Breaking News

ಜಿಲ್ಲೆ

ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ವಿಧಿವಶ

ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.ಖಾಸಗಿ ಕಾರ್ಯಕ್ರಮಕ್ಕೆಂದು ಶುಕ್ರವಾರ ಹುಬ್ಬಳ್ಳಿಗೆ ತೆರಳಿದ್ದ ಅವರಿಗೆ ಹೃದಯಾಘಾತ ಉಂಟಾಗಿದೆ. ಕೂಡಲೇ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.ಕಳೆದ ತಿಂಗಳು ವಿಷಾಹಾರ ಸೇವನೆಯಿಂದಾಗಿ ಅವರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.56 ವರ್ಷದ ಶಿವಳ್ಳಿ 1999ರಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ದಿ. ಎಸ್. ಬಂಗಾರಪ್ಪ ಅವರ ಬೆಂಬಲಿಗರಾಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ 3 …

Read More »

ಕಟ್ಟಡ ಕುಸಿತ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ; ಸಿಎಂ..

ಧಾರವಾಡ ಕುಮಾರೇಶ್ವರ ನಗರದಲ್ಲಿ ಮಂಗಳವಾರ ಮಧ್ಯಾಹ್ನ ನಿರ್ಮಾಣ ಹಂತದಲ್ಲಿದ್ದ ವಾಣಿಜ್ಯ ಕಟ್ಟಡವೊಂದು ಕುಸಿದ ತಕ್ಷಣ ರಕ್ಷಣಾ ಕಾರ್ಯಾಚರಣೆ ತ್ವರಿತವಾಗಿ ಆರಂಭಿಸಿ ಇದುವರೆಗೆ 54 ಜನರ ಜೀವ ರಕ್ಷಣೆ ಮಾಡಲಾಗಿದೆ. 13 ಜನ ಮೃತಪಟ್ಟಿದ್ದಾರೆ ಅವಶೇಷಗಳಡಿ ಇನ್ನೂ ಸುಮಾರು 12 ರಿಂದ 14 ಜನ ಇರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯ ಮುಂದುವರೆಯಲಿದೆ. ಘಟನೆ ಕುರಿತು ಮ್ಯಾಜಿಸ್ಟ್ರೇಟ್ ಹಂತದ ತನಿಖೆ ನಡೆಸಲು ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಇನ್ನೂ ಉನ್ನತ ತನಿಖೆಗೂ ಸರ್ಕಾರ …

Read More »

ಕಟ್ಟಡ ಕುಸಿದ ಸ್ಥಳಕ್ಕೆ ಮುಖ್ಯಮಂತ್ರಿ ಭೇಟಿ

ಧಾರವಾಡ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ಸಂಜೆ ಧಾರವಾಡಕ್ಕೆ ಭೇಟಿ ನೀಡಿ ಕಟ್ಟಡ ಕುಸಿದ ಸ್ಥಳ ಪರಿಶೀಲನೆ ನಡೆಸಿದರು.ಧಾರವಾಡದಲ್ಲಿ ಕಟ್ಟಡ ಕುಸಿದ ಸ್ಥಳ ಪರಿಶೀಲನೆ ನಂತರ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾದ ತಂಡಗಳೊಂದಿಗೆ ಮಾತುಕತೆ ನಡೆಸಿ ವಿವರಗಳನ್ನು ಪಡೆದುಕೊಂಡರು. ಬಳಿಕ ಅವರು ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದರು.ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಜಿಲ್ಲಾಧಿಕಾರಿಗಳು ಈಗಾಗಲೇ ಪ್ರಕರಣದಲ್ಲಿ ಮೃತಪಟ್ಟವರಿಗೆ 2 ಲಕ್ಷ ರೂಪಾಯಿ ಪರಿಹಾರ …

Read More »

ರಸ್ತೆಯಲ್ಲಿಯೇ 13 ಮೊಟ್ಟೆಗಳನ್ನಿಟ್ಟ ನಾಗರಹಾವು..!

