Breaking News

ಹುಬ್ಬಳ್ಳಿ-ಧಾರವಾಡ

ಬಿಜೆಪಿ ಸರ್ಕಾರ ಘೋಷಿಸಿದ ಬಜೆಟ್ ಎಲ್ಲಾ ಬೊಗಸ್.ಹುಬ್ಬಳ್ಳಿಯಲ್ಲಿ ಎಂಎಲ್ಎ ಪ್ರಸಾದ್ ಅಭಯಾರ್ ಲೇವಡಿ.

ಬಿಜೆಪಿ ಸರ್ಕಾರ ಘೋಷಿಸಿದ ಮೂರು ಲಕ್ಷ ಕೋಟಿ ಬಜೆಟ್ ಎಲ್ಲಾ ಬೊಗಸ್. ನಾವೆಲ್ಲ ಇವರ ಬಜೆಟ್ ನೋಡಿಬಿಟ್ಟಿದ್ದೇವೆ. ಕಳೆದ ವರ್ಷ ಎರಡುವರೆ ಲಕ್ಷ ಬಜೆಟ್ ಘೋಷಣೆ ಮಾಡಿದ್ರು ಅದ್ರಲ್ಲಿ 50%ರಷ್ಟು ಏನು ಆಗಿಲ್ಲ .ಬೊಮ್ಮಾಯಿ ಅವರು ನಮ್ಮ ಭಾಗದವರು ಅಂತ ಅವರ ಬಗ್ಗೆ ಹೆಚ್ಚಿನ ನಿರೀಕ್ಷೆ ಇತ್ತು.ಆದ್ರೆ ಅವರು ಯಾವುದೇ ವಿಶೇಷ ಕೊಡುಗೆಯನ್ನ ನೀಡಲಿಲ್ಲ. ಅವರ ಅಧಿಕಾರ ಅವಧಿ ಮುಗಿತಾ ಬಂದರು ಯಾವುದೇ ವಿಶೇಷ ಕೊಡುಗೆಯನ್ನ ಕೊಡಲಿಲ್ಲ. ಎಲ್ಲ ನಿರೀಕ್ಷೆಗಳು …

Read More »

ಬಿಜೆಪಿ ಗೋಡ್ಸೆ ಸಂಸ್ಕೃತಿ; ಸುರ್ಜೆವಾಲಾ ಕಿಡಿ…

ಹುಬ್ಬಳ್ಳಿ:ಕಳಸಾ ಬಂಡೂರಿಗೆ ಬಜೆಟ್ ನಲ್ಲಿ ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಒಂದು ತಿಂಗಳಿರುವಾಗ ಹೇಗೆ ಬಿಡುಗಡೆ ಮಾಡ್ತೀರಿ..? ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರಶ್ನೆ ಮಾಡಿದ್ದಾರೆ.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಇದು ಬೊಮ್ಮಾಯಿ ಅವರ ಮತ್ತೊಂದು ಸುಳ್ಳು. ಮುಂದೆ ನಾವೇ ಮತ್ತೆ ಬಜೆಟ್ಮಂ ಡಿಸುತ್ತೇವೆ. ಮಹಾದಾಯಿ ಯೋಜನೆಯನ್ನು ನಾವೇ ಪೂರ್ಣಗೊಳಿಸುತ್ತೇವೆ. ನಮ್ಮ ಗೃಹ ಲಕ್ಷ್ಮಿ, ಗೃಹ ಜ್ಯೋತಿ ಯೋಜನೆಗಳನ್ನ ಕಾಪಿ ಮಾಡಲಾಗಿದೆ. ನಮ್ಮನ್ನು …

Read More »

ಜಲ್ ಜೀವನ್ ಮಿಷನ್ ಯೋಜನೆ: ನೀರಸಾಗರ ಗ್ರಾಮಸ್ಥರ ಗುಣಾತ್ಮಕ ಬದಲಾವಣೆಗೆ ಮೋದಿ ಸಂತಸ

ಹುಬ್ಬಳ್ಳಿ:ಜಲ್ ಜೀವನ್ ಮಿಷನ್ ಯೋಜನೆಯ ಅಭಿಯಾನದ ಅಂಗವಾಗಿ ಧಾರವಾಡ ಲೋಕಸಭಾ ಕ್ಷೇತ್ರದ ಕಲಘಟಗಿ ತಾಲೂಕಿನ ನೀರಸಾಗರ ಗ್ರಾಮಸ್ಥರ ಜೀವನದಲ್ಲಿ ಆಗಿರುವ ಗುಣಾತ್ಮಕ ಬದಲಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.ಹೌದು..‌ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಹ್ಲಾದ ಜೋಶಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಜಲ್ ಜೀವನ್ ಮಿಷನ್ ಯೋಜನೆ ಅಭಿಯಾನದ ಯಶಸ್ಸನ್ನು …

Read More »

ಸಂಸ್ಥೆಗೆ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಪತ್ರ
285 ಹೊಸ ಬಸ್ ಖರೀದಿಗೆ ಟೆಂಡರ್
-ಡಾ.ಬಸವರಾಜ ಕೆಲಗಾರ

