Breaking News

ಮತ್ತೆ ಅಕ್ಷಯ್ ಕುಮಾರ್ ಪತ್ನಿ ಮೇಲೆ ತನ್ನ ಲವ್ ಹೊರಹಾಕಿದ ಕರಣ್ ಜೋಹರ್..!

ಅಕ್ಷಯ್​ ಕುಮಾರ್​​ ಪತ್ನಿ ಟ್ವಿಂಕಲ್​ ಖನ್ನಾ ಮೇಲೆ ಬಾಲಿವುಡ್​ ನಿರ್ದೇಶಕ ಕರಣ್​ ಜೋಹಾರ್​ ತನ್ನ ಪ್ರೀತಿ ವ್ಯಕ್ತಪಡಿಸಿದ್ದಾರೆ. ಸ್ನೇಹಿತೆಯಾಗಿರುವ ನಟಿ, ಬರಹಗಾರ್ತಿ ಹಾಗೂ ನಿರ್ಮಾಪಕಿ ಟ್ವಿಂಕಲ್​ ಖನ್ನಾ ಜೊತೆ ಕೆಲಸ ಮಾಡೋದು ತುಂಬಾ ಸುಲಭ ಹಾಗೂ ಕಂಫರ್ಟೆಬಲ್​​ ಎಂದು ಕರಣ್​​ ಜೋಹಾರ್​ ಹೇಳಿದ್ದಾರೆ.ಕರಣ್​​ ಜೋಹಾರ್​ ಆ್ಯಡ್​​ ಚಿತ್ರವೊಂದನ್ನ ನಿರ್ದೇಶಿಸಿದ್ದು, ಇದರಲ್ಲಿ ಟ್ವಿಂಕಲ್​ ಖನ್ನಾ ಹಾಗೂ ಅವರ ಪತಿ ಅಕ್ಷಯ್​ ಕುಮಾರ್​​ ಜೊತೆ ಕೆಲಸ ಮಾಡಿದ್ದಾರೆ. ಟ್ವಿಂಕಲ್​ ಖನ್ನಾ ಜೊತೆ ಕೆಲಸ ಮಾಡೋದು ನಾನು ಅಂದುಕೊಂಡಿದ್ದಕ್ಕಿಂತಲೂ ತುಂಬಾ ಮಜವಾಗಿತ್ತು. ಟ್ವಿಂಕಲ್​ ಖನ್ನಾ ಹಲವಾರು ರೀತಿಯಲ್ಲಿ ತುಂಬಾ ವಿಶಿಷ್ಟವಾದ ಮಹಿಳೆ. ಸೆಟ್​​ಗೆ ಬರುವಾಗ ತನ್ನೊಂದಿಗೆ ಎನರ್ಜಿಯನ್ನೂ ತರುತ್ತಾರೆ. ಟ್ವಿಂಕಲ್​ ಹಾಗೂ ಅಕ್ಷಯ್​ ಇಬ್ಬರೊಂದಿಗೂ ಒಂದೇ ಪ್ರಾಜೆಕ್ಟ್​​ನಲ್ಲಿ ಕೆಲಸ ಮಾಡಿದ್ದಂತೂ ತುಂಬಾ ಮಜಾ ಕೊಡ್ತು. ನಾವೆಲ್ಲರೂ ಸಾಕಷ್ಟು ವರ್ಷಗಳಿಂದ ಸ್ನೇಹಿತರಾಗಿರೋ ಕಾರಣ ಒಟ್ಟಿಗೆ ಕೆಲಸ ಮಾಡೋಕೆ ತುಂಬಾ ಆರಾಮಾಗಿತ್ತು. ಇದು ಆ್ಯಡ್​​ನಲ್ಲೂ ಕಾಣಲಿದೆ ಎಂದುಕೊಂಡಿದ್ದೇನೆ. ಇವರಿಬ್ಬರೊಂದಿಗೆ ಮತ್ತೆ ಕೆಲಸ ಮಾಡಲು ಕಾಯ್ತಿದ್ದೀನಿ ಎಂದು ಕರಣ್​ ಜೋಹಾರ್​ ಹೇಳಿದ್ದಾರೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *