BigTv News
March 30, 2025
Breaking News, ಬಾಗಲಕೋಟೆ
ಮಹಾಲಿಂಗಪುರ-ಮುಧೋಳ್ ಮಾರ್ಗದ ಮಳಲಿ ಬಳಿ ಅಪಘಾತದ ನಡೆದಿದೆ. ಮುಗಳಖೋಡದಿಂದ ಮಳಲಿ ಕಡೆಗೆ ಬೈಕ್‌ನಲ್ಲಿ ದಂಪತಿ ಹೊರಟಿದ್ದರು. ಇದೇ ವೇಳೆ ಕೊಲ್ಹಾಪುರದಿಂದ ಯಾದಗಿರಿ ಕಡೆಗೆ ಬಸ್ ಹೊಗುತ್ತಿತ್ತು. ಈ ವೇಳೆ ಬಸ್ ಮತ್ತು ಬೈಕ್ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಇನ್ನು ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಸ್ವಾಗತ ಕಮಾನು ನೆಲಕ್ಕುರುಳಿದ್ದು, ಬಸ್‌ನಲ್ಲಿದ್ದ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಿಕ್ಕೋಡಿ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೀಡಾಗಿದ್ದು, ಸ್ಥಳಕ್ಕೆ ಮುಧೋಳ್ ಪೊಲೀಸರು ಭೇಟಿ ನೀಡಿ …
Read More »
BigTv News
March 26, 2025
Breaking News, Crime, ಶಿವಮೊಗ್ಗ
ಜಿಲ್ಲಾ ಖಜಾನೆಯಲ್ಲಿಯೇ ಕರ್ತವ್ಯ ಮುಂದುವರಿಸಲು ಸಿಬ್ಬಂದಿಯೋರ್ವರಿಂದ ರೂ.5 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು ಹಣ ಪಡೆಯುವಾಗಲೇ ರೆಡ್ಹ್ಯಾಂಡ್ ಆಗಿ ಡಿವೈಎಸ್ಪಿ ಟಿ.ಪಿ.ಕೃಷ್ಣಮೂರ್ತಿ ಎಂಬುವವರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.ಶಿವಮೊಗ್ಗದ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ಕೃಷ್ಣಮೂರ್ತಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಪೊಲೀಸ್ ಸಿಬ್ಬಂದಿಯೊಬ್ಬರಿಂದ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.ಲೋಕಾಯುಕ್ತ ಎಸ್.ಪಿ. ಮಂಜುನಾಥ ಚೌಧರಿ ನೇತೃತ್ವದಲ್ಲಿ ದಾಳಿ ನಡೆದಿದೆ.
Read More »
BigTv News
March 26, 2025
Breaking News, Crime, ಮಂಗಳೂರು
ಮಗುವನ್ನು ಕೊಣಾಜೆ ಮಾಲ ನಿವಾಸಿ ಲಿಂಡೋರಾಜ್ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿರುವ ಉತ್ತರ ಪ್ರದೇಶ ಮೂಲದ ರಾಜಾ ಸಿಂಗ್ ಮತ್ತು ದಿವ್ಯಾಂಶಿ ಸಿಂಗ್ ದಂಪತಿಯ ಎರಡೂವರೆ ವರ್ಷದ ಪುತ್ರ ರುದ್ರ ಪ್ರತಾಪ್ ಸಿಂಗ್.ಮಧ್ಯಾಹ್ನ ಊಟ ಮಾಡಿ ಮಲಗಿದ್ದ ಮಗುವನ್ನು ಎಬ್ಬಿಸಲೆಂದು ನೋಡುವಾಗ ಏಳದೇ ಇದ್ದುದರಿಂದ ತಕ್ಷಣವೇ ಕಡಬದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದ ವೇಳೆ ಮಗು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಮಗು ಆಹಾರ ಸಿಲುಕಿಕೊಂಡು ಅಥವಾ ಯಾವುದೋ ಖಾಯಿಲೆ ಉಲ್ಬಣಗೊಂಡು …
Read More »
BigTv News
March 25, 2025
Breaking News, ಕಲಬುರಗಿ, ಕಾರವಾರ, ಚೆನ್ನೈ, ಬೆಂಗಳೂರು
ಯುಗಾದಿ ಹಾಗೂ ರಂಜಾನ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ ಹಾಗೂ ಚೆನ್ನೈನ ರಾಮಚಂದ್ರನ್ ಸೆಂಟ್ರಲ್ ರೈಲ್ವೆ ನಿಲ್ದಾಣದ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆಗೆ ರೈಲ್ವೆ ಮಂಡಳಿಗೆ ಅನುಮೋದನೆ ನೀಡಲಾಗಿದೆ. ಬೆಂಗಳೂರು,ಚೆನ್ನೈ, ಕಲಬುರಗಿ ಕಾರವಾರಕ್ಕೆ ವಿಶೇಷ ರೈಲುಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.
