Breaking News

ಕಲಬುರಗಿ

ಅಕ್ರಮ ನಾಡ ಪಿಸ್ತೂಲ್​ ಮಾರಾಟ : 4 ನಾಡ ಪಿಸ್ತೂಲ್, 18 ಜೀವಂತ ಗುಂಡು ಜಪ್ತಿ

ಕಲಬುರಗಿ: ಭೀಮಾ ತೀರದಲ್ಲಿ ಅಕ್ರಮ ನಾಡ ಪಿಸ್ತೂಲ್​ ಮಾರಾಟ ದಂಧೆ ಸಕ್ರೀಯವಾಗಿ ನಡೆಯುತ್ತಿದ್ದು, ನಾಡ ಪಿಸ್ತೂಲ್​ ಹೊಂದಿದ್ದ ನಾಲ್ವರ ಬಂಧನ ಮಾಡಲಾಗಿದೆ. ಬಂಧಿತರಿಂದ 4 ನಾಡ ಪಿಸ್ತೂಲ್, 18 ಜೀವಂತ ಗುಂಡು ಜಪ್ತಿ ಮಾಡಲಾಗಿದೆ. ಭೀಮಣ್ಣ ಪೂಜಾರಿ, ಸಿದ್ದಪ್ಪ ಪೂಜಾರಿ, ಸಲೀಂ ಶಿರಸಗಿ, ಪರಸಯ್ಯ ಸೆರೆಯಾದವರು. ಮಧ್ಯಪ್ರದೇಶದ ದಾರ್​ ಜಿಲ್ಲೆಯಲ್ಲಿ ನಾಡ ಪಿಸ್ತೂಲ್ ಖರೀದಿಸಿ ತಂದಿದ್ದ ಭೀಮಣ್ಣ, ಜಿಲ್ಲೆಯಲ್ಲಿ ನಾಡ ಪಿಸ್ತೂಲ್ ಬಂಧಿತರು ಮಾರಾಟ ಮಾಡುತ್ತಿದ್ದರು. ಅಫಜಲಪುರ ಪೊಲೀಸ್​​ ಠಾಣೆಯಲ್ಲಿ …

Read More »

ಕಮಿಷನ್ : ಪಾಲಿಕೆ‌ ಆಯುಕ್ತ ಎಸಿಬಿ ಬಲಿಗೆ

ಕಲಬುರಗಿ : 7.5 ಲಕ್ಷ ರೂಪಾಯಿ ಬಿಲ್‌ ಪಾಸ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಶಂಕ್ರಣ್ಣ ವಣಿಕ್ಯಾಳ ಹಾಗೂ ಪಾಲಿಕೆ ಲೆಕ್ಕಾಧಿಕಾರಿ ಚೆನ್ನಪ್ಪ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೊರೊನಾ ಸುರಕ್ಷಾ ಚಕ್ರದ ಬಿಲ್ ಪಾಸ್ ಮಾಡುವ ಸಲುವಾಗಿ 2% ಕಮಿಷನ್ ನೀಡುವಂತೆ ಪಾಲಿಕೆ‌ ಆಯುಕ್ತ ವಣಕ್ಯಾಳ ಬೇಡಿಕೆ ಇಟ್ಟಿದ್ದರಂತೆ.ಈ ಹಿನ್ನೆಲೆ ಕೊರೊನಾ ಸುರಕ್ಷಾ ಚಕ್ರದ ನಿರ್ದೇಶಕ ಶರಣ ಎಂಬುವರು ಎಸಿಬಿಗೆ …

Read More »

