Breaking News

ಜಿಲ್ಲೆ

ಕಲಾವಿದೆ ಶೀಲಾ ದಿವಾಕರ್ ನಿಧನ

ಮಂಗಳೂರು: ಖ್ಯಾತ ಸಂಗೀತ ಕಲಾವಿದೆ ಶೀಲಾ ದಿವಾಕರ್ ಅವರು ಬುಧವಾರದಂದು (ಜನವರಿ 26) ನಿಧನರಾದರು.ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಅವರು ಇಂದು ಸಾವನ್ನಪ್ಪಿದ್ದಾರೆ. ಕಳೆದ 28 ವರ್ಷಗಳಿಂದ ಸಂಗೀತ ರಂಗದ ನೂರಾರು ಮೇರು ಪ್ರತಿಭೆಗಳಿಗೆ ಗುರುವಾಗಿರುವ ಶೀಲಾ ದಿವಾಕರ್ ಅನಾರೋಗ್ಯದ ಕಾರಣದಿಂದ ಕೆಲ ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

Read More »

ಕರಾವಳಿ ಭಾಗದ ಭಗೀರಥ ಗೆ ಪದ್ಮಶ್ರೀ ಪ್ರಶಸ್ತಿ

ಮಂಗಳೂರು: ‘ಬಂಟ್ವಾಳ ತಾಲ್ಲೂಕಿನ ಅಡ್ಯನಡ್ಕ ಸಮೀಪದ ಅಮೈ ಮಹಾಲಿಂಗ ನಾಯ್ಕ (76 ವರ್ಷ) ಕರಾವಳಿ ಭಾಗದ ಭಗೀರಥ’ ಎಂದೇ ಖ್ಯಾತಿ ಗಳಿಸಿರುವ ಅವರು ಕೃಷಿ ಕ್ಷೇತ್ರದ ಸಾಧನೆಗಾಗಿ 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೃಷಿಗೆ ನೀರು ಹಾಯಿಸಲು ಪಂಪ್ ಸೆಟ್‌ಗಳ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಹಿಂದಿನ ತಲೆಮಾರಿನವರು ಅವಲಂಬಿಸಿದ್ದ ಸುರಂಗ ನೀರಿನ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು, ಇದೇ ವ್ಯವಸ್ಥೆಯಲ್ಲಿ ವಿದ್ಯುತ್‌ ರಹಿತವಾಗಿ ಗುರುತ್ವಾಕರ್ಷಣೆಯ ನೆರವಿನಲ್ಲಿ ಕೃಷಿಗೆ ತುಂತುರು ನೀರಾವರಿ, ಹನಿ …

Read More »

ಮುತ್ತು ಕೊಟ್ಟು ಅಮಾನತು ಆದ ಪ್ರಾಧ್ಯಪಕ ಡಾ. ಲೋಕೇಶ್

ಹಾಸನ: ತರಬೇತಿ ನಿರತ ವೈದ್ಯೆಗೆ ಲಿಫ್ಟ್​ನಲ್ಲಿ ಬಲವಂತವಾಗಿ ಮುತ್ತುಕೊಟ್ಟು ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂದು ಹಿಮ್ಸ್ ಆಸ್ಪತ್ರೆಯ ವೈದ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಪಕ ಡಾ. ಲೋಕೇಶ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ಡಾ.ಲೋಕೇಶ್ ಅವರನ್ನ ಅಮಾನತು ಮಾಡಲಾಗಿದೆ. ಜ.12ರಂದು ಲಿಫ್ಟ್​ನಲ್ಲಿ ತೆರಳುತ್ತಿದ್ದ ತರಬೇತಿ ನಿರತ ವೈದ್ಯೆಗೆ ಡಾ.ಲೋಕೇಶ್​ ಏಕಾಏಕಿ ಮುತ್ತು ಕೊಟ್ಟಿದ್ದಾಗಿ ಸಂತ್ರಸ್ತೆಯು ಹಾಸನ‌ ವೈದ್ಯಕೀಯ ಸಂಸ್ಥೆಗೆ ಜ.14ರಂದು ದೂರು ನೀಡಿದ್ದರು. ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ …

Read More »

ಅಭಿಮಾನಿಗಳ ವಿರುದ್ಧ ಗರಂ ಆದ ಸಿದ್ದರಾಮಯ್ಯ

ಬಾಗಲಕೋಟೆ: ಜಿಲ್ಲೆಯ ಭೇಟಿ ವೇಳೆಯಲ್ಲಿ ಅಭಿಮಾನಿಯೊಬ್ಬ ಸಿದ್ದರಾಮಯ್ಯನವರು ಎಷ್ಟು ಬೇಡ ಬೇಡ ಎಂದರೂ ಸುತ್ತಿದ ರುಮಾಲು ತಂದು ತಲೆಗೆ ಇಟ್ಟಿದ್ದಾನೆ ಅಭಿಮಾನಿ. ಇದರಿಂದ ಸಿಟ್ಟುಗೊಂಡ ಸಿದ್ದರಾಮಯ್ಯನವರು ಅದನ್ನು ಕಿತ್ತೆಸಿದಿದ್ದಾರೆ.  ಭಾರಿ ಗರಂ ಆಗಿರುವ ಘಟನೆಯೊಂದು ನಡೆದಿದೆ. ಬಾದಾಮಿ ತಾಲೂಕಿನ ಕಾತರಕಿ ಗ್ರಾಮಕ್‌ಕೆ ಸಿದ್ದರಾಮಯ್ಯನವರು ಆಗಮನಿಸಿದ್ದರು. ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆಗೆ ಸಿದ್ದರಾಮಯ್ಯ ಬಂದಿದ್ದರು. ಆಗ ಅಲ್ಲಿದ್ದವರು ಆ ಅಭಿಮಾನಿಯಲ್ಲಿ ಬಯ್ಯುವುದನ್ನು ವಿಡಿಯೋದಲ್ಲಿ ಕೇಳಬಹುದು. ಬೇಡ ಎಂದರೂ ಗೊತ್ತಾಗುವುದಿಲ್ಲವಾ ಎಂದು ಅಲ್ಲದ್ದವರು ಗದರಿಸಿದ್ದಾರೆ.

Read More »

ಮೊದಲ ಪ್ರಯತ್ನದಲ್ಲಿಯೇ ಪಿಎಸ್ ಐ ಆದ ಅರುಣ ಮೇಟಿ

ಸವದತ್ತಿ : ತಾಲೂಕಿನ ಚಿಕ್ಕುಂಬಿ ಗ್ರಾಮದಬಡ ಕುಟುಂಬದಲ್ಲಿ ಜನಿಸಿದ ಅರುಣ ಮೇಟಿಇವರು, ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದು ನಂತರ ಪಿಯು ವಿಜ್ಞಾನದಲ್ಲಿ ಶೇ. 80 ರಷ್ಟು ಅಂಕ ಗಳಿಸಿದರು. ಅವರ ಪರಿಶ್ರಮಕ್ಕೆ ಮೊದಲ ಪ್ರಯತ್ನದಲ್ಲಿಯೇ ರಾಜ್ಯಕ್ಕೆ 75 ನೇ ರ‍್ಯಾಂಕ್ ಪಡೆದು ಪಿಎಸ್‍ಐ ಆಗಿ ಆಯ್ಕೆಯಾಗಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಯಾಗಲು ಬಿ.ಎ ಪದವಿ ಪಡೆದಿದ್ದಾರೆ.ಇವರ ತಂದೆ ಕಲ್ಲಪ್ಪ ಸಾರಿಗೆ ಸಂಸ್ಥೆಯ ಬಸ್ ಕಂಡಕ್ಟರ್ ಆಗಿ …

Read More »