Read More »
BigTv News
March 24, 2025
Breaking News, Crime, ಮೈಸೂರು
ಕೆಂಪಿಸಿದ್ದನಹುಂಡಿ ಗ್ರಾಮದ ರೈತ ಚನ್ನನಂಜೇಗೌಡ ಎಂಬವರ ಹಸು ಇದಾಗಿದ್ದು, ಅದರ ಮೂಕ ರೋದನೆ ಮನಕಲಕುವಂತಿತ್ತು. ಗ್ರಾಮದ ವಾಟರ್ ಟ್ಯಾಂಕ್ ನ ಬಳಿ ಬಳಿ ಜಾನುವಾರುಗಳು ಮೇವು ಮೇಯಲು ತೆರಳುತ್ತಿದ್ದ ವೇಳೆ ಕಾಡುಹಂದಿ ಬೇಟೆಗೆ ಅಡಗಿಸಿಟ್ಟಿದ್ದ ಸಿಡಿಮದ್ದು ಜಗಿದು ಸ್ಫೋಟಗೊಂಡಿದೆ.ಸ್ಫೋಟದ ರಭಸಕ್ಕೆ ಹಸುವಿನ ಮುಖ ಛಿದ್ರವಾಗಿದೆ ಎಂದು ರೈತ ನೋವು ತೋಡಿಕೊಂಡಿದ್ದಾನೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಡು ಹಂದಿಗಳ ಬೇಟೆಗೆ ಸಿಡಿಮದ್ದು ಇಟ್ಟು ಜಾನುವಾರುಗಳ ಸಾವಿಗೆ ಕಾರಣರಾಗಿದ್ದ ವ್ಯಕ್ತಿಗಳನ್ನು …
Read More »
BigTv News
March 23, 2025
Breaking News, ಮಂಗಳೂರು
ಕಾರು ಮಂಗಳೂರು ಕಡೆಗೆ ತೆರಳುತ್ತಿದ್ದು, ರಾಮಲ್‌ಕಟ್ಟೆ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿ ಮಂಗಳೂರು ಕಡೆಯಿಂದ ಆಗಮಿಸುತ್ತಿದ್ದ ಟಿಪ್ಪರ್ ಲಾರಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಬಂಟ್ವಾಳ ಸಂಚಾರ ಠಾಣೆ ಪೊಲೀಸರು ತೆರಳಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read More »
BigTv News
March 23, 2025
Breaking News, Crime, ಬಾಗಲಕೋಟೆ
ಬಾಗಲಕೋಟೆಯ ಜಮಖಂಡಿ ನಗರದಲ್ಲಿರುವ ಹೊಸ ಬಬಲಾದಿ ಮಠಕ್ಕೆ ಆಗಮಿಸಿದ ಸಿಐಡಿ ಅಧಿಕಾರಿಗಳ ತಂಡ ಸದಾಶಿವ ಮುತ್ಯಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮುತ್ಯಾ ಅವರು ಇತ್ತೀಚೆಗೆ ಕೆಲವು ವರ್ಷಗಳಿಂದ ಕಾಲಜ್ಞಾನ ಹೇಳುತ್ತಾ ಬಂದಿದ್ದು, ಭಕ್ತರು ಕೂಡ ಅವರು ಹೇಳುವ ಕಾಲಜ್ಞಾನ ನಿಜವಾಗುತ್ತೆ ಎಂದು ನಂಬಿದ್ದಾರೆ. ಬೆಳಗಾವಿಯ ಗೋಕಾಕ್ ನ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ನಲ್ಲಿದ್ದ ಗ್ರಾಹಕರ ಹಣವನ್ನು ವಂಚಿಸಿದ ಆರೋಪದಡಿ ಬಂಧಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ರೂ.60 ಲಕ್ಷಕ್ಕೂ ಅಧಿಕ ಹಣ ವಂಚನೆ ನಡೆದಿದೆ …