ಔಷಧ ಮಿಶ್ರಣ ಮಾಡಿದ ಬಜ್ಜಿ‌ಸೇವಿಸಿ ಬಾಲಕ ಸಾವು

ಕಲಬುರಗಿ : ವಾಡಿ ಪಟ್ಟಣದ ಬಸವನಕಣಿ ಬಡಾವಣೆಯ ನಿವಾಸಿ ವಿಷ್ಣು ಜಾಧವ್(8) ಮೃತ ಬಾಲಕ. ಈತ ಔಷಧ ಮಿಶ್ರಣ ಮಾಡಿ ಇಡಲಾಗಿದ್ದ ಬಜ್ಜಿ ಸೇವಿಸಿದ್ದಾನೆ. ನಂತರ ಬಾಲಕನಿಗೆ ವಾಂತಿ,ಬೇಧಿ ಪ್ರಾರಂಭವಾಗಿತ್ತು. ಆದರೆ, ವಾಂತಿ, ಬೇಧಿಯಿಂದ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಹೇಳುತ್ತಿದ್ದಾರೆ. ಬಾಲಕನ ತಂದೆಗೆ ವಿಪರೀತ ಮದ್ಯ ಸೇವನೆಯ ಚಟವಿತ್ತು. ಅದನ್ನು ಬಿಡಿಸಲು ಬಜ್ಜಿಯಲ್ಲಿ ಔಷಧ ಮಿಶ್ರಣ ಮಾಡಿಡಲಾಗಿತ್ತು. ಬಾಲಕ ಆ ಬಜ್ಜಿಯನ್ನು ತಿಂದಿದ್ದ. ಇದೇ ಕಾರಣಕ್ಕೆ ವಾಂತಿ, ಬೇಧಿ ಶುರುವಾಗಿತ್ತಾ? ಅಥವಾ …

Read More »

PSI ಹಗರಣ : ಬಿಜೆಪಿ ನಾಯಕಿ ಬಂಧನ

ಕಲಬುರಗಿ: 545 ಪಿಎಸ್ ಐ ಹುದ್ದೆಗಳ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನವಾಗಿದೆ. ಕಳೆದ 18 ದಿನಗಳಿಂದ ತಲೆಮರೆಸಿಕೊಂಡಿದ್ದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪುಣೆಯ ಬಳಿ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಆಕೆಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪಿಎಸ್ ಐ ನೇಮಕಾತಿ ಅಕ್ರಮ ಬಯಲಾಗುತ್ತಿದ್ದಂತೆ ಪರಾರಿಯಾಗಿದ್ದ ದಿವ್ಯಾ ಮಹಾರಾಷ್ಟ್ರ ಬಿಟ್ಟು ಬೇರೆಲ್ಲು ತೆರಳಿರಲಿಲ್ಲ. ಸದ್ಯ ಸಿಐಡಿ ತಂಡ ಎಲ್ಲಾ ಕಡೆ ಹುಡುಕಾಟ …

Read More »

ಭ್ರಷ್ಟಾಚಾರದಲ್ಲಿ ರಾಜ್ಯ ಸರ್ಕಾರ ನಂಬರ್ ಒನ್ : ಡಿಕೆಶಿ ಆರೋಪ

ಕಲಬುರಗಿ: ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿರುವ ರಾಜ್ಯ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ‌ಮೋದಿ ಅವರು ಬಹುಮಾನ ನೀಡಬೇಕು’ ಎಂದು ಕರ್ನಾಟಕ ‌ಪ್ರದೇಶ ಕಾಂಗ್ರೆಸ್ ‌ಸಮಿತಿ ಅಧ್ಯಕ್ಷ ‌ಡಿ.ಕೆ.ಶಿವಕುಮಾರ್ ಕುಟುಕಿದರು. ‘ಬಡ ರೈತರ ಹೊಲಗಳಿಗೆ ಬೋರ್‌ವೆಲ್ ಕೊರೆಸುವ ಗಂಗಾ ಕಲ್ಯಾಣ ಯೋಜನೆಯಲ್ಲಿಯೂ ಭಾರಿ ಭ್ರಷ್ಟಾಚಾರ ನಡೆದಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರದ ದಾಖಲೆಗಳನ್ನು ಶೀಘ್ರ ಬಿಡುಗಡೆ ‌ಮಾಡುತ್ತೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Read More »

