Breaking News
Oplus_131072

ಬಸ್‌-ಬೈಕ್‌ ಡಿಕ್ಕಿ ದಂಪತಿ ದುರ್ಮರಣ, ಹಲವರಿಗೆ ಗಾಯ.!

ಮಹಾಲಿಂಗಪುರ-ಮುಧೋಳ್ ಮಾರ್ಗದ ಮಳಲಿ ಬಳಿ ಅಪಘಾತದ ನಡೆದಿದೆ. ಮುಗಳಖೋಡದಿಂದ ಮಳಲಿ ಕಡೆಗೆ ಬೈಕ್‌ನಲ್ಲಿ ದಂಪತಿ ಹೊರಟಿದ್ದರು. ಇದೇ ವೇಳೆ ಕೊಲ್ಹಾಪುರದಿಂದ ಯಾದಗಿರಿ ಕಡೆಗೆ ಬಸ್ ಹೊಗುತ್ತಿತ್ತು. ಈ ವೇಳೆ ಬಸ್‌ ಮತ್ತು ಬೈಕ್‌ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಇನ್ನು ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಸ್ವಾಗತ ಕಮಾನು ನೆಲಕ್ಕುರುಳಿದ್ದು, ಬಸ್‌ನಲ್ಲಿದ್ದ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಿಕ್ಕೋಡಿ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೀಡಾಗಿದ್ದು, ಸ್ಥಳಕ್ಕೆ ಮುಧೋಳ್ ಪೊಲೀಸರು‌ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Share News

About BigTv News

Check Also

ಹೆಂಡತಿಯನ್ನೇ ಅಟ್ಟಾಡಿಸಿಕೊಂಡು ಆಸಿಡ್ ಎರಚಿ, ಮಚ್ಚಿನಿಂದ ಹಲ್ಲೆ ಮಾಡಿದ ಗಂಡ..!

ಬೆಂಗಳೂರು: ಜೆ.ಪಿ.ನಗರ 3ನೇ ಹಂತದ ನಾರಾಯಣ ಕ್ಲೀನಿಕ್ ಬಳಿ ಪತ್ನಿ ಮಧುಮಿತ ಮೇಲೆ ಪತಿ ವೆಂಕಟೇಶ್ ಆಸಿಡ್ ಎರಚಿ, ಮಚ್ಚಿನಿಂದ …

Leave a Reply

Your email address will not be published. Required fields are marked *