Breaking News

ಸಿಸಿಬಿ ಅಧಿಕಾರಿಗಳ ಸಹಾಯದಿಂದಲೇ ಜನಾರ್ದನ ರೆಡ್ಡಿ ಎಸ್ಕೇಪ್…?

ಬೆಂಗಳೂರು: ಆ್ಯಂಬಿಡೆಂಟ್ ಮಾರ್ಕೆಟಿಂಗ್ ಮನಿ ಎಕ್ಸ್‌ಚೇಂಜ್ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಜನಾರ್ದನ ರೆಡ್ಡಿಗೆ ಎಸ್ಕೇಪ್ ಆಗಲು ಸಿಸಿಬಿ ಅಧಿಕಾರಿಗಳೇ ಸಹಾಯ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಜನಾರ್ದನ್ ರೆಡ್ಡಿ ಅವರನ್ನ ಭೇಟಿ ಮಾಡುವ ನೆಪದಲ್ಲಿ ರೆಡ್ಡಿ ನಿವಾಸ ಪಾರಿಜಾತಗೆ ಹೋಗಿ ಮಾಹಿತಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ ಬಳಿಕ ಅಂದರೆ ನವೆಂಬರ್ 4 ರಂದು ರಾಜ್ಯದಿಂದ ರೆಡ್ಡಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗ್ತಿದೆ. ಹೈದ್ರಾಬಾದ್​ನಲ್ಲಿ ರೆಡ್ಡಿ ತಲೆ ಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸಿಸಿಬಿಯ ಸ್ಪೆಷಲ್ ಟೀಂ ಜನಾರ್ದನ ರೆಡ್ಡಿಗಾಗಿ ಹುಡುಕಾಟ ನಡೆಸುತ್ತಿದೆ. ಇನ್ನು, ಜನಾರ್ದನ ರೆಡ್ಡಿಗೆ ಎಸ್ಕೇಪ್ ಆಗಲು ಸಹಾಯ ಮಾಡಿದ್ದಾರೆ ಎನ್ನಲಾಗಿರುವ ಅಧಿಕಾರಿಯನ್ನೂ ಬಂಧಿಸಲು ಸಿಸಿಬಿ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

Share News

About Shaikh BIG TV NEWS, Hubballi

Check Also

ಬಳ್ಳಾರಿಯ ದರೋಜಿ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ!ಕರಡಿಯ ವಾಸಸ್ಥಾನ ಎಂದೇ ಪ್ರಸಿದ್ದಿಯಾದ ಗುಡ್ಡ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ದರೋಜಿ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗಿಸಿ ಹೊತ್ತಿ ಉರಿಯುತ್ತಿದೆ.400ಕ್ಕೂ ಹೆಚ್ಚು ಕರಡಿಗಳು ಸೇರಿದಂತೆ …

Leave a Reply

Your email address will not be published. Required fields are marked *