ಬಿಜೆಪಿಗೆ ಟಾಂಗ್‌ ಕೊಟ್ಟ ಡಿಕೆಶಿ

ಕಲಬುರಗಿ: ಶಾಲಾ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವುದರಿಂದ ನಮಗೆ ಹೊಟ್ಟೆಉರಿಯುತ್ತದೆ ಎಂದು ಹೇಳಿದವರು ಯಾರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರಶ್ನಿಸುವ ಮೂಲಕ ಬಿಜೆಪಿಗೆ ಟಾಂಗ್‌ ನೀಡಿದ್ದಾರೆ. ಮಾತನಾಡಿದ ಅವರು, ರಾಜೀವ್‌ ಗಾಂಧಿ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಇಡೀ ದೇಶಕ್ಕೆ ಚಿಕ್ಕಮಕ್ಕಳಿಂದ ಹಿರಿಯರವರೆಗೂ ಎಲ್ಲರಿಗೂ ವರ್ಷಾನುಗಟ್ಟಲೆ ರಾಮಾಯಣ, ಮಹಾಭಾರತವನ್ನು ತೋರಿಸಿ, ದೇಶದ ಸಂಸ್ಕೃತಿ, ಇತಿಹಾಸ, ಗ್ರಂಥ, ಪರಂಪರೆಯನ್ನು ಪರಿಚಯಿಸಿದ್ದರು ಎಂದರು.

Read More »

ಸಿಎಂ ಬಸವರಾಜ ಬೊಮ್ಮಾಯಿಗೆ ಪ್ರಶ್ನಿಸಿದ ಇಬ್ರಾಹಿಂ

ಕಲಬುರಗಿ: ಶಿವಮೊಗ್ಗದಲ್ಲಿ ಸತ್ತ ಹರ್ಷನ ಕುಟುಂಬಕ್ಕೆ ಸರಕಾರ 25 ಲಕ್ಷ ರೂ. ಕೊಟ್ಟಿದೆ. ಆದರೆ, ಉಕ್ರೇನ್​ನಲ್ಲಿ ಸತ್ತ ಯುವಕನ ಕುಟುಂಬಕ್ಕೆ ಏನ್ ಕೊಟ್ಟಿಯೋ ಬೊಮ್ಮಾ? ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಎಂಎಲ್‌ಎ ಹೇಳ್ತಾನೆ, ಮೃತದೇಹ ತರಲು ವಿಮಾನದಲ್ಲಿ ಇಲ್ಲ ಅಂತ. ಏನ್ ಬೇಜವಾಬ್ದಾರಿ ಮಾತನಾಡ್ತಾರೆ ಇವರು? ನರಗುಂದದಲ್ಲಿ ಒಬ್ಬ ಮುಸ್ಲಿಂ ಹುಡುಗನನ್ನು ಭಜರಂಗದಳದವರು ಕೊಂದಿದ್ದಾರೆ. ಆ ಮುಸ್ಲಿಂ ಹುಡುಗನಿಗೆ ಸರಕಾರ …

Read More »