ಹುಬ್ಬಳ್ಳಿ ಪ್ರತಿ ಬಸ್‌ಗೆ ರೂ. 40 ಲಕ್ಷ ವೆಚ್ಚದಂತೆ 285 ಹೊಸ ಬಸ್‌ಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ. ಮುಂದಿನ ಎರಡು ಮೂರು ತಿಂಗಳಲ್ಲಿ ಸಂಸ್ಥೆಗೆ ಹೊಸ ಬಸ್‌ಗಳು ಬರಲಿವೆ. ಸಂಸ್ಥೆಗೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ಬಸವರಾಜ ಕೆಲಗಾರ ಹೇಳಿದರು.ಇಂದು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯಲ್ಲಿ ಸಿಬ್ಬಂದಿಗಳ …

Read More »

ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಬಜೆಟ್
-ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್

ಹುಬ್ಬಳ್ಳಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಬಜೆಟ್ ಮಂಡನೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.ಕಳಸಾ ಬಂಡೂರಿ ನಾಲೆ ವಿಸ್ತರಣೆಗೆ ರೂ.1000 ಕೋಟಿ ಘೋಷಿಸಲಾಗಿದೆ. ಅಲ್ಲದೇ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗುವುದು. ರೂ.217 ಕೋಟಿ ವೆಚ್ಚದಲ್ಲಿ ಬೈಲಹೊಂಗಲ ತಾಲೂಕಿನಲ್ಲಿ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಿಂದ ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲಿದೆ. ಗಡಿ ಭಾಗದ ಸಮಗ್ರ ಅಭಿವೃದ್ಧಿಗೆ ರೂ.150 ಕೋಟಿ …

Read More »

ಬಸವರಾಜ್ ಬೊಮ್ಮಾಯಿ ಅವರು ಪ್ರಸ್ತುತಪಡಿಸಿದ ರಾಜ್ಯ ಬಜೆಟ್ ಸ್ವಾಗತಾರ್ಹ,ಶೇಷಗಿರಿ ಕುಲಕರ್ಣಿ ಹೇಳಿಕೆ

ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರಸ್ತುತಪಡಿಸಿದ ರಾಜ್ಯ ಬಜೆಟ್ ಅತ್ಯಂತ ಸಹಕಾರಿಯಾಗಿದೆ .ಶೈಕ್ಷಣಿಕ ಪ್ರವಾಸೋದ್ಯಮ ,ಕೃಷಿ ,ಗ್ರಾಮೀಣಾಭಿವೃದ್ಧಿ, ಕ್ರೀಡೆ ,ವೈದ್ಯಕೀಯ ಸೌಲಭ್ಯ ಎಲ್ಲದಕ್ಕೂ ಅತ್ಯಂತ ಕಾಳಜಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಇದರಿಂದ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಆಗೆ ಆಗುತ್ತದೆ . ವಿಶೇಷವಾಗಿ ಕೈಗಾರಿಕೆ ಮತ್ತು ವಾಣಿಜ್ಯದ ಅಭಿವೃದ್ಧಿಗಾಗಿ ಇನ್ನು 27 ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸಲು ಮುಂದಾಗಿದ್ದಾರೆ.ಹಾಗೂ.ಇನ್ನು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದು ಏಳು ಹೊಸ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಮುಂದಾಗಿದ್ದಾರೆ ಹಾಗೂ …

Read More »

ಬಸವರಾಜ ಬೊಮ್ಮಾಯಿಯವರ ಬಜೆಟ್ ಡೆವಲಪ್ಮೆಂಟ್ ಮಾಡುವ ಬಜೆಟ್

ಇವತ್ತು ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಘೋಷಿಸಿದ ಬಜೆಟ್ ಡೆವಲಪ್ಮೆಂಟ್ ಮಾಡುವ ಬಜೆಟ್ ಆಗಿದ್ದು. ಕೃಷಿ ವಲಯ, ಶೈಕ್ಷಣಿಕ ,ಪ್ರವಾಸೋದ್ಯಮ ಕ್ರೀಡೆ ಎಲ್ಲ ವಲಯಕ್ಕೂ ಉಪಯುಕ್ತವಾಗುವಂತಿದೆ. ವಿಶೇಷವಾಗಿ ರೈತರಿಗೆ ಕೃಷಿ ವಲಯಕ್ಕಾಗಿ ಮೂರರಿಂದ ಐದು ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು ನೀಡಲು ಮುಂದಾಗಿದ್ದಾರೆ. ಇನ್ನು ಶೈಕ್ಷಣಿಕ ವಲಯದಲ್ಲಿ ಏಳು ಹೊಸ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸುತ್ತಿದ್ದಾರೆ. ಅದರಲ್ಲಿ ಒಂದು ಮೆಡಿಕಲ್ ಕಾಲೇಜನ್ನು ಘೋಷಿಸಿದ್ದಾರೆ .ಕಲ್ಯಾಣ ಕರ್ನಾಟಕ ಡೆವಲಪ್ಮೆಂಟ್ ಬೋರ್ಡ್ ಮಾಡಿದ್ದಾರೆ.ಈ ಬಜೆಟ್ ಹುಬ್ಬಳ್ಳಿ …