ಲಾರಿ ಪಲ್ಟಿ: ಸ್ಥಳದಲ್ಲೇ ಮೂವರು ಸಾವು

ಹಾವೇರಿ : ಮೆಕ್ಕೆಜೋಳದ ಚೀಲಗಳನ್ನು ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಸ್ಥಳದಲ್ಲೇ ಮೂವರು ಸಾವುಪ್ಪಿರುವ ಘಟನೆ ತಾಲೂಕಿನ ಹೊಸರಿತ್ತಿ ಬಳಿಯ ಕೊರಡೂರು ಗ್ರಾಮದ ಹತ್ತಿರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮೃತರನ್ನ ಹಾವೇರಿ ತಾಲೂಕಿನ ಇಚ್ಚಂಗಿ ಗ್ರಾಮದ ಮಂಜುನಾಥ(33), ಮಂಜುನಾಥ (35) ಮತ್ತು ಆನಂದ (37) ಎಂದು ಗುರುತಿಸಲಾಗಿದೆ. ಮೆಕ್ಕೆಜೋಳದ ಚೀಲ ಲೋಡ್ ಮಾಡಿಕೊಂಡು ಹೊಸರಿತ್ತಿ ಗ್ರಾಮದ ಕಡೆಗೆ ಬರುತ್ತಿದ್ದ ವೇಳೆ ಲಾರಿ ಪಲ್ಟಿಯಾಗಿದೆ. ಲಾರಿ ಕೆಳಗೆ‌ ಸಿಲುಕಿಕೊಂಡು ಈ ಮೂವರು ಹಮಾಲರು …

Read More »

ಯಾರಾದ್ರೂ ಪೋನ್ ಮಾಡಿದ್ರೇ ಮೊದ್ಲು ಪೋನ್ ತೆಗಿಯಮ್ಮ : PSI ಗೆ ಕ್ಲಾಸ್ ತೆಗೆದುಕೊಂಡ ಮಾಜಿ ಸಿಎಂ

ಬಾಗಲಕೋಟೆ:  ಪೋನ್ ಯಾವುದೇ ಸಂದರ್ಭದಲ್ಲಿ ಕರೆ ಮಾಡಿದ್ರೂ ಸ್ವೀಕರಿಸಬೇಕು. ಆದ್ರೇ.. ಬಾದಾಮಿಯ ಮಹಿಳಾ ಪಿಎಸ್‌ಐ ಒಬ್ಬರು ಕರೆ ಮಾಡಿದ್ರೂ ಪೋನ್ ಪಿಕ್ ಮಾಡಿಲ್ಲ ಅಂತ ಮಾಜಿ ಸಿಎಂ ಸಿದ್ಧರಾಮಯ್ಯ  ಸಖತ್ ಕ್ಲಾಸ್ ತಗೊಂಡಿದ್ದಾರೆ. ಬಾದಾಮಿಯ ಕೃಷ್ಣಾ ಹೆರಿಟೇಟ್ ಗೆ ಆಗಮಿಸಿದ ಸಂದರ್ಭದಲ್ಲಿ ಎದುರಾದಂತ ಮಹಿಳಾ ಪಿಎಸ್‌ಐ ನೇತ್ರಾವತಿ ಪಾಟೀಲ್ ಅವರ ಮೇಲೆ ಗರಂ ಆದಂತ ಅವರು, ಏನಮ್ಮಾ ನೀನು ಪೋನ್ ಮಾಡಿದ್ರೇ ತೆಗೆಯೋದೇ ಇಲ್ಲ. ಯಾರಾದ್ರೂ ಪೋನ್ ಮಾಡಿದ್ರೇ ಮೊದ್ಲು …

Read More »

ಆರ್ಥಿಕ ನಷ್ಟ: ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಶವವಾಗಿ ಪತ್ತೆ

ಶಿವಮೊಗ್ಗ :ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಕಾಶ್ ಟ್ರಾವೆಲ್ಸ್ ಮಾಲೀಕರಾಗಿದ್ದ ಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಲಾಕ್ ಡೌನ್ ನಿಂದಾಗಿ ವ್ಯವಹಾರದಲ್ಲಿ ಉಂಟಾದ ನಷ್ಟದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಅರ ಮೃತ ದೇಹ ಪತ್ತೆಯಾಗಿದೆ. ಜನವರಿ 21ರ ಸಂಜೆ ನಿಗೂಢವಾಗಿ ನಾಪತ್ತೆಯಾಗಿದ್ದ ಅವರ ಕಾರು, ಮೊಬೈಲ್ ಫೋನ್ ಹೊಸನಗರ ತಾಲೂಕಿನ ಪಟಗುಪ್ಪೆ ಸೇತುವೆ ಮೇಲೆ ಪತ್ತೆಯಾಗಿತ್ತು. ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. …