ಜಿ.ಪಂ., ತಾ.ಪಂ. ಚುನಾವಣೆ ಕುರಿತು ತಕ್ಷಣ ನಿರ್ಧಾರ ತೆಗೆದುಕೊಳ್ಳವದಿಲ್ಲಜನ : ಈಶ್ವರಪ್ಪ

ಕಲಬುರಗಿ: ಜಿ.ಪಂ., ತಾ.ಪಂ. ಚುನಾವಣೆ ಯನ್ನು ಒಬಿಸಿ ಮೀಸಲಾತಿ ಇಲ್ಲದೇ ನಡೆಸಬಾರದು ಎನ್ನುವ ಕುರಿತು ಸಿಎಂ ಹಾಗೂ ಕಾನೂನು ತಜ್ಞರ ಜತೆ ಚರ್ಚೆ ಮಾಡಲಾಗಿದೆ. ಆದರೆ ಯಾವಾಗ ಚುನಾವಣೆ ನಡೆಯುತ್ತದೆ ಎನ್ನುವುದನ್ನು ಈಗಲೇ ಹೇಳಲಿಕ್ಕೆ ಆಗದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಪಂ., ತಾ.ಪಂ. ಚುನಾವಣೆ ಸಂಬಂಧ ಈಗಾಗಲೇ ಹಲವು ಸುತ್ತು ಚರ್ಚಿಸಲಾಗಿದೆ. ಆದರೆ ಚುನಾವಣೆ ಇಂತಹದ್ದೇ ನಿರ್ದಿಷ್ಟ ಸಮಯದಲ್ಲಿ ನಡೆಯಬಹುದು ಎನ್ನುವುದು ತಿಳಿಯುತ್ತಿಲ್ಲ ಎಂದರು.

Read More »

ಮಾ. 24ರಂದು ಕಲಬುರಗಿ ಪ್ರಧಾನಿ ಭೇಟಿ

ಕಲಬುರಗಿ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಸ್ವಾಮಿತ್ವ ಹಕ್ಕುಪತ್ರ ವಿತರಣೆ’ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ 24ರಂದು ಕಲಬುರಗಿ ಜಿಲ್ಲೆಗೆ ಆಗಮಿಸುವ ಸಾಧ್ಯತೆ ಇದೆ. ‘ರಾಜ್ಯದ ಶಿವಮೊಗ್ಗ, ವಿಜಯನಗರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಸ್ವಾಮಿತ್ವ ಹಕ್ಕುಪತ್ರ ವಿತರಣೆ ಕಾರ್ಯಕ್ರಮಗಳು ನಡೆಯಲಿವೆ.ಕಲಬುರಗಿ ತಾಲ್ಲೂಕಿನ ಭೀಮಳ್ಳಿ ಗ್ರಾಮದಲ್ಲಿ ಕೂಡ ಈ ಸಮಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಆದರೆ, ಪ್ರಧಾನಿ ಭೇಟಿಯ ಬಗ್ಗೆ ನಮಗೆ ಅಧಿಕೃತ ಮಾಹಿತಿ ಬಂದಿಲ್ಲ’ ಎಂದು ಜಿಲ್ಲಾಧಿಕಾರಿ ಯಶವಂತ್‌ ಗುರುಕರ್‌ ತಿಳಿಸಿದ್ದಾರೆ.

Read More »

ಮಾ. 24ರಂದು ಕಲಬುರಗಿಗೆ ಪ್ರಧಾನಿ ಭೇಟಿ

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾ. 24ರಂದು ಕಲಬುರಗಿಗೆ ಭೇಟಿ ನೀಡಿ, ಕೇಂದ್ರ ಸರಕಾರದ ಸ್ವಾಮಿತ್ವ ಯೋಜನೆಯಲ್ಲಿ ಫ‌ಲಾನುಭವಿಗಳಿಗೆ ಆಸ್ತಿ ಪ್ರಮಾಣ ಪತ್ರ ವಿತರಿಸಲಿದ್ದಾರೆ. ಅದೇ ದಿನ ಪ್ರಧಾನಿ ಪ್ರವಾಸಿ ತಾಣ ಹಂಪಿ ಹಾಗೂ ಅಂಜನಾದ್ರಿ ಬೆಟ್ಟಕ್ಕೂ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ರಾಜ್ಯದ 16 ಜಿಲ್ಲೆಗಳ ಕೆಲವು ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಸ್ವಾಮಿತ್ವ ಯೋಜನೆ ಜಾರಿಗೊಳಿಸಲಾಗಿದೆ. ಅದರ ಅನ್ವಯ ಡ್ರೋನ್‌ ಮೂಲಕ ಖಾಸಗಿ ಮತ್ತು ಸರಕಾರಿ ಆಸ್ತಿ ಸಮೀಕ್ಷೆ …

Read More »