Breaking News

ಯುವಕನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ… ವಿಡಿಯೋ ವೈರಲ್, ಪೊಲೀಸರಿಂದ ತನಿಖೆ

ವಿಜಯಪುರ: ನಾಲ್ಕೈದು ಯುವಕರು ಸೇರಿಕೊಂಡು ಯುವಕನೋರ್ವನಿಗೆ ಅಮಾನವೀಯವಾಗಿ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸರು ತನಿಖೆ ಕೈಕೊಂಡಿದ್ದಾರೆ. ವಿಜಯಪುರ ನಗರದ ನಿವಾಸಿ ಪೈಗಂಬರ್ ಮುಲ್ಲಾ ಎಂಬಾತನೇ ಹಲ್ಲೆಗೆ ಒಳಗಾದ ಯುವಕ ಎನ್ನಲಾಗಿದೆ. ಥಳಿತದ ವಿಡಿಯೋ ಹೊರಬಿದ್ದ ಬೆನ್ನಲ್ಲೆ ಆತನೂ ಸಹ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ. “ಇದು ಇತ್ತೀಚೆಗೆ ನಡೆದ ಜಗಳವಾಗಿದೆ. ಈ ಮೊದಲು ನಾನೇ ಅವರನ್ನು ಬೈದಿದ್ದೆ. ಹೀಗಾಗಿ ಜಾವೇದ್ ಎಂಬಾತ ನನ್ನನ್ನು ಕರೆದುಕೊಂಡು ಬಂದಿದ್ದ. ನನ್ನ ತಪ್ಪಿಗೆ ಶಿಕ್ಷೆಯಾಗಿದೆ” ಎಂಬುವುದಾಗಿ ಆತ ಹೇಳಿಕೊಂಡಿದ್ದಾನೆ. ಆದರೆ, ಯಾವುದೇ ಪೊಲೀಸ್ ದೂರು ನೀಡಲಿಲ್ಲ. ಈ ವಿಡಿಯೋಗಳನ್ನು ಆಧರಿಸಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಈ ಬಗ್ಗೆ ಎಸ್‌ಪಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯಿಸಿ, “ಸಾಮಾಜಿಕ ಮಾಧ್ಯಮಗಳಲ್ಲಿ ಎರಡೂ ವಿಡಿಯೋಗಳು ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಇದುವರೆಗೂ ಹಲ್ಲೆಗೆ ಒಳಾಗದ ಯುವಕ ಯಾವುದೇ ಪೊಲೀಸ್ ಠಾಣೆಯನ್ನು ಸಂಪರ್ಕಿಸಿಲ್ಲ. ಆತನ ಹೇಳಿಕೆ ದಾಖಲಿಸಿಕೊಳ್ಳುವ ನಿಟ್ಟಿನಲ್ಲಿ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಆತನ ಹೇಳಿಕೆ ದಾಖಲಿಸಿಕೊಂಡ ನಂತರ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Share News

About BigTv News

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *