ಕಲಬುರಗಿ : ವಾಡಿ ಪಟ್ಟಣದ ಬಸವನಕಣಿ ಬಡಾವಣೆಯ ನಿವಾಸಿ ವಿಷ್ಣು ಜಾಧವ್(8) ಮೃತ ಬಾಲಕ. ಈತ ಔಷಧ ಮಿಶ್ರಣ ಮಾಡಿ ಇಡಲಾಗಿದ್ದ ಬಜ್ಜಿ ಸೇವಿಸಿದ್ದಾನೆ.
ನಂತರ ಬಾಲಕನಿಗೆ ವಾಂತಿ,ಬೇಧಿ ಪ್ರಾರಂಭವಾಗಿತ್ತು. ಆದರೆ, ವಾಂತಿ, ಬೇಧಿಯಿಂದ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಹೇಳುತ್ತಿದ್ದಾರೆ. ಬಾಲಕನ ತಂದೆಗೆ ವಿಪರೀತ ಮದ್ಯ ಸೇವನೆಯ ಚಟವಿತ್ತು. ಅದನ್ನು ಬಿಡಿಸಲು ಬಜ್ಜಿಯಲ್ಲಿ ಔಷಧ ಮಿಶ್ರಣ ಮಾಡಿಡಲಾಗಿತ್ತು. ಬಾಲಕ ಆ ಬಜ್ಜಿಯನ್ನು ತಿಂದಿದ್ದ. ಇದೇ ಕಾರಣಕ್ಕೆ ವಾಂತಿ, ಬೇಧಿ ಶುರುವಾಗಿತ್ತಾ? ಅಥವಾ ಬೇರೆ ಕಾರಣಕ್ಕಾ? ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ.
ಹೀಗಾಗಿ, ಬಾಲಕನ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಟುಂಬಸ್ಥರು ಈ ಬಗ್ಗೆ ಯಾವುದೇ ದೂರು ಸಹ ದಾಖಲಿಸದೆ, ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

