುವರಾಯಸ್ವಾಮಿ ಕೂಡಲೇ ರಾಜೀನಾಮೆ ನೀಡಬೇಕು. ಈ ಘಟನೆಗೆ ಅವರೇ ಕಾರಣ. ನಾನು ಕೂಡ ನಾಗಮಂಗಲಕ್ಕೆ ಹೋಗುತ್ತೇನೆ ಎಂದು ಮುತಾಲಿಕ್ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

