Breaking News

ದೆಹಲಿ

ಭಾರತೀಯ ಹವಾಮಾನ ಇಲಾಖೆಯಿಂದ ಮಹತ್ವದ ಮುನ್ಸೂಚನೆ

ನವದೆಹಲಿ: ಭಾರತದ ಈಶಾನ್ಯ ಭಾಗದಲ್ಲಿ ನೈರುತ್ಯ ಮುಂಗಾರು ವೇಗ ಪಡೆದುಕೊಂಡಿದೆ. ಮುಂದಿನ ಐದು ದಿನಗಳಲ್ಲಿ ಈಶಾನ್ಯ ಭಾರತ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಿಂದ ಈಶಾನ್ಯ ಭಾರತದವರೆಗೆ ಕಡಿಮೆ ಉಷ್ಣವಲಯದ ಮಟ್ಟಗಳಲ್ಲಿ ಬಲವಾದ ನೈಋತ್ಯ ಮಾರುತಗಳ ಪ್ರಭಾವದ ಕಾರಣದಿಂದ, ಮುಂಬರುವ ಕೆಲವು ದಿನಗಳಲ್ಲಿ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಪಶ್ಚಿಮ ಬಂಗಾಳ …

Read More »

ಭಾರತದ 5 ರಾಜ್ಯಗಳಲ್ಲಿ ಕೋವಿಡ್‌ ವೈರಸ್‌ ಸೋಂಕಿನ ಆರ್ಭಟ

ನವದೆಹಲಿ : ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ ಭಾರತದ 5 ರಾಜ್ಯಗಳಲ್ಲಿ ಕೋವಿಡ್‌ ವೈರಸ್‌ ಸೋಂಕಿನ ಆರ್ಭಟ ಹೆಚ್ಚಾಗಿದ್ದು, ನಾಲ್ಕನೇ ಅಲೆಯ ಭೀತಿ ಎದುರಾಗಿದೆ. ಕಳೆದ ವಾರ ಭಾರತದಲ್ಲಿ ಸುಮಾರು 25,000 ಪ್ರಕರಣಗಳನ್ನು ದಾಖಲಾಗಿತ್ತು. ಇದು ಕಳೆದ 3 ತಿಂಗಳಲ್ಲಿ ದಾಖಲಾದ ಅತೀ ಹೆಚ್ಚು ಕೋವಿಡ್‌ ಪ್ರಕರಣವಾಗಿದೆ. ಅಲ್ಲದೇ ಪಾಸಿಟಿವಿಟಿ ದರ ಕೂಡ ಏರಿಕೆಯನ್ನು ಕಂಡಿದ್ದು ಸದ್ಯ ದೇಶದಲ್ಲಿ ಪಾಸಿಟಿವಿಟಿ ದರ 1.62 ಕ್ಕೆ ಏರಿಕೆ ಕಂಡಿದೆ. ಅದ್ರಲ್ಲೂ …

Read More »

ಕೇಂದ್ರ ಸರ್ಕಾರದಿಂದ ‘ಪಿಎಂ ಶ್ರೀ ಶಾಲೆ’ಗಳನ್ನು ಸ್ಥಾಪಿಸಲು ಚಿಂತನೆ : ಧರ್ಮೇಂದ್ರ ಪ್ರಧಾನ್

ನವದೆಹಲಿ: ಕೇಂದ್ರ ಸರ್ಕಾರದಿಂದ ‘ಪಿಎಂ ಶ್ರೀ ಶಾಲೆ’ಗಳನ್ನು ಸ್ಥಾಪಿಸಲು ಚಿಂತನೆ ನಡೆದಿದ್ದು, ಇವು ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಯೋಗಶಾಲೆಗಳಾಗಿವೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಗುಜರಾತ್ ನಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ಸಚಿವರ ಸಭೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ಭವಿಷ್ಯತ್ತಿಗಾಗಿ ಸಿದ್ಧಪಡಿಸಲು ಕೇಂದ್ರ ಸರ್ಕಾರ ‘ಪಿಎಂ ಶ್ರೀ ಶಾಲೆ’ಗಳನ್ನು ಸ್ಥಾಪಿಸಲು ಚಿಂತನೆ ನಡೆಸಿದೆ ಎಂದರು.

