Breaking News

ಮುಂದಿನ ವರ್ಷ ಎಟಿಎಂ ಬಳಕೆದಾರರಿಗೆ ಬಿಗ್​ ಶಾಕ್​..

ನವದೆಹಲಿ : ಮುಂದಿನ ವರ್ಷ ಎಟಿಎಂ ಬಳಕೆದಾರರು ಮತ್ತೆ ಪರದಾಡುವ ಸ್ಥಿತಿ ಎದುರಾಗಲಿದೆ. ಯಾಕಂದ್ರೆ ದೇಶದಲ್ಲಿ ಈಗಿರುವ ಎಟಿಎಂಗಳ ಪೈಕಿ ಅರ್ಧದಷ್ಟು ಎಟಿಎಂಗಳನ್ನು ಬಂದ್​ ಮಾಡುವ ಸಾಧ್ಯತೆ ದಟ್ಟವಾಗಿದೆ. ದೇಶದಲ್ಲಿ ಈಗ ಸುಮಾರು 2,38,000 ಎಟಿಎಂಗಳಿದ್ದು, ಈ ಪೈಕಿ ಸುಮಾರು 1,13,000 ಎಟಿಎಂಗಳ ಬಾಗಿಲುಗಳು ಬಂದ್​ ಆಗಲಿವೆಯಂತೆ. ಮುಂದಿನ ಮಾರ್ಚ್​ನೊಳಗೆ ಎಟಿಎಂ ಶಾಕ್​ ಹೊಡೆಯಲಿದ್ದು, ದೇಶದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಎಟಿಎಂಗಳನ್ನ ಬಂದ್​ ಮಾಡುವ ಬಗ್ಗೆ ಎಟಿಎಂ ಉದ್ದಮೆಯ ಒಕ್ಕೂಟವೇ ತಿಳಿಸಿದೆ.ಕಾರಣ ಏನು..?ಎಟಿಎಂ ಹಾರ್ಡ್‌ವೇರ್‌ ಮತ್ತು ಸಾಫ್ಟ್​ವೇರ್​ಗಳನ್ನು ಮೇಲ್ದರ್ಜೆಗೇರಿಸುವಂತೆ ಈಗಾಗಲೇ ಕೇಂದ್ರ ಸರ್ಕಾರ ಸೂಚನೆ ನೀಡಿರುವುದು ಪ್ರಮುಖ ಕಾರಣವಾಗಿದೆ. ಜೊತೆಗೆ ಗುತ್ತಿಗೆದಾರರಿಗೆ ಕೇಂದ್ರ ಗೃಹ ಖಾತೆ ನೀಡಿರುವ ಕೆಲವು ಮಾರ್ಗದರ್ಶಿಗಳು, ಹಾಗೂ ಹಣ ತುಂಬುವ ಕ್ಯಾಸೆಟ್‌ ಸ್ವಾಪ್‌ ಕುರಿತ ಸೂಚನೆ ದೇಶದಲ್ಲಿ ಎಟಿಎಂಗಳನ್ನು ಬಂದ್​ ಮಾಡಲು ಕಾರಣಗಳಾಗಿವೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *