ಲಂಡನ್: ಭಾರತೀಯ ಬ್ಯಾಂಕುಗಳಿಗೆ ಸಾವಿರಾರು ಕೋಟಿ ಪಂಗನಾಮ ಹಾಕಿ ವಿದೇಶಕ್ಕೆ ಪಲಾಯನ ಮಾಡಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಲಂಡನ್ನಲ್ಲಿರುವ ತಮ್ಮ ಐಷಾರಾಮಿ ಮನೆಯನ್ನು ಬ್ಯಾಂಕಿನ ಜಪ್ತಿ ಮೂಲಕ ಮಲ್ಯ ಕಳೆದುಕೊಳ್ಳಲಿದ್ದಾರಾ ಅನ್ನುವ ಪ್ರಶ್ನೆ ಎದ್ದಿದೆ. ಹೌದು, ಇಂಡಿಯಾದ ಬ್ಯಾಂಕ್ಗಳಿಗೆ ಮೋಸ ಮಾಡಿದ್ದಲ್ಲದೇ ಸ್ವಿಸ್ ಬ್ಯಾಂಕ್ನಿಂದ ಸಾಲ ಪಡೆದುಕೊಂಡಿದ್ದ ಮಲ್ಯ ಸರಿಯಾಗೇ ಉಂಡೆನಾಮ ತಿಕ್ಕಿದ್ದಾರೆ. ಈ ಹಿನ್ನೆಲೆ ಯುಬಿಎಸ್ ಲಂಡನ್ನ ರೀಜೆಂಟ್ ಪಾರ್ಕ್ ಬಳಿಯ ಕಾರ್ನ್ವಾಲ್ ಟೆರೇಸ್ ಆಸ್ತಿಯನ್ನು ಜಪ್ತಿ ಮಾಡುವಂತೆ ಕೋರಿ ಲಂಡನ್ ಕೋರ್ಟ್ ಮೊರೆ ಹೋಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಲಂಡನ್ ಹೈ ಕೋರ್ಟ್ ಮಲ್ಯರ ಯಾವುದೇ ಸಬೂಬುಗಳಿಗೆ ಕಿವಿಕೊಟ್ಟಿಲ್ಲ. ಅರ್ಥಾತ್ ಜಪ್ತಿ ಮಾಡಬೇಕು ಅನ್ನುವ ಧಾಟಿಯಲ್ಲೇ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ವಿಚಾರಣೆ ನಡೆಸಿದ ಲಂಡನ್ ಹೈಕೋರ್ಟ್ ಅರ್ಜಿಯ ವಿಚಾರಣೆಯನ್ನು ಮುಂದಿನ ವರ್ಷ ಮೇ ತಿಂಗಳಿಗೆ ಮುಂದೂಡಿದೆ. ಇನ್ನು ಮುಂದಿನ ವಿಚಾರಣೆ ವೇಳೆ ಯುಬಿಎಸ್ ಪರ ತೀರ್ಪು ಬರುವ ಎಲ್ಲ ಲಕ್ಷಣಗಳು ಕಾಣುತ್ತಿದ್ದು, ಐಷಾರಾಮಿ ಮನೆಯನ್ನು ಮಲ್ಯ ಕಳೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಸ್ವಿಸ್ ಬ್ಯಾಂಕ್ನಿಂದ ಮಲ್ಯ 185ಕೋಟಿ ಸಾಲ ಪಡೆದಿದ್ರು. ಆದ್ರೆ ಈವರೆಗೂ ಮಲ್ಯ ಯಾವುದೇ ಹಣ ಪಾವತಿಸಿಲ್ಲವಂತೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





