Breaking News

ದೇಶ-ವಿದೇಶ

ಬ್ರಿಜ್ ಮೇಲೆ ಅಪಘಾತ; ಬೈಕ್ ಸಾಹಸ ಮಾಡುತ್ತಿದ್ದ ಇಬ್ಬರ ಸಾವು

ನವದೆಹಲಿ: ದೆಹಲಿಯಲ್ಲಿ ನವೆಂಬರ್ 4 ರಂದು ಲೋಕಾರ್ಪಣೆಗೊಂಡ ಸಿಗ್ನೇಚರ್ ಬ್ರಿಜ್(ಸೇತುವೆ) ಮೇಲೆ ಇಂದು ಬೆಳಗ್ಗೆ ದೊಡ್ಡ ಅಪಘಾತ ಸಂಭವಿಸಿದೆ. ಬ್ರಿಜ್ ಮೇಲೆ ಡಿವೈಡರ್ ಗಳೊಂದಿಗೆ ಬೈಕ್ ಬಿದ್ದಿದ್ದು, ಈ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ.ಶುಕ್ರವಾರ ಬೆಳಿಗ್ಗೆ ಸೇತುವೆಯ ಮೇಲೆ ಇಬ್ಬರು ಯುವಕರು ಬೈಕ್ ಸಾಹಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಈ ಸಮಯದಲ್ಲಿ, ಚಾಲಕನ ನಿಯಂತ್ರಣ ತಪ್ಪಿ, ಬೈಕು ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದು ಈ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ, ಯುವಕ …

Read More »

ಭೀಕರ ಅಪಘಾತ: ಚಾಲಕನ ಸೇರಿದಂತೆ 7 ಮಕ್ಕಳ ಧಾರುಣ ಸಾವು

ಸತ್ನಾ: ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ತುರ್ಕಹ್ ಬಿರ್ಸಿಂಗ್ ಪುರ್ ಸಮೀಪ ಶಾಲಾ ವಾಹನ ಮತ್ತು ಬಸ್ ಡಿಕ್ಕಿ ಹೊಡೆದಿದ್ದು, 7 ಮಕ್ಕಳು ಸ್ಥಳದಲ್ಲೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಅದೇ ಸಮಯದಲ್ಲಿ ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.ಪ್ರತ್ಯಕ್ಷದರ್ಶಿಗಳ ಪ್ರಕಾರ, ರಾಹುಕ್ ಕೋಚ್ ಬಸ್ ಸಂಖ್ಯೆ MP 17 P-0885 ರೇವಾ-ಚಿತ್ರಕೂಟ್ ಟರ್ಕಹಾ ಬಿರ್ಸಿಂಗ್ಪುರ್ ಬಳಿ ಅತ್ಯಂತ ವೇಗವಾಗಿ ಬರುತ್ತಿತ್ತು, ಆ ಸಮಯದಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ …

Read More »

ಡಿ. 2ರಂದು ಹಿಂದೂ, ಡಿ. 3ರಂದು ಕ್ರಿಶ್ಚಿಯನ್ ಶೈಲಿಯಲ್ಲಿ ಪ್ರಿಯಾಂಕಾ – ನಿಕ್‍ ಮದುವೆ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅಮೆರಿಕದ ಗಾಯಕ ನಿಕ್ ಜೋನಸ್ ಅವರು ಡಿಸೆಂಬರ್ 3ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ.ವರದಿಗಳ ಪ್ರಕಾರ, ಪ್ರಿಯಾಂಕಾ ಚೋಪ್ರಾ ಮೊದಲು ಹಿಂದೂ ಸಂಪ್ರದಾಯದಂತೆ ನಿಕ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ನಂತರ ಕ್ರಿಶ್ಚಿಯನ್ ಶೈಲಿಯಲ್ಲಿ ಮದುವೆಯಾಗಲಿದ್ದಾರೆ.ಇತ್ತೀಚಿಗೆ ಬಾಲಿವುಡ್ ತಾರೆಯರಾದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು ಇಟಲಿಯಲ್ಲಿ ಕೊಂಕಣಿ ಮತ್ತು ಸಿಂಧಿ ಶೈಲಿಯಲ್ಲಿ ಮದುವೆಯಾಗಿದ್ದರು. ಈಗ ಪಿಗ್ಗಿ ಹಾಗೂ ನಿಕ್ ಹಿಂದೂ ಮತ್ತು …