Read More »
BigTv News
March 21, 2025
Breaking News, ಉತ್ತರ ಕನ್ನಡ, ಕರ್ನಾಟಕ, ಮೈಸೂರು
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಗುಡುಗು ಸಿಡಿಲು ಸಮೇತ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಪ್ರಕಾರ ಎಂದು ದಕ್ಷಿಣ ಕನ್ನಡ ಹಾಸನ್ ಕೊಡುವ ಮೈಸೂರು ಜಿಲ್ಲೆಗಳ ಕೆಲವು ಕಡೆ ಆಗುವುದರಿಂದ ಕೂಡಿ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಾರ್ಚ್ 22 ಬೆಂಗಳೂರು ಜಿಲ್ಲೆಗಳಲ್ಲಿ ಹಲೋ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ …
Read More »
BigTv News
March 21, 2025
Breaking News, Crime, ಗದಗ
ಗದಗ ಜಿಮ್ಸ್ ನಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದ ಯುವತಿಗೆ 47 ವರ್ಷದ ಕಿರಣ ಕಾರಬಾರಿ ಎಂಬಾತ ಮದುವೆ ಆಗು ಅಂತಾ ಕಿರುಕುಳ ನೀಡುತ್ತಿದ್ದನಂತೆ. ಕಿರಣನ ಕಿರುಕುಳಕ್ಕೆ ಬೇಸತ್ತ ಯುವತಿ ಗದಗ ನಗರದ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಪೆನಾಯಿಲ್ ಕುಡಿದು ಅಸ್ವಸ್ಥಳಾಗಿದ್ದಳ್ಳು. ಕೂಡಲೇ ಗದಗ ಜಿಮ್ಸ್ ಆಸ್ಪತ್ರೆ ದಾಖಲು ಮಾಡಲಾಗಿತ್ತು. ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿ ಸಾವನ್ನಪ್ಪಿದ್ದಾಳೆ.ಮದುವೆ ಆಗದಿದ್ದರೆ ಇಬ್ಬರ …
Read More »
BigTv News
March 20, 2025
Breaking News, Crime, ಕರ್ನಾಟಕ, ಮೈಸೂರು
ಕರ್ನಾಟಕದಲ್ಲಿ ಮಕ್ಕಳ ಮಾರಾಟ ಜಾಲ ನಡೆಯುತ್ತಿದೆ. ಮೈಸೂರಿನಲ್ಲಿಂದು ಅವಮಾನ ಕೃತ್ಯ ನಡೆದಿದೆ. ಹೌದು ಕೇವಲ 14 ಸಾವಿರ ರೂಪಾಯಿಗೆ ಹೆಣ್ಣು ಮಗುವನ್ನು ಮಾರಾಟ ಮಾಡಲಾಗಿದೆ ಎನ್ನು ಆರೋಪ ಕೇಳಲಾಗಿದೆ. ಈ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ನೀಲಕಂಠ ನಗರದಲ್ಲಿ ನಡೆದಿದೆ. ಅನಿಲ್ ಕುಮಾರ್ ಮತ್ತು ಸೌಮ್ಯ ದಂಪತಿಗಳು ಮಗುವನ್ನು ಕೇವಲ 14 ಸಾವಿರ ರೂಪಾಯಿಗೆ ಗುಂಡ್ಲುಪೇಟೆ ವ್ಯಕ್ತಿ ಒಬ್ಬರಿಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ
Read More »