Read More »

ಕೆಲ ರಾಜ್ಯಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆ

ನವದೆಹಲಿ: ಇನ್ನು ಕೆಲ ದಿನಗಳಲ್ಲಿ ನೈರುತ್ಯ ಮುಂಗಾರು ಅಪ್ಪಳಿಸಲಿದ್ದು, ಕೆಲ ರಾಜ್ಯಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ನೈಋತ್ಯ ಮಾನ್ಸೂನ್ ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಭಾಗಗಳಲ್ಲಿ ಅಬ್ಬರಿಸಲಿದೆ. ಆದರೆ ಉತ್ತರ ಭಾರತದಲ್ಲಿ ಮೊದಲ ಮಾನ್ಸೂನ್ ಮಳೆ ಸುರಿಯುವುದು ಜೂನ್ ಅಂತ್ಯದ ವೇಳೆಗೆ ಎಂದು ಹೇಳಲಾಗುತ್ತಿದೆ. “ಮಧ್ಯ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಕರ್ನಾಟಕದ ಕೆಲವು ಭಾಗಗಳು, ಕೊಂಕಣ ಮತ್ತು ಗೋವಾದ …

Read More »

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ರಾಜೀನಾಮೆ

ನವದೆಹಲಿ: ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅನುಮಾನ ಮೂಡುವಂತೆ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ, ಇದುವರೆಗಿನ ಪ್ರಯಾಣಕ್ಕಾಗಿ ಅವರು ಅಭಿಮಾನಿಗಳು ಮತ್ತು ಸಹ ಆಟಗಾರರಿಗೆ ಧನ್ಯವಾದ ತಿಳಿಸಿದ್ದಾರೆ. ‘1992 ರಲ್ಲಿ ಕ್ರಿಕೆಟ್‌ನೊಂದಿಗೆ ನನ್ನ ಪ್ರಯಾಣದ ಪ್ರಾರಂಭದಿಂದ 2022 30 ನೇ ವರ್ಷವನ್ನು ಸೂಚಿಸುತ್ತದೆ. ಅಂದಿನಿಂದ, ಕ್ರಿಕೆಟ್ ನನಗೆ ಬಹಳಷ್ಟು ನೀಡಿದೆ. ಎಲ್ಲಕ್ಕಿಂತ …

Read More »

ಕಾಂಗ್ರೆಸ್‍ಗೆ ಗುಡ್ ಬೈ ಹೇಳಿದ ಬೃಜೇಶ್ ಕಾಳಪ್ಪ

ಹೊಸದಿಲ್ಲಿ: ಹಿರಿಯ ಸುಪ್ರೀಂಕೋರ್ಟ್ ವಕೀಲ ಕಪಿಲ್ ಸಿಬಾಲ್ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮತ್ತೊಬ್ಬ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಬೃಜೇಶ್ ಕಾಳಪ್ಪ ಕೂಡಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. “ಪಕ್ಷದ ಬಗ್ಗೆ ಚೈತನ್ಯ ಹಾಗೂ ಉತ್ಸಾಹ” ಇಲ್ಲ ಎಂಬ ಕಾರಣ ನೀಡಿ ಅವರು ರಾಜೀನಾಮೆ ನೀಡಿದ್ದಾರೆ.“ನನಗೆ ಹಲವು ಅವಕಾಶಗಳನ್ನು ನೀಡಿದ್ದಕ್ಕಾಗಿ ನಾನು ಹೃತ್ಪೂರ್ವಕ ಧನ್ಯವಾದ ಹೇಳುತ್ತಿದ್ದೇನೆ. ಈ ದೊಡ್ಡ ದೇಶದ ಎಲ್ಲ ಕಡೆಗಳಲ್ಲಿ ನನ್ನ ಮುಖ ಪರಿಚಿತವಾಗಿದ್ದರೆ ಅದಕ್ಕೆ ನಿಮ್ಮ …

Read More »

ವೇಶ್ಯಾವಾಟಿಕೆ ಕಾನೂನು ಬದ್ಧ : ಪೊಲೀಸರು ಮದ್ಯ ಪ್ರವೇಶಿಸುವಂತಿಲ್ಲಾ…

ನವದೆಹಲಿ : ವೇಶ್ಯಾವಾಟಿಕೆ ಕಾನೂನು ಬದ್ಧ ಎಂಬ ತೀರ್ಪು ನೀಡಿದೆ . ಜತೆಗೆ ಪೊಲೀಸರು ವೇಶ್ಯಾವಾಟಿಕೆ ಸಂಬಂಧ ಮಧ್ಯಪ್ರವೇಶಿಸುವಂತಿಲ್ಲ ವರ ಲೆ ಕ್ರಮ ಕೈಗೊಂಡರೆ ಪೊಲೀಸರ ವಿರುದ್ಧವೇ ಕ್ರಿಮಿನಲ್ ಮೊಖದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದೆ .ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದೆ . ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ಅವರ ಅಧ್ಯಕ್ಷತೆಯ ಪೀಠ ಇಂದು ಆದೇಶ ನೀಡಿದೆ . ವೇಶ್ಯಾವಾಟಿಕೆಯಲ್ಲಿ ತೊಡಗಿದ ಮಹಿಳೆಯರ ಹಕ್ಕುಗಳ ರಕ್ಷಣೆ …

Read More »

ರಾಜ್ಯದ ಸಚಿವ ಸಂಪುಟದ ಕುರಿತು ಮಹತ್ವದ ತಿರುವು ನೀಡಿದ ಸಿಎಂ

ನವದೆಹಲಿ:ರಾಜ್ಯದ ಸಚಿವ ಸಂಪುಟದ ಕುರಿತು ಕೇಂದ್ರ ಗೃಹ ಸಚಿವ ಅಮಿತ ಶಾ ಅವರ ಜತೆ ಸಮಾಲೋಚನೆ ನಡೆಸಲಾಗಿದೆ. ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಯಾವಾಗ ಎನೂ ಬೇಕಾದರೂ ಆಗಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನವದೆಹಲಿಯಲ್ಲಿ ಅಮಿತ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಐಇ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ರಾಜಕೀಯ ಸ್ಥಿತಿಗತಿಗಳು, ಸಚಿವ ಸಂಪುಟದ …

Read More »

ಕೊರೋನಾ ಪ್ರಕರಣಗಳು ಏರಿಕೆ

ನವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 3,545 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 3,545 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ.

Read More »

ಕೊರೋನಾ ಆತಂಕದಲ್ಲಿರುವವರಿಗೆ ಮತ್ತೊಂದು ಬಿಗ್ ಶಾಕ್

ನವದೆಹಲಿ: ಇಸ್ರೇಲ್‌ನಲ್ಲಿ ನಡೆಸಿದ ಹೊಸ ಮಾಡೆಲಿಂಗ್ ಅಧ್ಯಯನದ ಪ್ರಕಾರ, ಓಮಿಕ್ರಾನ್ ಸಬ್‌ವೇರಿಯಂಟ್‌ಗಳು ಮುಂದಿನ ಒಂದೆರಡು ತಿಂಗಳುಗಳಲ್ಲಿ ಹರಡಲಿವೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಸೈನ್ಸ್ ಆಫ್ ದಿ ಟೋಟಲ್ ಎನ್ವಿರಾನ್‌ಮೆಂಟ್ ಜರ್ನಲ್‌ನಲ್ಲಿ ಕಳೆದ ವಾರ ಪ್ರಕಟವಾದ ಸಂಶೋಧನೆಯು, ಡೆಲ್ಟಾ ಅದರ ಹಿಂದಿನ ರೂಪಾಂತರಗಳನ್ನು ನಿಯಂತ್ರಿಸಿದ್ದರೂ ಕೂಡ ಈಗ ಮತ್ತೆ ಹೊಸ ರೂಪಾಂತರದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಅಧ್ಯಯನ ಹೇಳಿದೆ.

Read More »