Read More »

ಚಲಿಸುವ ಬಸ್ಸಿನಲ್ಲಿ ಯುವತಿ ಮುಂದೆ ಹಸ್ತಮೈಥುನ ಮಾಡಿದ ವ್ಯಕ್ತಿ; ಬಂಧನ

ದೆಹಲಿಯ ಕಪಶೆಡಾದಿಂದ ವಸಂತ್ ಕುಂಜ್ ಗೆ ಬಸ್ಸಿನಲ್ಲಿ ತೆರಳುತ್ತಿದ್ದ ಯುವತಿಯ ಮುಂದೆ ನಿಂತಿದ್ದ ವ್ಯಕ್ತಿನೊಬ್ಬ ಆಕೆಯ ಮುಂದೆ ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ.ನವದೆಹಲಿ: ಚಲಿಸುತ್ತಿದ್ದ ಬಸ್ಸಿನಲ್ಲಿ ಯುವತಿಯ ಮುಂದೆ ಹಸ್ತಮೈಥುನ ಮಾಡಿದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.ದೆಹಲಿಯ ಕಪಶೆಡಾದಿಂದ ವಸಂತ್ ಕುಂಜ್ ಗೆ ಬಸ್ಸಿನಲ್ಲಿ ತೆರಳುತ್ತಿದ್ದ ಯುವತಿಯ ಮುಂದೆ ನಿಂತಿದ್ದ ವ್ಯಕ್ತಿಯೊಬ್ಬ ಆಕೆಯ ಮುಂದೆ ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ. ಆತನ ವಿಕೃತಿ ಕಂಡು ಯುವತಿ ಚೀರಿಕೊಂಡರೂ, ಆ ವ್ಯಕ್ತಿ …

Read More »

ನಗರ ಅನಿಲ ವಿತರಣೆ ಯೋಜನೆಗೆ ಇಂದು ಪ್ರಧಾನಿ ಮೋದಿಯಿಂದ ಚಾಲನೆ..

ನವದೆಹಲಿ: ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ರೆಗ್ಯುಲೇಟರಿ ಬೋರ್ಡ್(ಪಿಎನ್‌ಜಿಆರ್‌ಬಿ), ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ದೇಶಾದ್ಯಂತ ಸಿಜಿಡಿ ನೆಟ್‌ವರ್ಕ್‌ಗಳ ಅಭಿವೃದ್ಧಿಗೆ ಚಾಲನೆ ನೀಡುತ್ತಿದೆ. ಇತ್ತೀಚೆಗೆ ಪಿಎನ್‌ಜಿಆರ್‌ಬಿ ತನ್ನ 9ನೇ ಬಿಡ್ಡಿಂಗ್‌ನಲ್ಲಿ ದೇಶದ 22 ರಾಜ್ಯಗಳ ಒಟ್ಟು 174 ಜಿಲ್ಲೆಗಳಲ್ಲಿ ಸಿಜಿಡಿ ಯೋಜನೆ ವಿತರಿಸಲು 85 ಭೌಗೋಳಿಕ ಪ್ರದೇಶಗಳಾಗಿ ವಿಂಗಡಿಸಿ ಬಿಡ್ ಮುಖೇನ ಹಲವು ಸಂಸ್ಥೆಗಳಿಗೆ ನೀಡಿದೆ.ಪ್ರಧಾನಿ ನರೇಂದ್ರ ಮೋದಿ ಇಂದು ಸಿಜಿಡಿ ಯೋಜನೆಯನ್ನು ಉದ್ಘಾಟಿಸಲಿದ್ದು, 129 ಜಿಲ್ಲೆಗಳಲ್ಲಿ 65 ಪ್ರದೇಶಗಳಲ್ಲಿ ನಗರ …

Read More »

ಲಂಡನ್​ನ ಐಷಾರಾಮಿ ಮನೆ ಕಳೆದುಕೊಳ್ತಾರಾ ಮಲ್ಯ..?

ಲಂಡನ್​: ಭಾರತೀಯ ಬ್ಯಾಂಕುಗಳಿಗೆ ಸಾವಿರಾರು ಕೋಟಿ ಪಂಗನಾಮ ಹಾಕಿ ವಿದೇಶಕ್ಕೆ ಪಲಾಯನ ಮಾಡಿರುವ ಮದ್ಯದ ದೊರೆ ವಿಜಯ್​ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಲಂಡನ್​ನಲ್ಲಿರುವ ತಮ್ಮ ಐಷಾರಾಮಿ ಮನೆಯನ್ನು ಬ್ಯಾಂಕಿನ ಜಪ್ತಿ ಮೂಲಕ ಮಲ್ಯ ಕಳೆದುಕೊಳ್ಳಲಿದ್ದಾರಾ ಅನ್ನುವ ಪ್ರಶ್ನೆ ಎದ್ದಿದೆ. ಹೌದು, ಇಂಡಿಯಾದ ಬ್ಯಾಂಕ್​ಗಳಿಗೆ​ ಮೋಸ ಮಾಡಿದ್ದಲ್ಲದೇ ಸ್ವಿಸ್​ ಬ್ಯಾಂಕ್​ನಿಂದ ಸಾಲ ಪಡೆದುಕೊಂಡಿದ್ದ ಮಲ್ಯ ಸರಿಯಾಗೇ ಉಂಡೆನಾಮ ತಿಕ್ಕಿದ್ದಾರೆ. ಈ ಹಿನ್ನೆಲೆ ಯುಬಿಎಸ್​ ಲಂಡನ್​ನ ರೀಜೆಂಟ್ ಪಾರ್ಕ್​ ಬಳಿಯ ಕಾರ್ನ್ವಾಲ್ …

Read More »

ಮುಂದಿನ ವರ್ಷ ಎಟಿಎಂ ಬಳಕೆದಾರರಿಗೆ ಬಿಗ್​ ಶಾಕ್​..

ನವದೆಹಲಿ : ಮುಂದಿನ ವರ್ಷ ಎಟಿಎಂ ಬಳಕೆದಾರರು ಮತ್ತೆ ಪರದಾಡುವ ಸ್ಥಿತಿ ಎದುರಾಗಲಿದೆ. ಯಾಕಂದ್ರೆ ದೇಶದಲ್ಲಿ ಈಗಿರುವ ಎಟಿಎಂಗಳ ಪೈಕಿ ಅರ್ಧದಷ್ಟು ಎಟಿಎಂಗಳನ್ನು ಬಂದ್​ ಮಾಡುವ ಸಾಧ್ಯತೆ ದಟ್ಟವಾಗಿದೆ. ದೇಶದಲ್ಲಿ ಈಗ ಸುಮಾರು 2,38,000 ಎಟಿಎಂಗಳಿದ್ದು, ಈ ಪೈಕಿ ಸುಮಾರು 1,13,000 ಎಟಿಎಂಗಳ ಬಾಗಿಲುಗಳು ಬಂದ್​ ಆಗಲಿವೆಯಂತೆ. ಮುಂದಿನ ಮಾರ್ಚ್​ನೊಳಗೆ ಎಟಿಎಂ ಶಾಕ್​ ಹೊಡೆಯಲಿದ್ದು, ದೇಶದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಎಟಿಎಂಗಳನ್ನ ಬಂದ್​ ಮಾಡುವ ಬಗ್ಗೆ ಎಟಿಎಂ ಉದ್ದಮೆಯ …

Read More »

ಬಿಜೆಪಿ-ಕಾಂಗ್ರೆಸ್​ ಅಣ್ಣ-ತಮ್ಮಂದಿರಂತೆ, ಯಾರನ್ನೂ ನಂನಂಬಕ್ಕಾಗಲ್ಲ-ಕೆಸಿಆರ್..