ಮಂಡ್ಯ: ರಸ್ತೆಯಲ್ಲೇ ನಾಗರಹಾವುವೊಂದು 13 ಮೊಟ್ಟೆಯಿಟ್ಟ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಶಿಕ್ಷಕರ ಬಡಾವಣೆಯ ರವಿ ಎಂಬುವವರ ಮನೆಯ ಆವರಣದಲ್ಲಿ ಹಾವು ಸೇರಿಕೊಂಡಿತ್ತು. ರವಿ ಅವರ ಮಾಹಿತಿ ಮೇರೆಗೆ ಉರಗ ತಜ್ಞ ಮನ. ಪ್ರಸನ್ನಕುಮಾರ್ ಸ್ಥಳಕ್ಕೆ ಆಗಮಿಸಿ, ಹಾವು ರಕ್ಷಣೆ ಮಾಡಿದ್ದಾರೆ. ಇದೇ ವೇಳೆ ಹಾವು ಮೊಟ್ಟೆಯಿಡಲು ಶುರು ಮಾಡಿದ್ದು, ಒಟ್ಟು 13 ಮೊಟ್ಟೆಗಳನ್ನು ನಾಗರಹಾವು ಇಟ್ಟಿದೆ. ಉರಗತಜ್ಞ ಮೊದಲಿಗೆ ಹಾವನ್ನು ರಕ್ಷಿಸಿ ಬೇರೆಡೆ ಬಿಟ್ಟಿದ್ದಾರೆ. …

Read More »

ಕಟ್ಟಡ ದುರಂತ; ಸಾವಿನ ಸಂಖ್ಯೆ 9ಕ್ಕೆ ಏರಿಕೆ

ಧಾರವಾಡ: ಕಟ್ಟಡ ದುರಂತದಲ್ಲಿ ಮೃತರ ಸಂಖ್ಯೆ 9ಕ್ಕೆ ಏರಿಕೆ ಆಗಿದೆ. ಇಂದು ಕೂಡ ರಕ್ಷಣಾಕಾರ್ಯ ಮುಂದುವರಿದಿದ್ದು, ಇಬ್ಬರ ಶವವನ್ನ ಹೊರಕ್ಕೆ ತರಲಾಗಿದೆ. ಅದರಲ್ಲಿ 8 ವರ್ಷದ ದಿವ್ಯಾ ಎಂಬ ಬಾಲಕಿ ಹಾಗೂ ಮತ್ತೋರ್ವ ಮಹಿಳೆಯ ಮೃತದೇಹವನ್ನ ಹೊರಕ್ಕೆ ತರಲಾಗಿದೆ. ಮಹಿಳೆ ಮೇಲೆ ಕಟ್ಟಡದ ಫಿಲ್ಲರ್​​ ಬಿದ್ದು ಕಾರಣ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ.ಮಾ. 19ರಂದು ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಸಂಪೂರ್ಣ ನೆಲಸಮವಾಗಿತ್ತು. ಕಟ್ಟಡದ ಅವಶೇಷಗಳ …

Read More »

ಕೆಎಸ್​ಆರ್​ಟಿಸಿ-ಕಾರು ನಡುವೆ ಡಿಕ್ಕಿ; ನಾಲ್ವರ ದುರ್ಮರಣ

ಹಾಸನ: ಕೆಎಸ್​ಆರ್​ಟಿಸಿ ಬಸ್​ ಹಾಗೂ ಕಾರು​ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಸಕಲೇಶಪುರ ತಾಲೂಕು ಮಾರನಹಳ್ಳಿ ಬಳಿ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಘಟನೆ ನಡೆದಿದೆ. ಮಂಗಳೂರು ಕಡೆಯಿಂದ ಬರುತ್ತಿದ್ದ ಬಸ್​ಗೆ ಸಕಲೇಶಪುರದ ಕಡೆಯಿಂದ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಸಿಸಿಬಿ ಅಧಿಕಾರಿಗಳ ಸಹಾಯದಿಂದಲೇ ಜನಾರ್ದನ ರೆಡ್ಡಿ ಎಸ್ಕೇಪ್…?

ಬೆಂಗಳೂರು: ಆ್ಯಂಬಿಡೆಂಟ್ ಮಾರ್ಕೆಟಿಂಗ್ ಮನಿ ಎಕ್ಸ್‌ಚೇಂಜ್ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಜನಾರ್ದನ ರೆಡ್ಡಿಗೆ ಎಸ್ಕೇಪ್ ಆಗಲು ಸಿಸಿಬಿ ಅಧಿಕಾರಿಗಳೇ ಸಹಾಯ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಜನಾರ್ದನ್ ರೆಡ್ಡಿ ಅವರನ್ನ ಭೇಟಿ ಮಾಡುವ ನೆಪದಲ್ಲಿ ರೆಡ್ಡಿ ನಿವಾಸ ಪಾರಿಜಾತಗೆ ಹೋಗಿ ಮಾಹಿತಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ ಬಳಿಕ ಅಂದರೆ ನವೆಂಬರ್ 4 ರಂದು ರಾಜ್ಯದಿಂದ ರೆಡ್ಡಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗ್ತಿದೆ. ಹೈದ್ರಾಬಾದ್​ನಲ್ಲಿ ರೆಡ್ಡಿ …

Read More »

ಅಕ್ರಮವಾಗಿ ಬೆಳೆದಿದ್ದ 109 ಕೆ.ಜಿ.