Read More »

ಸಚಿವರಾಗಬೇಕು ಎಂಬುದು ಹಲವು ಹಿರಿಯ ಶಾಸಕರ ಸಹಜವಾದ ಆಶಯ : ಈಶ್ವರಪ್ಪ

ಶಿವಮೊಗ್ಗ: ಸಂಪುಟ ವಿಸ್ತರಣೆ ಆಗಬೇಕಾಗಿರುವುದು ಸ್ವಾಭಾವಿಕ. ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇದೆ. ಹಾಗಾಗಿ ಸಂಪುಟ ವಿಸ್ತರಣೆ ಅಗತ್ಯವಿದೆ. ಸಚಿವರಾಗಬೇಕು ಎಂಬುದು ಹಲವು ಹಿರಿಯ ಶಾಸಕರ ಸಹಜವಾದ ಆಶಯ. ಅದರಲ್ಲಿ ತಪ್ಪಿಲ್ಲ. ಯಾರಿಗೆ ಸ್ಥಾನ ನೀಡಬೇಕು ಎಂಬುದು ವರಿಷ್ಠರ ತೀರ್ಮಾನ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಖಾಲಿ ಇರುವ ನಾಲ್ಕು ಸ್ಥಾನವನ್ನು ಯಾರಿಗೆ ನೀಡಿದರೆ ಉತ್ತಮ ಎಂಬುದನ್ನು ಹೈಕಮಾಂಡ್ ನಾಯಕರು ತೀರ್ಮಾನಿಸುತ್ತಾರೆ. ಸದ್ಯಕ್ಕೆ ರಾಜ್ಯದಲ್ಲಿ ಬಿಜೆಪಿ …

Read More »

ವೃದ್ಧಾಪ್ಯದಲ್ಲಿ ಆಸರೆಯಾದ 65 ವರ್ಷದ ಮಹಿಳೆ : ಮೈಸೂರುಲ್ಲಿ ಅಪರೂಪದ ನಿಖಾ

ಮೈಸೂರು: ಪತ್ನಿಯನ್ನು ಕಳೆದುಕೊಂಡಿರುವ ಅಪ್ಪನಿಗೆ ವೃದ್ಧಾಪ್ಯದಲ್ಲಿ ಆಸರೆ ಬೇಕೆಂಬ ಕಾರಣಕ್ಕೆ ಮಕ್ಕಳು, ಮೊಮ್ಮಕ್ಕಳು ಸೇರಿ 85 ವರ್ಷದ ವೃದ್ಧನಿಗೆ65 ವರ್ಷದ ಮಹಿಳೆ ಮದುವೆ ಮಾಡಿಸಿದ್ದಾರೆ.ಮೈಸೂರಿನ ಉದಯಗಿರಿಯ ಗೌಸಿಯ ನಗರದ ನಿವಾಸಿ, ಕುರಿ ವ್ಯಾಪಾರಿಯಾಗಿರುವ ಹಾಜಿ ಮುಸ್ತಫಾ ಅವರನ್ನು ಮೊಮ್ಮಕ್ಕಳು ಮುಂದೆ ನಿಂತು ಮದುವೆ ಮಾಡಿಸಿರುವ  ಅಪರೂಪದ ಘಟನೆ ಮೈಸೂರಿನಲ್ಲಿ ನಡೆದಿದೆ. ಮುಸ್ತಫಾಗೆ ಸದ್ಯ 9 ಜನ ಮಕ್ಕಳು. ಎಲ್ಲರಿಗೂ ಮದುವೆಯಾಗಿದ್ದು, ಮೊಮ್ಮಕ್ಕಳೂ ಇದ್ದಾರೆ. ಎಲ್ಲರೂ ಬೇರೆ ಬೇರೆ ಕೆಲಸದಲ್ಲಿ ಇರುವ ಕಾರಣ …

Read More »