ಹೈದರಾಬಾದ್​ : ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಸಜ್ಜಾಗಿರುವ ತೆಲಂಗಾಣ ಮಾಜಿ ಸಿಎಂ ಹಾಗೂ ಟಿಆರ್​ಎಸ್​ ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ್​ ರಾವ್​, ಬಿಜೆಪಿ ಕಾಂಗ್ರೆಸ್​ ಎರಡೂ ಪಕ್ಷಗಳ ವಿರುದ್ಧವೂ ಮುಗಿಬಿದ್ದಿದ್ದಾರೆ. ಬಿಜೆಪಿ ಕಾಂಗ್ರೆಸ್​ ಇಬ್ಬರೂ ಅಣ್ಣ-ತಮ್ಮಂದಿರ ಹಾಗೇ ಇಬ್ಬರನ್ನೂ ನಂಬಲು ಸಾಧ್ಯವಿಲ್ಲ ಅಂತಾ ಹೇಳಿದ್ದಾರೆ. ದೇವರಕೊಂಡದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾವ್​, ತೆಲಂಗಾಣ ವಿಧಾನಸಭೆ ಚುನಾವನೆ ಬಳಿಕ ರಾಷ್ಟ್ರ ರಾಜಕಾರಣಕ್ಕೆ ತಾವು ಧುಮುಕುವುದಾಗಿ ತಿಳಿಸಿದ್ದಾರೆ. ಅಲ್ಲದೇ, ತಮ್ಮ ಅವಧಿಯಲ್ಲಿ …

Read More »

ಮತ್ತೆ ಅಕ್ಷಯ್ ಕುಮಾರ್ ಪತ್ನಿ ಮೇಲೆ ತನ್ನ ಲವ್ ಹೊರಹಾಕಿದ ಕರಣ್ ಜೋಹರ್..!

ಅಕ್ಷಯ್​ ಕುಮಾರ್​​ ಪತ್ನಿ ಟ್ವಿಂಕಲ್​ ಖನ್ನಾ ಮೇಲೆ ಬಾಲಿವುಡ್​ ನಿರ್ದೇಶಕ ಕರಣ್​ ಜೋಹಾರ್​ ತನ್ನ ಪ್ರೀತಿ ವ್ಯಕ್ತಪಡಿಸಿದ್ದಾರೆ. ಸ್ನೇಹಿತೆಯಾಗಿರುವ ನಟಿ, ಬರಹಗಾರ್ತಿ ಹಾಗೂ ನಿರ್ಮಾಪಕಿ ಟ್ವಿಂಕಲ್​ ಖನ್ನಾ ಜೊತೆ ಕೆಲಸ ಮಾಡೋದು ತುಂಬಾ ಸುಲಭ ಹಾಗೂ ಕಂಫರ್ಟೆಬಲ್​​ ಎಂದು ಕರಣ್​​ ಜೋಹಾರ್​ ಹೇಳಿದ್ದಾರೆ.ಕರಣ್​​ ಜೋಹಾರ್​ ಆ್ಯಡ್​​ ಚಿತ್ರವೊಂದನ್ನ ನಿರ್ದೇಶಿಸಿದ್ದು, ಇದರಲ್ಲಿ ಟ್ವಿಂಕಲ್​ ಖನ್ನಾ ಹಾಗೂ ಅವರ ಪತಿ ಅಕ್ಷಯ್​ ಕುಮಾರ್​​ ಜೊತೆ ಕೆಲಸ ಮಾಡಿದ್ದಾರೆ. ಟ್ವಿಂಕಲ್​ ಖನ್ನಾ ಜೊತೆ ಕೆಲಸ …

Read More »

ರಾಜೀನಾಮೆ ನೀಡುವಂತೆ ಪರಿಕ್ಕರ್​​ಗೆ 48 ಗಂಟೆ ಡೆಡ್​ಲೈನ್​..!

ಗೋವಾ: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಸಿಎಂ ಮನೋಹರ್ ಪರಿಕ್ಕರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಗೋವಾದ ವಿಪಕ್ಷಗಳು 48 ಗಂಟೆ ಡೆಡ್​ಲೈನ್ ನೀಡಿವೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಕಾಂಗ್ರೆಸ್​ ನಾಯಕರು ಹಾಗೂ ನೂರಾರು ಕಾರ್ಯಕರ್ತರು ಮೆರವಣಿಗೆ ಮೂಲಕ ಪರಿಕ್ಕರ್ ನಿವಾಸದ ಎದುರು ಪ್ರತಿಭಟನೆ ನಡೆಸಿದರು. ಪರಿಕ್ಕರ್​ 9 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಆಡಳಿತ ಮರು …

Read More »