ಗುಡಿಬಂಡೆ ತಾಲೂಕಿನ ಯರಲಕ್ಕೇನಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿದ ಡಿಸಿಬಿ ಪೊಲೀಸರು ಜೋಳದ ಬೆಳೆ‌ ನಡುವೆ ಬೆಳೆದಿದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಶಿವಪ್ಪ ಎಂಬಾತನಿಗೆ ಸೇರಿದ ಜಮೀನಿನಲ್ಲಿ ಗಾಂಜಾ ಬೆಳೆಯಲಾಗುತ್ತಿತ್ತು. ಲಕ್ಷಾಂತರ ಮೌಲ್ಯದ ಗಾಂಜಾ ಗಿಡಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಡಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »

ಬಿಮ್ಸ್ ನಲ್ಲಿ ಸಿಗ್ತಿಲ್ಲ ಬಾಣಂತಿಯರಿಗೆ ಬಿಸಿ ನೀರು..

ಬೀದರ್ ಬ್ರೀಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಬಾನಂತಿಯರಿಗೆ ಸಿಗುತ್ತಿಲ್ಲ ಬಿಸಿ ನೀರು ಬಿಸಿ ನೀರುಸಿಗದೆ ಚಳಿಯಲ್ಲಿ ಬಿಸಿ ನೀರು ತರಲು ಬಾನಂತಿಯರ ಪೋಷಕರು ಪರದಾಟ 150 ಕೋಟಿ ರೂಪಾಯಿ ಸುರಿದು ಕಟ್ಟಿದ ಕಟ್ಟಡದಲ್ಲಿಲ್ಲ ಬಾನಂತಿಯರಿಗೆ ಬೇಕಾದ ಸೌಲಭ್ಯ ಸೋಲಾರ್ ವಾಟರ್ ಹೀಟರ್, ಗೀಜರ್ ಇಲ್ಲದೇ ಬಿಸಿ ನೀರು ಸಿಗದೆ ಪರದಾಟ ನಡೆಸಬೇಕಾಗಿದೆ ರೋಗಿಗಳು 10 ರೂಪಾಯಿಗೆ ಒಂದು ಬಾಟಲ್ ಬಿಸಿ ನೀರು ತಂದು ಬಾನಂತಿಯರಿಗೆ ಕೊಡುತ್ತಿರುವ ಪೋಷಕರು ಬಾನಂತಿಯರ ನೋವು ಆಲಿಸಬೇಕಾದ …

Read More »

ಕೈ ನಾಯಕನ ಕಾಲಿಗೆರಗಿದ ಬಿಜೆಪಿ ಉಪಮೇಯರ್

ವಿಜಯಪುರ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಹಮೀದ್ ಮುಶ್ರಿಫ್ ಗೆ ಕಾಲು ಮುಗಿದು ನಮಸ್ಕರಿಸಿದ ವಿಜಯಪುರ ಉಪಮೇಯರ್ ಗೋಪಾಲ ಘಟಕಾಂಬಳೆ ಬಿಜೆಪಿ ಉಪಮೇಯರ್ ಗೋಪಾಲ ಘಟಕಾಂಬಳೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವಿನ ಬಳಿಕ ಕಾಲು ಮುಟ್ಟಿ ನಮಸ್ಕರಿಸಿದ ಗೋಪಾಲ ಘಟಕಾಂಬಳೆ ಹಮೀದ ಮುಶ್ರಿಫ್ ವಿಧಾನಸಭೆ ಚುನಾವಣೆಯಲ್ಲಿ ಯತ್ನಾಳ ವಿರುದ್ಧ ಸೋತ ಕಾಂಗ್ರೆಸ್ ಅಭ್ಯರ್ಥಿ.

Read More »