ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಜೈಶ್-ಎ-ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರು ಎಂಟ್ರಿ ಕೊಟ್ಟಿರುವ ಬಗ್ಗೆ ಇಂಟಲಿಜೆನ್ಸ್ ಬ್ಯೂರೋ ಮಾಹಿತಿ ನೀಡಿದೆ. ಆರು ಉಗ್ರರನ್ನೊಳಗೊಂಡ ತಂಡ ದೆಹಲಿಗೆ ಎಂಟ್ರಿ ಕೊಟ್ಟಿದ್ದು, ಅದರಲ್ಲಿ ಇಬ್ಬರು ಬೆಂಗಳುರಿಗೆ ಆಗಮಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಎಟಿಎಸ್ ಹಾಗೂ ದೆಹಲಿ ಪೊಲೀಸರು ಬೆಂಗಳೂರಿಗೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರು ಪೊಲೀಸರ ಸಹಕಾರ ಪಡೆದು ಉಗ್ರರ ಪತ್ತೆ ಕಾರ್ಯ ನಡೆಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದು, ಕಾರಾಗೃಹದಲ್ಲಿರುವ ಬಂಧಿತ ಉಗ್ರ ಮೊಹಮದ್ ಫಯಾದ್ನನ್ನ ತೀವ್ರ ವಿಚಾರಣೆ ನೆಡಸುತ್ತಿದ್ದಾರೆ. ಪಾಕಿಸ್ತಾನದ ಉಗ್ರ ಮೊಹಮದ್ ಆಲಿ ಹುಸೇನ್ ಜೊತೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಉಗ್ರ ಮೊಹಮದ್ ಫಯಾದ್ ವಿಚಾರಣೆ ನಡೆಸಲಾಗುತ್ತಿದೆ. ಮಹಮದ್ ಕೋಯಾ ಆಲ್ ಬದರ್ ಸಂಘಟನೆಗೆ ಸೇರಿದ್ದ ಉಗ್ರ ಮೊಹಮದ್ ಫಯಾದ್ 2006ರಲ್ಲಿ ಮೈಸೂರಿನಲ್ಲಿ ಬಂಧಿತನಾಗಿದ್ದ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





