ಸತ್ನಾ: ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ತುರ್ಕಹ್ ಬಿರ್ಸಿಂಗ್ ಪುರ್ ಸಮೀಪ ಶಾಲಾ ವಾಹನ ಮತ್ತು ಬಸ್ ಡಿಕ್ಕಿ ಹೊಡೆದಿದ್ದು, 7 ಮಕ್ಕಳು ಸ್ಥಳದಲ್ಲೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಅದೇ ಸಮಯದಲ್ಲಿ ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.ಪ್ರತ್ಯಕ್ಷದರ್ಶಿಗಳ ಪ್ರಕಾರ, ರಾಹುಕ್ ಕೋಚ್ ಬಸ್ ಸಂಖ್ಯೆ MP 17 P-0885 ರೇವಾ-ಚಿತ್ರಕೂಟ್ ಟರ್ಕಹಾ ಬಿರ್ಸಿಂಗ್ಪುರ್ ಬಳಿ ಅತ್ಯಂತ ವೇಗವಾಗಿ ಬರುತ್ತಿತ್ತು, ಆ ಸಮಯದಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಭಯಾನಕ ಘಟನೆಯಲ್ಲಿ ಶಾಲಾ ವಾಹನ ರಸ್ತೆಯಿಂದ ಬಹಳ ದೂರ ಸಾಗಿ ಬಿದ್ದಿತು. ಅಪಘಾತದಲ್ಲಿ, ಏಳು ಮಕ್ಕಳು ಮತ್ತು ಶಾಲಾ ವಾಹನದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಅನೇಕ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.ತುರ್ಕಹ್ ಬಿರ್ಸಿಂಗ್ ಪುರ್ ಸಮೀಪ ಅಪಘಾತ:ಅಪಘಾತದ ನಂತರ ಸ್ಥಳೀಯರು ಘಟನೆಯ ಬಗ್ಗೆ ಸತ್ನಾ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಕಳುಹಿಸಿದರು. ಮೃತಪಟ್ಟವರನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