Read More »

ಫೆಬ್ರವರಿ ೧೮ ರಂದು ಜ್ಯೋತಿರ್ಲಿಂಗ ಶಿವರಥಯಾತ್ರೆಯ ಉದ್ಘಾಟನೆ

ಹುಬ್ಬಳ್ಳಿ: ೮೭ ನೇ ತ್ರಿಮೂರ್ತಿ ಮಹಾಶಿವರಾತ್ರಿ ಮಹೋತ್ಸವ ಪ್ರಯುಕ್ತ ಜ್ಯೋತಿರ್ಲಿಂಗ ಶಿವರಥಯಾತ್ರೆಯ ಉದ್ಘಾಟನಾ ಕಾರ್ಯಕ್ರಮವನ್ನು ಫೆ. ೧೮ ರಂದು ಬೆ. ೯ ಗಂಟೆಗೆ ನಗರದ ಗಾಮನಗಟ್ಟಿ ಹಾಗೂ ಭೈರಿದೇವರಕೊಪ್ಪದ ರಸ್ತೆಯ ಭಗವದ್ಗೀತಾ ಜ್ಞಾನಲೋಕದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮಕುಮಾರೀಸ್ ಸಂಚಾಲಕರಾದ ಬ್ರ.ಕು. ನಿರ್ಮಲಾ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಹಾಶಿವರಾತ್ರಿ ಪ್ರಯುಕ್ತ ಈಶ್ವರಿಯ ವಿಶ್ವ ವಿದ್ಯಾಲಯದ ೧೯೫ ಕಾರುಗಳ ಶಿವರಥಯಾತ್ರೆ ಹಾಗೂ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮತ್ತು ಶಿವಸಂದೇಶ …

Read More »

ಹುಬ್ಬಳ್ಳಿಯಲ್ಲಿ ಸಚಿವ ಅಶ್ವತ್ಥ ನಾರಾಯಣ ವಿರುದ್ದ ದೂರು ದಾಖಲು

ಹುಬ್ಬಳ್ಳಿ : ಟಿಪ್ಪುವನ್ನು ಮುಗಿಸಿದ ಹಾಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಮುಗಿಸಿ ಎಂಬ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿಕೆ ಖಂಡಿಸಿ ನಗರದ ಗೋಕುಲ್ ರಸ್ತೆ ಪೊಲೀಸ್ ಠಾಣೆಯಲ್ಲಿ ಸಿದ್ಧರಾಮಯ್ಯ ಅಭಿಮಾನಿ ಬಳಗದ ವತಿಯಿಂದ ದೂರು ದಾಖಲಿಸಲಾಗಿದೆ. ಸಿದ್ಧರಾಮಯ್ಯ ಅಭಿಮಾನಿ ಬಳಗದ ಗಿರೀಶ್ ಗದಿಗೆಪ್ಪಗೌಡ ಅವರಿಂದ ದೂರು ದಾಖಲಾಗಿದ್ದು, ಗಿರೀಶ ಅವರು ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ತಂಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ದೂರಿನ ಪ್ರತಿಯನ್ನು …

Read More »

ಕೋಟ್ಯಾಂತರ ಮೌಲ್ಯದ ಆನೆ ದಂತದಿಂದ ತಯಾರಿಸಿದ ಕಲಾಕೃತಿ ಮಾರಾಟ ಯತ್ನ: ಐವರು ಆರೋಪಿಗಳನ್ನು ಬಂಧಿಸಿದ ಸಿಐಡಿ..

ಹುಬ್ಬಳ್ಳಿ ಆನೆ ದಂತದಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಬೆಳಗಾವಿ ಹಾಗೂ ಮಹಾರಾಷ್ಟ್ರ ಮೂಲದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಸಿ.ಐ.ಡಿ ವಿಶೇಷ ಅರಣ್ಯ ಸಂಚಾರಿ ದಳದ ತಂಡ ಯಶಸ್ವಿಯಾಗಿದೆ. ಕೊಲ್ಲಾಪುರ ಮೂಲದ ಸಾತ್ ಜಮಾದಾರ್ , ವಿಜಯ ಕುಂಬಾರ, ಸಾಗರ ಪುರಾಣಿಕ, ನಿಪ್ಪಾಣಿಯ ವಿನಾಯಕ ಕಾಂಬ್ಳೆ, ದಾನಾಜಿ ಪಾಟೀಲ್ ಬಂಧಿತ ಆರೋಪಿಗಳಾಗಿದ್ದಾರೆ.‌ ಬಂದಿತರಿಂದ ಆನೆ ದಂತದಿಂದ ತಯಾರಿಸಿದ್ದ 384 ಗ್ರಾಂ ತೂಕದ ಅಲಂಕಾರ ಪೆಟ್ಟಿಗೆ, 112 …

Read More »